Showing posts with label ಫೊಟೋಗ್ರಫಿ. Show all posts
Showing posts with label ಫೊಟೋಗ್ರಫಿ. Show all posts

Monday, June 15, 2026

PARYAYA: ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?

 ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?

ಇದು ʼಸುವರ್ಣʼ ನೋಟ

ವಾಮಾನ ವೈಪರೀತ್ಯದಿಂದ ಈ ಬಾರಿ ಮುಂಗಾರು ಕಣ್ಣಾ ಮುಚ್ಚಾಲೆ ಆಡುತ್ತಿದೆ. ವಾರ ಮುಂಚಿತವಾಗಿ ಬರುವುದೆಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದ್ದರೂ, ಬರುವುದು ತಡವಾಗಿದೆ.

ಸೆಕೆಗಾಲದ ಬಿಸಿಲ ಝಳವೂ ಈ ಸಾಲು ಅಂದರೆ ೨೦೨೬ನೇ ವರ್ಷದಲ್ಲಿ ಮಿತಿ ಮೀರಿತು. ಚಳಿಕಾಲದ ಕಥೆಯೂ ಅಷ್ಟೇ. ವಿಪರೀತ ಚಳಿ.

ಗಿಡ, ಮರ, ಬಳ್ಳಿಗಳ ಮೇಲೂ ಹವಾಮಾನದ ವೈಪರೀತ್ಯ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿದೆ. ಬೀರುತ್ತಿದೆ.

ನೋಡಿ. ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಬಾರಿ ಅರಳುವ ಹೂ ಅದ್ಭುತ ಸೊಗಸಿನ ʼಬಹ್ಮ ಕಮಲʼ. ಸಾಮಾನ್ಯವಾಗಿ ಈ ಹೂ ಅರಳುವುದು ಜುಲೈ-ಆಗಸ್ಟ್‌ ತಿಂಗಳಲ್ಲಿ ಹುಣ್ಣಿಮೆ, ಅಮಾವಾಸ್ಯೆಯ ಸಮಯದಲ್ಲಿ.

ಈ ಬಾರಿ ಅದು ಕೂಡಾ ತಿಂಗಳು ಮುಂಚಿತವಾಗಿಯೇ ಅರಳಿ ಬಿಟ್ಟಿದೆ. ಮೊನ್ನೆ, ಮೊನ್ನೆ ಅಂದರೆ ೨೦೨೬ರ ಜೂನ್‌ ತಿಂಗಳ ೧೩ರ ಶನಿವಾರ ರಾತ್ರಿ ಅರಳಿತು. ಹೀಗೆ ಅರಳಿದ ಬ್ರಹ್ಮ ಕಮಲ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಯಾಗಿ ಬಿಟ್ಟಿತು. ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.

ಅಂದಹಾಗೆ, ಈ ಶನಿವಾರ ಪುಣ್ಯಪ್ರದವಾದ ಅಧಿಕ ಮಾಸದ  ಕೊನೆಯ ಶನಿವಾರ. ಅಧಿಕ ಮಾಸದಲ್ಲೇ ಅರಳಲು ʼಬ್ರಹ್ಮಕಮಲʼಕ್ಕೂ ಅವಸರವಾಗಿರಬಹುದೇನೋ? ಏನೇ ಆಗಲಿ, ಪುಣ್ಯದಿನದಂದೇ ಅರಳಿದ ಈ ಹೂವನ್ನು ನೋಡಿದವರಿಗೆ ಲಭಿಸುವ ಪುಣ್ಯ ಅಧಿಕವಾಗಲಿ ಎಂದು ಹಾರೈಸೋಣ.


PARYAYA: ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?:   ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ? ಇದು ʼ ಸುವರ್ಣ ʼ ನೋಟ ಹ ವಾಮಾನ ವೈಪರೀತ್ಯದಿಂದ ಈ ಬಾರಿ ಮುಂಗಾರು ಕಣ್ಣಾ ಮುಚ್ಚಾಲೆ ಆಡುತ್ತಿದೆ. ವಾರ ಮುಂಚಿತವಾಗಿ ಬರುವ...

Tuesday, October 21, 2025

PARYAYA: ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!

 ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!

ಇದು ಸುವರ್ಣ ನೋಟ

ದೀಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ ಬಿರುಸಿನ ಹಬ್ಬ.

ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋಧ್ಯೆಗೆ ವಾಪಸಾಗಿ ಪಟ್ಟವನ್ನೇರಿದ ಹಬ್ಬ. ಅಸುರ ನರಕಾಸುರನನ್ನು ವಧಿಸಿದ ದಿನದ ಹಬ್ಬ. ವಿಷ್ಣುವು ವಾಮನರೂಪಿಯಾಗಿ ಬಂದು ಮೂರು ಅಡಿ ಭೂಮಿಯನ್ನು ದಾನವಾಗಿ ಪಡೆದು ಬಲಿಯೇಂದ್ರ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದ ಹಬ್ಬ. ಪಾರ್ವತಿಯ ಕೇದಾರೇಶ್ವರನನ್ನಪೂಜಿಸಿ ಈಶ್ವರನನ್ನು ಪತಿಯಾಗಿ ಪಡೆದ ಹಬ್ಬ. ಲಕ್ಷ್ಮಿಯು ಪೂಜೆ ಸ್ವೀಕರಿಸಿ ಭಕ್ತರನ್ನು ಹರಸುವ ಹಬ್ಬ.ಗೋಮಾತೆಯನ್ನು ಪೂಜಿಸುವ ಹಬ್ಬ.

ಈ ಹಬ್ಬಕ್ಕೆ ದೇವರಿಗೆ ಹೂಗಳ ಸಿಂಗಾರದೊಂದಿಗೆ ಸಾಲು ದೀಪಗಳ ಹಣತೆ ಬೆಳಗಿಸುವುದರ ಜೊತೆಗೆ ಪಟಾಕಿ ಬಾಣಗಳ ಬಿರುಸು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.

ಈ ದೃಶ್ಯಗಳನ್ನು ಸೆರೆ ಹಿಡಿದು ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಕಳೆಗಟ್ಟಿಸಿರುವುದು ಹೀಗೆ.

ಪಟಾಕಿ ಬಾಣಗಳ ಸುಂದರ ಛಾಯಾಚಿತ್ರಗಳನ್ನು ಪರ್ಯಾಯದ 
ʼಸುವರ್ಣ ನೋಟʼಕ್ಕೆ ಒದಗಿಸಿದ್ದಾರೆ.









ಈ ಚಿತ್ರಗಳಿಗೆ ಚಲನೆ ನೀಡಿ ವಿಡಿಯೋ ರೂಪಿಸಿದ್ದು ನೆತ್ರಕೆರೆ ಉದಯಶಂಕರ.

ಚಿತ್ರ ಹಾಗೂ ವಿಡಿಯೋದ ಸಂಗಮ ಇಲ್ಲಿದೆ.👇

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ. ವಿಡಿಯೋದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿ. ಇಲ್ಲವೇ ಇಲ್ಲಿರುವ ಯೂ ಟ್ಯೂಬ್‌ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ: https://youtu.be/ZqJD3In5guY?list=PLv2kXf-8UHyK3E-4qT6ApslDz_pUNsCZO




PARYAYA: ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!:   ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ! ಇದು ಸುವರ್ಣ ನೋಟ ದೀ ಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ ಬಿರುಸಿನ ಹಬ್ಬ. ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋ...

Monday, June 30, 2025

PARYAYA: ಕರ್ನಾಟಕದಲ್ಲಿ ಪತ್ರಿಕಾ ದಿನ: ಇತಿಹಾಸ ಗೊತ್ತಾ?

 ಕರ್ನಾಟಕದಲ್ಲಿ ಪತ್ರಿಕಾ ದಿ: ಇತಿಹಾಸ ಗೊತ್ತಾ?

ಇದು ಸುವರ್ಣ ನೋಟ

ಪ್ರತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ 'ಪತ್ರಿಕಾ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ವಿಶೇಷ ಮಹತ್ವವಿದೆಏಕೆಂದರೆ ಇದು ಕನ್ನಡದ ಮೊಟ್ಟಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಪ್ರಕಟಗೊಂಡ ದಿನ. 1843ರ ಜುಲೈ 1 ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್‌ನ ಮುದ್ರಣಾಲಯದಿಂದ ಈ ಪತ್ರಿಕೆ ಹೊರಬಂದಿತು.

ಕನ್ನಡ ಪತ್ರಿಕೋದ್ಯಮದ ಪಿತಾಮಹ: ರೆವರೆಂಡ್ ಹರ್ಮನ್ ಮೋಗ್ಲಿಂಗ್

'ಮಂಗಳೂರು ಸಮಾಚಾರ'ದ ಸಂಪಾದಕರು ರೆವರೆಂಡ್ ಹರ್ಮನ್ ಮೋಗ್ಲಿಂಗ್ಜರ್ಮನ್‌ನ ಮತ ಪ್ರಚಾರಕರಾದ ಇವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ ಅಥವಾ ಪಿತಾಮಹ ಎಂದು ಕರೆಯಲಾಗುತ್ತದೆ. ಯುರೋಪಿಯನ್ ಪತ್ರಿಕೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಮೋಗ್ಲಿಂಗ್, 1840ರಲ್ಲಿ ಮಂಗಳೂರಿಗೆ ಬಂದ ನಂತರ ತುಳುಕೊಂಕಣಿಕನ್ನಡ ಭಾಷೆಗಳನ್ನು ಕಲಿತರು. ಮಿಷನರಿಯಾಗಿದ್ದರೂಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಅವರು ತೀವ್ರ ಆಸಕ್ತಿ ತೋರಿಸಿದರು.

'ಮಂಗಳೂರು ಸಮಾಚಾರ'ದ ಪ್ರಕಟಣೆ ಮತ್ತು ಪ್ರಭಾವ

'ಮಂಗಳೂರು ಸಮಾಚಾರ'ವು ಆರಂಭದಲ್ಲಿ ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ಇದು ಕಲ್ಲಚ್ಚಿನಲ್ಲಿ ಪ್ರಕಟವಾಗುತ್ತಿತ್ತು ಮತ್ತು ನಾಲ್ಕು ಪುಟಗಳನ್ನು ಒಳಗೊಂಡಿತ್ತುಅದರ ಬೆಲೆ ಕೇವಲ ಒಂದು ಪೈಸೆ. ಮೋಗ್ಲಿಂಗ್ ಅವರೇ ಸುದ್ದಿಗಳನ್ನು ಆಯ್ಕೆ ಮಾಡುತ್ತಿದ್ದರು. ಸ್ಥಳೀಯಸರ್ಕಾರಿ ಅಧಿಸೂಚನೆಗಳುಕಾನೂನು ವಿಷಯಗಳುಹಾಡುಗಳುಕಥೆಗಳುಅಂತರರಾಜ್ಯ ವರ್ತಮಾನಗಳುಮತ್ತು ಓದುಗರ ವಾಣಿಗಳಂತಹ ವೈವಿಧ್ಯಮಯ ವಿಷಯಗಳನ್ನು ಈ ಪತ್ರಿಕೆ ಪ್ರಕಟಿಸುತ್ತಿತ್ತು. ಜನರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಕೋರ್ಟ್ ಪ್ರಕರಣಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಹೆಚ್ಚಾಗಿ ಪ್ರಕಟಿಸಲಾಗುತ್ತಿತ್ತು. ನಂತರಈ ಪತ್ರಿಕೆಯ ಹೆಸರನ್ನು 'ಕನ್ನಡ ಸಮಾಚಾರ' ಎಂದು ಬದಲಾಯಿಸಿ ಬಳ್ಳಾರಿಯಿಂದ ಪ್ರಕಟಿಸಲು ಪ್ರಾರಂಭಿಸಲಾಯಿತು.

ಮೋಗ್ಲಿಂಗ್‌ಗೆ ಗೌರವ ಡಾಕ್ಟರೇಟ್

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಮೋಗ್ಲಿಂಗ್ ನೀಡಿದ ಅನನ್ಯ ಕೊಡುಗೆಗಾಗಿಟ್ಯೂಬಿಂಗೆನ್‌ನ ಎಬರ್‍ಹಾರ್ಡ್ ಕಾರ್ಲ್ಸ್ ವಿಶ್ವವಿದ್ಯಾನಿಲಯವು 1858ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತು. ಕನ್ನಡಕ್ಕಾಗಿ ಇಂತಹ ಗೌರವ ಪಡೆದ ಮೊದಲ ವ್ಯಕ್ತಿ ಇವರಾಗಿದ್ದರು.

ಆಧುನಿಕ ಪತ್ರಿಕೋದ್ಯಮದ ಬೆಳವಣಿಗೆ

'ಮಂಗಳೂರು ಸಮಾಚಾರ'ದೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗವು ಇಂದು ಆಧುನಿಕ ತಂತ್ರಜ್ಞಾನದೊಂದಿಗೆ ಅಗಾಧವಾಗಿ ಬೆಳೆದಿದೆ. ಈಗ ಅನೇಕ ಪತ್ರಿಕೆಗಳುಸ್ಯಾಟಲೈಟ್ ಚಾನೆಲ್‌ಗಳುಬಹುಭಾಷಾ ಪ್ರಾದೇಶಿಕ ಚಾನೆಲ್‌ಗಳುಆನ್‌ಲೈನ್ ಆವೃತ್ತಿಗಳುವೆಬ್‌ಸೈಟ್‌ಗಳುವೆಬ್ ಪತ್ರಿಕೆಗಳುಸಾಮಾಜಿಕ ಮಾಧ್ಯಮ (ಫೇಸ್‌ಬುಕ್ವಾಟ್ಸಪ್)ಮತ್ತು ನೇರ ಪ್ರಸಾರ ನೀಡುವ ಸುದ್ದಿವಾಹಿನಿಗಳ ಮೂಲಕ ಮಾಧ್ಯಮವು ಕ್ಷಣಕ್ಷಣದ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿದೆ.

ಛಾಯಾಗ್ರಹಣ ಮತ್ತು ವ್ಯಂಗ್ಯಚಿತ್ರ

ಇಂದಿನ ದಿನಗಳಲ್ಲಿ ಪತ್ರಿಕೆಗಳು ಜೀವಂತಿಕೆಯನ್ನು ತಳೆಯುವುದು ಛಾಯಾಚಿತ್ರಗಳು ಮತ್ತು ವ್ಯಂಗ್ಯ ಚಿತ್ರಗಳ ಮೂಲಕ. ಸಾವಿರ ಪದಗಳಲ್ಲಿ ಹೇಳಬಹುದಾದ ವಿಷಯವನ್ನು ಒಂದು ಛಾಯಾಚಿತ್ರ ಪ್ರಭಾವಶಾಲಿಯಾಗಿ ಹೇಳಬಲ್ಲುದು.

ಹಾಗೆಯೇ ವ್ಯಂಗ್ಯಚಿತ್ರ ಕೂಡಾ ಅತ್ಯಂತ ಪರಿಣಾಮಕಾರಿಯಾಗಿ ರಾಜಕೀಯ, ಜನರ ಬದುಕು, ವರ್ತನೆ, ಮಾತುಗಳನ್ನು ಮೊನಚಾಗಿ ತಿವಿಯಬಲ್ಲುದು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ತಮ್ಮ ಛಾಯಾಚಿತ್ರಗಳ ಮೂಲಕ ಬಹುರೂಪೀ ವಿದ್ಯಮಾನಗಳನ್ನು ದಾಖಲಿಸಿದ್ದಾರೆ. ವಿಧಾನಸಭಾ ಕಲಾಪ, ಪೊಲೀಸ್‌ ಗೋಲೀಬಾರ್‌, ವಾಹನಗಳಿಗೆ ಬೆಂಕಿ, ಜನರ ಅಭಿವ್ಯಕ್ತಿಗಳು – ಹೀಗೆ ಹತ್ತಾರು ಸಂದರ್ಭಗಳು ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವುಗಳ ಸುಂದರ ಕಂತು ಇಲ್ಲಿದೆ.

ಜುಲೈ 01ರ ಪತ್ರಿಕಾ ದಿನಕ್ಕಾಗಿ ವಿಶ್ವನಾಥ ಸುವರ್ಣ ಅವರು ಈ ಚಿತ್ರಗಳನ್ನು ಇಲ್ಲಿ ಒದಗಿಸಿದ್ದಾರೆ. ಸಮೀಪ ನೋಟಕ್ಕಾಗಿ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.










-ನೆತ್ರಕೆರೆ ಉದಯಶಂಕರ
 ಹಿಂದಿನ ಸುವರ್ಣ ನೋಟಗಳಿಗಾಗಿ
                                                            ಇಲ್ಲಿ ಕ್ಲಿಕ್‌ ಮಾಡಿರಿ   👉👉👉

PARYAYA: ಕರ್ನಾಟಕದಲ್ಲಿ ಪತ್ರಿಕಾ ದಿನ: ಇತಿಹಾಸ ಗೊತ್ತಾ?:   ಕರ್ನಾಟಕದಲ್ಲಿ ಪತ್ರಿಕಾ ದಿ ನ : ಇತಿಹಾಸ ಗೊತ್ತಾ? ಇದು ಸುವರ್ಣ ನೋಟ ಪ್ರ ತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ ' ಪತ್ರಿಕಾ ದಿನ ' ವನ್ನು ಆಚರಿಸಲಾಗು...

Monday, June 2, 2025

PARYAYA: ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!

 ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!

ತಿಕ್ಯಾತ ಬಣ್ಣ ಬದಲಿಸುತ್ತದೆ ಎಂಬುದು ಬಹಳ ಜನಕ್ಕೆ ಗೊತ್ತು. ಆದರೆ ಹಾಗೆ ಬಣ್ಣ ಬದಲಿಸುವಾಗ ಕಾಣ ಸಿಗುವುದು ಬಲು ಅಪರೂಪ. ಸಿಕ್ಕಿದರೂ ಅದನ್ನೆಲ್ಲ ನೋಡುವಷ್ಟು ಹೊತ್ತು ಅದೇನು ಫೋಸ್‌ ನೀಡುತ್ತಾ ನಿಲ್ಲುತ್ತದೆಯೇ?

ಮನುಷ್ಯರ ಕಾಲಿನ ಸಪ್ಪಳ ಕೇಳುವಷ್ಟರಲ್ಲೇ ಅದು ಸ್ಥಳದಿಂದ ಪರಾರಿ ಆಗಿ ಬಿಡುತ್ತದೆ.

ಅಂತಹ ಓತಿಕ್ಯಾತ ಬಣ್ಣ ಬದಲಿಸುತ್ತಾ ವರ್ಣಮಯ ರೂಪದಲ್ಲಿ ನಿಂತು ಫೋಸ್‌ ಕೊಟ್ಟು ಬಿಟ್ಟಿದೆ ನೋಡಿ- ನಮ್ಮ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೆ.

ನಮ್ಮ ಕರ್ನಾಟಕದ ಮಧ್ಯಭಾಗದಲ್ಲಿ ಇರುವ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವನ್ಯಜೀವಿ ಅಭಯಾರಣ್ಯಕ್ಕೆ ನೆಲೆ. ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯದಲ್ಲಿ ಕೃಷ್ಣಮೃಗಗ್ರೇಟ್ ಇಂಡಿಯನ್ ಬಸ್ಟರ್ಡ್ ಮತ್ತು ತೋಳಗಳು ಸಾಕಷ್ಟವೆ. ಆದರೆ ಇಲ್ಲಿದ್ದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿ ಈಗ ಬಹುತೇಕ ಅಳಿದು ಹೋದಂತಿದೆ. ಕೊನೆಯ ಬಾರಿಗೆ 2005 ರಲ್ಲಿ ಈ ಪಕ್ಷಿ ಕಾಣಿಸಿಕೊಂಡಿತ್ತು. ಆ ನಂತರ ಈ ಯಾರಿಗೂ ಕಂಡದ್ದಿಲ್ಲವಂತೆ.

ವಿಶ್ವನಾಥ ಸುವರ್ಣ ಇತ್ತೀಚಿನ ದಿನಗಳಲ್ಲಿ ಅಳಿಯುತ್ತಿರುವ ಚಿಕ್ಕಪುಟ್ಟ ಪ್ರಾಣಿಗಳು, ಪಕ್ಷಿಗಳ ಹುಡುಕಾಟದಲ್ಲಿದ್ದಾರೆ. ಅವುಗಳನ್ನು ಸೆರೆ ಹಿಡಿದು (ಕ್ಯಾಮರಾದಲ್ಲಿ ಮಾರಾಯರೆ) ಜನರಿಗೆ ತೋರಿಸಬೇಕೆಂಬ ತವಕದಲ್ಲಿ ಇದ್ದಾರೆ. ಹೀಗಾಗಿ ತಮ್ಮ ಕ್ಯಾಮರಾ ಹಿಡಿದುಕೊಂಡು ಊರೂರು ಸುತ್ತುತ್ತಿದ್ದಾರೆ.

ಇತ್ತೀಚೆಗೆ ಅವರು ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿಗೆ ಭೇಟಿ ಕೊಟ್ಟಿದ್ದರು. ಹಾಗೆಯೇ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಸುತ್ತಾಡುತ್ತಿದ್ದಾಗ, ಹೊಲ ಒಂದರಲ್ಲಿ ಬಣ್ಣ ಬದಲಿಸುತ್ತಿದ್ದ ಓತಿ ಕ್ಯಾತ ಇವರ ಕ್ಯಾಮರಾಕ್ಕೆ ಫೋಸ್‌ ಕೊಟ್ಟೇ ಬಿಟ್ಟಿತು.

ಆ ಓತಿಕ್ಯಾತನ ಚಿತ್ರಗಳು ಇಲ್ಲಿವೆ ನೋಡಿ.

ಇದೇ ಸಮಯದಲ್ಲಿ ಸುವರ್ಣರಿಗೆ ಅಪರೂಪದ ಪಕ್ಷಿಯಾದ ಫ್ಲೈ ಕ್ಯಾಚರ್‌ ಹಕ್ಕಿಯೂ ಕಾಣ ಸಿಕ್ಕಿತು. ಫ್ಲೈ ಕ್ಯಾಚರ್‌ ಪಕ್ಷಿಗಳನ್ನು ʼಇಂಡಿಯನ್‌ ಪ್ಯಾರಡೈಸ್‌ ಫ್ಲೈ ಕ್ಯಾಚರ್‌ʼ ಎಂಬುದಾಗಿಯೂ ಕರೆಯುತ್ತಾರೆ.

ಅತ್ಯಂತ ಆಕರ್ಷಕವಾದ ಈ ಪಕ್ಷಿ ಜಾತಿಯ ಗಂಡು ಹಕ್ಕಿಗಳು ಉದ್ದವಾದ ರಿಬ್ಬನ್‌ ಮಾದರಿಯ ಬಾಲ ಹೊಂದಿರುತ್ತವೆ. ಗಂಡು ಹಕ್ಕಿಗಳು ದಾಲ್ಚಿನ್ನಿ ಮತ್ತು ಬಿಳಿ ಎರಡು ಬಣ್ಣಗಳಲ್ಲಿ ಇರುತ್ತವೆ. ಎರಡೂ ಬಣ್ಣದ ಹಕ್ಕಿಗಳು ಕಣ್ಣಿನ ಸುತ್ತಲೂ ನೀಲಿ ಉಂಗುರವನ್ನು ಹೊಂದಿರುತ್ತವೆ. ಕಪ್ಪುಬಣ್ಣದ ಹೊಳಪುಳ್ಳ ತಲೆಯನ್ನು ಹೊಂದಿರುತ್ತವೆ. ಆದರೆ ಬಿಳಿ ಹಕ್ಕಿ ಕೆಳಗೆ ಸಂಪೂರ್ಣವಾಗಿ ಬೆಳ್ಳಗಿರುತ್ತದೆ. ದಾಲ್ಚಿನ್ನಿ ಹಕ್ಕಿ ದಾಲ್ಚಿನ್ನಿ ಮೇಲ್ಭಾಗ ಮತ್ತು ಬಾಲ ಮತ್ತು ಮಾಸಿದ ಬಿಳಿಬಣ್ಣದ  ಒಳಭಾಗವನ್ನು ಹೊಂದಿರುತ್ತದೆ.

ಹೆಣ್ಣು ಹಕ್ಕಿಗಳು ಬೂದು ಬಣ್ಣದ ಗಂಟಲುಚಿಕ್ಕ ಬಾಲವನ್ನು ಹೊಂದಿರುತ್ತವೆ. ಬಾಲದ ಮೇಲ್ಭಾಗದಲ್ಲಿ ದಾಲ್ಚಿನ್ನಿ ಬಣ್ಣವಿರುತ್ತದೆ. ಹೆಣ್ಣು ಹಕ್ಕಿಯು ಗಂಡು ಹಕ್ಕಿಯಂತೆ ನೀಲಿ ಕಣ್ಣುರೆಪ್ಪೆಯನ್ನು ಹೊಂದಿರುವುದಿಲ್ಲ.

ಈ ಹಕ್ಕಿಗಳು ಕೀಟಗಳ ಮೇಲೆ ಸಣ್ಣ ವಿಮಾನದಂತೆ ಎರಗುತ್ತವೆ. ಕೀಟಗಳನ್ನು ಹಿಡಿಯಲು ಸಾಂದರ್ಭಿಕವಾಗಿ ನೆಲಕ್ಕೆ ಇಳಿಯುತ್ತವೆ. ಮುಖ್ಯವಾಗಿ ಕಾಡಿನ ಆವಾಸಸ್ಥಾನಗಳಲ್ಲಿ ಇವು ಕಂಡು ಕಂಡುಬರುತ್ತವೆ.

ಅಪರೂಪದ ಈ ಕ್ಯಾಚ್‌ ಫ್ಲೈಯರ್‌ ಹಕ್ಕಿ ತನ್ನ ಮರಿಗಳಿಗೆ ಆಹಾರ ನೀಡುತ್ತಿದ್ದಾಗ ಸುವರ್ಣರ ಕ್ಯಾಮರಾದಲ್ಲಿ ಸೆರೆಯಾಗಿ ಬಿಟ್ಟದ್ದನ್ನು ಇಲ್ಲಿ ನೋಡಬಹುದು.


ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.




ನೆತ್ರಕೆರೆ ಉದಯಶಂಕರ

ಸುವರ್ಣ ನೋಟದ ಇತರ ಕಂತುಗಳಿಗೆ ಕೆಳಗೆ 👇ಕ್ಲಿಕ್‌ ಮಾಡಿ


PARYAYA: ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!:   ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..! ಓ ತಿಕ್ಯಾತ ಬಣ್ಣ ಬದಲಿಸುತ್ತದೆ ಎಂಬುದು ಬಹಳ ಜನಕ್ಕೆ ಗೊತ್ತು. ಆದರೆ ಹಾಗೆ ಬಣ್ಣ ಬದಲಿಸುವಾಗ ಕಾಣ ಸಿಗುವುದು ಬಲು ಅ...

Tuesday, May 27, 2025

PARYAYA: ಕಟ್ಟಿಗೆ ಸೋಮೀ, ಕಟ್ಟಿಗೆ…!

 ಕಟ್ಟಿಗೆ ಸೋಮೀ, ಕಟ್ಟಿಗೆ…!

ಇದು ಸುವರ್ಣ ನೋಟ!

ವಿಯ ಕಣ್ಣಿಗೆ ಕಾಣದ್ದು ಕವಿಯ ಕಣ್ಣಿಗೆ ಕಾಣುತ್ತದಂತೆ. ಕವಿಯ ಕಣ್ಣಿಗೆ ಕಾಣದ್ದು?

ಛಾಯಾಗ್ರಾಹಕನ ಕಣ್ಣಿಗೆ ಕಾಣುತ್ತದೆ ನೋಡಿ.

ವಿಧಾನ ಸೌಧದ ಮುಂದೆ ಕಟ್ಟಿಗೆ ಸೋಮೀ ಕಟ್ಟಿಗೆ ಎನ್ನುತ್ತಾ ಕಟ್ಟಿಗೆ ಹೊರೆ ಹೊತ್ತುಕೊಂಡು ಹೋಗುವ  ದೃಶ್ಯ ಕಂಡದ್ದು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಅಂತರದೃಷ್ಟಿಗೆ. ತಕ್ಷಣ ಅದನ್ನು ಸೆರೆ ಹಿಡಿದದ್ದು ಅವರ ಕ್ಯಾಮರಾ ಕಣ್ಣು. 

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.




ಕೆಳಗಿನವುಗಳನ್ನೂ ಓದಿರಿ: 
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ

ಬದುಕಿನ ಹೋರಾಟ….!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಡಾ. ರಾಜಕುಮಾರ್ ಆರೋಗ್ಯ ಸೂತ್ರ…!

ಕಥೆ ಹೇಳುವೆ… ನನ್ನ ಕಥೆ ಹೇಳುವೆ..!

ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

PARYAYA: ಕಟ್ಟಿಗೆ ಸೋಮೀ, ಕಟ್ಟಿಗೆ…!:   ಕಟ್ಟಿಗೆ ಸೋಮೀ, ಕಟ್ಟಿಗೆ…! ಇದು ಸುವರ್ಣ ನೋಟ! ರ ವಿಯ ಕಣ್ಣಿಗೆ ಕಾಣದ್ದು ಕವಿಯ ಕಣ್ಣಿಗೆ ಕಾಣುತ್ತದಂತೆ. ಕವಿಯ ಕಣ್ಣಿಗೆ ಕಾಣದ್ದು? ಛಾಯಾಗ್ರಾಹಕನ ಕಣ್ಣಿಗೆ ಕಾಣು...

Thursday, February 27, 2025

PARYAYA: ಮಹಾಕುಂಭ ಮುಗಿಯಿತು.....


ಪೂರ್ತಿ ವಿವರ ನೋಡಲು
 ಇಲ್ಲಿ ಕ್ಲಿಕ್‌ ಮಾಡಿ ಅಥವಾ ಕೆಳಗಿನ ಪುಟದ ಲಿಂಕ್‌ ಕ್ಲಿಕ್‌ ಮಾಡಿರಿ

PARYAYA: ಮಹಾಕುಂಭ ಮುಗಿಯಿತು.....:  ಮಹಾಕುಂಭ ಮುಗಿಯಿತು.... ಪೂರ್ತಿ ವಿವರ ನೋಡಲು ಇಲ್ಲಿ ಕ್ಲಿಕ್‌ ಮಾಡಿ ಅಥವಾ ಮೇಲಿನ ಪುಟಗಳಿಗೆ ಹೋಗಿ ʼ ಮಹಾಕುಂಭ ಮುಗಿಯಿತುʼ ಕ್ಲಿಕ್‌ ಮಾಡಿರಿ.

Tuesday, February 25, 2025

PARYAYA: ಬರುತಿದೆ ಬರುತಿದೆ ವಸಂತ!

 ಬರುತಿದೆ ಬರುತಿದೆ ವಸಂತ!

ಇದು ಸುವರ್ಣ ನೋಟ

ಹಾಶಿವರಾತ್ರಿ ಶಿಶಿರ ಋತುವಿನ ಮಹಾ ಹಬ್ಬ. ಶಿವನಿಗೆ ಮೀಸಲಾದ ಹಬ್ಬ. ಶಿಶಿರ ಋತುವಿನಲ್ಲಿ ಪ್ರಕೃತಿಯಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತವೆ. ಗಿಡಮರಗಳು ಎಲೆಗಳನ್ನು ಉದುರಿಸಿ ಹೊಸ ಚಿಗುರುಗಳಿಗೆ ಸಿದ್ಧವಾಗುತ್ತದೆ. ಈ ಋತುವು ವಸಂತ ಋತುವಿನ ಆಗಮನದ ಮುನ್ಸೂಚನೆಯನ್ನು ನೀಡುತ್ತದೆ.

ವಸಂತ ಋತು ಪ್ರಕೃತಿಯ ಪುನರುತ್ಥಾನದ ಸಂಕೇತ. ಹೊಸ ಚಿಗುರು, ಅರಳುವ ಹೂಗಳೊಂದಿಗೆ ಪ್ರಕೃತಿ ವರ್ಣಮಯವಾಗಿ ಕಂಗೊಳಿಸುತ್ತದೆ.


ಚಳಿಗಾಲ ಮುಗಿದು, ಅದೇ ತಾನೇ ಆರಂಭವಾಗುವ ಬೆಚ್ಚಗಿನ ವಾತಾವರಣ, ಹೂವುಗಳ ಸುವಾಸನೆ ಮತ್ತು ಪಕ್ಷಿಗಳ ಕಲರವವು ಸಂತೋಷ ಮತ್ತು ಆಶಾವಾದವನ್ನು ಹೆಚ್ಚಿಸುತ್ತದೆ.

ವಸಂತ ಕಾಲವು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ದೃಷ್ಟಕೋನವನ್ನು ಹುಟ್ಟುಹಾಕುತ್ತದೆ.


ಯುಗ ಯುಗಗಳು ಕಳೆದರೂ ಮತ್ತೆ ಮತ್ತೆ ಬರುವ ಯುಗಾದಿ ವಸಂತಕಾಲ ಸಂಭ್ರಮವನ್ನು ದ್ವುಗುಣಗೊಳಿಸುತ್ತದೆ.

ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ನಾಂದಿ ಹಾಡುತ್ತಾರೆ. ಚೈತನ್ಯಶಾಲೀ ಪ್ರಕೃತಿಯ ಮಡಿಲಲ್ಲಿ ಯೋಗ, ಧ್ಯಾನ, ನಡಿಗೆ ದೇಹ, ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.


ವಸಂತಾಗಮನಕ್ಕೆ ಮೊದಲಿನ ಋತುವಾದ ಈಗಿನ ಶಿಶಿರ ಋತುವಿನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಬೆಳ್ಳಂಬೆಳಗ್ಗೆ ಮಿತ್ರರೊಬ್ಬರ ಮನೆಗೆ ಹೋಗಿದ್ದರು. ಅಲ್ಲಿ ಅದೇ ತಾನೇ ಚಿಗುರುತ್ತಿದ್ದ ಗಿರಮರ, ಅರಳಲು ಸಜ್ಜಾಗಿದ್ದ ಹೂವುಗಳ ಸಂಭ್ರಮ ಕಣ್ಣಿಗೆ ಬಿತ್ತು.

ಸುವರ್ಣರ ಕ್ಯಾಮರಾ ಹೆಗಲೇರಿತು. ಹತ್ತಾರು ಕ್ಲಿಕ್‌ಗಳು. ಕ್ಯಾಮರಾದಿಂದ ಹೊರಬಂದ ʼಸುವರ್ಣನೋಟʼದ ಪುಷ್ಪಗಳು ಇಲ್ಲಿವೆ. ನೋಡಿ ಅನುಭವಿಸಿ, ಆಸ್ವಾದಿಸಿ, ಸಂಭ್ರಮಿಸಿ.


ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ,

ಹಾಂ. ಹಾಗೆಯೇ ಇಲ್ಲೊಂದು ಕವನವಿದೆ- ವಸಂತ ಕಾಲಕ್ಕೆ ಸಂಬಂಧಿಸಿದ್ದು.

ವಸಂತ ಕಾಲದ ಸೊಬಗು

ಪಲ್ಲವಿ:

ವಸಂತ ಬಂದಿದೆವನಸಿರಿ ನಲಿದಿದೆ,

ಹೂಗಳ ಚಿತ್ತಾರಬಣ್ಣಗಳ ಸಂಭ್ರಮ.

ಚರಣ 1:

ಗಿಡಮರಗಳೆಲ್ಲಾ ಚಿಗುರೊಡೆದಿವೆ,
ಹಕ್ಕಿಗಳ ಕಲರವಇಂಪಾಗಿ ಮೊಳಗಿದೆ.
ತಂಗಾಳಿಯ ತಂಪನುಮನವು ಬಯಸಿದೆ,
ಹೊಸತನದ ಆನಂದಎಲ್ಲೆಡೆ ತುಂಬಿದೆ.

ಚರಣ 2:

ನದಿ ತೊರೆಗಳುತಿಳಿಯಾಗಿ ಹರಿಯುತಿವೆ,
ದುಂಬಿಗಳ ಝೇಂಕಾರಕಿವಿಗೆ ಇಂಪಿದೆ.
ಹೊಲ ಗದ್ದೆಗಳಲ್ಲಿಹಸಿರು ನಲಿಯುತಿದೆ,
ಕೃಷಿಕರ ಮುಖದಲ್ಲಿಸಂತಸ ಮೂಡಿದೆ.

ಚರಣ 3:

ಉಗಾದಿ ಹಬ್ಬದಸಂಭ್ರಮವಿದು,

ಹೊಸ ವರ್ಷದಹರುಷವಿದು.
ಬೆಲ್ಲದ ಸಿಹಿಯಸವಿಯುವ ಸಮಯವಿದು,
ಬೇವು-ಬೆಲ್ಲದಸಮಭಾವವಿದು.

ಚರಣ 4:

ವಸಂತ ಕಾಲವುಜೀವನದ ಸಂಕೇತ,
ಹೊಸ ಆಸೆಗಳಚಿಗುರುವ ಸಮಯ.
ನಾವೆಲ್ಲರೂಒಂದಾಗಿ ನಲಿಯೋಣ,
ಪ್ರಕೃತಿಯ ಸೌಂದರ್ಯವನುಸವಿಯೋಣ.

ಬರೆದವನು ನಾನಲ್ಲ- ಗೂಗಲ್‌ ಜೆಮಿನಿ. ಯಾರಾದರೂ ರಾಗ ಹಾಕಿ, ಹಾಡುವುದಿದ್ದರೆ ದಯವಿಟ್ಟು ಹಾಡಿ, ರೆಕಾರ್ಡ್‌ ಮಾಡಿ ನನಗೂ ಕಳುಹಿಸಿಕೊಡಿ.

-ನೆತ್ರಕೆರೆ ಉದಯಶಂಕರ

ಕೆಳಗಿನವುಗಳನ್ನೂ ಓದಿರಿ: 

ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!

ಈ ಪುಸ್ತಕ ಓದಿದ್ದೀರಾ?
ಕೆಳಗೆ ಕ್ಲಿಕ್‌ ಮಾಡಿ ಓದಿ. ಪುಸ್ತಕ / ಇ-ಪುಸ್ತಕಕ್ಕಾಗಿ ಸಂಪರ್ಕಿಸಿ: 9480215706/ 9845049970 - ಇ-ಪುಸ್ತಕಕ್ಕೆ ಅರ್ಧ ಬೆಲೆ- ಯುಪಿಐ ಮಾಡಿರಿ.

PARYAYA: ಬರುತಿದೆ ಬರುತಿದೆ ವಸಂತ!:   ಬರುತಿದೆ ಬರುತಿದೆ ವಸಂತ! ಇದು ಸುವರ್ಣ ನೋಟ ಮ ಹಾಶಿವರಾತ್ರಿ ಶಿಶಿರ ಋತುವಿನ ಮಹಾ ಹಬ್ಬ. ಶಿವನಿಗೆ ಮೀಸಲಾದ ಹಬ್ಬ. ಶಿಶಿರ ಋತುವಿನಲ್ಲಿ ಪ್ರಕೃತಿಯಲ್ಲಿ ಬದಲಾವಣೆಗಳು ...