"ಶ್ರೀರಾಮನ
ಬಿಲ್ಲನ್ನು ಮುರಿದವನಾರು.?"
ಇದನ್ನು
ಕೇಳಿದ ಸತೀಶ ಅಳುತ್ತಾ.."ನಾನಲ್ಲ ಸಾರ್ ನಾನಲ್ಲ.." ಎಂದ?.
ಉತ್ತರ
ಕೇಳಿದ BEO ಟೀಚರ್ ಮುಖವನ್ನು ದಿಟ್ಟಿಸುತ್ತ .."ಟೀಚರ್.!ಏನಿದು.?"
ಟೀಚರ್:
ಛೆ.ಛೆ!..ಇವನು ಆ ರೀತಿ ಮಾಡ್ಳಿಕ್ಕಿಲ್ಲ
ಸಾರ್.. ಇವನು ಒಳ್ಳೆಯ ಹುಡುಗ.. ಇವನನ್ನು ನಾನು ಚೆನ್ನಾಗಿ ಬಲ್ಲೆ.
ಸಿಟ್ಟಿನಿಂದ
BEO, HMನ್ನು ಕರೆಸಿದರು.
"ಹೇ ಏನಿದು.?
"ಹೇ ಏನಿದು.?
ಶ್ರೀರಾಮನ
ಬಿಲ್ಲನ್ನು ಮುರಿದವನಾರೆಂದು ಈ ಕ್ಲಾಸಿನ ಮಕ್ಕಳಿಗೆ
ಬಿಡಿ. ಟೀಚರಿಗೂ ತಿಳಿದಿಲ್ಲ."
HM ; "ಅದು..ಸಾರ್.. ಈ ಕ್ಲಾಸಿನ ಮಕ್ಕಳಾಗಿರಲ್ಲ.
6ಬಿ'ಯವರಾಗಿರಬಹುದು.. ಅವರು ಇದನ್ನಲ್ಲ..ಇದರಾಚೆದ್ದನ್ನೂ ಮಾಡುವರು..
BEO: ಶಾಲೆಯನ್ನು
ಬಂದ್ ಮಾಡಲು ನಿರ್ದೇಶಿಸಿ ಬರೆದರು.
HM Management ನವರ ಕರೆಸಿದರು.
Management ನವರು
BEOನೊಂದಿಗೆ..
"ದಯವಿಟ್ಟು
ಶಾಲೆ ಬಂದ್ ಮಾಡಿಸಬೇಡಿ ಸಾರ್..
ಬಿಲ್ಲಿನ
ಕ್ಯಾಶ್ ಎಷ್ಟಾದರೂ ನಾನು ಕೊಡುತ್ತೇನೆ..!!
BEO ಸಿಟ್ಟಿನಿಂದ
ಶಿಕ್ಷಣ ಮಂತ್ರಿ ಬಳಿ ಹೋದರು..ಶಾಲೆಯಲ್ಲಿ ನಡೆದ ವಿಷಯ ತಿಳಿಸಿದರು..
ಶಿಕ್ಷಣ
ಮಂತ್ರಿಗಳು: ಏಯ್ ಮಕ್ಕಳು ಅಂದ ಮೇಲೆ ತರ್ಲೆಗಳು ಇದ್ದೇ ಇರುತ್ತಾರೆ..
ಅದು
ಗೊತ್ತಿದ್ದೂ ಶ್ರೀ ರಾಮ ಯಾಕೆ ಅಲ್ಲಿಗೆ ಬಿಲ್ಲು ತಗೊಂಡು ಹೋಗಿದ್ದ...?
-ವ್ಯಾಟ್ಸ್
ಆ್ಯಪಿನಲ್ಲಿ ನೆತ್ರಕೆರೆ ಗಣೇಶ ಭಟ್