ನ್ಯೂಜಿಲೆಂಡ್:
2 ಮಸೀದಿಗಳಲ್ಲಿ ಭಯೋತ್ಪಾದಕ ಹತ್ಯಾಕಾಂಡ: 40ಕ್ಕೂ
ಹೆಚ್ಚು ಸಾವು
ವೆಲ್ಲಿಂಗ್ಟನ್: ಶಸ್ತ್ರಧಾರಿಯೊಬ್ಬ ನ್ಯೂಜಿಲೆಂಡಿನ ಎರಡು ಮಸೀದಿಗಳಲ್ಲಿ
2019 ಮಾರ್ಚ್ 15ರ ಶುಕ್ರವಾರ ಪ್ರಾರ್ಥನೆಯ ವೇಳೆಯಲ್ಲಿ ಯದ್ವಾತದ್ವ ಗುಂಡು ಹಾರಿಸಿ 40ಕ್ಕೂ ಹೆಚ್ಚು
ಮಂದಿಯನ್ನು ಬಲಿತೆಗೆದುಕೊಂಡಿದ್ದಾನೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗುಂಡಿನ
ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಸತ್ತಿರುವುದನ್ನು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆನ್ ದೃಢ
ಪಡಿಸಿದ್ದಾರೆ.
ಆಸ್ಟ್ರೇಲಿಯಾದ
ಪ್ರಧಾನಿ ಸ್ಕಾಟ್ ಮೋರ್ರಿಸನ್ ಶಸ್ತ್ರಧಾರಿ ತಮ್ಮ ರಾಷ್ಟ್ರದವನು ಎಂದು ಹೇಳಿದ್ದಾರೆ. ‘ಆತ ಬಲಪಂಥೀಯ ಉಗ್ರಗಾಮಿ, ಭಯೋತ್ಪಾದಕ’ ಎಂದು ಅವರು ಹೇಳಿದ್ದಾರೆ.
ಗುಂಡು
ಹಾರಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಪ್ರಶ್ನಿಸುತ್ತಿದ್ದಾರೆ.
ಹತ್ಯಾಕಾಂಡದ ಹೊಣೆಗಾರಿಕೆ ತನ್ನದು ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಹತ್ಯಾಕಾಂಡದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾನೆ. ಘಟನೆಯ ಹೊತ್ತಿನಲ್ಲೇ ವಿಡಿಯೋ ಮಾಡಿಕೊಂಡು ಪ್ರಕಟಿಸಿದಂತಿರುವ ಈ ವಿಡಿಯೋದ ಸಾಚಾತನವನ್ನು ಪೊಲೀಸರು ದೃಢ ಪಡಿಸಿಲ್ಲ.
ನ್ಯೂಜಿಲೆಂಡಿಗೆ ದಾಳಿ ನಡೆಸಲು ತರಬೇತಿ ನೀಡಲು ತಾನು ಬಂದಿರುವುದಾಗಿ ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಸತ್ತಿರುವ
40 ಮಂದಿಯ ಪೈಕಿ 30 ಮಂದಿ ಅಲ್ ನೂರ್ ಮಸೀದಿಯಲ್ಲಿ ಸಾವನ್ನಪ್ಪಿದ್ದು, 10 ಮಂದಿ ಲಿನ್ ವುಡ್ ಮಸೀದಿಯಲ್ಲಿ
ಹತರಾಗಿದ್ದಾರೆ.
ವಿವರಗಳಿಗೆ
ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
No comments:
Post a Comment