Saturday, October 18, 2025

PARYAYA: ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ

 ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ನವೆಂಬರ್‌ 26ರ ಭಾನುವಾರ ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿಗಳು ಆರಂಭವಾಗಲಿವೆ.
ತರಗತಿಗಳು ನವೆಂಬರ್‌ 26ರಿಂದ ಪ್ರತೀ ಭಾನುವಾರ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ನಡೆಯಲಿವೆ.

ಯಕ್ಷಗಾನವು ಕರ್ನಾಟಕದ ಪರಂಪರಾಗತ ಹೆಮ್ಮೆಯ ಶ್ರೀಮಂತ ಕಲೆ. ಇದನ್ನು ಕಲಿಯಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಉಮೇಶ್‌ ರಾಜ್‌ ಮಂದಾರ್ತಿ (ಫೋನ್‌ ನಂಬರ್:‌9663671591) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಯಕ್ಷ ಕಲಾ ಕೌಸ್ತುಭ ಗುರುಗಳು ಮಾಗಡಿ ರಸ್ತೆ ಹುಲಿಯೂರು ದುರ್ಗದ ದೇವ ಪಟ್ಟಣ ಶ್ರೀವಿದ್ಯಾ ಚೌಡೇಶ್ವರಿ ದೇವಾಲಯದಲ್ಲಿ ನೀಡಿದ ಯಕ್ಷಗಾನ ಸೇವೆ ಒಂದರ ಝಲಕ್‌ ಇಲ್ಲಿದೆ.

PARYAYA: ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ:   ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇ...

No comments:

Post a Comment