ನಾನು ಮೆಚ್ಚಿದ ವಾಟ್ಸಪ್

Friday, December 16, 2016

ಭಾರತೀಯ ವಿದ್ಯಾಭವನದಲ್ಲಿ ಡಿ.17 ಮತ್ತು 18ರಂದು ಉಸ್ತಾದ್ ಫಯಾಜ್ ಖಾನ್ ಸಂಗೀತ ಸುಧೆ

ಭಾರತೀಯ ವಿದ್ಯಾಭವನದಲ್ಲಿ ಡಿ.17 ಮತ್ತು 18ರಂದು
ಉಸ್ತಾದ್ ಫಯಾಜ್ ಖಾನ್ ಸಂಗೀತ ಸುಧೆ

ಬೆಂಗಳೂರು:   ಖ್ಯಾತ ಹಿಂದೂಸ್ತಾನಿ ಕಲಾವಿದ ಉಸ್ತಾದ್ ಫಯಾಜ್ ಖಾನ್ ಅವರು ಸ್ಥಾಪಿಸಿರುವ ಪರ್ವೀನ್ ಬೇಗಂ ಸ್ಮೃತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಡಿಸೆಂಬರ್ 17  ಮತ್ತು 18ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಂಗೀತ ಕಛೇರಿ ಏರ್ಪಡಿಸಲಾಗಿದೆ.

ತಮ್ಮ ಪತ್ನಿ ಪರ್ವೀನ್ ಬೇಗಂ ಅವರ ಸ್ಮರಣಾರ್ಥ ಫಯಾಜ್ ಖಾನ್ ಅವರು ಸ್ಥಾಪಿಸಿರುವ ಟ್ರಸ್ಟ್ ಪ್ರತಿ ವರ್ಷ ಎರಡು ದಿನಗಳ ಸಂಗೀತ ಕಾರ್ಯಕ್ರಮ ನಡೆಸುತ್ತ ಬರುತ್ತಿದ್ದು, ಬಾರಿ ಪಂಡಿತ್ ರಾಜೀವ್ ತಾರಾನಾಥ್ ಅವರ ಸರೋದ್ ವಾದನ ಸಹಿತ ಹಲವಾರು ಸಂಗೀತ ಕಲಾವಿದರ ಕಛೇರಿಗಳು ನಡೆಯಲಿದೆ. 17 ಮತ್ತು 18ರಂದು ಸಂಜೆ 5 ರಿಂದ ರಾತ್ರಿ 9 ವರೆಗೆ ಕಾರ್ಯಕ್ರಮಗಳು ಸಭ್ಯರನ್ನು ರಂಜಿಸಲಿವೆ.

17ರಂದು ದಿಲ್ಷಾದ್ ಖಾನ್ ಅವರಿಂದ ಸಾರಂಗಿ, ಹಿರಣ್ಮಯಿ ಶರ್ಮಾ ಅವರಿಂದ ಹಿಂದೂಸ್ತಾನಿ ಗಾಯನ ಹಾಗೂ ಪಂಡಿತ್ ರಾಜೀವ್ ತಾರಾನಾಥ ಅವರಿಂದ ಸರೋದ್ ವಾದನ ನಡೆಯಲಿದೆ.

18ರಂದು ರಶೀದ್ ಮುಸ್ತಾಫ ತಿರಾಕ್ವಾ ಅವರಿಂದ ತಬ್ಲಾ ವಾದನ (ಅಪ್ಪ-ಮಗನಿಂದ ತಬ್ಲಾ ಜುಗಲ್ಬಂದಿ), ಸರ್ಫ್ರಾಜ್ ಖಾನ್ ಅವರಿಂದ ಸಾರಂಗಿ ಹಾಗೂ ಉಸ್ತಾದ್ ಫಯಾಜ್ ಖಾನ್ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ.

ಕಲಾವಿದರ ಕಿರು ಪರಿಚಯ
ಉಸ್ತಾದ್ ಫಯಾಜ್ ಖಾನ್
ದೇಶ ಕಂಡ ಅಪ್ರತಿಮ ಹಾಡುಗಾರ, ಸಂಗೀತ ವಾದ್ಯ ಕಲಾವಿದ ಹಾಗೂ ಶ್ರೇಷ್ಠ ಗುರು ಉಸ್ತಾದ್ ಫಯಾಜ್ ಖಾನ್. ಕಿರಾಣಾ ಘರಾನಾದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಇವರು ಆಕಾಶವಾಣಿಯ ಗ್ರೇಡ್ ಕಲಾವಿದರು. ದೇಶ, ವಿದೇಶಗಳಲ್ಲಿ ಹಲವಾರು ಕಛೇರಿಗಳನ್ನು ನೀಡಿರುವ ಇವರು ಸಿನಿಮಾ ಸಂಗೀತಕ್ಕೂ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಪಂಡಿತ್ ರಾಜೀವ್ ತಾರಾನಾಥ
ಜಗದ್ವಿಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ ಅವರು ಅಲಿ ಅಕ್ಬರ್ ಖಾನ್ ಅವರ ಹಾದಿಯಲ್ಲಿ ಪಯಣ ಬೆಳೆಸಿದವರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ದೇಶ, ವಿದೇಶಗಳಲ್ಲಿ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

ಹಿರಣ್ಮಯಿ ಶರ್ಮಾ
ಹಿಂದೂಸ್ತಾನಿ ಸಂಗೀತದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಹಿರಣ್ಮಯಿ ಶರ್ಮಾ ಅವರು ಭಕ್ತಿ, ಲಘು ಸಂಗೀತ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ಈಗಾಗಲೇ ೨೬ ಸಿನಿಮಾಗಳಲ್ಲಿ ಹಾಡಿದ್ದಾರೆ.

ಸರ್ಫ್ರಾಜ್ ಖಾನ್
ಸರ್ಫ್ರಾಜ್ ಖಾನ್ ಅವರು ತಮ್ಮ ಸಂಗೀತ ಕುಟುಂಬದ ಎಂಟನೇ ತಲೆಮಾರಿನ ಕಲಾವಿದ. ಸಾರಂಗಿ ದಂತಕತೆ ಪದ್ಮವಿಭೂಷಣ ಪಂಡಿತ್ ರಾಮ್ನಾರಾಯಣ್ಜಿ ಅವರ ಶಿಷ್ಯರಾಗಿರುವ ಇವರು ಈಗಾಗಲೇ ದೇಶ, ವಿದೇಶಗಳ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ದಿಲ್ಷಾದ್ ಖಾನ್
ಸಾರಂಗಿ ಕ್ಷೇತ್ರದಲ್ಲಿ ಈಗಾಗಲೇ ಖ್ಯಾತರಾಗಿರುವ ಕುಟುಂಬದ ೯ನೇ ಕುಡಿ ದಿಲ್ಷಾದ್ ಖಾನ್. ಚಿಕ್ಕಪ್ಪ ಪದ್ಮಭೂಷಣ ಉಸ್ತಾದ್ ಸುಲ್ತಾನ್ ಖಾನ್ ಸಹಾಬ್ ಜತೆಗೆ ಕಾರ್ಯಕ್ರಮ ನೀಡಿರುವ ದಿಲ್ಷಾದ್ ಅವರು ೨೦೦೯ರಲ್ಲಿ ಪ್ರತಿಷ್ಠಿತ ಗ್ರಾಮಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ೫೦೦ಕ್ಕೂ ಅಧಿಕ ಬಾಲಿವುಡ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

ಷಾರಿಕ್ ಮುಸ್ತಾಫ

ತಬ್ಲಾದಲ್ಲಿ ಫರೂಕಾಬಾದ್ ಘರಾನಾ ಶೈಲಿಯ ಖ್ಯಾತ ಕಲಾವಿದರಾಗಿರುವ ಷಾರಿಕ್ ಮುಸ್ತಾಫ ಅವರು ತಮ್ಮ ತಂದೆ ಉಸ್ತಾದ್ ರಶೀದ್ ಮುಸ್ತಾಫ ಅವರೊಂದಿಗೆ ವೇದಿಕೆಯಲ್ಲಿ ಪರಿಚಿತರಾದವರು. ತಮ್ಮ ತಬ್ಲಾ ಕುಟುಂಬದ ೫ನೇ ಕುಡಿ ಇವರು

Thursday, December 15, 2016

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮೇಲೆ ಗ್ರಾಹಕರ ದಾಂಧಲೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮೇಲೆ  ಗ್ರಾಹಕರ ದಾಂಧಲೆ

ಪಶ್ಚಿಮ ಬಂಗಾಳ: ಸ್ಟೇಟ್ ಬ್ಯಾಂಕ್ ಇಂಡಿಯಾದ (ಎಸ್.ಬಿ.ಐ)  ಮಾಲ್ಡಾ ಶಾಖೆಯ ಮೇಲೆ ಗುರುವಾರ 15-12-2016ರಂದು ದಾಳಿ ನಡೆಸಿದ ಗ್ರಾಹಕರು ಎಟಿಎಂ ನ್ನು ಮುಚ್ಚಿ ಬೊರ್ಡನ್ನು ಕೆಳಗುರುಳಿಸಿದರು.

ಭಾರತೀಯ ರಿಸರ್ವ ಬ್ಯಾಂಕಿನ ಮಾರ್ಗದರ್ಶನದ ಪ್ರಕಾರ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಿಟ್ಟಿಗೆದ್ದು ಗ್ರಾಹಕರು ಹಲ್ಲೆ ನಡೆಸಿ ದಾಂಧಲೆ ಮಾಡಿದರು ಎಂದು ವರದಿಗಳು ತಿಳಿಸಿವೆ.

ಕೆಳಗಿನ ಚಿತ್ರ ಕ್ಲಿಕ್ಕಿಸಿ ವಿಡಿಯೋ ವೀಕ್ಷಿಸಿ:

Tuesday, December 13, 2016

ದೃಶ್ಯಕಾವ್ಯವಾಗಿ ಹೊರಹೊಮ್ಮಿದ ಸ್ವಾತಂತ್ರ್ಯ ಹೋರಾಟ!

ದೃಶ್ಯಕಾವ್ಯವಾಗಿ ಹೊರಹೊಮ್ಮಿದ
ಸ್ವಾತಂತ್ರ್ಯ ಹೋರಾಟ!


ಆರ್ಕಿಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಚಿಣ್ಣರು..
ಬೆಂಗಳೂರು: ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್ ಶಾಲಾ ವಾರ್ಷಿಕೋತ್ಸವ ಸ್ವಾತಂತ್ರ್ಯದ ಸಂಭ್ರಮವಾಗಿ ರೂಪುಗೊಂಡಿತ್ತುವಾರ್ಷಿಕೋತ್ಸವದ ಅಂಗವಾಗಿ ಮಕ್ಕಳು ಪ್ರದರ್ಶಿಸಿದ ಟ್ರಿಸ್ಟ್ ವಿದ್ ಡೆಸ್ಟಿನಿ ಎಂಬ ವಿಶಿಷ್ಟ ನೃತ್ಯ ರೂಪಕ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ಮನೋಜ್ಞವಾಗಿ ಬಿಂಬಿಸಿತು.

ಭಾರತದ ಸ್ವಾತಂತ್ರಕ್ಕಾಗಿ ಸ್ವಾತಂತ್ರ್ಯಸೇನಾನಿಗಳು ಪಟ್ಟ ಶ್ರಮವನ್ನು ಪುಟಾಣಿಗಳು ಹೃದಯಸ್ಪರ್ಶಿಯಾಗಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಮಹಾನ್ ನಾಯಕರು ನಡೆಸಿದ ಹೋರಾಟ, ತ್ಯಾಗ ಪರಿಶ್ರಮಗಳು ಎಂತಹವು ಎಂಬುದನ್ನು ವಿದ್ಯಾರ್ಥಿಗಳು ನೃತ್ಯರೂಪಕದ ಮೂಲಕ ಮತ್ತೊಮ್ಮೆ ನೆನಪಿಸಿದರು. ತಮ್ಮ ಅಮೋಘ ನಟನೆ ಮತ್ತು ನೃತ್ಯ ಕೌಶಲ್ಯದ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಕಥನವನ್ನು ಎಲ್ಲರ ಹೃದಯ ತುಂಬುವ ದೃಶ್ಯಕಾವ್ಯವಾಗಿಸಿದರು.

ಡಿಜಿಟಲ್ ತಂತ್ರಜ್ಞಾನದೆಡೆಗೆ ಆರ್ಕಿಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ದಾಪುಗಾಲು:
ಆರ್ಕಿಡ್ಸ್ ದಿ ಇಂಟರ್ನ್ಯಾನಷಲ್ ಸ್ಕೂಲ್ ಗರಿಷ್ಠ ಮಟ್ಟದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯದ ಗಮನ ಸೆಳೆದಿದೆಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಆಶಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ಸಂಸ್ಥೆ ದೈನಂದಿನ ವ್ಯವಹಾರಗಳಲ್ಲಿ ಕಾಗದ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ಪ್ರಯತ್ನದಲ್ಲಿ ಈಗಾಗಲೇ ಯಶಸ್ವಿಯಾಗಿದೆ. ಇಲ್ಲಿನ ತರಗತಿಗಳು ಡಿಜಿಟಲ್ ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಐಸಿಟಿ ಬೋರ್ಡ್ಗಳೊಂದಿಗೆ ಸುಸಜ್ಜಿತವಾಗಿವೆ. ಮಕ್ಕಳ ಹಾಜರಾತಿ, ಹೋಂವರ್ಕ್, ಶುಲ್ಕ ಇತ್ತಾದಿ ವಿವರಗಳನ್ನು ಶಾಲಾ ವೆಬ್ಸೈಟ್ನಲ್ಲೇ ಪೋಷಕರಿಗೆ ಒದಗಿಸಲಾಗುತ್ತಿದೆ.   

ತಂತ್ರಜ್ಞಾನ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ದೇಶಭಕ್ತಿಯನ್ನು ಸ್ಫುರಿಸುವಂತಹ ವಾತಾವರಣವನ್ನು ಕಲ್ಪಿಸಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ಸಮರ್ಥ ರೀತಿಯಿಂದ ಸಜ್ಜುಗೊಳಿಸಿ, ಹೊಸ ಯುಗಕ್ಕೆ ಪರಿಚಯಿಸುವ ಕೆಲಸವನ್ನೂ ಮಾಡುತ್ತಿದೆ.