ನಾನು ಮೆಚ್ಚಿದ ವಾಟ್ಸಪ್

Sunday, March 31, 2019

ಇದೀಗ ಅಧಿಕೃತ, ವಯನಾಡಿಗೂ ಇಳಿದ ರಾಹುಲ್ ಗಾಂಧಿ

ಇದೀಗ ಅಧಿಕೃತ, ವಯನಾಡಿಗೂ ಇಳಿದ ರಾಹುಲ್ ಗಾಂಧಿ
ತಿರುವನಂತಪುರಂ: ಇದೀಗ ಅಧಿಕೃತ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದ ಹೊರತಾಗಿ  ಉತ್ತರ ಕೇರಳದ ವಯನಾಡಿನಲ್ಲೂ ಸ್ಪರ್ಧೆಗೆ ಇಳಿಯಲಿದ್ದಾರೆ.

ಇದರೊಂದಿಗೆ ರಾಹುಲ್ ಅವರು ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜ್ಜಿ ಇಂದಿರಾಗಾಂಧಿ ಮತ್ತು ಬಳ್ಳಾರಿಯಿಂದ ಸ್ಪರ್ಧಿಸಿದ್ದ ಅಮ್ಮ ಸೋನಿಯಾ ಗಾಂಧಿ ಮಾರ್ಗದಲ್ಲಿ ಹೆಜ್ಜೆ ಹಾಕಿದ್ದಾರೆ.

ದಕ್ಷಿಣದ  ಎಲ್ಲ ರಾಜ್ಯಗಳೂ ಕಾಂಗ್ರೆಸ್ ಅಧ್ಯಕ್ಷರನ್ನು ತಮ್ಮ ರಾಜ್ಯಗಳಿಂದ ಸ್ಪರ್ಧಿಸುವಂತೆ ಮನವಿ ಮಾಡಿವೆ. ಸಾಕಷ್ಟು ಪರಿಶೀಲನೆಯ ಬಳಿಕ ಅವರು ಕರ್ನಾಟಕ ಮತ್ತು ತಮಿಳುನಾಡು ಜೊತೆ ಗಡಿಗಳನ್ನು ಹಂಚಿಕೊಂಡಿರುವ ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಲು ರಾಹುಲ್ ಗಾಂಧಿಯವರು ನಿರ್ಧರಿಸಿದ್ದಾರೆಎಂದು ಹಿರಿಯ ಕಾಂಗ್ರೆಸ್ ನಾಯಕ .ಕೆ. ಆಂಟನಿ ಅವರು ನವದೆಹಲಿಯಲ್ಲಿ 2019 ಮಾರ್ಚ್ 31 ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಕಾಂಗ್ರೆಸ್ ಅಧ್ಯಕ್ಷರ ನಿರ್ಧಾರದಿಂದ  ಆನಂದತುಂದಿಲರಾದ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿಕೊಳ್ಳುವ  ಮೂಲಕ ವಯನಾಡುವಿನಿಂದ ರಾಹುಲ್ ಗಾಂಧಿ ಅವರ ಅಭ್ಯರ್ಥನವನ್ನು ಬೆಂಬಲಿಸಿದರು. ಹಲವಡೆಗಳಲ್ಲಿ ಕಾರ್ಯಕರ್ತರು ಮೆರವಣಿಗೆಗಳನ್ನೂ ನಡೆಸಿದರು.

(ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ):

Friday, March 29, 2019

ಪಕ್ಷದ ಹೆಸರಿಲ್ಲ, ವೋಟಿಗೆ ಕೋರಿಕೆ ಇಲ್ಲ, ಪ್ರಧಾನಿ ಮೋದಿಗೆ ಕ್ಲೀನ್ ಚಿಟ್?

ಪಕ್ಷದ ಹೆಸರಿಲ್ಲ, ವೋಟಿಗೆ ಕೋರಿಕೆ ಇಲ್ಲ

ಪ್ರಧಾನಿ ಮೋದಿಗೆ ಕ್ಲೀನ್ ಚಿಟ್?

ನವದೆಹಲಿ:  ಭಾರತವನ್ನು ಬಾಹ್ಯಾಕಾಶ ಸೂಪರ್ ಪವರ್ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಿದ  ಉಪಗ್ರಹ ನಿಗ್ರಹ ಕ್ಷಿಪಣಿಯ ಯಶಸ್ವೀ ಪರೀಕ್ಷೆಯನ್ನು ಪ್ರಕಟಿಸಲು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಪ್ರಧಾನಿ ಭಾಷಣದ ಬಗ್ಗೆ ತನಿಖೆ ನಡೆಸುತ್ತಿರುವ ಆಯೋಗದ ತ್ರಿಸದಸ್ಯ ಸಮಿತಿಯು ತನ್ನ ಅಂತಿಮ ತನಿಖಾ ವರದಿಯನ್ನು 2019 ಮಾರ್ಚ್ 29 ಶುಕ್ರವಾರ ಸಲ್ಲಿಸುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಾರಿಯಾಗಿರುವ ಚುನಾವಣಾ ನೀತಿ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗಿಲ್ಲ  ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ಹೇಳಿವೆ.

ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಪಕ್ಷವನ್ನು ಪ್ರಸ್ತಾಪಿಸಿಲ್ಲ ಅಥವಾ ತಮ್ಮ ಪರವಾಗಿ ಮತ ನೀಡುವಂತೆ ಕೋರಿಲ್ಲ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಮಾಧ್ಯಮ ಅಥವಾ ಸಂಸ್ಥೆ ಭಾಷಣವನ್ನು ಅಸಮರ್ಪಕವಾಗಿ ಬಳಸಿದೆಯೇ ಎಂಬ ಬಗ್ಗೆ ಆಯೋಗ ತನಿಖೆ ನಡೆಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆಯೋಗವು ದೂರದರ್ಶನ ಮತ್ತು ಅಖಿಲ ಭಾರತ ಆಕಾಶವಾಣಿಗೆ ಸೂಚಿಸಿದೆ.

ಸರ್ಕಾರದ ಸಾಧನೆಯನ್ನು ಎತ್ತಿ ಹಿಡಿದು ಪ್ರಧಾನಿಯವರು ಮಾಡಿದ ಭಾಷಣದಿಂದ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂಬುದಾಗಿ ಬುಧವಾರ ಭಾಷಣದ ಬಳಿಕ ವಿರೋಧ ಪಕ್ಷಗಳು ಆಪಾದಿಸಿದ್ದನ್ನು ಅನುಸರಿಸಿ, ಚುನಾವಣಾ ಅಯೋಗವು ಅದೇ ದಿನ ಭಾಷಣದ ಪರಿಶೀಲನೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:



Saturday, March 23, 2019

ಭಾರತದ ಮೊದಲ ಲೋಕಪಾಲರಾಗಿ ನ್ಯಾಯಮೂರ್ತಿ ಪಿ.ಸಿ. ಘೋಷ್ ಪ್ರಮಾಣ

ಭಾರತದ ಮೊದಲ ಲೋಕಪಾಲರಾಗಿ

ನ್ಯಾಯಮೂರ್ತಿ ಪಿ.ಸಿ. ಘೋಷ್ ಪ್ರಮಾಣ

ನವದೆಹಲಿ: ನ್ಯಾಯಮೂರ್ತಿ  ಪಿನಾಕಿ ಚಂದ್ರ ಘೋಷ್ ಅವರು ಭಾರತದ ಮೊತ್ತ ಮೊದಲನೆಯ ಲೋಕಪಾಲರಾಗಿ 2019 ಮಾರ್ಚ್ 23 ಶನಿವಾರ ಅಧಿಕಾರ ವಹಿಸಿಕೊಂಡರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್  (ಪಿಸಿ ಘೋಷ್) ಅವರಿಗೆ ಭಾರತದ ಮೊತ್ತ ಮೊದಲ ಲೋಕಪಾಲರಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ನಡೆಯಿತು ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

2019 ಮಾರ್ಚ್ 20ರಂದು ರಾಷ್ಟ್ರದ ಮೊದಲ ಲೋಕಪಾಲರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಘೋಷ್ ಅವರನ್ನ ನೇಮಕ ಮಾಡಲಾಗಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:



Wednesday, March 20, 2019

ಗೊತ್ತಾ? ವಿಶ್ವದ ಅತಿ ಅಗ್ಗದ 3 ಸ್ಥಳಗಳಲ್ಲಿ ಬೆಂಗಳೂರು ಕೂಡಾ ಒಂದು

ಗೊತ್ತಾ? ವಿಶ್ವದ ಅತಿ ಅಗ್ಗದ 3 ಸ್ಥಳಗಳಲ್ಲಿ

ಬೆಂಗಳೂರು ಕೂಡಾ ಒಂದು

ನ್ಯೂಯಾರ್ಕ್: ಪ್ಯಾರಿಸ್, ಸಿಂಗಾಪುರ ಮತ್ತು ಹಾಂಕಾಂಗ್ ವಿಶ್ವದ ಅತ್ಯಂತ ದುಬಾರಿ ನಗರಗಳು ಎಂದೇ ಪ್ರಖ್ಯಾತಿ ಪಡೆದಿವೆ.  ಆದರೆ  ದೆಹಲಿ, ಚೆನ್ನೈ ಮತ್ತು ಬೆಂಗಳೂರು ನಗರಗಳು ಬದುಕಲು ಅತ್ಯಂತ ಅಗ್ಗದ ಮೂರು ಸ್ಥಳಗಳು ಎಂಬುದಾಗಿ ಗುರುತಿಸಲ್ಪಟ್ಟಿವೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಘಟಕದ ೨೦೧೯ರ  ವಿಶ್ವವ್ಯಾಪಿ ಬದುಕಿನ ವೆಚ್ಚದ ಸಮೀಕ್ಷೆಯ ಪ್ರಕಾರ.
ಮೂರು ಪ್ರಮುಖ ನಗರಗಳು ಅಗ್ಗದ ನಗರಗಳ ಪೈಕಿ ಮುಂಚೂಣಿ ಸ್ಥಾನದಲ್ಲಿವೆ ಎಂದು ಸಿಎನ್ಎನ್ ಉಲ್ಲೇಖಿಸಿದೆ.

 ಸಮೀಕ್ಷೆಯು ವಿಶ್ವಾದ್ಯಂತದ ೧೩೩ ನಗರಗಳಲ್ಲಿ ೧೫೦ ಕ್ಕಿಂತಲೂ ಹೆಚ್ಚಿನ ವಸ್ತುಗಳ ಬೆಲೆಯನ್ನು ಮೌಲ್ಯಮಾಪನ ಮಾಡಿದೆ.

ಸ್ವಿಜರ್ಲೆಂಡಿನ ಜುರಿಚ್  ನಗರ ನಾಲ್ಕನೇ ಸ್ಥಾನದಲ್ಲಿದೆ. ಜಪಾನಿನ ಒಸಾಕಾ ಮತ್ತು ಸ್ವಿಜರ್ಲೆಂಡಿನ ಜಿನೇವಾ 5ನೇ ಸ್ಥಾನವನ್ನು ಹಂಚಿಕೊಂಡಿವೆ. ಸಿಯೋಲ್ (ದಕ್ಷಿಣ ಕೊರಿಯಾ), ಕೋಪನ್ ಹ್ಯಾಗನ್ (ಡೆನ್ಮಾರ್ಕ್) ಮತ್ತು ನ್ಯೂಯಾರ್ಕ್ (ಯುಎಸ್) ಜಂಟಿಯಾಗಿ ಏಳನೇ ಸ್ಥಾನದಲ್ಲಿದೆ. ಇಸ್ರೇಲಿನ  ಟೆಲ್ ಅವಿವ್ ಜೊತೆಗೆ, ಲಾಸ್ ಎಂಜಲೀಸ್ (ಯುಎಸ್) ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ೧೦ ನೇ ಸ್ಥಾನ ಪಡೆದಿವೆ.
ವಿಶ್ವದ ಅಗ್ಗದ ನಗರಗಳಲ್ಲಿ ಕಾರಾಕಾಸ್ (ವೆನೆಜುವೆಲಾ), ಡಮಾಸ್ಕಸ್ (ಸಿರಿಯಾ), ತಾಷ್ಕೆಂಟ್ (ಉಜ್ಬೆಕಿಸ್ತಾನ), ಅಲ್ಮಾಟಿ (ಕಜಕಸ್ತಾನ), ಕರಾಚಿ (ಪಾಕಿಸ್ತಾನ), ಲಾಗೋಸ್ (ನೈಜೀರಿಯಾ), ಬ್ಯೂನಸ್  ಐರಿಸ್  (ಅರ್ಜೆಂಟೀನಾ) ಹಾಗೂ ಭಾರತದ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಸೇರಿವೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ:

Tuesday, March 19, 2019

ದೇಶದ ಮೊದಲ ಲೋಕಪಾಲ: ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌

ದೇಶದ ಮೊದಲ ಲೋಕಪಾಲ: ನ್ಯಾಯಮೂರ್ತಿ
ಪಿನಾಕಿ ಚಂದ್ರ ಘೋಷ್

ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ  ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ಅವರು 2019 ಮಾರ್ಚ್ 19ರ ಮಂಗಳವಾರ ನೇಮಕಗೊಂಡರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್ಹೆಸರನ್ನು ಅಂತಿಮಗೊಳಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ಅವರು ಘೋಷ್ಮತ್ತು ಇತರ ಸದಸ್ಯರ ನೇಮಕಕ್ಕೆ ಸಹಿ ಮಾಡಿದರು.

ನ್ಯಾಯಮೂರ್ತಿಗಳಾದ ದಿಲೀಪ್ ಬಿ ಬೊಸ್ಸಾಲೆ, ಪ್ರದೀಪ ಕುಮಾರ್ ಮೊಹಂತಿ, ಅಭಿಲಾಶಾ ಕುಮಾರಿ ಮತ್ತು ಅಜಯ ಕುಮಾರ್ ತ್ರಿಪಾಠಿ ಲೋಕಪಾಲದ ಮೂವರು ನ್ಯಾಯಾಂಗ ಸದಸ್ಯರಾಗಿದ್ದಾರೆ.  ನ್ಯಾಯಾಂಗೇತರ ಸದಸ್ಯರಾಗಿ ದಿನೇಶ ಕುಮಾರ್ ಜೈನ್, ಅರ್ಚನಾ ರಾಮಸುಂದರ್, ಮಹೇಂದರ್ ಸಿಂಗ್ ಮತ್ತು ಡಾ.ಇಂದ್ರಜಿತ್ ಪ್ರಸಾದ ಗೌತಮ್ ಅವರು ನೇಮಕಗೊಂಡರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ಗೊಗೋಯ್‌, ಲೋಕಸಭೆ ಸ್ಪೀಕರ್ಸುಮಿತ್ರಾ ಮಹಾಜನ್ಹಾಗೂ ನ್ಯಾಯಾಂಗ ತಜ್ಞರನ್ನು  ಒಳಗೊಂಡ ಆಯ್ಕೆ ಸಮಿತಿ ನಿರ್ಧಾರ ಕೈಗೊಂಡಿತ್ತು. ಈಗಾಗಲೇ ಲೋಕ ಪಾಲ ಶೋಧ ಸಮಿತಿಯು ಪಟ್ಟಿ ಮಾಡಿದ 10 ಸಂಭಾವ್ಯ ಅಭ್ಯರ್ಥಿಗಳ ಪೈಕಿ ನ್ಯಾಯಮೂರ್ತಿ ಘೋಷ್ಮೊದಲ ಸ್ಥಾನದಲ್ಲಿ ಇದ್ದರು.
2017 ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ ನಿಂದ ನಿವೃತ್ತರಾದ ಘೋಷ್‌, ಸದ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದಾರೆ.