ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!
ಇದು ಸುವರ್ಣ ನೋಟ
ದೀಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ ಬಿರುಸಿನ ಹಬ್ಬ.
ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋಧ್ಯೆಗೆ ವಾಪಸಾಗಿ ಪಟ್ಟವನ್ನೇರಿದ ಹಬ್ಬ. ಅಸುರ ನರಕಾಸುರನನ್ನು ವಧಿಸಿದ ದಿನದ ಹಬ್ಬ. ವಿಷ್ಣುವು ವಾಮನರೂಪಿಯಾಗಿ ಬಂದು ಮೂರು ಅಡಿ ಭೂಮಿಯನ್ನು ದಾನವಾಗಿ ಪಡೆದು ಬಲಿಯೇಂದ್ರ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದ ಹಬ್ಬ. ಪಾರ್ವತಿಯ ಕೇದಾರೇಶ್ವರನನ್ನಪೂಜಿಸಿ ಈಶ್ವರನನ್ನು ಪತಿಯಾಗಿ ಪಡೆದ ಹಬ್ಬ. ಲಕ್ಷ್ಮಿಯು ಪೂಜೆ ಸ್ವೀಕರಿಸಿ ಭಕ್ತರನ್ನು ಹರಸುವ ಹಬ್ಬ.ಗೋಮಾತೆಯನ್ನು ಪೂಜಿಸುವ ಹಬ್ಬ.
ಈ ಹಬ್ಬಕ್ಕೆ ದೇವರಿಗೆ ಹೂಗಳ ಸಿಂಗಾರದೊಂದಿಗೆ ಸಾಲು ದೀಪಗಳ ಹಣತೆ ಬೆಳಗಿಸುವುದರ ಜೊತೆಗೆ ಪಟಾಕಿ ಬಾಣಗಳ ಬಿರುಸು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.
ಈ ದೃಶ್ಯಗಳನ್ನು ಸೆರೆ ಹಿಡಿದು ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಕಳೆಗಟ್ಟಿಸಿರುವುದು ಹೀಗೆ.
ಪಟಾಕಿ ಬಾಣಗಳ ಸುಂದರ ಛಾಯಾಚಿತ್ರಗಳನ್ನು ಪರ್ಯಾಯದ ʼಸುವರ್ಣ ನೋಟʼಕ್ಕೆ ಒದಗಿಸಿದ್ದಾರೆ.
ಈ ಚಿತ್ರಗಳಿಗೆ ಚಲನೆ ನೀಡಿ ವಿಡಿಯೋ ರೂಪಿಸಿದ್ದು ನೆತ್ರಕೆರೆ ಉದಯಶಂಕರ.
ಚಿತ್ರ ಹಾಗೂ ವಿಡಿಯೋದ ಸಂಗಮ ಇಲ್ಲಿದೆ.👇
ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್ ಮಾಡಿ. ವಿಡಿಯೋದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ. ಇಲ್ಲವೇ ಇಲ್ಲಿರುವ ಯೂ ಟ್ಯೂಬ್‌ವಿಡಿಯೋ ಲಿಂಕ್ ಕ್ಲಿಕ್ ಮಾಡಿ: https://youtu.be/ZqJD3In5guY?list=PLv2kXf-8UHyK3E-4qT6ApslDz_pUNsCZO
PARYAYA: ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!: ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ! ಇದು ಸುವರ್ಣ ನೋಟ ದೀ ಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ ಬಿರುಸಿನ ಹಬ್ಬ. ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋ...






No comments:
Post a Comment