ನಾನು ಮೆಚ್ಚಿದ ವಾಟ್ಸಪ್

Wednesday, March 20, 2019

ಗೊತ್ತಾ? ವಿಶ್ವದ ಅತಿ ಅಗ್ಗದ 3 ಸ್ಥಳಗಳಲ್ಲಿ ಬೆಂಗಳೂರು ಕೂಡಾ ಒಂದು

ಗೊತ್ತಾ? ವಿಶ್ವದ ಅತಿ ಅಗ್ಗದ 3 ಸ್ಥಳಗಳಲ್ಲಿ

ಬೆಂಗಳೂರು ಕೂಡಾ ಒಂದು

ನ್ಯೂಯಾರ್ಕ್: ಪ್ಯಾರಿಸ್, ಸಿಂಗಾಪುರ ಮತ್ತು ಹಾಂಕಾಂಗ್ ವಿಶ್ವದ ಅತ್ಯಂತ ದುಬಾರಿ ನಗರಗಳು ಎಂದೇ ಪ್ರಖ್ಯಾತಿ ಪಡೆದಿವೆ.  ಆದರೆ  ದೆಹಲಿ, ಚೆನ್ನೈ ಮತ್ತು ಬೆಂಗಳೂರು ನಗರಗಳು ಬದುಕಲು ಅತ್ಯಂತ ಅಗ್ಗದ ಮೂರು ಸ್ಥಳಗಳು ಎಂಬುದಾಗಿ ಗುರುತಿಸಲ್ಪಟ್ಟಿವೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಘಟಕದ ೨೦೧೯ರ  ವಿಶ್ವವ್ಯಾಪಿ ಬದುಕಿನ ವೆಚ್ಚದ ಸಮೀಕ್ಷೆಯ ಪ್ರಕಾರ.
ಮೂರು ಪ್ರಮುಖ ನಗರಗಳು ಅಗ್ಗದ ನಗರಗಳ ಪೈಕಿ ಮುಂಚೂಣಿ ಸ್ಥಾನದಲ್ಲಿವೆ ಎಂದು ಸಿಎನ್ಎನ್ ಉಲ್ಲೇಖಿಸಿದೆ.

 ಸಮೀಕ್ಷೆಯು ವಿಶ್ವಾದ್ಯಂತದ ೧೩೩ ನಗರಗಳಲ್ಲಿ ೧೫೦ ಕ್ಕಿಂತಲೂ ಹೆಚ್ಚಿನ ವಸ್ತುಗಳ ಬೆಲೆಯನ್ನು ಮೌಲ್ಯಮಾಪನ ಮಾಡಿದೆ.

ಸ್ವಿಜರ್ಲೆಂಡಿನ ಜುರಿಚ್  ನಗರ ನಾಲ್ಕನೇ ಸ್ಥಾನದಲ್ಲಿದೆ. ಜಪಾನಿನ ಒಸಾಕಾ ಮತ್ತು ಸ್ವಿಜರ್ಲೆಂಡಿನ ಜಿನೇವಾ 5ನೇ ಸ್ಥಾನವನ್ನು ಹಂಚಿಕೊಂಡಿವೆ. ಸಿಯೋಲ್ (ದಕ್ಷಿಣ ಕೊರಿಯಾ), ಕೋಪನ್ ಹ್ಯಾಗನ್ (ಡೆನ್ಮಾರ್ಕ್) ಮತ್ತು ನ್ಯೂಯಾರ್ಕ್ (ಯುಎಸ್) ಜಂಟಿಯಾಗಿ ಏಳನೇ ಸ್ಥಾನದಲ್ಲಿದೆ. ಇಸ್ರೇಲಿನ  ಟೆಲ್ ಅವಿವ್ ಜೊತೆಗೆ, ಲಾಸ್ ಎಂಜಲೀಸ್ (ಯುಎಸ್) ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ೧೦ ನೇ ಸ್ಥಾನ ಪಡೆದಿವೆ.
ವಿಶ್ವದ ಅಗ್ಗದ ನಗರಗಳಲ್ಲಿ ಕಾರಾಕಾಸ್ (ವೆನೆಜುವೆಲಾ), ಡಮಾಸ್ಕಸ್ (ಸಿರಿಯಾ), ತಾಷ್ಕೆಂಟ್ (ಉಜ್ಬೆಕಿಸ್ತಾನ), ಅಲ್ಮಾಟಿ (ಕಜಕಸ್ತಾನ), ಕರಾಚಿ (ಪಾಕಿಸ್ತಾನ), ಲಾಗೋಸ್ (ನೈಜೀರಿಯಾ), ಬ್ಯೂನಸ್  ಐರಿಸ್  (ಅರ್ಜೆಂಟೀನಾ) ಹಾಗೂ ಭಾರತದ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಸೇರಿವೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ:

No comments:

Post a Comment