Showing posts with label ಕನ್ನಡ ರಾಜ್ಯೋತ್ಸವ. Show all posts
Showing posts with label ಕನ್ನಡ ರಾಜ್ಯೋತ್ಸವ. Show all posts

Saturday, November 1, 2025

PARYAYA: ಏರಲಿ ಹಾರಲಿ ಕನ್ನಡ ಧ್ವಜ

 ಏರಲಿ ಹಾರಲಿ ಕನ್ನಡ ಧ್ವಜ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೨೦೨೫ ನವೆಂಬರ್‌ ೧ರ ಶನಿವಾರ ಸರಳವಾಗಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಚೆನ್ನೈಯ ಬಿನ್ನಿಮಿಲ್‌ ಮತ್ತು ಮೈಸೂರು ಸಮೀಪದ ನಂಜನಗೂಡಿನಲ್ಲಿ ಡನ್‌ ಫೋರ್ಡ್‌ ಫ್ಯಾಬ್ರಿಕ್ಸ್‌ನಲ್ಲಿ ನಿವೃತ್ತಿಯ ನಂತರ ಸೇವೆ ಸಲ್ಲಿಸಿದ್ದ ಹಿರಿಯ ವ್ಯಕ್ತಿ ಶ್ರೀ ಸಿ. ವರದನ್‌ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಶ್ರೀ ರಾಜೇಶ ಕೆ. ಹೆಗಡೆ ಕನ್ನಡ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.


ಶ್ರೀ ಸಿ. ವರದನ್‌ ಅವರನ್ನು ಶ್ರೀ ಮುನಿರಾಜು, ಶ್ರೀ ಚೌಡರೆಡ್ಡಿ, ಶ್ರೀ ಉದಯಶಂಕರ್‌ ಸನ್ಮಾನಿಸಿ ಗೌರವಿಸಿದರು.

ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ, ಹಿರಿಯ ಸದಸ್ಯ ಶ್ರೀ ರವಿಚಂದ್ರನ್‌ ಅವರ ಪತ್ನಿ, ಶ್ರೀ ವರದನ್‌ ಅವರ ಪುತ್ರಿ ಹೇಮಾ, ಸಂಘದ ಅಧ್ಯಕ್ಷ ಶ್ರೀ ರಾಜೇಶ ಹೆಗಡೆ ಮಾತನಾಡಿದರು. ಶ್ರೀ ನೆತ್ರಕೆರೆ ಉದಯಶಂಕರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.


ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.



PARYAYA: ಏರಲಿ ಹಾರಲಿ ಕನ್ನಡ ಧ್ವಜ:   ಏರಲಿ ಹಾರಲಿ ಕನ್ನಡ ಧ್ವಜ ಬೆಂ ಗಳೂರು ರಾಮಕೃಷ್ಣ ಹೆಗಡ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿ...

Friday, November 1, 2024

PARYAYA: ಕನ್ನಡ ರಾಜ್ಯೋತ್ಸವ (Kannada Rajyotsava)

ಕನ್ನಡ ರಾಜ್ಯೋತ್ಸವ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೪ ನವೆಂಬರ್‌ ೦೧ರ ಶುಕ್ರವಾರ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಶ್ರೀ ಬಾಲಾಜಿ ಕೃಪಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಶ್ರೀ ದೇವೇಗೌಡ ಅವರು ಧ್ವಜಾರೋಹಣ ನೆರವೇರಿಸಿದರು. ಸಂಘದ ಹಿರಿಯ ಸದಸ್ಯ ಶ್ರೀ ಎಚ್.ವಿ. ಉದಯಶಂಕರ್‌ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.
ಸಂಘದ ಖಜಾಂಚಿ ಶ್ರೀ ಶ್ರೀನಿವಾಸುಲು ನಾಯ್ಡು ಅವರು ಮುಖ್ಯ ಅತಿಥಿ ದೇವೇಗೌಡ ಅವರನ್ನು ಸನ್ಮಾನಿಸಿದರು. ಸಂಘದ ಕಾರ್ಯದರ್ಶಿ ಶ್ರೀ ನೆತ್ರಕೆರೆ ಉದಯಶಂಕರ ನಾರಾಯಣ ಭಟ್‌ ಅಧ್ಯಕ್ಷತೆ ವಹಿಸಿದ್ದರು.
ಬಡಾವಣೆಯ ಹಿರಿಯ ಸದಸ್ಯ ಶ್ರೀ ಮುನಿರಾಜು ಅವರು ಸಿಹಿ ವಿತರಣೆಯ ವ್ಯವಸ್ಥೆ ಮಾಡಿದರು. ಸಹ ಕಾರ್ಯದರ್ಶಿ ಶ್ರೀ ರಾಘವೇಂದ್ರ ಕಾಮತ್‌, ಸಂಘದ ಹಿರಿಯ ಸದಸ್ಯ ಶಿವಪ್ಪ ಶಾಂತಪ್ಪನವರ್‌, ಶ್ರೀ ಸುಗುಣನ್‌, ಹಂಪಣ್ಣ ಮತ್ತಿತರರು ಸಮಾರಂಭ ಸಂಘಟಿಸುವಲ್ಲಿ ಸಹಕರಿಸಿದರು.
ಸಂಘದ ಸಂಘಟನಾ ಕಾರ್ಯದರ್ಶಿ  ಶ್ರೀಮತಿ ಬಿ.ಎಲ್.‌ ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು. 

ಕಾರ್ಯಕ್ರಮದ ಪುಟ್ಟ ವಿಡಿಯೋ ಇಲ್ಲಿದೆ👇:

ಕಾರ್ಯಕ್ರಮದ ಕೆಲವು ದೃಶ್ಯಗಳು. paryaya5-YouTube ನಲ್ಲಿ ನೋಡಲು ಇಲ್ಲಿ ಕ್ಲಿಕ್‌ ಮಾಡಿರಿ: https://www.youtube.com/watch?v=h-M9K7A4Xb4


 ತಾಯಿ ಭುವನೇಶ್ವರಿಗೆ ಪೂಜೆ


                                                              ಮುಖ್ಯ ಅತಿಥಿ ದೇವೇಗೌಡರಿಗೆ ಸನ್ಮಾನ




PARYAYA: ಕನ್ನಡ ರಾಜ್ಯೋತ್ಸವ (Kannada Rajyotsava): ಕನ್ನಡ ರಾಜ್ಯೋತ್ಸವ ಬೆಂ ಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೪ ನವೆಂಬರ್‌ ೦೧ರ ಶುಕ್ರವಾರ ಸರಳವಾಗಿ ಕನ್ನಡ ರಾಜ್ಯೋತ್ಸವವನ್...

Wednesday, November 1, 2023

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ

ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವವನ್ನು ೨೦೨೩ ನವೆಂಬರ್‌ ೦೧ರ ಬುಧವಾರ ಆಚರಿಸಲಾಯಿತು.

 ಬಡಾವಣೆಯ ಹಿರಿಯ ಸದಸ್ಯ, ಕೆಜಿಎಫ್‌ ಗೋಲ್ಡನ್‌ ವ್ಯಾಲಿ ಎಜುಕೇಷನ್‌ ಟ್ರಸ್ಟ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಚ್.‌ ಆರ್.‌ ಸೇತೂರಾಂ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಬೆಸ್ಕಾಂ ಅಸಿಸ್ಟೆಂಟ್‌ ಎಂಜಿನಿಯರ್‌ ಮೊಹಮ್ಮದ್‌ ಇರ್ಫಾನ್‌ ಅಲಿ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಬಡಾವಣೆಯ ನಿವಾಸಿಗಳಿಗೆ ವಿದ್ಯುತ್‌ ಸರಬರಾಜಿಗೆ ಸಂಬಂಧಿಸಿದ ಮಾಹಿತಿ ಒದಗಿಸಿದರು.

ಸಂಘದ ಅಧ್ಯಕ್ಷ ರಾಜೇಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಬಿಎಲ್.‌ ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಪ್ರವೀಣ್‌ ‌ಕುಮಾರ್ ವಂದನೆಗಳನ್ನು ಸಲ್ಲಿಸಿದರು.

ಬಡಾವಣೆಯ ಮಹಳೆಯರು, ಹಿರಿಯ ಸದಸ್ಯರು ಸೇರಿದಂತೆ ಬಡಾವಣೆಯ ನಿವಾಸಿಗಳು ಅತ್ಯುತ್ಸಾಹದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಡಾವಣೆಯ ಹಿರಿಯ ಸದಸ್ಯ ನ್ಯಾಯವಾದಿ ಮುನಿರಾಜು ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು.


ಧ್ವಜಾರೋಹಣ ಎಚ್. ಆರ್.‌ ಸೇತೂರಾಂ ಅವರಿಂದ.

ಅಧ್ಯಕ್ಷೀಯ ಭಾಷಣ ರಾಜೇಶ ಕೆ. ಹೆಗಡೆ ಅವರಿಂದ.

ಬೆಸ್ಕಾಂ ಅಸಿಸ್ಟೆಟ್‌ ಎಂಜಿನಿಯರ್‌ ಮೊಹಮ್ಮದ್‌ ಇರ್ಫಾನ್‌ ಅಲಿ ಅವರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಇರ್ಫಾನ್‌ ಅವರಿಂದ ಎರಡು ಮಾತು.

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ: ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ...

Friday, October 28, 2022

PARYAYA: ಮೊಳಗಿತು ಕೋಟಿ ಕಂಠ ಗಾಯನ

ಮೊಳಗಿತು ಕೋಟಿ ಕಂಠ ಗಾಯನ

ಬೆಂಗಳೂರು: ಕರ್ನಾಟಕದ ಉದ್ದಕ್ಕೂ ೨೦೨೨ ಅಕ್ಟೋಬರ್‌ ೨೮ರ ಶುಕ್ರವಾರ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ನಾಡು ನನ್ನ ಹಾಡು- ಕೋಟಿ ಕಂಠʼ ಗಾಯನ ಮೊಳಗಿತು.

ನೆಲದಲ್ಲಷ್ಟೇ ಅಲ್ಲ ಜಲದಲ್ಲೂ ದೋಣಿಗಳಲ್ಲಿ, ಆಕಾಶದಲ್ಲಿ ವಿಮಾನದಲ್ಲಿ ಕೂಡಾ ʼಕನ್ನಡ ಡಿಂಡಿಮʼ ಭಾರಿಸಿತು.

ಬೆಂಗಳೂರಿನಲ್ಲಿ ವಿಧಾನ ಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿತು.


ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು  ಬೆಂಗಳೂರಿನಲ್ಲಿ ತೆಗೆದ ಛಾಯಾಚಿತ್ರಗಳ ವಿಡಿಯೋ ಇಲ್ಲಿದೆ.  ಕ್ಲಿಕ್‌ ಮಾಡಿ ನೋಡಿ:


ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಕರ್ನಾಟಕದಾದ್ಯಂತ ಕನ್ನಡದ ಹಾಡು ಮೊಳಗಿದ ಪರಿಯನ್ನು ವೀಕ್ಷಿಸಿ:


PARYAYA: ಮೊಳಗಿತು ಕೋಟಿ ಕಂಠ ಗಾಯನ:   ಮೊಳಗಿತು ಕೋಟಿ ಕಂಠ ಗಾಯನ ಬೆಂಗಳೂರು: ಕರ್ನಾಟಕದ ಉದ್ದಕ್ಕೂ ೨೦೨೨ ಅಕ್ಟೋಬರ್‌ ೨೮ರ ಶುಕ್ರವಾರ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ನಾಡು ನನ್ನ ಹಾಡು- ಕೋಟಿ ಕಂ...