Showing posts with label ಛಾಯಾಚಿತ್ರ. Show all posts
Showing posts with label ಛಾಯಾಚಿತ್ರ. Show all posts

Monday, June 15, 2026

PARYAYA: ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?

 ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?

ಇದು ʼಸುವರ್ಣʼ ನೋಟ

ಹವಾಮಾನ ವೈಪರೀತ್ಯದಿಂದ ಈ ಬಾರಿ ಮುಂಗಾರು ಕಣ್ಣಾ ಮುಚ್ಚಾಲೆ ಆಡುತ್ತಿದೆ. ವಾರ ಮುಂಚಿತವಾಗಿ ಬರುವುದೆಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದ್ದರೂ, ಬರುವುದು ತಡವಾಗಿದೆ.

ಸೆಕೆಗಾಲದ ಬಿಸಿಲ ಝಳವೂ ಈ ಸಾಲು ಅಂದರೆ ೨೦೨೬ನೇ ವರ್ಷದಲ್ಲಿ ಮಿತಿ ಮೀರಿತು. ಚಳಿಕಾಲದ ಕಥೆಯೂ ಅಷ್ಟೇ. ವಿಪರೀತ ಚಳಿ.

ಗಿಡ, ಮರ, ಬಳ್ಳಿಗಳ ಮೇಲೂ ಹವಾಮಾನದ ವೈಪರೀತ್ಯ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿದೆ. ಬೀರುತ್ತಿದೆ.

ನೋಡಿ. ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಬಾರಿ ಅರಳುವ ಹೂ ಅದ್ಭುತ ಸೊಗಸಿನ ʼಬಹ್ಮ ಕಮಲʼ. ಸಾಮಾನ್ಯವಾಗಿ ಈ ಹೂ ಅರಳುವುದು ಜುಲೈ-ಆಗಸ್ಟ್‌ ತಿಂಗಳಲ್ಲಿ ಹುಣ್ಣಿಮೆ, ಅಮಾವಾಸ್ಯೆಯ ಸಮಯದಲ್ಲಿ.

ಈ ಬಾರಿ ಅದು ಕೂಡಾ ತಿಂಗಳು ಮುಂಚಿತವಾಗಿಯೇ ಅರಳಿ ಬಿಟ್ಟಿದೆ. ಮೊನ್ನೆ, ಮೊನ್ನೆ ಅಂದರೆ ೨೦೨೬ರ ಜೂನ್‌ ತಿಂಗಳ ೧೩ರ ಶನಿವಾರ ರಾತ್ರಿ ಅರಳಿತು. ಹೀಗೆ ಅರಳಿದ ಬ್ರಹ್ಮ ಕಮಲ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಯಾಗಿ ಬಿಟ್ಟಿತು. ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.

ಅಂದಹಾಗೆ, ಈ ಶನಿವಾರ ಪುಣ್ಯಪ್ರದವಾದ ಅಧಿಕ ಮಾಸದ  ಕೊನೆಯ ಶನಿವಾರ. ಅಧಿಕ ಮಾಸದಲ್ಲೇ ಅರಳಲು ʼಬ್ರಹ್ಮಕಮಲʼಕ್ಕೂ ಅವಸರವಾಗಿರಬಹುದೇನೋ? ಏನೇ ಆಗಲಿ, ಪುಣ್ಯದಿನದಂದೇ ಅರಳಿದ ಈ ಹೂವನ್ನು ನೋಡಿದವರಿಗೆ ಲಭಿಸುವ ಪುಣ್ಯ ಅಧಿಕವಾಗಲಿ ಎಂದು ಹಾರೈಸೋಣ.


PARYAYA: ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ?:   ಅರಳಲು ಅವಸರವಾಯಿತೇ ಈ ಬ್ರಹ್ಮ ಕಮಲಕ್ಕೆ? ಇದು ʼ ಸುವರ್ಣ ʼ ನೋಟ ಹ ವಾಮಾನ ವೈಪರೀತ್ಯದಿಂದ ಈ ಬಾರಿ ಮುಂಗಾರು ಕಣ್ಣಾ ಮುಚ್ಚಾಲೆ ಆಡುತ್ತಿದೆ. ವಾರ ಮುಂಚಿತವಾಗಿ ಬರುವ...

Wednesday, September 26, 2018

ಸಾರ್ಥಕತೆ ಮೆರೆದ ಛಾಯಾಚಿತ್ರ ಪ್ರದರ್ಶನ

ಸಾರ್ಥಕತೆ ಮೆರೆದ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಅನುಪ್ ಕೃಷ್ಣಭಟ್ ನೆತ್ರಕೆರೆ ಅವರೇ ಕ್ಲಿಕ್ಕಿಸಿದ ಛಾಯಾಚಿತ್ರಗಳ ಪ್ರದರ್ಶನವನ್ನು ಬೆಂಗಳೂರಿನ ಕೆನ್ ಕಲಾ ಶಾಲೆಯಲ್ಲಿ ಗೆಳೆಯರು ಅನುಪ್ ಸ್ಮರಣಾರ್ಥ ಸಂಘಟಿಸಿದ್ದರು. ಈ ಕಾರ್ಯಕ್ರಮದ ಕುರಿತು ‘ವಿಜಯವಾಣಿ’ ಪತ್ರಿಕೆ ಪ್ರಕಟಿಸಿದ ಲೇಖನ ಇಲ್ಲಿದೆ.