ನಾನು ಮೆಚ್ಚಿದ ವಾಟ್ಸಪ್

Wednesday, June 7, 2017

ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು

ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ

 ಆರ್ಥಿಕ ನೆರವು

ಬೆಂಗಳೂರು:  ಬೆಂಗಳೂರು ಜಯನಗರದ ಕೆಎಸ್ ಪಿ ಚಾರಿಟೇಬಲ್ ಟ್ರಸ್ಟ್ ಕಲೆ, ವಿಜ್ಞಾನ, ತತ್ವಜ್ಞಾನ, ಲಲಿತಕಲೆ ಮತ್ತು ವೃತ್ತಿ ಶಿಕ್ಷಣ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಯಾವುದೇ ಜಾತಿ, ಮತ, ಪ್ರದೇಶ, ಲಿಂಗ ಭೇದವಿಲ್ಲದೆ ಟ್ರಸ್ಟ್ ನೆರವು ನೀಡುತ್ತದೆ.

ಆಸಕ್ತರು ಅರ್ಜಿಫಾರಂಗಳನ್ನು ನಂ.290,  34ನೇ ಕ್ರಾಸ್, 9ನೇ ಮೆಯಿನ್, ಜಯನಗರ, ಬೆಂಗಳೂರು-560011 ವಿಳಾಸದಲ್ಲಿ ಮಂಗಳವಾರ/ ಗುರುವಾರ ಸಂಜೆ 6.30-7.30 ಅಥವಾ ಭಾನುವಾರ ಬೆಳಗ್ಗೆ 9.30-11.30ರ ಅವಧಿಯಲ್ಲಿ ಪಡೆಯಬಹುದು ಇಲ್ಲವೇ ಟ್ರಸ್ಟ್  ವೆಬ್ ಸೈಟ್  www.kspctrust.org ಇಲ್ಲಿಂದ ಡೌನ್ ಲೋಡ್ ಮಾಡಬಹುದು. 

10 ರೂ. ಅಂಚೆಚೀಟಿ ಹಚ್ಚಿದ ಸ್ವ ವಿಳಾಸದ ಲಕೋಟೆಯ ಜತೆಗೆ ಅರ್ಜಿಯನ್ನು ಕಳುಹಿಸುವಂತೆ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್. ವಿಜಯಲಕ್ಷ್ಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವರಗಳಿಗೆ ಸಂಪರ್ಕಿಸಿ:  ಮೊಬೈಲ್  9449985158 / 08026532516.


No comments:

Post a Comment