Thursday, February 27, 2025
PARYAYA: ಮಹಾಕುಂಭ ಮುಗಿಯಿತು.....
Wednesday, February 12, 2025
PARYAYA: ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ
ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ
ಮಾಘ ಹುಣ್ಣಿಮೆಯ ದಿನವಾದ ಬುಧವಾರ (2025 ಫೆಬ್ರುವರಿ 12) ಲಕ್ಷಾಂತರ ಭಕ್ತರು ʼಮಾಘ ಪೂರ್ಣಿಮೆ ಪವಿತ್ರ ಸ್ನಾನʼ ಆರಂಭಿಸುವುದರೊಂದಿಗೆ ಉತ್ತರ ಪ್ರದೇಶದ ಪ್ರಯಾಗರಾಜ್ ನ ಗಂಗಾ, ಯುಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 2025ರ ಮಹಾಕುಂಭವು ಉತ್ತುಂಗಕ್ಕೆ ಏರಿದೆ.
ತ್ರಿವೇಣಿ ಸಂಗಮದಲ್ಲಿ ಮಾಘ ಪೂರ್ಣಿಮಾ ಪವಿತ್ರ ಸ್ನಾನ ಮಾಡುತ್ತಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ʼಪುಷ್ಪ ವೃಷ್ಟಿʼ ಮಾಡಲಾಯಿತು.
ಪುಷ್ಪ ವೃಷ್ಟಿಯ ANI ವಿಡಿಯೋ ಇಲ್ಲಿದೆ.
ಕಲ್ಪವಾಸಿಗಳಿಗೆ ಮಾಘ ಪೂರ್ಣಿಮವು ಮತ್ತೊಂದು ಪವಿತ್ರ ಸ್ನಾನದ ಸಂದರ್ಭವಾಗಿದ್ದು ಸ್ನಾನ, ದಾನ ಮತ್ತು ಪೂಜೆಯ ಧಾರ್ಮಿಕ ಮಹತ್ವದ ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒತ್ತಿ ಹೇಳಿದ್ದಾರೆ.
ಒಂದು ತಿಂಗಳ ಕಲ್ಪವಾಸದ ಅವಧಿಯು ಮಾಘ ಪೂರ್ಣಿಮೆಯಂದು ಕೊನೆಗೊಳ್ಳುತ್ತದೆ.
ಜನವರಿ 13ರಿಂದ ಈವರೆಗೆ 45 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದು, ಎರಡು ಪ್ರಮುಖ ಸ್ನಾನ ಹಬ್ಬಗಳು ಉಳಿದಿರುವುದರಿಂದ, ಪವಿತ್ರ ಸ್ನಾನ ಮಾಡುವ ಒಟ್ಟು ಭಕ್ತರ ಸಂಖ್ಯೆ 50 ಕೋಟಿ ಮೀರುವ ನಿರೀಕ್ಷೆಯಿದೆ.
ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭವು ಫೆಬ್ರವರಿ 26 ರವರೆಗೆ ಮುಂದುವರಿಯಲಿದೆ. ಫೆಬ್ರವರಿ 3ರಂದು ಬಸಂತ್ ಪಂಚಮಿ - ಮೂರನೇ ಶಾಹಿ ಸ್ನಾನ ನಡೆದಿದ್ದು, ಇಂದು-, ಫೆಬ್ರವರಿ 12 ರಂದು ಮಾಘಿ ಪೂರ್ಣಿಮಾ ಶಾಹಿ ಸ್ನಾನ ನಡೆಯುತ್ತಿದೆ. ಫೆಬ್ರವರಿ 26ರ ಮಹಾ ಶಿವರಾತ್ರಿಯಂದು ಇನ್ನೊಂದು ಪವಿತ್ರ ಸ್ನಾನ ನೆರವೇರಲಿದೆ.
ಈ ಕೆಳಗಿನವುಗಳನ್ನೂ ಓದಿರಿ:
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
Tuesday, January 14, 2025
PARYAYA: ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಇದು ಸುವರ್ಣ ನೋಟ!
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಪ್ರಯಾಗರಾಜ್ ಮಹಾ ಕುಂಭಮೇಳದ ಭಕ್ತರಿಂದ ಮೈ ನಡುಗುವ ಚಳಿಯಲ್ಲೂ ಗಿಜಿಗಿಡುತ್ತಿದೆ. ಯಾವ ಚಳಿಯನ್ನೂ ಲೆಕ್ಕಿಸದೆ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ.
ಈ ಭವ್ಯ ಮೇಳದ ಸಂಭ್ರಮದ ಚಿತ್ರಗಳು, ವಿಡಿಯೋಗಳು ಯೂ ಟ್ಯೂಬ್, ಪತ್ರಿಕೆ, ಟಿವಿ ಚಾನೆಲ್ ಗಳಲ್ಲಿ ರಾರಾಜಿಸುತ್ತಿವೆ ಮೇಳದ ಭವ್ಯತೆಯ ಕ್ಷಣಗಳ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (ಹಿಂದಿನ ಟ್ವಿಟ್ಟರ್) ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಳಿಯಲ್ಲಿ ಗಢಗಢ ನಡುಗುವ ಈ ಹೊತ್ತಿನಲ್ಲಿ ʼಹೊಳೆ – ನದಿʼಗಳಲ್ಲಿ ಮುಳುಗೇಳುವ ಭಕ್ತರ ಸಂಭ್ರಮದ ಹೊತ್ತಿನಲ್ಲಿ, ʼನಾಗರ ಹೊಳೆʼ ಹೇಗಿರುತ್ತದೋ ಏನೋ ಎಂದು ನೋಡುವ ಇಚ್ಛೆಯಾಯಿತು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರಿಗೆ.
ಯೋಚನೆ ಬಂದ ಬಳಿಕ ಸುಮ್ಮನೇ ಕೂರುವ ಜಾಯಮಾನ ಅವರದಲ್ಲ. ಹೆಗಲಿಗೆ ಕ್ಯಾಮರಾ ಏರಿಸಿ ಹೊರಟೇ ಬಿಟ್ಟರು ಸುವರ್ಣ ʼನಾಗರಹೊಳೆʼಗೆ. ನಾಗರ ಹೊಳೆಯ ಈ ಪಯಣ ʼಮಂಜು ಮುಸುಕಿದ ಹಾದಿʼಯಾಗಿತ್ತು.

ʼನಾಗರ ಹೊಳೆʼಯಲ್ಲಿ ಚಳಿಗಾಲದ ಸಂಭ್ರಮ ಹೇಗಿತ್ತು ಎಂಬುದು ಸುವರ್ಣ ಅವರ ಕ್ಯಾಮರಾದಲ್ಲಿ ಸೆರೆಯಾಯಿತು. ಅದನ್ನು ನೋಡುವ ಅವಕಾಶ ಇಲ್ಲಿದೆ. ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್ ಮಾಡಿ.
-ನೆತ್ರಕೆರೆ ಉದಯಶಂಕರ
ಕೆಳಗಿನವುಗಳನ್ನೂ ಓದಿರಿ:
ಪಕ್ಷಿ ಕಂಡರೆ ಸಾಕು… ʼಶೂಟ್ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ
(ಮೇಲಿನ ಚಿತ್ರ ಕ್ಲಿಕ್ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)









