ನಾನು ಮೆಚ್ಚಿದ ವಾಟ್ಸಪ್

Sunday, October 9, 2022

PARYAYA: ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಮೊಧೇರಾ (ಗುಜರಾತ್): ಸೂರ್ಯ ದೇಗುಲದ ಮೂಲಕ ವಿಶ್ವ ಪ್ರಸಿದ್ಧವಾಗಿರುವ ಗುಜರಾತಿನ ಮೊಧೇರಾ ಈಗ ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈದಿನ 2022 ಅಕ್ಟೋಬರ್ 9 ರ ಭಾನುವಾರ ಮೊಧೇರಾವನ್ನು ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲ ಬ್ಯಾಟರಿ ಇಂಧನ ದಾಸ್ತಾನು ವ್ಯವಸ್ಥೆಯ (ಬಿಇಎಸ್ಎಸ್ಬೆಂಬಲ ಹೊಂದಿದ ʼದೇಶದ ಪ್ರಪ್ರಥಮ  ಸೌರಶಕ್ತಿ ಚಾಲಿತ ಗ್ರಾಮʼ ಎಂದು ಘೋಷಿಸಿದರು.

ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಈ ಸಮಗ್ರ ಸೌರಶಕ್ತಿಯನ್ನು ಪ್ರಾರಂಭಿಸಿದೆ. ಸೂರ್ಯ ಮಂದಿರದಿಂದ ಕೇವಲ 6 ಕಿಮೀ ದೂರದಲ್ಲಿರುವ ಸುಜನಪುರಮೆಹ್ಸಾನಾದಲ್ಲಿ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಯೊಂದಿಗೆ ಯೋಜನೆ ರೂಪುಗೊಂಡಿದೆ. ಮೊಧೇರಾದಲ್ಲಿ 24×7 ಸೌರಶಕ್ತಿ ಆಧಾರಿತ ವಿದ್ಯುತ್  ಒದಗಿಸುವ ಸಲುವಾಗಿಯೇ ಮೊಧೇರಾ ಸೂರ್ಯ ದೇಗುಲ ಮತ್ತು ಗ್ರಾಮವನ್ನು ಸಂಪೂರ್ಣ ʼಸೌರ ಶಕ್ತಿಮಯʼವಾಗಿ ಮಾಡುವ ಉಪಕ್ರಮ ಕೈಗೊಳ್ಳಲಾಗಿದೆ.

ಇಂಧನ ಯೋಜನೆಯ ಪಯಣ ಹೇಗಿತ್ತು ಗೊತ್ತಾ?

ಯೋಜನೆಯ ಅಭಿವೃದ್ಧಿಗಾಗಿ ಗುಜರಾತ್ ಸರ್ಕಾರವು 12 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿತು. ಅದೇ ಸಮಯದಲ್ಲಿಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಯೋಜನೆಗೆ 50:50 ಆಧಾರದ ಮೇಲೆ ಎರಡು ಹಂತಗಳಲ್ಲಿ 80.66 ಕೋಟಿ ರೂಪಾಯಿಗಳನ್ನು ಜಂಟಿಯಾಗಿ ಖರ್ಚು ಮಾಡಿದವು. ಅಂದರೆ ಹಂತ-1 ರಲ್ಲಿ 69 ಕೋಟಿ ಮತ್ತು ಹಂತ I. 2 ರಲ್ಲಿ 11.66 ಕೋಟಿ ರೂಪಾಯಿಗಳು. ಅಲ್ಲದೆಮೋಧೇರಾದಲ್ಲಿ 1300 ಮನೆಗಳಿಗೆ ತಲಾ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಸೂರ್ಯನ ಬಿಸಿಲಿನ ಶಕ್ತಿಯಿಂದ ವಿದ್ಯುತ್ ಪಡೆಯುತ್ತದೆ. ಈ ಸೌರ ಫಲಕಗಳ ಮೂಲಕ ಹಗಲಿನಲ್ಲಿ ನೇರವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಸೂರ್ಯ ಮುಳುಗಿದ ಬಳಿಕ, ರಾತ್ರಿ ಬಿಇಎಸ್‌ ಎಸ್‌ (ಬ್ಯಾಟರಿ ಎನರ್ಜಿ ಸ್ಟೋರೇಜ್‌ ಸಿಸ್ಟಮ್)‌ ಮೂಲಕ ಮನೆಗಳಿಗೆ ವಿದ್ಯುತ್‌ ಸರಬರಾಜು ಆಗುತ್ತದೆ.

ಯೋಜನೆಯ ವಿಶೇಷತೆ ಏನು?

1. ಮೊಧೇರಾ ಈ ಯೋಜನೆಯ ಮೂಲಕ ಶುದ್ಧ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಭಾರತದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2. ಸೋಲಾರ್ ಆಧಾರಿತ ಅಲ್ಟ್ರಾ-ಆಧುನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳ ಸೌಲಭ್ಯವನ್ನು ಹೊಂದಿರುವ ಮೊದಲ ಆಧುನಿಕ ಗ್ರಾಮ ಎನಿಸಿತು.

3. ಭಾರತದ ಮೊದಲ ಗ್ರಿಡ್ ಸಂಪರ್ಕಿತ MWh ಪ್ರಮಾಣದ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

4. ಇಲ್ಲಿನ ಸ್ಥಳೀಯ ಜನರ ವಸತಿ ವಿದ್ಯುತ್ ಬಿಲ್ಲಿನಲ್ಲಿ ಶೇ.60ರಿಂದ 100ರಷ್ಟು ಉಳಿತಾಯವಾಗುತ್ತಿದೆ.

ಸೌರಬೆಳಕಿನಿಂದ ಸೂರ್ಯ ದೇಗುಲ ಜಗಮಗ

ವಿಶ್ವಪ್ರಸಿದ್ಧ ಮೊಧೇರಾ ಸೂರ್ಯ ದೇವಾಲಯದಲ್ಲಿ ಸೌರಶಕ್ತಿ ಚಾಲಿತ 3-ಡಿ ಪ್ರೊಜೆಕ್ಷನ್ ಮೂಲಕ ಪ್ರವಾಸಿಗರಿಗೆ ಮೊಧೇರಾದ ಶ್ರೀಮಂತ ಇತಿಹಾಸವನ್ನು ತಿಳಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆಈ 3-ಡಿ ಪ್ರೊಜೆಕ್ಷನ್ ಪ್ರತಿದಿನ ಸಂಜೆ 7:00 ರಿಂದ 7:30 ರವರೆಗೆ ನಡೆಯುತ್ತದೆ. ದೇವಾಲಯದ ಸೌಂದರ್ಯವನ್ನು ಹೆಚ್ಚಿಸಲು ಸೌರಶಕ್ತಿ ಚಾಲಿತ ಪರಂಪರಾತ ದೀಪಗಳನ್ನು ಅದರ ಆವರಣದಲ್ಲಿ ಅಳವಡಿಸಲಾಗಿದೆ. ಸಂದರ್ಶಕರು ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ರವರೆಗೆ ಈ ಆಕರ್ಷಕ ಬೆಳಕನ್ನು ಆಸ್ವಾದಿಸಬಹುದು.

ವಸತಿ ವಿದ್ಯುತ್ ಬಿಲ್ ಸೊನ್ನೆ

ಮೊಧೇರಾ ಗ್ರಾಮದ ಸರಪಂಚ್ ಜತನ್‌ಬೆನ್ ಡಿ.ಟ್ಯಾಗೋರ್ ಪ್ರಕಾರ “ಕೇಂದ್ರ-ರಾಜ್ಯ ಯೋಜನೆಯಿಂದ ಗ್ರಾಮೀಣ ಜನರು ಸಂತೋಷಭರಿತರಾಗಿದ್ದಾರೆ. ಈ ಹಿಂದೆ ಗ್ರಾಮಸ್ಥರ ವಿದ್ಯುತ್ ಬಿಲ್ ತಿಂಗಳಿಗೆ ಸುಮಾರು 1000 ರೂಪಾಯಿ ಬರುತ್ತಿತ್ತು. ಈಗ ಅದು ಬಹುತೇಕ ಸೊನ್ನೆಗೆ ಇಳಿದಿದೆ.

ಯಾವುದೇ ವೆಚ್ಚವಿಲ್ಲದೆ ಎಲ್ಲ ಜನರ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಸೌರ ಫಲಕಗಳು ನಮಗೆ ಅಗತ್ಯಕ್ಕಿಂತ ಹೆಚ್ಚಿನ ಶಕ್ತಿಯನ್ನು ಒದಗಿಸಿ ಉಳಿಸಿದಾಗ ಸರ್ಕಾರವು ನಮಗೆ ಹೆಚ್ಚುವರಿ ಹಣವನ್ನು ನೀಡುತ್ತದೆ” ಎನ್ನುತ್ತಾರೆ ಜತನ್‌ ಬೆನ್.

ಮೊಧೇರಾ ಈ ಸೌರ ವಿದ್ಯುತ್ ಯೋಜನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ಸ್ವಚ್ಛ ಮತ್ತು ಹಸಿರು ಇಂಧನವನ್ನು ಸೃಷ್ಟಿಸುವ ಪ್ರಧಾನಿಯವರ ಕನಸಿಗೆ ಗುಜರಾತ್ ಮತ್ತೊಮ್ಮೆ ಮಹತ್ವದ ಕೊಡುಗೆ ನೀಡಿರುವುದು ಸಂತೋಷವಾಗಿದೆ ಎಂದು ಹೇಳಿದರು..

ಇದೇ ವೇಳೆಗೆ, 2030 ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ಭಾರತದ 50% ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳುವ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಪಟೇಲ್ ಹೇಳಿದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


PARYAYA: ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ:   ಗುಜರಾ ತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ   ಮೊಧೇರಾ (ಗುಜರಾತ್) : ಸೂರ್ಯ ದೇಗುಲದ ಮೂಲಕ ವಿಶ್ವ ಪ್ರಸಿದ್ಧವಾಗಿರುವ ಗುಜರಾತಿನ ಮೊಧೇರಾ ಈಗ ದೇಶದ ಮೊದಲ 24×7...

No comments:

Post a Comment