Showing posts with label ಭಯೋತ್ಪಾದನೆ. Show all posts
Showing posts with label ಭಯೋತ್ಪಾದನೆ. Show all posts

Sunday, March 16, 2025

PARYAYA: ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

 ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

ವದೆಹಲಿ: ಲಷ್ಕರ್--ತೈಬಾ ಸಂಘಟನೆಗೆ ಸೇರಿದ ʼಮೋಸ್ಟ್ ವಾಂಟೆಡ್ʼ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಕತಾಲ್ ಯಾನೆ ಫೈಸಲ್‌ ನದೀಮ್‌ ೨೦೨೫ ಮಾರ್ಚ್‌ ೧೫ರ ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಲ್ಲಿ ಈತ ಪ್ರಮುಖ ವ್ಯಕ್ತಿಯಾಗಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವರದಿಗಳ ಪ್ರಕಾರಪಾಕಿಸ್ತಾನದ ಝೇಲಂನ ದಿನಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯಿಂದ ಕತಾಲ್ ಹತ್ಯೆಗೀಡಾಗಿದ್ದಾನೆ

೨೬/೧೧ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದನ ಆಪ್ತ ಸಹಚರನಾಗಿದ್ದ ಅಬು ಕತಾಲ್ ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ. ಕತಾಲ್ ನೇತೃತ್ವದಲ್ಲಿ ಈ ದಾಳಿಯನ್ನು ಆಯೋಜಿಸಲಾಗಿತ್ತು.

ಜನವರಿ ೧೨೦೨೩ ರಂದುರಾಜೌರಿಯ ಧಂಗ್ರಿ ಗ್ರಾಮದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಲಾಗಿತ್ತು. ದಾಳಿಯ ನಂತರ ಮರುದಿನ ಐಇಡಿ ಸ್ಫೋಟ ಸಂಭವಿಸಿತ್ತು. ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಪ್ರಾಣ ಕಳೆದುಕೊಂಡಿದ್ದರು. ಇತರ ಹಲವರು ತೀವ್ರ ಗಾಯಗೊಂಡಿದ್ದರು.

ಹಫೀಜ್ ಸಯೀದ್ ಅಬು ಕತಾಲ್ ನನ್ನು ಲಷ್ಕರ್--ತೈಬಾದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ನೇಮಿಸಿದ್ದ. ಹಫೀಜ್ ಸಯೀದ್ ಅಬು ಕತಾಲ್ ಗೆ ಆದೇಶ ನೀಡುತ್ತಿದ್ದ. ಅದರಂತೆ ಕತಾಲ್ ಕಾಶ್ಮೀರದಲ್ಲಿ ಪ್ರಮುಖ ದಾಳಿಗಳನ್ನು ನಡೆಸುತ್ತಿದ್ದ.

೨೦೨೩ ರ ರಾಜೌರಿ ದಾಳಿಯಲ್ಲಿ ಅಬು ಕತಾಲ್ ಪಾತ್ರಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಆರೋಪಪಟ್ಟಿಯಲ್ಲಿ ಅಬು ಕತಾಲ್‌ನನ್ನು ಹೆಸರಿಸಿತ್ತು.

ರಾಜೌರಿ ದಾಳಿಗೆ ಸಂಬಂಧಿಸಿದಂತೆಎನ್‌ಐಎ ಐದು ಆರೋಪಿಗಳ ಮೇಲೆ ಆರೋಪಪಟ್ಟಿ ಸಲ್ಲಿಸಿದೆಅವರಲ್ಲಿ ಮೂವರು ನಿಷೇಧಿತ ಲಷ್ಕರ್- -ತೈಬಾಕ್ಕೆ ಸೇರಿದ ಪಾಕಿಸ್ತಾನೀಯರು.

ನಾಗರಿಕರನ್ನುವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಪಾಕಿಸ್ತಾನದಿಂದ ಎಲ್‌ಇಟಿ ಭಯೋತ್ಪಾದಕರ ನೇಮಕಾತಿ ಮತ್ತು ರವಾನೆಯನ್ನು ಈ ಮೂವರು ಸಂಘಟಿಸಿದ್ದರು ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಬು ಕತಾಲ್ ಮೇಲೆ ಸೇನೆ ಸೇರಿದಂತೆ ಹಲವಾರು ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿದ್ದವು.

ಕೆಳಗಿನವುಗಳನ್ನೂ ಓದಿರಿ:

ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿಐಸಿಸ್ ಮುಖ್ಯಸ್ಥ ಖತಂ

ಭಯೋತ್ಪಾದನೆಯ 'ಪೆಡಂಭೂತ': ವಾಸ್ತವದ ಮರೆವು ಮುಳುವಾಯಿತೇ?

PARYAYA: ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ:   ೨೦೨೩ ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ ನ ವದೆಹಲಿ: ಲಷ್ಕರ್- ಇ -ತೈಬಾ ಸಂಘಟನೆಗೆ ಸೇರಿದ ʼ ಮೋಸ್ಟ್ ವಾಂಟೆಡ್ ʼ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಕತ...

Saturday, March 15, 2025

PARYAYA: ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮು...

 ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ

ವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ನಿಖರವಾದ ವೈಮಾನಿಕ ದಾಳಿಯಲ್ಲಿ "ಅಬು ಖದೀಜಾ" ಎಂಬ ಅಡ್ಡ ಹೆಸರಿನ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿ ಹತನಾಗಿದ್ದಾನೆ ಎಂದು ಅಮೆರಿಕ ೨೦೨೫ ಮಾರ್ಚ್‌ ದಿನಾಂಕ ೧೫ರಂದು ಘೋಷಿಸಿದೆ.

ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ ಮತ್ತು ಜಾಗತಿಕವಾಗಿ ಗುಂಪಿನ ಎರಡನೇ ಕಮಾಂಡರ್ ಸ್ಥಾನವನ್ನು ಹೊಂದಿದ್ದ. ಮಾರ್ಚ್ 13 ರಂದು ನಡೆದ ದಾಳಿಯಲ್ಲಿ ಮತ್ತೊಬ್ಬ ಐಸಿಸ್ ಭಯೋತ್ಪಾದಕ ಕೂಡಾ ಹತನಾಗಿದ್ದಾನೆ.

ಯುಎಸ್ ಮಿಲಿಟರಿ ಅಧಿಕಾರಿಗಳ ಪ್ರಕಾರಅಬು ಖದೀಜಾ ವಿಶ್ವಾದ್ಯಂತ ಭಯೋತ್ಪಾದಕ ಗುಂಪಿನ ಸಾಗಣೆಯೋಜನೆ ಮತ್ತು ಹಣಕಾಸು ನಿರ್ವಹಣೆಯ ಮೇಲ್ವಿಚಾರಣೆ ಮಾಡುತ್ತಿದ್ದ.

ವಾಯುದಾಳಿಯ ನಂತರಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಮತ್ತು ಇರಾಕಿ ಪಡೆಗಳು ಸ್ಥಳಕ್ಕೆ ಆಗಮಿಸಿ ಅಬು ಖದೀಜಾ ಮತ್ತು ಇನ್ನೊಬ್ಬ ಐಸಿಸ್ ಹೋರಾಟಗಾರನ ಸಾವನ್ನು ದೃಢಪಡಿಸಿದವು. CENTCOM ಪ್ರಕಾರರು ಕೂಡಾ ಸ್ಫೋಟಗೊಳ್ಳದ ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಿದ್ದುದು ಕಂಡುಬಂದಿದೆ ಮತ್ತು ಅವರ ಬಳಿ ಬಹುವಿಧದ ಶಸ್ತ್ರಾಸ್ತ್ರಗಳಿದ್ದವು. ಅಬು ಖದೀಜಾನ ಗುರುತನ್ನು ಹಿಂದಿನ ದಾಳಿ ಕಾಲದಲ್ಲಿ ಸೆರೆ ಹಿಡಿದ ಸಂದರ್ಭದಲ್ಲಿ ಸಂಗ್ರಹಿಸಲಾದ ಮಾದರಿಗಳನ್ನು ಬಳಸಿಡಿಎನ್‌ಎ ಹೊಂದಾಣಿಕೆಯ ಮೂಲಕ ದೃಢಪಡಿಸಲಾಯಿತು.

"ಇಡೀ ಜಾಗತಿಕ ಐಸಿಸ್ ಸಂಘಟನೆಯಲ್ಲಿ ಅಬು ಖದೀಜಾ ಪ್ರಮುಖ ಐಸಿಸ್ ಸದಸ್ಯರಲ್ಲಿ ಒಬ್ಬನಾಗಿದ್ದ. ನಮ್ಮ ತಾಯ್ನಾಡು ಪ್ರದೇಶ ಮತ್ತು ಅದರಾಚೆಗಿನ  ಅಮೆರಿಕದ ಮಿತ್ರರು ಹಾಗೂ ಪಾಲುದಾರ ಸಿಬ್ಬಂದಿಗೆ ಬೆದರಿಕೆ ಹಾಕುವ ಭಯೋತ್ಪಾದಕರ ಹತ್ಯೆ, ಅವರ ಸಂಘಟನೆಗಳ ನಾಶವನ್ನು ನಾವು ಮುಂದುವರಿಸುತ್ತೇವೆ" ಎಂದು ಯುಎಸ್ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಹೇಳಿದ್ದಾರೆ.

ಸೆಂಟ್ರಲ್‌ ಕಮಾಂಡ್‌ ಸೆರೆ ಹಿಡಿದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

PARYAYA: ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮು...:   ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ , ಐಸಿಸ್ ಮುಖ್ಯಸ್ಥ ಖತಂ ನ ವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ , ಇರಾಕ್‌ನ ಅಲ್ ಅನ...

Sunday, November 3, 2024

PARYAYA: ಪಿಎಂಒ, ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ ಹಾಕಿದ್ದೇಕೆ ಗೊ...

 ಪಿಎಂಒ, ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ ಹಾಕಿದ್ದೇಕೆ ಗೊತ್ತೇ?  

ಬೆಂಗಳೂರು: ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಹಾಗೂ ವಿವಿಧ ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಿ ಸುಮಾರು ೧೦೦ಕ್ಕೂ ಹೆಚ್ಚು ಮಿಂಚಂಚೆಗಳನ್ನು ಕಳುಹಿಸಿದ ವ್ಯಕ್ತಿಯನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.

ಆತನ ವಿಚಾರಣೆಯಿಂದ ಕುತೂಹಲಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಸುಮಾರು ೧೦೦ಕ್ಕೂ ಹೆಚ್ಚು ಬಾಂಬ್‌ ಬೆದರಿಕೆಗಳ ಮಿಂಚಂಚೆ ಕಳುಹಿಸಿದ್ದ ಈ ವ್ಯಕ್ತಿ ಭಯೋತ್ಪಾದನೆಗೆ ಸಂಬಂಧಿಸಿದ ತನ್ನ ಪುಸ್ತಕ ಪ್ರಕಟಿಸಲು ಕೋರಿದ ನೆರವು ಲಭಿಸದೇ ಇದ್ದುದಕ್ಕಾಗಿ ಈ ಬಾಂಬ್‌ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಿದ್ದನಂತೆ.

ಮಹಾರಾಷ್ಟ್ರದ ಪೊಲೀಸರಿಂದ ಬಂಧಿತನಾಗಿರುವ ಮಹಾರಾಷ್ಟ್ರದ ಮಾವೋವಾದಿ ನಕ್ಸಲೀಯ ಹಾವಳಿಪೀಡಿತ ಜಿಲ್ಲೆ ಗೊಂಡಿಯಾದ ಈ ವ್ಯಕ್ತಿಯ ಹೆಸರು ಜಗದೀಶ್‌ ಉಯಿಕೆ ಅಂತ. ಈತನ ವಯಸ್ಸು ೩೫ ವರ್ಷ.

ಪೊಲೀಸರ ಪ್ರಕಾರ ಕಳೆದ ಜನವರಿಯಿಂದ ಇಲ್ಲಿಯವರೆಗೆ ಈತ ಪಿಎಂಒ ಮತ್ತು ಇತರ ಅಧಿಕಾರಿಗಳಿಗೆ ಸುಮಾರು ೧೦೦ ಬಾರಿ ಬಾಂಬ್‌ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಿದ್ದಾನೆ.

ಈತ ಬರೆದ ಪುಸ್ತಕದ ಹೆಸರು ʼಆತಂಕ್‌ ವಾದ್‌ - ಏಕ್‌ ತೂಫಾನಿ ರಾಕ್ಷಸ್‌ʼ (ಭಯೋತ್ಪಾದನೆ- ಒಂದು ರಕ್ಕಸ ಬಿರುಗಾಳಿ). ಈ ಪುಸ್ತಕವನ್ನು ಪ್ರಕಟಿಸಲು ಅನುಮತಿ ಹಾಗೂ ನೆರವು ನೀಡಬೇಕು ಎಂಬುದು ಈತನ ಕೋರಿಕೆಯಾಗಿತ್ತಂತೆ.

ಮೊದ ಮೊದಲಿಗೆ ತನ್ನ ಕೋರಿಕೆ ಮಿಂಚಂಚೆಗಳನ್ನು ಕಳುಹಿಸಿದ ಈತ, ಬಹುಶ: ಅದಕ್ಕೆ ಯಾವುದೇ ಸ್ಪಂದನೆ ಸಿಗಲಿಲ್ಲ ಎಂಬುದಾಗಿ ಭ್ರಮನಿರಸನಗೊಂಡು ಬಾಂಬ್‌ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಲು ಆರಂಭಿಸಿದ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನಾಗಪುರ ಸೈಬರ್‌ ಕ್ರೈಮ್‌ ಡಿಸಿಪಿ ಲೋಹಿತ್‌ ಮತಾನಿ ಬಹಿರಂಗ ಪಡಿಸಿದ್ದಾರೆ.

ನಾಗ್ಪುರದ ಹೆಚ್ಚುವರಿ ಸಿಪಿಸಂಜಯ್ ಪಾಟೀಲ್ ಪ್ರಕಾರಉಯಿಕೆಯ ಪುಸ್ತಕವು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿರುವ ಭಯೋತ್ಪಾದಕ ಸಿದ್ಧಾಂತಗಳ ಮೂಲ ಸಂಕಲನವಾಗಿದೆ ಎಂದು ವರದಿಗಳು ತಿಳಿಸಿವೆ.

PARYAYA: ಪಿಎಂಒ, ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ ಹಾಕಿದ್ದೇಕೆ ಗೊ...:   ಪಿಎಂಒ, ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ ಹಾಕಿದ್ದೇಕೆ ಗೊತ್ತೇ?   ಬೆಂ ಗಳೂರು: ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಹಾಗೂ ವಿವಿಧ ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾ...

Wednesday, August 24, 2022

PARYAYA: ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,...

 ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕಾಸು
ಕರ್ನಲ್‌ ನಿಂದ ರೂ. 30,000 ರೂಪಾಯಿ

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಆಗಸ್ಟ್ 21 ರಂದು ಭಾರತೀಯ ಸೇನೆ ಸೆರೆ ಹಿಡಿದ ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) 'ಫಿದಾಯೀನ್' (ಆತ್ಮಹತ್ಯಾ) ದಾಳಿಕೋರಪಾಕ್‌ ಕರ್ನಲ್‌ ಸೂಚನೆ ಮೇರೆಗೆ ತಾನು ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ಕೃತ್ಯಕ್ಕೆ ಇಳಿದುದಾಗಿ 2022 ಆಗಸ್ಟ್‌ 24ರ ಬುಧವಾರ ಒಪ್ಪಿಕೊಂಡಿದ್ದಾನೆ.

ಭಾರತೀಯ ಸೈನಿಕರ ಮೇಲೆ ದಾಳಿ ಮಾಡುವ ಯೋಜನೆ ಕಾರ್ಯಗತಗೊಳಿಸಲು ಪಾಕಿಸ್ತಾನಿ ಸೇನೆಯ ಪಾಕಿಸ್ತಾನಿ ಕರ್ನಲ್ ಯೂನಸ್ ಚೌಧರಿ ತನಗೆ ಸುಮಾರು 30,000 ರೂ. ನೀಡಿರುವುದಾಗಿ ತಬಾರಕ್ ಹುಸೇನ್ ಎಂಬುದಾಗಿ ಗುರುತಿಸಲಾಗಿರುವ ದ ಭಯೋತ್ಪಾದಕ ಹೇಳಿದ್ದಾನೆ.

ಒಳನುಸುಳುವಿಕೆ ಪ್ರಯತ್ನದ ಸಮಯದಲ್ಲಿ ಗಾಯಗೊಂಡು ಕಾಶ್ಮೀರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಸೇನ್ ಎಎನ್‌ ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡುತ್ತಾ ತಾನು ನಾಲ್ಕೈದು ಮಂದಿಯೊಂದಿಗೆ ಭಾರತೀಯ ಪ್ರದೇಶಕ್ಕೆ ನುಸುಳಲು ಯತ್ನಿಸಿದ್ದಾಗಿ ಹೇಳಿದ್ದಾನೆ.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹುಸೇನ್, ಇತರ ಭಯೋತ್ಪಾದಕರ ಜೊತೆಗೆ ಸೂಕ್ತ ಸಮಯದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶದಿಂದ ಭಾರತದ ಮುಂಚೂಣಿ ಗಡಿ ಠಾಣೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಎರಡು-ಮೂರು ಬಾರಿ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹುಸೇನ್ ಪಾಕ್ ಆಕ್ರಮಿತ ಕಾಶ್ಮೀರದ ಕೋಟಿಯ ಸಬ್‌ಕೋಟ್ ಗ್ರಾಮದ ನಿವಾಸಿಯಾಗಿದ್ದಾನೆ.

ಹುಸೇನ್ ಭಯೋತ್ಪಾದಕರೊಂದಿಗೆ ಒಳನುಸುಳಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ಸೇನೆಯು ಆತನನ್ನು ವಶಕ್ಕೆ ತೆಗೆದುಕೊಂಡಿತು. “ನಾನು ಇತರ ನಾಲ್ಕೈದು ಜನರೊಂದಿಗೆ ಆತ್ಮಹತ್ಯಾ ಕಾರ್ಯಾಚರಣೆಗಾಗಿ ಇಲ್ಲಿಗೆ ಬಂದಿದ್ದೆ. ನಮ್ಮನ್ನು ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ್ದುಅವರು ಭಾರತೀಯ ಸೇನೆಯನ್ನು ಗುರಿಯಾಗಿಸಲು 30,000 ರೂ. ನೀಡಿದ್ದರು” ಎಂದು ಭಯೋತ್ಪಾದಕ ಹೇಳಿದ.

ಇದಕ್ಕೆ ಮುನ್ನಜಮ್ಮು ಪ್ರದೇಶದಲ್ಲಿ 48 ಗಂಟೆಗಳ ಅವಧಿಯಲ್ಲಿ ನೌಶೇರಾ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಭಯೋತ್ಪಾದಕರು ನಡೆಸಿದ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ಯಶಸ್ವಿಯಾಗಿ ನಿಗ್ರಹಿಸುವ ಮೂಲಕ ಶಾಂತಿ ಕದಡುವ ಪಾಕಿಸ್ತಾನದ "ಕೆಟ್ಟ ಪ್ರಯತ್ನ" ವನ್ನು ವಿಫಲಗೊಳಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿತ್ತು.

ಆಗಸ್ಟ್ 21 ಮತ್ತು 22 ರಂದು ಝಂಗಾರ್ ಮತ್ತು ಲ್ಯಾಮ್ ಪ್ರದೇಶಗಳಲ್ಲಿ ಒಳನುಸುಳುವಿಕೆ ಯತ್ನಗಳು, ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾದವು ಮತ್ತು ಕುಖ್ಯಾತ ಭಯೋತ್ಪಾದಕ ಮಾರ್ಗದರ್ಶಿಯನ್ನು ಬಂಧಿಸಲಾಯಿತುಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಭಾರತದ ಕಡೆಗೆ ಒಂದು ಗುಂಪನ್ನು ನುಗ್ಗಿಸುವ ಕಾರ್ಯಾಚರಣೆಗೆ ಇಳಿದಿದ್ದರು. ಅವರಿಂದ ಸೇನಾ ಪೋಸ್ಟ್ ಮೇಲೆ ದಾಳಿ ನಡೆದಿದೆ ಎಂದು ಸೇನೆಯ 80 ಪದಾತಿ ದಳದ ಕಮಾಂಡರ್ ಬ್ರಿಗೇಡಿಯರ್ ಕಪಿಲ್ ರಾಣಾ ತಿಳಿಸಿದ್ದರು.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಪ್ರಕಟಿಸಿದ ಫಿದಾಯೀನ್‌ ದಾಳಿಕೋರನ ತಪ್ಪೊಪ್ಪಿಗೆಯ ವಿಡಿಯೋ ಕೆಳಗಿದೆ:


PARYAYA: ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,...:   ಭಾರತೀಯ ಸೇನೆ ಮೇಲೆ ದಾಳಿ ಗೆ   ಪಾಕ್‌ ಕಾಸು ಕರ್ನಲ್‌ ನಿಂದ ರೂ. 30,000 ರೂಪಾಯಿ ನವದೆಹಲಿ:   ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟ ರಿನ ಗಡ...