Showing posts with label Terrorists. Show all posts
Showing posts with label Terrorists. Show all posts

Wednesday, August 24, 2022

PARYAYA: ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,...

 ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕಾಸು
ಕರ್ನಲ್‌ ನಿಂದ ರೂ. 30,000 ರೂಪಾಯಿ

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಆಗಸ್ಟ್ 21 ರಂದು ಭಾರತೀಯ ಸೇನೆ ಸೆರೆ ಹಿಡಿದ ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) 'ಫಿದಾಯೀನ್' (ಆತ್ಮಹತ್ಯಾ) ದಾಳಿಕೋರ, ಪಾಕ್‌ ಕರ್ನಲ್‌ ಸೂಚನೆ ಮೇರೆಗೆ ತಾನು ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ಕೃತ್ಯಕ್ಕೆ ಇಳಿದುದಾಗಿ 2022 ಆಗಸ್ಟ್‌ 24ರ ಬುಧವಾರ ಒಪ್ಪಿಕೊಂಡಿದ್ದಾನೆ.

ಭಾರತೀಯ ಸೈನಿಕರ ಮೇಲೆ ದಾಳಿ ಮಾಡುವ ಯೋಜನೆ ಕಾರ್ಯಗತಗೊಳಿಸಲು ಪಾಕಿಸ್ತಾನಿ ಸೇನೆಯ ಪಾಕಿಸ್ತಾನಿ ಕರ್ನಲ್ ಯೂನಸ್ ಚೌಧರಿ ತನಗೆ ಸುಮಾರು 30,000 ರೂ. ನೀಡಿರುವುದಾಗಿ ತಬಾರಕ್ ಹುಸೇನ್ ಎಂಬುದಾಗಿ ಗುರುತಿಸಲಾಗಿರುವ ದ ಭಯೋತ್ಪಾದಕ ಹೇಳಿದ್ದಾನೆ.

ಒಳನುಸುಳುವಿಕೆ ಪ್ರಯತ್ನದ ಸಮಯದಲ್ಲಿ ಗಾಯಗೊಂಡು ಕಾಶ್ಮೀರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಸೇನ್ ಎಎನ್‌ ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡುತ್ತಾ ತಾನು ನಾಲ್ಕೈದು ಮಂದಿಯೊಂದಿಗೆ ಭಾರತೀಯ ಪ್ರದೇಶಕ್ಕೆ ನುಸುಳಲು ಯತ್ನಿಸಿದ್ದಾಗಿ ಹೇಳಿದ್ದಾನೆ.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹುಸೇನ್, ಇತರ ಭಯೋತ್ಪಾದಕರ ಜೊತೆಗೆ ಸೂಕ್ತ ಸಮಯದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶದಿಂದ ಭಾರತದ ಮುಂಚೂಣಿ ಗಡಿ ಠಾಣೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಎರಡು-ಮೂರು ಬಾರಿ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹುಸೇನ್ ಪಾಕ್ ಆಕ್ರಮಿತ ಕಾಶ್ಮೀರದ ಕೋಟಿಯ ಸಬ್‌ಕೋಟ್ ಗ್ರಾಮದ ನಿವಾಸಿಯಾಗಿದ್ದಾನೆ.

ಹುಸೇನ್ ಭಯೋತ್ಪಾದಕರೊಂದಿಗೆ ಒಳನುಸುಳಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ಸೇನೆಯು ಆತನನ್ನು ವಶಕ್ಕೆ ತೆಗೆದುಕೊಂಡಿತು. “ನಾನು ಇತರ ನಾಲ್ಕೈದು ಜನರೊಂದಿಗೆ ಆತ್ಮಹತ್ಯಾ ಕಾರ್ಯಾಚರಣೆಗಾಗಿ ಇಲ್ಲಿಗೆ ಬಂದಿದ್ದೆ. ನಮ್ಮನ್ನು ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ್ದು, ಅವರು ಭಾರತೀಯ ಸೇನೆಯನ್ನು ಗುರಿಯಾಗಿಸಲು 30,000 ರೂ. ನೀಡಿದ್ದರು” ಎಂದು ಭಯೋತ್ಪಾದಕ ಹೇಳಿದ.

ಇದಕ್ಕೆ ಮುನ್ನ, ಜಮ್ಮು ಪ್ರದೇಶದಲ್ಲಿ 48 ಗಂಟೆಗಳ ಅವಧಿಯಲ್ಲಿ ನೌಶೇರಾ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಭಯೋತ್ಪಾದಕರು ನಡೆಸಿದ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ಯಶಸ್ವಿಯಾಗಿ ನಿಗ್ರಹಿಸುವ ಮೂಲಕ ಶಾಂತಿ ಕದಡುವ ಪಾಕಿಸ್ತಾನದ "ಕೆಟ್ಟ ಪ್ರಯತ್ನ" ವನ್ನು ವಿಫಲಗೊಳಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿತ್ತು.

ಆಗಸ್ಟ್ 21 ಮತ್ತು 22 ರಂದು ಝಂಗಾರ್ ಮತ್ತು ಲ್ಯಾಮ್ ಪ್ರದೇಶಗಳಲ್ಲಿ ಒಳನುಸುಳುವಿಕೆ ಯತ್ನಗಳು, ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾದವು ಮತ್ತು ಕುಖ್ಯಾತ ಭಯೋತ್ಪಾದಕ ಮಾರ್ಗದರ್ಶಿಯನ್ನು ಬಂಧಿಸಲಾಯಿತು, ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಭಾರತದ ಕಡೆಗೆ ಒಂದು ಗುಂಪನ್ನು ನುಗ್ಗಿಸುವ ಕಾರ್ಯಾಚರಣೆಗೆ ಇಳಿದಿದ್ದರು. ಅವರಿಂದ ಸೇನಾ ಪೋಸ್ಟ್ ಮೇಲೆ ದಾಳಿ ನಡೆದಿದೆ ಎಂದು ಸೇನೆಯ 80 ಪದಾತಿ ದಳದ ಕಮಾಂಡರ್ ಬ್ರಿಗೇಡಿಯರ್ ಕಪಿಲ್ ರಾಣಾ ತಿಳಿಸಿದ್ದರು.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಪ್ರಕಟಿಸಿದ ಫಿದಾಯೀನ್‌ ದಾಳಿಕೋರನ ತಪ್ಪೊಪ್ಪಿಗೆಯ ವಿಡಿಯೋ ಕೆಳಗಿದೆ:


PARYAYA: ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,...:   ಭಾರತೀಯ ಸೇನೆ ಮೇಲೆ ದಾಳಿ ಗೆ   ಪಾಕ್‌ ಕಾಸು ಕರ್ನಲ್‌ ನಿಂದ ರೂ. 30,000 ರೂಪಾಯಿ ನವದೆಹಲಿ:   ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟ ರಿನ ಗಡ...

Saturday, April 20, 2019

ಶ್ರೀಲಂಕಾ: ವ್ಯಾಪಕ ಉಗ್ರ ದಾಳಿ: 160ಕ್ಕೂ ಹೆಚ್ಚು ಸಾವು,450 ಜನರಿಗೆ ಗಾಯ

ಶ್ರೀಲಂಕಾ: ವ್ಯಾಪಕ ಉಗ್ರ ದಾಳಿ: 160ಕ್ಕೂ ಹೆಚ್ಚು ಸಾವು, 450 ಜನರಿಗೆ ಗಾಯ
ಕೊಲಂಬೋ:  ಶ್ರೀಲಂಕೆಯ  ಇಗರ್ಜಿಗಳು ಮತ್ತು ಪಂಚತಾರಾ ಹೋಟೆಲುಗಳಲ್ಲಿ 2019 ಏಪ್ರಿಲ್ 21ರ ಭಾನುವಾರ ಈಸ್ಟರ್ ಸಂದರ್ಭದಲ್ಲಿ ಆರು ಸರಣಿ ಭಯೋತ್ಪಾದಕ ದಾಳಿಗಳು ನಡೆದಿದ್ದು 160ಕ್ಕೂ ಹೆಚ್ಚು ಮಂದಿ ಮೃತರಾಗಿ 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈಸ್ಟರ್‌ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿರಬಹುದೆಂದು ಶಂಕಿಸಲಾಗಿದೆ.


ಕೊಚ್‌ಚಿಕಾಡೆಯಲ್ಲಿರುವ ಸೈಂಟ್‌ ಆಂಟೋನಿ ಇಗರ್ಜಿ, ಕಟುವಾಪಿಟಿಯಾದಲ್ಲಿರುವ ಸೈಂಟ್‌ ಸೆಬಾಸ್ಟಿಯನ್‌ ಇಗರ್ಜಿ ಮತ್ತು ಬಟ್ಟಿಕಲೋವಾದಲ್ಲಿನ ಇಗರ್ಜಿಗಳಲ್ಲಿ ಬಾಂಬ್‌ ಸ್ಪೋಟ ನಡೆದಿರುವುದಾಗಿ ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಎರಡು ಸ್ಫೋಟ ಘಟನೆಗಳಲ್ಲಿ ಕನಿಷ್ಠ 80  ಜನರು ಗಾಯಗೊಂಡಿರುವುದಾಗಿ ತಿಳಿಬಂದಿದೆ.

ನಗರದಲ್ಲಿರುವ ಎರಡು ಪಂಚತಾರಾ ಹೊಟೇಲುಗಳಲ್ಲೂ ಬಾಂಬ್‌ ಸ್ಪೋಟ ಸಂಭವಿಸಿರುವ ಕುರಿತಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿನ ಶಾಂಗ್ರಿ ಲಾ, ಸಿನಾಮೊನ್‌ ಗ್ರ್ಯಾಂಡ್‌ ಹಾಗೂ ಕಿಂಗ್ಸ್‌ ಬರಿ ಹೊಟೇಲುಗಳಲ್ಲಿ ಬಾಂಬ್ ಸ್ಫೋಟಗಳು ನಡೆದಿವೆ.


ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ

Friday, March 15, 2019

ನ್ಯೂಜಿಲೆಂಡ್: 2 ಮಸೀದಿಗಳಲ್ಲಿ ಭಯೋತ್ಪಾದಕ ಹತ್ಯಾಕಾಂಡ: 40ಕ್ಕೂ ಹೆಚ್ಚು ಸಾವು

ನ್ಯೂಜಿಲೆಂಡ್: 2 ಮಸೀದಿಗಳಲ್ಲಿ ಭಯೋತ್ಪಾದಕ ಹತ್ಯಾಕಾಂಡ:  40ಕ್ಕೂ ಹೆಚ್ಚು ಸಾವು
ವೆಲ್ಲಿಂಗ್ಟನ್:  ಶಸ್ತ್ರಧಾರಿಯೊಬ್ಬ ನ್ಯೂಜಿಲೆಂಡಿನ ಎರಡು ಮಸೀದಿಗಳಲ್ಲಿ 2019 ಮಾರ್ಚ್ 15ರ ಶುಕ್ರವಾರ ಪ್ರಾರ್ಥನೆಯ ವೇಳೆಯಲ್ಲಿ ಯದ್ವಾತದ್ವ ಗುಂಡು ಹಾರಿಸಿ 40ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದ್ದಾನೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಸತ್ತಿರುವುದನ್ನು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆನ್ ದೃಢ ಪಡಿಸಿದ್ದಾರೆ.

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೋರ್ರಿಸನ್ ಶಸ್ತ್ರಧಾರಿ ತಮ್ಮ ರಾಷ್ಟ್ರದವನು ಎಂದು ಹೇಳಿದ್ದಾರೆ. ‘ಆತ  ಬಲಪಂಥೀಯ ಉಗ್ರಗಾಮಿ, ಭಯೋತ್ಪಾದಕ’ ಎಂದು ಅವರು ಹೇಳಿದ್ದಾರೆ.

ಗುಂಡು ಹಾರಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಪ್ರಶ್ನಿಸುತ್ತಿದ್ದಾರೆ.

ಹತ್ಯಾಕಾಂಡದ ಹೊಣೆಗಾರಿಕೆ ತನ್ನದು ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಹತ್ಯಾಕಾಂಡದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾನೆ. ಘಟನೆಯ ಹೊತ್ತಿನಲ್ಲೇ ವಿಡಿಯೋ ಮಾಡಿಕೊಂಡು ಪ್ರಕಟಿಸಿದಂತಿರುವ ಈ ವಿಡಿಯೋದ  ಸಾಚಾತನವನ್ನು ಪೊಲೀಸರು ದೃಢ ಪಡಿಸಿಲ್ಲ.

ನ್ಯೂಜಿಲೆಂಡಿಗೆ ದಾಳಿ ನಡೆಸಲು ತರಬೇತಿ ನೀಡಲು ತಾನು ಬಂದಿರುವುದಾಗಿ ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಸತ್ತಿರುವ 40 ಮಂದಿಯ ಪೈಕಿ 30 ಮಂದಿ ಅಲ್ ನೂರ್ ಮಸೀದಿಯಲ್ಲಿ ಸಾವನ್ನಪ್ಪಿದ್ದು, 10 ಮಂದಿ ಲಿನ್ ವುಡ್ ಮಸೀದಿಯಲ್ಲಿ ಹತರಾಗಿದ್ದಾರೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: