ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಒಂದು ವರ್ಷದಿಂದ ಯಕ್ಷಗಾನ ತರಗತಿಗಳನ್ನು ನಡೆಸುತ್ತಿರುವ ಯಕ್ಷಗುರು ಉಮೇಶರಾಜ್ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭʼಕ್ಕೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ.
ಪ್ರಥಮ ವಾರ್ಷಿಕೋತ್ಸವದ ನೆನಪಿಗಾಗಿ ಬಡಾವಣೆಯ 6ನೇ ಅಡ್ಡರಸ್ತೆಯಲ್ಲಿರುವ ದೇವಸ್ಥಾನದ ಆವರಣದಲ್ಲೇ ೨೦೨೬ ನವೆಂಬರ್ ೧೫ರ (ನ.15) ಭಾನುವಾರ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಅಂದು ಸಂಜೆ 4.30ರಿಂದ ರಾತ್ರಿ 8.30ರವರೆಗೆ ಕಾರ್ಯಕ್ರಮ ನಡೆಯಲಿದೆ.
ಸಂಜೆ ೪.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗುವ ವಾರ್ಷಿಕೋತ್ಸವ ಸಂಭ್ರಮದಲ್ಲಿ ೫ರಿಂದ ೬ರ ತನಕ ಸಭಾ ಕಾರ್ಯಕ್ರಮ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ಬೃಹತ್ ಬೆಂಗಳೂರು ಅಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಮತ್ತು ಶ್ರೀಮತಿ ಮೀನಾಕ್ಷಿ ಕೃಷ್ಣ ಬೈರೇಗೌಡ ಅವರು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಯಕ್ಷಗಾನ ಕ್ಷೇತ್ರದ ಹಿರಿಯ ಖ್ಯಾತ ಯಕ್ಷಗುರುಗಳಾದ ಶ್ರೀ ಮಂಜುನಾಥ ಕುಲಾಲ್ ಐರೋಡಿ ಅವರನ್ನು ಅವರ ಕಲಾ ಸೇವೆಗಾಗಿ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮವನ್ನೂ ಯಕ್ಷ ಕಲಾ ಕೌಸ್ತುಭ ತಂಡವು ಹಮ್ಮಿಕೊಂಡಿದೆ. ಐರೋಡಿ ಅವರ ಬಗೆಗಿನ ವಿಡಿಯೋ ಒಂದನ್ನು ಇಲ್ಲಿ ನೋಡಬಹುದು.
ಬಳಿಕ ಕಳೆದ ಒಂದು ವರ್ಷದ ಅವಧಿಯಲ್ಲಿ ಇಲ್ಲಿ ಯಕ್ಷಗಾನ ಕಲಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ʼಭಾರತ ರತ್ನ ವೀರ ಅಭಿಮನ್ಯುʼ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎನ್.ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾನೂನು ಸಲಹೆಗಾರ ವಿ.ಮುನಿರಾಜು, ಕಾರ್ಯದರ್ಶಿ ರಾಜೇಶ ಕೆ.ಹೆಗಡೆ, ಟ್ರಸ್ಟಿಗಳಾದ ನೆತ್ರಕೆರೆ ಉದಯಶಂಕರ ನಾರಾಯಣ ಭಟ್, ಕೆ.ಪಿ.ಸುಗುಣನ್ ಉಪಸ್ಥಿತರಿರುವರು.
ವಾರ್ಷಿಕೋತ್ಸವ ಸಿದ್ಧತೆಯ ಹಿನ್ನೆಲೆಯಲ್ಲಿ ಯಕ್ಷಗಾನ ಕಲಿಯುತ್ತಿರುವ ಮಕ್ಕಳ ಸೃಜನಾತ್ಮಕ ಪ್ರತಿಭೆಯ ಕೆಲವು ವಿಡಿಯೋ ಹಾಗೂ ಚಿತ್ರಗಳು ಇಲ್ಲಿವೆ.
PARYAYA: ಯಕ್ಷ ಕಲಾ ಕೌಸ್ತುಭಕ್ಕೆ ವಾರ್ಷಿಕೋತ್ಸವ ಸಂಭ್ರಮ: ಯಕ್ಷ ಕಲಾ ಕೌಸ್ತುಭಕ್ಕೆ ವಾರ್ಷಿಕೋತ್ಸವ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂ...

No comments:
Post a Comment