Showing posts with label ಉತ್ತರ ಕರ್ನಾಟಕ. Show all posts
Showing posts with label ಉತ್ತರ ಕರ್ನಾಟಕ. Show all posts

Monday, November 2, 2026

PARYAYA: ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು

 ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು

೨೦೨೬ ನವೆಂಬರ್‌ ೦೧ರ ಭಾನುವಾರ ನಡೆದ ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂಭ್ರಮದ ಕ್ಷಣಗಳು ಇಲ್ಲಿವೆ. (ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ).

ಇದನ್ನೂ ಓದಿರಿ:

ಅಭಿನಂದನೆಗಳು ವಿಶ್ವನಾಥ ಸುವರ್ಣ…

ಕನ್ನಡ ರಾಜ್ಯೋತ್ಸವ ಸಂಭ್ರಮ

PARYAYA: ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು:   ರಾಜ್ಯೋತ್ಸವ ಪ್ರಶಸ್ತಿ : ಸಂಭ್ರಮದ ಕ್ಷಣಗಳು ೨ ೦೨೬ ನವೆಂಬರ್‌ ೦೧ರ ಭಾನುವಾರ ನಡೆದ ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂಭ್ರಮದ ಕ್ಷ...

Saturday, October 31, 2026

PARYAYA: ಅಭಿನಂದನೆಗಳು ವಿಶ್ವನಾಥ ಸುವರ್ಣ…

 ಅಭಿನಂದನೆಗಳು ವಿಶ್ವನಾಥ ಸುವರ್ಣ…

೨೦೨೬ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಹೆಸರು ಸೇರ್ಪಡೆಯಾಗಿರುವುದಕ್ಕೆ ಅಭಿನಂದನೆಗಳು.

ವಿಶ್ವನಾಥ ಸುವರ್ಣ ಅವರು ಈ ಪ್ರಶಸ್ತಿಗೆ ಅತ್ಯಂತ ಯೋಗ್ಯ ವ್ಯಕ್ತಿ. ಏಕೆಂದರೆ ಒಂದು ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ಅವರು ಮಾಡಿದ್ದಾರೆ.

ಕರ್ನಾಟಕ ರಾಜ್ಯದ ೧೧೬ ಕೋಟೆಗಳ ಛಾಯಾಚಿತ್ರಗಳನ್ನು ತೆಗೆದು ಸಂಗ್ರಹಿಸಿ ʼಕರುನಾಡಿನ ಕೋಟೆಗಳುʼ ಎಂಬ ವಿಶಿಷ್ಟ ಪುಸ್ತಕವನ್ನು ಪ್ರಕಟಿಸಿದ್ದಾರೆ. ಹಳೆಯ ಕೋಟೆಗಳ ಚಿತ್ರಗಳು ಮರೆತುಹೋಗದಂತೆ ಜೀವಂತವಾಗಿ ಇರಿಸಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಬಲ್ಲಾಳ್‌ ಬಾಗ್‌ ನಿವಾಸಿಯಾದ ಸುವರ್ಣ, ಈ ಪುಸ್ತಕಕ್ಕಾಗಿ ಸುಮಾರು ೧೮ ತಿಂಗಳ ಕಾಲ ಇಡೀ ರಾಜ್ಯವನ್ನು ಸುತ್ತಾಡಿದ್ದರು.ದುರ್ಗಮ ಕೋಟೆಗಳು ಇರುವ ಸ್ಥಳಗಳನ್ನು ಹುಡುಕಿಕೊಂಡು ಹೋಗಿ ತಮ್ಮ ಕ್ಯಾಮರಾದಲ್ಲಿ ಅವುಗಳನ್ನು ಸೆರೆ ಹಿಡಿದಿದ್ದರು. ಕನ್ನಡದಲ್ಲಿ ಆ ಕೋಟೆಗಳ ಬಗೆಗಿನ ವಿವರವನ್ನೂ ದಾಖಲಿಸಿದ್ದರು.

ಬಳಿಕ ಈ ೨೦೧೭ರಲ್ಲಿ ಈ ಪುಸ್ತಕದ ಇಂಗ್ಲಿಷ್‌ ಆವೃತ್ತಿಯನ್ನು ಹೊರತಂದಿದ್ದಾರೆ. ಕರ್ನಾಟಕದ ಕೋಟೆ ಪರಂಪರೆಯನ್ನು ಛಾಯಾಚಿತ್ರಗಳ ಮೂಲಕ ಪರಿಚಯಿಸುವ ಈ ಕಾರ್ಯ ನಿಜಕ್ಕೂ ಅಪೂರ್ವವಾದದ್ದು.

ಪತ್ರಿಕಾ ಛಾಯಾಗ್ರಾಹಕರಾಗಿ ಸುಮಾರು ನಾಲ್ಕೂವರೆ ದಶಕಗಳ ಸೇವೆ ಸಲ್ಲಿಸಿರುವ ಸುವರ್ಣ ಅವರಿಗೆ ಪ್ರಕೃತಿ, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿಯುವ ವಿಶಿಷ್ಟ ಆಸಕ್ತಿ ಇದೆ. ಅವರ ಈ ಆಸಕ್ತಿ ʼಕನ್ನಡ ನಾಡಿನ ಬಣ್ಣದ ಬಾನಾಡಿಗಳುʼ ಪುಸ್ತಕದಲ್ಲಿ ಪಡಿಮೂಡಿದೆ. ಈ ಛಾಯಾ ಸಂಪುಟ ಪಕ್ಷಿ ಲೋಕದ ಜೀವನದ ಪಕ್ಷಿಗಳ ಬದುಕಿನ ಸುಂದರ ಚಿತ್ರಣವನ್ನು ನೀಡುತ್ತದೆ.

ʼಪ್ರಜಾವಾಣಿʼ ದಿನಪತ್ರಿಕೆಯಲ್ಲಿ ಮುಖ್ಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ಅದಕ್ಕೂ ಮುನ್ನ ʼಅಭಿಮಾನಿʼ ʼಅರಗಿಣಿʼ ಇತ್ಯಾದಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದವರು. ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಜೀವನದ ಅನೇಕ ಘಟನೆಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ʼಪರ್ಯಾಯ.ಕಾಮ್‌ʼ ವಿಶ್ವನಾಥ ಸುವರ್ಣ ಅವರ ಚಿತ್ರಗಳ ಸಂಪುಟಗಳನ್ನು  ʼಇದು ಸುವರ್ಣ ನೋಟʼ ಶೀರ್ಷಿಕೆಯಲ್ಲಿ ಪ್ರಕಟಿಸುತ್ತಾ ಬಂದಿದೆ. ಅವುಗಳನ್ನು ಇಲ್ಲಿ ನೋಡಬಹುದು.

ಇತ್ತೀಚೆಗೆ ಕುಂದಾಪುರಕ್ಕೆ ಭೇಟಿ ನೀಡಿದ್ದಾಗ ಸೂರ್ಯಾಸ್ತ ಕಾಲದಲ್ಲಿ ತೆಗೆದ ಸುಂದರ ಚಿತ್ರಗಳ ಜೊತೆಗೆ, ಮೊನ್ನೆ ಮೊನ್ನೆ ಕಳೆದ ʼವಿಶ್ವ ವಿಖ್ಯಾತ ಮೈಸೂರುʼ ದಸರ ಸಂದರ್ಭದ ಕೆಲವು ಸುಂದರ ಚಿತ್ರಗಳು ಇಲ್ಲಿವೆ.
ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ಜೊತೆಗೇ ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಇತರ ಎಲ್ಲರಿಗೂ ಪರ್ಯಾಯದ ಅಭಿನಂದನೆಗಳು.

-ನೆತ್ರಕೆರೆಉದಯಶಂಕರ












ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್‌ ಮಾಡಿರಿ

PARYAYA: ಅಭಿನಂದನೆಗಳು ವಿಶ್ವನಾಥ ಸುವರ್ಣ…:   ಅಭಿನಂದನೆಗಳು ವಿಶ್ವನಾಥ ಸುವರ್ಣ… ೨ ೦೨೬ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ರಾಜ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವ...

Tuesday, July 29, 2025

PARYAYA: ಅಮೆರಿಕದ ಸಿಇಒಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದ್ರ ಜೀವ!

 ಅಮೆರಿಕದ ಸಿಇಒಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದ್ರ ಜೀವ!

ಏನ್ರೀ ಸುದ್ದಿ ಅಂತೀರಾ? ಅಮೆರಿಕಾದ ದೊಡ್ಡ ಕಂಪನಿ ಕ್ಯಾಲಿಫೋರ್ನಿಯಾ ಬುರಿಟೋ ಸಿಇಒ ಬ್ರೆಟ್ ಮ್ಯುಲ್ಲರ್ ಬೆಂಗಳೂರಿಗ್ ಬಂದಿದ್ರು. ಬೆಂಗಳೂರಲ್ಲಿ ಉತ್ತರ ಕರ್ನಾಟಕದ ಊಟ ಅಂದ್ರ ಜೋಳದ ರೊಟ್ಟಿ, ಎಣ್ಣೆಗಾಯಿ, ಮಜ್ಜಿಗೆ, ಸಜ್ಜಿ ಅಂತಾರಲ್ಲಾ, ಹಂಗ ಸಖತ್ ಖಡಕ್ ಊಟಾ ಮಾಡಿ, "ಆಹಾ! ಎನ್ ಚಂದಾ ಐತಿ ಈ ಊಟಾ, ಸಖತ್ ಆರೋಗ್ಯಕರ" ಅಂತ ಹೇಳ್ಯಾರ.

ಈ ಬ್ರೆಟ್ ಮ್ಯುಲ್ಲರ್ ಅನ್ನೋ ಮನಿಯ ಅಮೆರಿಕಾದಾಗ ಫಾಸ್ಟ್‌ಫುಡ್ ಚೈನ್ ನಡೆಸಾತಾರ. ಆದ್ರೂ ನಮ್ಮ ಉತ್ತರ ಕರ್ನಾಟಕದ ಊಟಾ ಅಂದ್ರ ಜೀವ. ಬೆಂಗಳೂರಿನಾಗ್ ಒಂದು ಚಲೋ ಸಸ್ಯಾಹಾರಿ ಹೋಟೆಲ್‌ದಾಗ ಜೋಳದ ರೊಟ್ಟಿ ಊಟಾ ಮಾಡ್ಯಾರ. ಬೆಂಗಳೂರು ಸರ್ವ್ಡ್ ಅನ್ನೋ ಫುಡ್ ಚಾನೆಲ್‌ದಾಗ ಒಂದು ವಿಡಿಯೋ ವೈರಲ್ ಆಗೈತಿ. ಅದ್ರಾಗ ಬ್ರೆಟ್ ಮ್ಯುಲ್ಲರ್ ಬಸವನಗುಡಿದಾಗ್ ಇರೋ ಕಾಮತ್ ಹೋಟೆಲ್‌ದಾಗ ಉತ್ತರ ಕರ್ನಾಟಕದ ಸ್ಟೈಲ್ ಥಾಲಿ ಊಟಾ ಮಾಡ್ಕೊಂಡ್ ನಿರಾಳವಾಗಿ ಕುಂತಾರ.

ಜೋಳದ ರೊಟ್ಟಿ, ಎಣ್ಣೆಗಾಯಿ ಕರೀ, ಮಜ್ಜಿಗೆ ಅಂದ್ರ ಪಂಚಪ್ರಾಣ!

ವಿಡಿಯೋದಾಗ ನೋಡಿದ್ರ, ಬ್ರೆಟ್ ಮ್ಯುಲ್ಲರ್ ಎಷ್ಟೋ ಖುಷಿಯಾಗ್ಯಾರ ಅಂದ್ರ ಕೇಳಬೇಡ್ರಿ. "ನಾನು ಫಸ್ಟು 2014ರಾಗ ಬಂದಿದ್ದೆ ಇಲ್ಲಿ, ನನ್ನ ಚಾರ್ಟೆಡ್ ಅಕೌಂಟೆಂಟ್ ಹೇಳಿದ್ರು ಈ ಹೋಟೆಲ್ ಬಗ್ಗೆ. ಅವಾಗ ಹೊಸಬನಿದ್ದೆ ಇಲ್ಲಿ. ಆ ಊಟಾ ಇನ್ನು ನನ್ನ ಮನಿ ಒಳಗದ" ಅಂತ ಹೇಳತಾರ. ಊಟದ ಬಗ್ಗೆ ಹೇಳ್ತಾ, "ಈ ಪ್ಲೇಟ್ ಫುಲ್ ಹೊಸ ತರಕಾರಿ, ಸಖತ್ ಕ್ರಿಸ್ಪಿ ಸಲಾಡ್, ಭಾರಿ ಖಾರಾಖಾರವಾದ ಖಾದ್ಯಗಳಿಂದ ತುಂಬೈತಿ. ಜೋಳದ ರೊಟ್ಟಿಗೆ ಬೆಣ್ಣಿ ಕರಗಿ ಬಿದ್ದಿರೋದು, ಅದ್ರ ಜೋಡಿ ಬದನೆಕಾಯಿ ಪಲ್ಯ ಇರ್ತಲ್ಲಾ, ಆಹಾ! ಭಾರಿ ರುಚಿ" ಅಂತಾ ಕೊಂಡಾಡ್ಯಾರ.

ಯಾವನು ಬುರಿಟೋ, ಬೌಲ್ಸ್ ಅಂತಾ ತನ್ನ ಬಿಸಿನೆಸ್ ಕಟ್ಟಿಕೊಂಡ್ರೂ, ಮ್ಯುಲ್ಲರ್‌ಗೆ ನಮ್ಮ ಉತ್ತರ ಕರ್ನಾಟಕದ ಅಡುಗೆ ಅಂದ್ರ ಮನಿ ಮೂಲೇದಾಗ ಜಾಗ ಕೊಟ್ಟಾರ. ವರ್ಷಕ್ಕ ಎರಡರಿಂದ ಮೂರು ಸಲ ಬಸವನಗುಡಿಗ್ ಹೋಗಿ ಜೋಳದ ರೊಟ್ಟಿ ಊಟಾ ಮಾಡ್ತಾರಂತೆ. "ಬೆಂಗಳೂರಿನಾಗ ಹಿಂಗಿನ ಊಟಾ ಕೊಡುವಂತ ಭಾಳಾ ಹೋಟೆಲ್‌ಗಳು ಅದಾವ, ಆದ್ರ ಈ ಹೋಟೆಲ್ ಊಟಾ ಅಂದ್ರ ಬೇರೆ ತರಾನ ಐತಿ. ಭಾಳಾ ಚಲೋ ಐತಿ," ಅಂತ ನಗ್ತಾನೇ "ಹಿಂಗಿನ ಊಟಾ ತಿಂದ್ ಆದ್ಮ್ಯಾಲೆ ಜಿಮ್ಮು ಹೋಗೋ ಪ್ರಶ್ನೆನೇ ಇಲ್ಲ," ಅಂದ್ರು.

ಅಲ್ಲದೇ, ಊಟದ ಜೋಡಿ ಕೊಡುವ ಮಜ್ಜಿಗೆ ಬಗ್ಗೆನೂ ಹೇಳ್ಯಾರ. "ಸಾಮಾನ್ಯವಾಗಿ ನಮ್ಗೆ ಹಿಂಗಿನ ತರಾವರಿ ತರಕಾರಿ ಥಾಲಿ ಸಿಗೋದಿಲ್ಲ. ಇದು ಆರೋಗ್ಯಕ್ಕೂ ಚಲೋ, ಹೊಟ್ಟೆನೂ ತುಂಬುತಿ, ಭಾರಿ ರುಚಿನೂ ಐತಿ," ಅಂತ ಅಂದ್ರು.

ಊಟಾ ಎಷ್ಟೇ ಇಷ್ಟಾ ಆದ್ರೂ, ಬೆಂಗಳೂರಿನ ಟ್ರಾಫಿಕ್ ಅಂದ್ರ ಮ್ಯುಲ್ಲರ್‌ಗೆ ಇಷ್ಟಾ ಇಲ್ಲಾ. "ಈಗ ಟ್ರಾಫಿಕ್ ಇರ್ತದಲ್ಲಾ, ಅದಕ್ಕ ಬೇಗ ಹೋಗಾಕ್ ಆಟೋ ಏರ್ತೀನಿ," ಅಂದ್ರು ನೇರವಾಗಿ.

ಮ್ಯುಲ್ಲರ್ 2012ರಾಗ 22 ವರ್ಷದವನಿದ್ದಾಗ ಬೆಂಗಳೂರಿಗ್ ಬಂದು ಫಸ್ಟು ಕ್ಯಾಲಿಫೋರ್ನಿಯಾ ಬುರಿಟೋ ಔಟ್‌ಲೆಟ್ ಶುರುಮಾಡಿದ್ರು. ವರ್ಷದಿಂದ ವರ್ಷಕ್ಕೆ ಅವರ ಕಂಪನಿ ಭಾಳಾ ಬೆಳೆದೈತಿ. ಈಗ ಭಾರತದಾಗ 100ಕ್ಕಿಂತ ಹೆಚ್ಚು ಔಟ್‌ಲೆಟ್‌ಗಳು ಅದಾವ. ಸಿಎನ್‌ಬಿಸಿ ವರದಿ ಪ್ರಕಾರ, ಹಿಂದಿನ ವರ್ಷ $23 ಮಿಲಿಯನ್ ಆದಾಯ ಬಂದೈತಿ.

ಲಾಕ್‌ಡೌನ್ ಟೈಮ್ದಾಗ ಬೇರೆ ವ್ಯಾಪಾರಗಳ ಹಂಗ ಮ್ಯುಲ್ಲರ್ ಕಂಪನಿಗೂ ಭಾಳಾ ನಷ್ಟ ಆಗಿತ್ತು. 37 ಅಂಗಡಿಗಳಾಗ 19 ಅಂಗಡಿಗಳನ್ನ ಬಂದ್ ಮಾಡಿದ್ರು. ಆದ್ರೂ ಆಮೇಲೆ ಮತ್ತೆ ಜೋರಾಗಿ ವಾಪಸ್ ಬಂದ್ಯಾರ. 2021ರಾಗ ₹100ರ ಮೆನು ಕ್ಯಾಂಪೇನ್ ಶುರುಮಾಡಿದ್ರು, ಇನ್‌ಫ್ಲುಯೆನ್ಸರ್ಸ್‌ಗಳಿಂದ ಪ್ರಚಾರ ಮಾಡ್ಸಿದ್ರು. ಅದು ಭಾಳಾ ಸಕ್ಸಸ್ ಆಗಿ, ಜನ ಸಾಲುಗಟ್ಟಿದ್ರು. ಇತ್ತೀಚಿಗೆ ಅವರ 100ನೇ ಅಂಗಡಿ ಓಪನ್ ಮಾಡ್ಯಾರ.

ಹೀಂಗ ಐತಿ ನೋಡ್ರಿ ಅಮೆರಿಕದ ಸಿಇಒ ಮತ್ತು ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ ದೋಸ್ತಿ! ಚಲೋ ಅಲ್ವಾ?

ಜೋಳದ ರೊಟ್ಟಿ ಕುರಿತ ಚರ್ಚೆ ಕೇಳಬೇಕಾದರೆ ಕೆಳಗಿನ ಚಿತ್ರಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


PARYAYA: ಅಮೆರಿಕದ ಸಿಇಒಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದ್ರ ಜೀವ!:   ಅಮೆರಿಕದ ಸಿಇಒಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದ್ರ ಜೀವ! ಏ ನ್ರೀ ಸುದ್ದಿ ಅಂತೀರಾ ? ಅಮೆರಿಕಾದ ದೊಡ್ಡ ಕಂಪನಿ ಕ್ಯಾಲಿಫೋರ್ನಿಯಾ ಬುರಿಟೋ ಸಿಇಒ ಬ್ರೆಟ್ ಮ್ಯುಲ್ಲ...