ಶ್ರೀಲಂಕಾ:
ವ್ಯಾಪಕ
ಉಗ್ರ
ದಾಳಿ:
160ಕ್ಕೂ ಹೆಚ್ಚು
ಸಾವು, 450
ಜನರಿಗೆ
ಗಾಯ
ಕೊಲಂಬೋ: ಶ್ರೀಲಂಕೆಯ ಇಗರ್ಜಿಗಳು ಮತ್ತು
ಪಂಚತಾರಾ
ಹೋಟೆಲುಗಳಲ್ಲಿ
2019
ಏಪ್ರಿಲ್ 21ರ
ಭಾನುವಾರ
ಈಸ್ಟರ್
ಸಂದರ್ಭದಲ್ಲಿ
ಆರು
ಸರಣಿ ಭಯೋತ್ಪಾದಕ
ದಾಳಿಗಳು
ನಡೆದಿದ್ದು
160ಕ್ಕೂ
ಹೆಚ್ಚು
ಮಂದಿ
ಮೃತರಾಗಿ
450ಕ್ಕೂ
ಹೆಚ್ಚು
ಮಂದಿ
ಗಾಯಗೊಂಡಿದ್ದಾರೆ.
ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿರಬಹುದೆಂದು ಶಂಕಿಸಲಾಗಿದೆ.ಕೊಚ್ಚಿಕಾಡೆಯಲ್ಲಿರುವ ಸೈಂಟ್ ಆಂಟೋನಿ ಇಗರ್ಜಿ, ಕಟುವಾಪಿಟಿಯಾದಲ್ಲಿರುವ ಸೈಂಟ್ ಸೆಬಾಸ್ಟಿಯನ್ ಇಗರ್ಜಿ ಮತ್ತು ಬಟ್ಟಿಕಲೋವಾದಲ್ಲಿನ ಇಗರ್ಜಿಗಳಲ್ಲಿ ಬಾಂಬ್ ಸ್ಪೋಟ ನಡೆದಿರುವುದಾಗಿ ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಎರಡು ಸ್ಫೋಟ ಘಟನೆಗಳಲ್ಲಿ ಕನಿಷ್ಠ 80 ಜನರು ಗಾಯಗೊಂಡಿರುವುದಾಗಿ ತಿಳಿಬಂದಿದೆ.
ನಗರದಲ್ಲಿರುವ ಎರಡು ಪಂಚತಾರಾ ಹೊಟೇಲುಗಳಲ್ಲೂ ಬಾಂಬ್ ಸ್ಪೋಟ ಸಂಭವಿಸಿರುವ ಕುರಿತಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿನ ಶಾಂಗ್ರಿ ಲಾ, ಸಿನಾಮೊನ್ ಗ್ರ್ಯಾಂಡ್ ಹಾಗೂ ಕಿಂಗ್ಸ್ ಬರಿ ಹೊಟೇಲುಗಳಲ್ಲಿ ಬಾಂಬ್ ಸ್ಫೋಟಗಳು ನಡೆದಿವೆ.
ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ
No comments:
Post a Comment