Showing posts with label Justice PC Ghosh. Show all posts
Showing posts with label Justice PC Ghosh. Show all posts

Tuesday, March 19, 2019

ದೇಶದ ಮೊದಲ ಲೋಕಪಾಲ: ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌

ದೇಶದ ಮೊದಲ ಲೋಕಪಾಲ: ನ್ಯಾಯಮೂರ್ತಿ
ಪಿನಾಕಿ ಚಂದ್ರ ಘೋಷ್‌

ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ  ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌ ಅವರು 2019 ಮಾರ್ಚ್ 19ರ ಮಂಗಳವಾರ ನೇಮಕಗೊಂಡರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್‌ ಹೆಸರನ್ನು ಅಂತಿಮಗೊಳಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಘೋಷ್‌ ಮತ್ತು ಇತರ ಸದಸ್ಯರ ನೇಮಕಕ್ಕೆ ಸಹಿ ಮಾಡಿದರು.

ನ್ಯಾಯಮೂರ್ತಿಗಳಾದ ದಿಲೀಪ್ ಬಿ ಬೊಸ್ಸಾಲೆ, ಪ್ರದೀಪ ಕುಮಾರ್ ಮೊಹಂತಿ, ಅಭಿಲಾಶಾ ಕುಮಾರಿ ಮತ್ತು ಅಜಯ ಕುಮಾರ್ ತ್ರಿಪಾಠಿ ಲೋಕಪಾಲದ ಮೂವರು ನ್ಯಾಯಾಂಗ ಸದಸ್ಯರಾಗಿದ್ದಾರೆ.  ನ್ಯಾಯಾಂಗೇತರ ಸದಸ್ಯರಾಗಿ ದಿನೇಶ ಕುಮಾರ್ ಜೈನ್, ಅರ್ಚನಾ ರಾಮಸುಂದರ್, ಮಹೇಂದರ್ ಸಿಂಗ್ ಮತ್ತು ಡಾ.ಇಂದ್ರಜಿತ್ ಪ್ರಸಾದ ಗೌತಮ್ ಅವರು ನೇಮಕಗೊಂಡರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯ ಮೂರ್ತಿ ರಂಜನ್‌ ಗೊಗೋಯ್‌, ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹಾಗೂ ನ್ಯಾಯಾಂಗ ತಜ್ಞರನ್ನು  ಒಳಗೊಂಡ ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಂಡಿತ್ತು. ಈಗಾಗಲೇ ಲೋಕ ಪಾಲ ಶೋಧ ಸಮಿತಿಯು ಪಟ್ಟಿ ಮಾಡಿದ 10 ಸಂಭಾವ್ಯ ಅಭ್ಯರ್ಥಿಗಳ ಪೈಕಿ ನ್ಯಾಯಮೂರ್ತಿ ಘೋಷ್‌ ಮೊದಲ ಸ್ಥಾನದಲ್ಲಿ ಇದ್ದರು.
2017ರ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ ನಿಂದ ನಿವೃತ್ತರಾದ ಘೋಷ್‌, ಸದ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದಾರೆ.