ನಾನು ಮೆಚ್ಚಿದ ವಾಟ್ಸಪ್

Friday, March 29, 2019

ಪಕ್ಷದ ಹೆಸರಿಲ್ಲ, ವೋಟಿಗೆ ಕೋರಿಕೆ ಇಲ್ಲ, ಪ್ರಧಾನಿ ಮೋದಿಗೆ ಕ್ಲೀನ್ ಚಿಟ್?

ಪಕ್ಷದ ಹೆಸರಿಲ್ಲ, ವೋಟಿಗೆ ಕೋರಿಕೆ ಇಲ್ಲ

ಪ್ರಧಾನಿ ಮೋದಿಗೆ ಕ್ಲೀನ್ ಚಿಟ್?

ನವದೆಹಲಿ:  ಭಾರತವನ್ನು ಬಾಹ್ಯಾಕಾಶ ಸೂಪರ್ ಪವರ್ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಿದ  ಉಪಗ್ರಹ ನಿಗ್ರಹ ಕ್ಷಿಪಣಿಯ ಯಶಸ್ವೀ ಪರೀಕ್ಷೆಯನ್ನು ಪ್ರಕಟಿಸಲು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಪ್ರಧಾನಿ ಭಾಷಣದ ಬಗ್ಗೆ ತನಿಖೆ ನಡೆಸುತ್ತಿರುವ ಆಯೋಗದ ತ್ರಿಸದಸ್ಯ ಸಮಿತಿಯು ತನ್ನ ಅಂತಿಮ ತನಿಖಾ ವರದಿಯನ್ನು 2019 ಮಾರ್ಚ್ 29 ಶುಕ್ರವಾರ ಸಲ್ಲಿಸುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಾರಿಯಾಗಿರುವ ಚುನಾವಣಾ ನೀತಿ ಸಂಹಿತೆಯು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗಿಲ್ಲ  ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ಹೇಳಿವೆ.

ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಪಕ್ಷವನ್ನು ಪ್ರಸ್ತಾಪಿಸಿಲ್ಲ ಅಥವಾ ತಮ್ಮ ಪರವಾಗಿ ಮತ ನೀಡುವಂತೆ ಕೋರಿಲ್ಲ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಮಾಧ್ಯಮ ಅಥವಾ ಸಂಸ್ಥೆ ಭಾಷಣವನ್ನು ಅಸಮರ್ಪಕವಾಗಿ ಬಳಸಿದೆಯೇ ಎಂಬ ಬಗ್ಗೆ ಆಯೋಗ ತನಿಖೆ ನಡೆಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆಯೋಗವು ದೂರದರ್ಶನ ಮತ್ತು ಅಖಿಲ ಭಾರತ ಆಕಾಶವಾಣಿಗೆ ಸೂಚಿಸಿದೆ.

ಸರ್ಕಾರದ ಸಾಧನೆಯನ್ನು ಎತ್ತಿ ಹಿಡಿದು ಪ್ರಧಾನಿಯವರು ಮಾಡಿದ ಭಾಷಣದಿಂದ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂಬುದಾಗಿ ಬುಧವಾರ ಭಾಷಣದ ಬಳಿಕ ವಿರೋಧ ಪಕ್ಷಗಳು ಆಪಾದಿಸಿದ್ದನ್ನು ಅನುಸರಿಸಿ, ಚುನಾವಣಾ ಅಯೋಗವು ಅದೇ ದಿನ ಭಾಷಣದ ಪರಿಶೀಲನೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:



No comments:

Post a Comment