ಸಿಆರ್ಪಿಎಫ್ ನಿಂದ 4 ಉಗ್ರರ
ಹತ್ಯೆ,
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ
ಸಂಬಲ್ ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮೇಲೆ ದಾಳಿ ನಡೆಸಲು ಯತ್ನಿಸಿದ ನಾಲ್ವರು
ಭಯೋತ್ಪಾದಕರನ್ನು ಭಾರತೀಯ ಯೋಧರು ಹತ್ಯೆಗೈದ ಘಟನೆ ಸೋಮವಾರ, 5 ಜೂನ್ 2017ರ ನಸುಕಿನಲ್ಲಿ ಘಟಿಸಿದೆ.
ನಸುಕಿನ 4 ಗಂಟೆ ಸುಮಾರಿಗೆ
ನಡೆದ ಉಗ್ರರ ದಾಳಿಗೆ ಸೂಕ್ತ ಉತ್ತರ ನೀಡಿದ ಸಿಆರ್ಪಿಎಫ್ ಸಿಬ್ಬಂದಿ ನಾಲ್ಕು ಮಂದಿ ಉಗ್ರಗಾಮಿಗಳನ್ನು
ಕೊಂದು ಬಳಿಕ “ಭಾರತ ಮಾತಾ ಕಿ ಜಯ್’ ಘೋಷಣೆ ಕೂಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಸತ್ತ ಉಗ್ರರ ಬಳಿ ಇದ್ದ 4
ಎಕೆ ರೈಫಲ್, ಒಂದು ಯುಬಿಜಿಎಲ್ ಮತ್ತು ಇತರ ಮದ್ದುಗುಂಡನ್ನು ಯೋಧರು ವಶ ಪಡಿಸಿಕೊಂಡಿದ್ದಾರೆ.
Read:
www.paryaya.com
No comments:
Post a Comment