ವಿಶ್ವಸಂಸ್ಥೆ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ
ಸ್ವರಾಜ್ ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಕಟುವಾಗಿತರಾಟೆಗೆ
ತೆಗೆದುಕೊಂಡ ಬೆನ್ನಲ್ಲೇ ಪಾಕಿಸ್ತಾನವು ವಿಶ್ವಸಂಸ್ಥೆಯ 72ನೇ ಮಹಾ ಅಧಿವೇಶನದಲ್ಲಿ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಕೆದಕಿದೆ.
ಅಷ್ಟೇ ಅಲ್ಲ, “ಭಾರತವು ಭಯೋತ್ಪಾದನೆಯ ಮಾತೆ’ ಎಂದು ಟೀಕಿಸಿದೆ.
ಸುಷ್ಮಾ ಸ್ವರಾಜ್ ಅವರ ಕಟು ಟೀಕೆಗಳಿಗೆ ಉತ್ತರ ನೀಡಿದ ವಿಶ್ವ ಸಂಸ್ಥೆಯಲ್ಲಿನ ಪಾಕಿಸ್ತಾನದ ಕಾಯಂ ಪ್ರತಿನಿಧಿ ಡಾ. ಮಲಿಹಾ ಲೋಧಿ ಅವರು “ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತದ ಸಮರ ಅಪರಾಧಗಳ ಬಗ್ಗೆ ಅಂತಾರಾಷ್ಟ್ರೀಯ ತನಿಖೆಯಾಗಲಿ ಎಂದು ಹೇಳಿದ್ದಾರೆ.
ಕಲಹಪ್ರಿಯ ಪಾಕಿಸ್ತಾನದ ಪ್ರತಿನಿಧಿ ಮಲಿಹಾ ಲೋಧಿ ಅವರ ಕೆಲವು ‘ಅಣಿಮುತ್ತುಗಳು’ ಇಂತಿವೆ:
·
* ಭಾರತ ದಕ್ಷಿಣ ಏಷ್ಯಾದಲ್ಲಿನ ಭಯೋತ್ಪಾದನೆಯ ಮಾತೆ.
·
* ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿರುವ ಭಾರತವು ವಾಸ್ತವದಲ್ಲಿ ಅತ್ಯಂತ ದೊಡ್ಡ ಬೂಟಾಟಿಕೆಯ ರಾಷ್ಟ್ರ.
·
* ಕಾಶ್ಮೀರದಲ್ಲಿ ಭಾರತ ಸರ್ಕಾರಿ ಪ್ರಾಯೋಜಿತ ಹಿಂಸೆ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಮೂಲ ವಿಷಯವನ್ನು ಮರೆ ಮಾಚುತ್ತಿದೆ. (ಪೆ್ಲ್ಲೆಟ್ / ಬುಲ್ಲೆಟ್ ಗಾಯದ ಮಹಿಳೆಯೊಬ್ಬಳ ಫೊಟೋ ತೋರಿಸಿ “ಇದು ನೋಡಿ ಭಾರತದ ಮುಖ’ ಎಂದರು).
·
*ಮೋದಿ ಸರ್ಕಾರ ವರ್ಣೀಯ ಮತ್ತು ಫ್ಯಾಸಿಸ್ಟ್ ಸಿದ್ಧಾಂತದಲ್ಲಿ ನೆಡಲ್ಪಟ್ಟಿರುವ ಸರ್ಕಾರ.
(ಹೆಚ್ಚಿನ ವಿವರಗಳಿಗೆ ಓದಿರಿ:www.paryaya.com)
(ಹೆಚ್ಚಿನ ವಿವರಗಳಿಗೆ ಓದಿರಿ:www.paryaya.com)
No comments:
Post a Comment