Saturday, May 31, 2025

PARYAYA: ಭಾರತದ ‘ಹುಲಿ ಸಂರಕ್ಷಕ’ ವಾಲ್ಮೀಕ್ ಥಾಪರ್ ಇನ್ನಿಲ್ಲ

 ಭಾರತದ ‘ಹುಲಿ ಸಂರಕ್ಷಕ’ ವಾಲ್ಮೀಕ್ ಥಾಪರ್ ಇನ್ನಿಲ್ಲ

ವದೆಹಲಿ: ಭಾರತದ ಖ್ಯಾತ ʼಹುಲಿ ಸಂರಕ್ಷಕʼ ಮತ್ತು ಲೇಖಕ ವಾಲ್ಮೀಕ್ ಥಾಪರ್ ಅವರು 2025 ಮೇ 31ರ ಶನಿವಾರ ಬೆಳಗ್ಗೆ ದೆಹಲಿಯಲ್ಲಿ ನಿಧನರಾದರು. 1970 ರ ದಶಕದ ಮಧ್ಯಭಾಗದಿಂದ ಭಾರತದಲ್ಲಿ ಹುಲಿ ಸಂರಕ್ಷಣೆಯಲ್ಲಿ ಅವರು ಮುಂಚೂಣಿಯಲ್ಲಿದ್ದರುಕೇಂದ್ರ ಮತ್ತು ರಾಜ್ಯ ಸರ್ಕಾರಗಳ 150 ಕ್ಕೂ ಹೆಚ್ಚು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು.
ಆಫ್ರಿಕಾದ ಕುರಿತು ನಾಲ್ಕು ಪುಸ್ತಕಗಳನ್ನು ಒಳಗೊಂಡಂತೆ 32 ಪುಸ್ತಕಗಳನ್ನು ಥಾಪರ್ ಬರೆದಿದ್ದಾರೆ. 'ಲಿವಿಂಗ್ ವಿತ್ ಟೈಗರ್ಸ್', 'ದಿ ಸೀಕ್ರೆಟ್ ಲೈಫ್ ಆಫ್ ಟೈಗರ್ಸ್ಅವುಗಳಲ್ಲಿ ಸೇರಿವೆ.
ಅವರ ಪ್ರಭಾವ ವ್ಯಾಪಕವಾಗಿತ್ತುಅವರು ರಾಜಸ್ಥಾನದಲ್ಲಿ ರಾಜ್ಯ ಸರ್ಕಾರದೊಂದಿಗೆ ಬಹುತೇಕ ಪ್ರತ್ಯೇಕವಾಗಿ ಕೆಲಸ ಮಾಡಿದರೂಮಹಾರಾಷ್ಟ್ರದ ಪ್ರೀತಿಯ ತಡೋಬಾ-ಅಂಧಾರಿ ಟೈಗರ್ ರಿಸರ್ವ್‌ನಂತಹ ಇತರ ಉದ್ಯಾನವನಗಳ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು” ಎಂದು ಸ್ಯಾಂಕ್ಚುರಿ ನೇಚರ್ ಫೌಂಡೇಶನ್ ತಿಳಿಸಿದೆ.
"ಎಲ್ಲಾ ಪ್ರವಾಸೋದ್ಯಮವೂ ಕೆಟ್ಟ ಪ್ರವಾಸೋದ್ಯಮ ಎಂಬ ಮೂಢನಂಬಿಕೆಯ ದೃಷ್ಟಿಕೋನವನ್ನು ಥಾಪರ್ ತ್ಯಜಿಸಿದ್ದರು ಮತ್ತು ಉದ್ಯಾನವನಗಳು ಮತ್ತು ಜನರಿಗೆ ಪ್ರಯೋಜನವನ್ನು ನೀಡುವ ನವೀನ ಪ್ರವಾಸೋದ್ಯಮದ ಪ್ರಮುಖ ಪ್ರತಿಪಾದಕರಾಗಿದ್ದರು. ವಿಜ್ಞಾನಿಗಳುಕಾರ್ಯಕರ್ತರುಗ್ರಾಮ ಮುಖಂಡರುಅರಣ್ಯ ಅಧಿಕಾರಿಗಳುಅಧಿಕಾರಿಗಳುರಾಜಕಾರಣಿಗಳು ಮತ್ತು ಮುಕ್ತ ಪತ್ರಿಕಾ ಸೇರಿದಂತೆ ಸಮಾನ ಮನಸ್ಸಿನ ಜನರ ವಿವಿಧ ವಲಯಗಳ ಗುಂಪನ್ನು ಒಟ್ಟುಗೂಡಿಸುವ ಮೂಲಕ ಮಾತ್ರ ಇದೆಲ್ಲವೂ ಸಾಧ್ಯ ಎಂದು ಅವರು ದೃಢವಾಗಿ ನಂಬಿದ್ದರು" ಎಂದು ಫೌಂಡೇಶನ್ ಹೇಳಿದೆ.
ಅವರು ದೂರದರ್ಶನಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಿರ್ಮಿಸಿದ್ದರು. ಭಾರತದ ಅತ್ಯಂತ ಗೌರವಾನ್ವಿತ ವನ್ಯಜೀವಿ ತಜ್ಞರು ಮತ್ತು ಸಂರಕ್ಷಣಾವಾದಿಗಳಲ್ಲಿ ಥಾಪರ್‌ ಒಬ್ಬರಾಗಿದ್ದರು. ಅವರು  ಬಿಬಿಸಿಅನಿಮಲ್ ಪ್ಲಾನೆಟ್ಡಿಸ್ಕವರಿ ಮತ್ತು ನ್ಯಾಷನಲ್ ಜಿಯಾಗ್ರಫಿಕ್‌ನಂತಹ ಮಾಧ್ಯಮಗಳಿಗೆ ಭಾರತದ ನೈಸರ್ಗಿಕ ಆವಾಸಸ್ಥಾನದ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರೂಪಣೆ ಮಾಡಿದ್ದಾರೆ.
ವಾಲ್ಮೀಕ್ ಥಾಪರ್ ಬಾಂಬೆಯಲ್ಲಿ (ಈಗಿನ ಮುಂಬೈ) 1959 ರಲ್ಲಿ ʼಸೆಮಿನಾರ್ʼ ರಾಜಕೀಯ ಜರ್ನಲ್ ಸ್ಥಾಪಿಸಿದ್ದ ರೊಮೇಶ್ ಥಾಪರ್- ರಾಜ್ ದಂಪತಿಗೆ 1952ರಲ್ಲಿ ಜನಿಸಿದರು. ಪ್ರಸಿದ್ಧ ಭಾರತೀಯ ಇತಿಹಾಸಕಾರರಾದ ರೋಮಿಲಾ ಥಾಪರ್ ಅವರ ಚಿಕ್ಕಮ್ಮ.
ಅವರು ರಂಗಭೂಮಿ ಹಾಗೂ ಚಿತ್ರ ನಟಿ ಸಂಜನಾ ಕಪೂರ್ ಅವರನ್ನು ವಿವಾಹವಾದರು. ದಂಪತಿಗೆ ಹಮೀರ್ ಎಂಬ ಮಗನಿದ್ದಾನೆ. ಅವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ಫತೇಹ್ ಸಿಂಗ್ ರಾಥೋಡ್ ಅವರಿಂದ ವಾಲ್ಮೀಕ್ ಥಾಪರ್ ಪ್ರಭಾವಿತರಾಗಿದ್ದರು.
ರಣಥಂಬೋರ್ ಪ್ರತಿಷ್ಠಾನದ ಅವರ ಉಸ್ತುವಾರಿಯನ್ನು ಗುರುತಿಸಿ, 2005 ರಲ್ಲಿ ಟೈಗರ್ ಟಾಸ್ಕ್ ಫೋರ್ಸ್‌ನ ಸದಸ್ಯರನ್ನಾಗಿ ಭಾರತ ಸರ್ಕಾರ ನೇಮಿಸಿತು. ಟಾಸ್ಕ್‌ ಫೋರ್ಸ್‌ ನೀಡಿದ ಬಹುಮತದ ತೀರ್ಪಿಗೆ ವಿರುದ್ಧವಾಗಿ ಅವರು ತಮ್ಮ ಭಿನ್ನಮತದ ಟಿಪ್ಪಣಿಯನ್ನು ಬರೆದಿದ್ದರು. ಬಳಿಕ 1973ರಲ್ಲಿ ಭಾರತ ಸರ್ಕಾರ ರಚಿಸಿದ್ದ ಪ್ರಾಜೆಕ್ಟ್‌ ಟೈಗರ್‌ ವಿಫಲಗೊಂಡದ್ದೇಕೆ ಎಂದು ವಿಶ್ಲೇಷಿಸುವ ಮೂಲಕ ಅವರು ಗಮನ ಸೆಳೆದಿದ್ದರು.
'ಮ್ಯಾಚ್ಲಿಎಂಬ ಹೆಣ್ಣು ಹುಲಿಯೊಂದಿಗಿನ ಅವರ ಪ್ರಸಿದ್ಧ ಒಡನಾಟವು ಹಲವಡೆ ದಾಖಲಾಗಿದೆ. ಥಾಪರ್ ಅವರ ಅತ್ಯಂತ ಪ್ರೀತಿಯ ಹುಲಿಗಳನ್ನು ಬಿಬಿಸಿ ಸಾಕ್ಷ್ಯಚಿತ್ರ ʼಮೈ ಟೈಗರ್ ಫ್ಯಾಮಿಲಿʼ 👇ಎತ್ತಿ ತೋರಿಸಿತ್ತು.


ಕೆಳಗಿನದನ್ನೂ ಕ್ಲಿಕ್‌ ಮಾಡಿ ನೋಡಿರಿ


PARYAYA: ಭಾರತದ ‘ಹುಲಿ ಸಂರಕ್ಷಕ’ ವಾಲ್ಮೀಕ್ ಥಾಪರ್ ಇನ್ನಿಲ್ಲ:   ಭಾರತದ ‘ಹುಲಿ ಸಂರಕ್ಷಕ’ ವಾಲ್ಮೀಕ್ ಥಾಪರ್ ಇನ್ನಿಲ್ಲ ನ ವದೆಹಲಿ: ಭಾರತದ ಖ್ಯಾತ ʼ ಹುಲಿ ಸಂರಕ್ಷಕ ʼ ಮತ್ತು ಲೇಖಕ ವಾಲ್ಮೀಕ್ ಥಾಪರ್ ಅವರು 2025 ಮೇ 31ರ ಶನಿವಾರ ಬೆಳ...

Thursday, May 29, 2025

PARYAYA: ಬ್ರಹ್ಮೋಸ್‌ ದಾಳಿ: ಕಡೆಗೂ ಒಪ್ಪಿಕೊಂಡ ಪಾಕ್‌ ಪ್ರಧಾನಿ

 ಬ್ರಹ್ಮೋಸ್‌ ದಾಳಿ: ಕಡೆಗೂ ಒಪ್ಪಿಕೊಂಡ ಪಾಕ್‌ ಪ್ರಧಾನಿ

ವದೆಹಲಿ: ಭಾರತವು ಪಾಕಿಸ್ತಾನದ ಮೇಲೆ ಬ್ರಹೋಸ್‌ ಕ್ಷಿಪಣಿ ದಾಳಿ ನಡೆಸಿದ್ದು ನಿಜ ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಕಡೆಗೂ ಒಪ್ಪಿಕೊಂಡಿದ್ದಾರೆ.
ಅಜೆರ್ಬೈಜಾನ್‌ನಲ್ಲಿ 2025 ಮೇ 26ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಭಾರತದ ಬ್ರಹ್ಮೋಸ್‌ ಕ್ಷಿಪಣಿ ದಾಳಿಯನ್ನು ಒಪ್ಪಿಕೊಂಡರು.
ʼಪಾಕಿಸ್ತಾನದ ಸಶಸ್ತ್ರ ಪಡೆಗಳು ಬೆಳಗಿನ ಪ್ರಾರ್ಥನೆಗೆ ಮುನ್ನ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿದ್ದವುಆದರೆ ಅದು ಸಾಧ್ಯವಾಗುವ ಮೊದಲೇ ಪಾಕಿಸ್ತಾನದ ಹಲವಾರು ಪ್ರಾಂತ್ಯಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳ ದಾಳಿ ನಡೆದವುʼ ಎಂದು ಶೆಹಬಾಜ್‌ ಹೇಳಿದರು.
"ಮೇ 9-10ರ ರಾತ್ರಿನಾವು ಭಾರತದ ಆಕ್ರಮಣಕ್ಕೆ ವ್ಯವಸ್ಥಿತವಾಗಿ ಪ್ರತಿಕ್ರಿಯಿಸಲು ನಿರ್ಧರಿಸಿದ್ದೆವು. ಫಜ್ರ್ ಪ್ರಾರ್ಥನೆಯ ನಂತರ ಬೆಳಿಗ್ಗೆ 4.30ಕ್ಕೆ ನಮ್ಮ ಸಶಸ್ತ್ರ ಪಡೆಗಳು ಪಾಠ ಕಲಿಸಲು ಸಿದ್ಧವಾಗಿದ್ದವು. ಆದರೆ ಆ ಗಂಟೆ ಬರುವ ಮೊದಲೇಭಾರತ ಮತ್ತೊಮ್ಮೆ ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡಿತು" ಎಂದು ಷರೀಫ್ ತಮ್ಮ ಭಾಷಣದಲ್ಲಿ ಹೇಳಿದರು.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಅಸು ನೀಗಿದ ಬಳಿಕ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಪ್ರಾರಂಭಿಸಿತುಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಯಮಲೋಕಕ್ಕೆ ಅಟ್ಟಿತ್ತು.
 ಈ ಕಾರ್ಯಾಚರಣೆಯಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸುತ್ತಿದ್ದ ಮತ್ತು ನಿರ್ದೇಶಿಸುತ್ತಿದ್ದ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಲಾಯಿತು.
ಇದು ನಾಲ್ಕು ದಿನಗಳ ಘರ್ಷಣೆಗೆ ಕಾರಣವಾಯಿತು, ಉಭಯ ಕಡೆಗಳೂ ಡ್ರೋನ್‌ಗಳುಕ್ಷಿಪಣಿಗಳು ಮತ್ತು ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಬಳಸಿದವು. ಇದರಿಂದ ಸಂಪೂರ್ಣ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು.
ಮೇ 10 ರಂದುಭಾರತದ ಸೇನೆಯು ಅದೇ ದಿನದ ನಸುಕಿನಲ್ಲಿ ಹಲವಾರು ಮಿಲಿಟರಿ ಸೌಲಭ್ಯಗಳ ಮೇಲೆ ಪಾಕಿಸ್ತಾನ ನಡೆಸಿದ ವಿಫಲ ದಾಳಿಗೆ ಪ್ರತೀಕಾರವಾಗಿ ಮುರಿಯದ್ ಮತ್ತು ನೂರ್ ಖಾನ್ ವಾಯುನೆಲೆಗಳು ಸೇರಿದಂತೆ ಎಂಟು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ದಾಳಿ ನಡೆಸಿತು.
ಭಾರತೀಯ ವಾಯುಪಡೆಯ ದಾಳಿಯ ಗುರಿಗಳಲ್ಲಿ ರನ್‌ವೇಗಳುಹ್ಯಾಂಗರ್‌ಗಳುಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳುರಾಡಾರ್ ನೆಲೆಗಳುಕ್ಷಿಪಣಿ ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಪ್ರದೇಶಗಳು ಸೇರಿದ್ದವು. ಆ ದಿನದ ನಂತರ ಪಾಕಿಸ್ತಾನದ ಮೊರೆಯನ್ನು ಅನುಸರಿಸಿ, ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು.

ಇವುಗಳನ್ನೂ ಓದಿರಿ: 
ಆಪರೇಷನ್‌ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ
ಆಪರೇಷನ್‌ ಸಿಂಧೂರ IN ತುಳು…

ಯೋಜನೆತರಬೇತಿಅನುಷ್ಠಾನ: ಸಂದಿತು ನ್ಯಾಯ
ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್
ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
"ಷರತ್ತುಬದ್ಧ" ಕದನ ವಿರಾಮಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

PARYAYA: ಬ್ರಹ್ಮೋಸ್‌ ದಾಳಿ: ಕಡೆಗೂ ಒಪ್ಪಿಕೊಂಡ ಪಾಕ್‌ ಪ್ರಧಾನಿ:   ಬ್ರಹ್ಮೋಸ್‌ ದಾಳಿ: ಕಡೆಗೂ ಒಪ್ಪಿಕೊಂಡ ಪಾಕ್‌ ಪ್ರಧಾನಿ ನ ವದೆಹಲಿ: ಭಾರತವು ಪಾಕಿಸ್ತಾನದ ಮೇಲೆ ಬ್ರಹೋಸ್‌ ಕ್ಷಿಪಣಿ ದಾಳಿ ನಡೆಸಿದ್ದು ನಿಜ ಎಂಬುದಾಗಿ ಪಾಕಿಸ್ತಾನದ ಪ್...

Tuesday, May 27, 2025

PARYAYA: ಕಟ್ಟಿಗೆ ಸೋಮೀ, ಕಟ್ಟಿಗೆ…!

 ಕಟ್ಟಿಗೆ ಸೋಮೀ, ಕಟ್ಟಿಗೆ…!

ಇದು ಸುವರ್ಣ ನೋಟ!

ವಿಯ ಕಣ್ಣಿಗೆ ಕಾಣದ್ದು ಕವಿಯ ಕಣ್ಣಿಗೆ ಕಾಣುತ್ತದಂತೆ. ಕವಿಯ ಕಣ್ಣಿಗೆ ಕಾಣದ್ದು?

ಛಾಯಾಗ್ರಾಹಕನ ಕಣ್ಣಿಗೆ ಕಾಣುತ್ತದೆ ನೋಡಿ.

ವಿಧಾನ ಸೌಧದ ಮುಂದೆ ಕಟ್ಟಿಗೆ ಸೋಮೀ ಕಟ್ಟಿಗೆ ಎನ್ನುತ್ತಾ ಕಟ್ಟಿಗೆ ಹೊರೆ ಹೊತ್ತುಕೊಂಡು ಹೋಗುವ  ದೃಶ್ಯ ಕಂಡದ್ದು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಅಂತರದೃಷ್ಟಿಗೆ. ತಕ್ಷಣ ಅದನ್ನು ಸೆರೆ ಹಿಡಿದದ್ದು ಅವರ ಕ್ಯಾಮರಾ ಕಣ್ಣು. 

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.




ಕೆಳಗಿನವುಗಳನ್ನೂ ಓದಿರಿ: 
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ

ಬದುಕಿನ ಹೋರಾಟ….!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಡಾ. ರಾಜಕುಮಾರ್ ಆರೋಗ್ಯ ಸೂತ್ರ…!

ಕಥೆ ಹೇಳುವೆ… ನನ್ನ ಕಥೆ ಹೇಳುವೆ..!

ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

PARYAYA: ಕಟ್ಟಿಗೆ ಸೋಮೀ, ಕಟ್ಟಿಗೆ…!:   ಕಟ್ಟಿಗೆ ಸೋಮೀ, ಕಟ್ಟಿಗೆ…! ಇದು ಸುವರ್ಣ ನೋಟ! ರ ವಿಯ ಕಣ್ಣಿಗೆ ಕಾಣದ್ದು ಕವಿಯ ಕಣ್ಣಿಗೆ ಕಾಣುತ್ತದಂತೆ. ಕವಿಯ ಕಣ್ಣಿಗೆ ಕಾಣದ್ದು? ಛಾಯಾಗ್ರಾಹಕನ ಕಣ್ಣಿಗೆ ಕಾಣು...

PARYAYA: ಆಪರೇಷನ್‌ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ

 ಆಪರೇಷನ್‌ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ

ಪಾಕಿಸ್ತಾನದ ಭೂಪ್ರದೇಶದೊಳಗಿನ ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಭಾರತ ನಡೆಸಿದ ಗುರಿ ದಾಳಿಗಳನ್ನು ಮತ್ತು ಪಾಕಿಸ್ತಾನ ರೇಂಜರ್‌ಗಳು ಗುಂಡಿನ ದಾಳಿಯಿಂದ ಪಲಾಯನ ಮಾಡುತ್ತಿರುವುದನ್ನು ತೋರಿಸುವ ಆಪರೇಷನ್ ಸಿಂಧೂರ್‌ನ ಸೇನಾ ಕಾರ್ಯಾಚರಣೆಯ ಹೊಸ ವಿಡಿಯೋವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಿಡುಗಡೆ ಮಾಡಿದೆ.

೨೦೨೫ ಮೇ ೧೭ರ ಮಂಗಳವಾರ ಬಿಡುಗಡೆ ಮಾಡಲಾಗಿರುವ ಈ ವಿಡಿಯೋ, ಪಾಕಿಸ್ತಾನದೊಳಗೆ 2.2 ಕಿಲೋಮೀಟರ್‌ವರೆಗಿನ ಮೂರು ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಿಖರ ದಾಳಿಗಳನ್ನು ಮತ್ತು ಗಡಿಯಾಚೆಗಿನ ಪಾಕಿಸ್ತಾನಿ ಸೇನಾ ಠಾಣೆಗಳ ನಾಶವನ್ನು ಸೆರೆಹಿಡಿದಿದೆ.

ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ "ಶತ್ರು ಠಾಣೆಗಳನ್ನು ನಾಶಪಡಿಸಲಾಗಿದೆ" ಮತ್ತು ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳುವಿಕೆ ಪ್ರಯತ್ನಗಳನ್ನು ತಡೆಗಟ್ಟಲಾಗಿದೆ ಎಂದು ಜಮ್ಮು ಗಡಿನಾಡಿನ ಬಿಎಸ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ಶಶಾಂಕ್ ಆನಂದ್ ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ರೇಂಜರ್‌ಗಳು ತಮ್ಮ ಎಂದಿನ ಮುಂಚೂಣಿಯ ಸ್ಥಾನಗಳಿಂದ ಹಿಂದೆ ಸರಿದರುಆದರೆ ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಬಿಎಸ್‌ಎಫ್ ಪಡೆಗಳು ತಮ್ಮ ನೆಲೆಯನ್ನು ಭದ್ರವಾಗಿ ಹಿಡಿದುಕೊಂಡಿದ್ದರು ಎಂದು ಅಧಿಕಾರಿ ಹೇಳಿದರು.

" ಗಡಿ ಬೇಲಿಯ ಆಚೆಗಿನ ಪಾಕ್‌ ಸೇನಾ ಠಾಣೆಗಳನ್ನೂ ನಮ್ಮ ಸಿಬ್ಬಂದಿ ನಿಭಾಯಿಸಿದ್ದಾರೆ" ಎಂದು ಅವರು ಹೇಳಿದರು.

ಮೇ 8 ರಂದು ಗಡಿಯನ್ನು ಸಮೀಪಿಸುತ್ತಿರುವ ಭಯೋತ್ಪಾದಕರ ದೊಡ್ಡ ಗುಂಪಿನ ತೀವ್ರ ಚಟುವಟಿಕೆಯನ್ನು ಬಿಎಸ್‌ಎಫ್ ಗಮನಿಸಿತು. ಒಳನುಸುಳುವಿಕೆ ಸನ್ನಿಹಿತವಾಗಿದೆ ಎಂಬ ಗುಪ್ತಚರ ಮಾಹಿತಿಯ ಮೇರೆಗೆಬಿಎಸ್‌ಎಫ್ ಪಡೆಗಳು ಸರಣಿ ಮುಂಜಾಗ್ರತಾ ದಾಳಿಗಳನ್ನು ನಡೆಸಿದವು.

"ನಾವು ಮೇ 9 ಮತ್ತು 10 ರ ಮಧ್ಯರಾತ್ರಿ ಗಡಿಯ ಬಳಿ ಲಷ್ಕರ್‌ನ ಲೂನಿ ಭಯೋತ್ಪಾದಕ ಲಾಂಚ್‌ಪ್ಯಾಡ್ ಅನ್ನು ನಾಶಪಡಿಸಿದ್ದೇವೆ" ಎಂದು ಐಜಿ ಆನಂದ್ ಹೇಳಿದರು. "ಆರ್‌ಎಸ್ ಪುರ ಸೆಕ್ಟರ್‌ನ ಎದುರಿನ ಮಸ್ತ್‌ಪುರ್ ಎಂಬ ಮತ್ತೊಂದು ಲಾಂಚ್‌ಪ್ಯಾಡ್ ಅನ್ನು ಸಹ ನಾವು ನಾಶಪಡಿಸಿದ್ದೇವೆ. ನಮ್ಮ ಕಾರ್ಯಾಚರಣೆಯ ಸಮಯದಲ್ಲಿಪಾಕಿಸ್ತಾನಿ ರೇಂಜರ್‌ಗಳು ಓಡಿಹೋಗುತ್ತಿರುವುದು ಕಂಡುಬಂದಿದೆ" ಎಂದು ಅವರು ಹೇಳಿದರು.

ಇವುಗಳನ್ನೂ ಓದಿರಿ: 
ಆಪರೇಷನ್‌ ಸಿಂಧೂರ IN ತುಳು…

ಯೋಜನೆತರಬೇತಿಅನುಷ್ಠಾನ: ಸಂದಿತು ನ್ಯಾಯ
ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್
ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
"ಷರತ್ತುಬದ್ಧ" ಕದನ ವಿರಾಮಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

PARYAYA: ಆಪರೇಷನ್‌ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ:   ಆಪರೇಷನ್‌ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ ಪಾ ಕಿಸ್ತಾನದ ಭೂಪ್ರದೇಶದೊಳಗಿನ ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಭಾರತ ನಡೆಸಿದ ಗುರಿ ದಾಳಿಗಳನ್ನು ಮತ್ತ...

Sunday, May 25, 2025

PARYAYA: ಆಪರೇಷನ್‌ ಸಿಂಧೂರ IN ತುಳು…

 ಆಪರೇಷನ್‌ ಸಿಂಧೂರ IN.... ತುಳು

ದು ಮೈ ನವಿರೇಳಿಸುವ, ಕಣ್ಣಂಚಿನಲ್ಲಿ ನೀರಿಳಿಸುವ, ತಾಯಿನಾಡಿನ ಬಗ್ಗೆ, ದೇಶದ ಸೈನಿಕರ ಬಗ್ಗೆ ಎಂತಹವರಲ್ಲೂ ಹೆಮ್ಮೆ ಉಕ್ಕಿಸುವ 5.47 ನಿಮಿಷಗಳ ಪುಟ್ಟ ವಿಡಿಯೋ.

ಭಾಷೆ ಬರದವರಿಗೂ ಅರ್ಥವಾಗಬಲ್ಲಂತಹ ನಿರೂಪಣೆ, ಸುಂದರವಾದ ಎಡಿಟಿಂಗ್‌.

ಜಿತೇಶ್‌ ಮಿಜಾರ್‌ ಅವರೇ ಬರೆದ, ಅವರೇ ಸ್ವರ ನೀಡಿದ, ನಮ್ಮ ದೇಶದ ಪ್ರತೀಕಾರದ ಸ್ವರ- ಆಪರೇಷನ್‌ ಸಿಂಧೂರದ ಕಥೆ- ತುಳುವಿನಲ್ಲಿ.

ಜಿತೇಶ್‌ ಮಿಜಾರ್‌ ಅವರು ಈ ವಿಡಿಯೋವನ್ನು ದೇಶದ ಹೆಮ್ಮೆಯ ಸೈನಿಕರ ಪಾದಕ್ಕೆ ಅರ್ಪಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪ್ರಕಟಗೊಂಡು 24 ಗಂಟೆಗಳು ಕಳೆಯುವುದರೊಳಗೆ ವೈರಲ್‌ ಆಗಿದೆ.

ಅಂದಹಾಗೆ ಬರಹಗಾರ, ನಿರ್ದೇಶಕ, ಧ್ವನಿ ಕಲಾವಿದ ಹಾಗೂ ಸಂಪಾದಕರಾಗಿರುವ ಜಿತೇಶ್‌ ಮಿಜಾರ್‌ ಅವರ ಸುಮಾರು 110ಕ್ಕೂ ಹೆಚ್ಚು ಬರಹ, ವಿಡಿಯೋಗಳು ಇನ್‌ ಸ್ಟಾ ಗ್ರಾಮ್‌ನಲ್ಲಿ ಕಾಣಸಿಗುತ್ತದೆ.

ಪ್ರತಿ ವಿಡಿಯೋ ಕೂಡಾ ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುತ್ತವೆ.

ತುಳುವಿನಲ್ಲಿ ಮನಸ್ಸಿಗೆ ನಾಟುವಂತೆ ಆಪರೇಷನ್‌ ಸಿಂಧೂರದ ಕಥೆ ☝ ವಿವರಿಸಿದ ಮಿಜಾರ್‌ ಅವರಿಗೆ ಅಭಿನಂದನೆಗಳನ್ನು ಹೇಳದಿದ್ದರೆ ಈ ಬರಹ ಅಪೂರ್ಣವಾಗುತ್ತದೆ- ಅಭಿನಂದನೆಗಳು ಜಿತೇಶ್.

ಆಪರೇಷನ್‌ ಸಿಂಧೂರದ ಕಥೆಯ ವಿಡಿಯೋವನ್ನು ಮೇಲೆ ☝ ಕ್ಲಿಕ್‌ ಮಾಡಿ ನೋಡಿ. ಮಿಜಾರ್‌ ಬಗೆಗಿನ ಹೆಚ್ಚಿನ ವಿವರಕ್ಕೆ https://www.instagram.com/jithesh_mijar/ ಕ್ಲಿಕ್‌ ಮಾಡಿ.

-ನೆತ್ರಕೆರೆ ಉದಯಶಂಕರ

ಇವುಗಳನ್ನೂ ಓದಿರಿ: 

ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ
ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್
ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
"ಷರತ್ತುಬದ್ಧ" ಕದನ ವಿರಾಮಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

PARYAYA: ಆಪರೇಷನ್‌ ಸಿಂಧೂರ IN ತುಳು…:   ಆಪರೇಷನ್‌ ಸಿಂಧೂರ IN.... ತುಳು ಇ ದು ಮೈ ನವಿರೇಳಿಸುವ, ಕಣ್ಣಂಚಿನಲ್ಲಿ ನೀರಿಳಿಸುವ, ತಾಯಿನಾಡಿನ ಬಗ್ಗೆ, ದೇಶದ ಸೈನಿಕರ ಬಗ್ಗೆ ಎಂತಹವರಲ್ಲೂ ಹೆಮ್ಮೆ ಉಕ್ಕಿಸುವ 5.47...

Saturday, May 24, 2025

PARYAYA: ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದ...

 ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದಾಯ ಹೇಳಿ!

ನಾಲ್ಕೈದು ದಿನಗಳ ಹಿಂದಿನ ಮಾತು. ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಮಾವೇಶವೊಂದರಲ್ಲಿ ಮಹಾರಾಷ್ಟ್ರದ ಸಚಿವ, ಕೋರೆಗಾಂವ್‌ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೃಷ್ಣ ಕಣಿವೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಮಹೇಶ ದಾದಾ ಶಿಂಧೆ ತಮ್ಮ ಒಂದು ಹೊಸ ಆವಿಷ್ಕಾರದ ಪ್ರಕಟಣೆಯನ್ನು ಮಾಡಿದರು.

ಈ ಆವಿಷ್ಕಾರ ಭಾರತದ ಆರ್ಥಿಕ ಸ್ಥಿತಿಯನ್ನು ಉತ್ತುಂಗಕ್ಕೆ ಒಯ್ಯುವುದರ ಜೊತೆಗೆ ಜನತೆ ವಿದ್ಯುತ್‌ ಅಥವಾ ಅಡುಗೆ ಅನಿಲ ಬಳಸದೆಯೇ ಶುದ್ಧ ಅಡುಗೆ ಮಾಡಲು ಸಾಧ್ಯವಾಗುವಂತೆ ಮಾಡಲಿದೆ ಎಂದು ಶಿಂಧೆ ಹೇಳಿದರು.

ಏನಿದು ಈ ಅವಿಷ್ಕಾರ?


ಇದೊಂದು ಸಣ್ಣ ಉಪಕರಣ. ಈ ಉಪಕರಣವನ್ನು ಸೌರವಿದ್ಯುತ್ತಿನಿಂದ ಚಲಾಯಿಸಬಹುದು. ಇದಕ್ಕೆ ಜೋಡಿಸಿದ ಒಂದು ಜಾಡಿಯಲ್ಲಿ ಸುಮಾರು ಅರ್ಧ ಲೀಟರಿನಷ್ಟು ನೀರು ತುಂಬಿ ಇಡಲಾಗಿದೆ. ಯಂತ್ರದ ಗುಂಡಿ ಅದುಮಿದರೆ ಈ ನೀರಿನಿಂದ ಪೈಪಿನ ಮೂಲಕ ನೈಸರ್ಗಿಕ ಅನಿಲವಾದ ಜಲಜನಕ ಬರುತ್ತದೆ. ಆ ಪೈಪನ್ನು ಒಂದು ಅಡುಗೆ ತಯಾರಿಸುವ ಗ್ಯಾಸ್‌ ಸ್ಟವ್‌ ಒಂದಕ್ಕೆ ಜೋಡಿಸಲಾಗಿದೆ.

ಈ ಸ್ವವ್‌ಗೆ ನೈಸರ್ಗಿಕ ಅನಿಲ ಬರುತ್ತಿದ್ದಂತೆ ನೀವು ಲೈಟರ್‌ ಮೂಲಕ ಸ್ವವ್‌ ಉರಿಸಬಹುದು. ಗ್ಯಾಸ್‌ ಸ್ಟವ್‌ನಲ್ಲಿ ಬರುವಂತಹ ಖಾರವಾದ ನೀಲ ಬೆಂಕಿ ಸ್ಟೌವಿನಲ್ಲಿ ಬರತೊಡಗುತ್ತದೆ. ಗ್ಯಾಸ್‌ ಸ್ಟವಿನಲ್ಲಿ ಹೇಗೆ ಅಡುಗೆ ಮಾಡುವಿರೋ ಅದೇ ರೀತಿ ನೀವು ಈ ಸ್ಟೌವಿನಲ್ಲೂ ಅಡಿಗೆ ಮಾಡಬಹುದು.

ಅಂದರೆ ಇನ್ನು ಮುಂದೆ ನಿಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ವಿದ್ಯುತ್‌ ಬೇಕಾಗಿಲ್ಲ, ಅಡುಗೆ ಅನಿಲದ ಸಿಲಿಂಡರೂ ಬೇಕಾಗಿಲ್ಲ. ಕೇವಲ ಒಂದರ್ಧ ಲೀಟರ್‌ ನೀರಿದ್ದರೆ ಸಾಕು ಸುಮಾರು ಆರು ತಿಂಗಳ ಕಾಲ ನೀವು ನಿರುಮ್ಮಳರಾಗಿ ಇರಬಹುದು.

ಇದನ್ನು ಬಳಸುವುದರಿಂದ ಇನ್ನೂ ಒಂದು ಪ್ರಯೋಜನವಿದೆ. ಈ ಯಂತ್ರವು ನೀರಿನಿಂದ ಜಲಜನಕವನ್ನು ಬಿಡುಗಡೆ ಮಾಡಿ ಸ್ಟವ್‌ಗೆ ಒದಗಿಸುವುದರ ಜೊತೆಗೇ ನೀರಿನಲ್ಲಿನ ಆಮ್ಮಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

ಎಲ್‌ ಪಿಜಿ ಅನಿಲ ಬಳಸುವುದರಿಂದ ಮಿಥೇನ್‌ ಉರಿದು ಅಂಗಾರಾಮ್ಲ ಅಂದರೆ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ. ಆದರೆ ಹೊಸ ಆವಿಷ್ಕಾರದಲ್ಲಿ ನೀರಿನಿಂದ ಬಿಡುಗಡೆಯಾಗುವ ಜಲಜನಕ ಸ್ಟೌವಿನಲ್ಲಿ ಉರಿಯುವುದರಿಂದ ವಾಯುಮಾಲಿನ್ಯ ಉಂಟಾಗುವುದಿಲ್ಲ. ಒಂದೇ ಪ್ರಕ್ರಿಯೆಯಲ್ಲಿ ಅಡುಗೆ ಇಂಧನ ವೆಚ್ಚ ಸಂಪೂರ್ಣ ಉಳಿತಾಯ ಮತ್ತು ಜೀವಿಗಳ ಉಸಿರಾಟಕ್ಕೆ ಅತ್ಯಗತ್ಯವಾದ ಆಮ್ಲಜನಕ ವಾತಾವರಣಕ್ಕೆ ಸೇರ್ಪಡೆ.

ತಮ್ಮ ಸಹಚರರಾದ ಆಟೋ ಕ್ಲೀನ್‌ ಸಂಸ್ಥೆಯ ವಿಶಾಲ್‌ ಮತ್ತು ಅವರ ತಂಡ ಮಾಡಿದ ಈ ಅವಿಷ್ಕಾರದ ಬಗ್ಗೆ ವಿವರಿಸಿದ ಮಹೇಶ ದಾದಾ ಶಿಂಧೆ ಅವರು ದಶಕಗಳ ಹಿಂದೆ ತಾವು ಇಥೆನಾಲ್‌ ಬಳಸಿ ವಾಹನಗಳನ್ನು ಓಡಿಸಬಹುದು ಎಂಬುದನ್ನು ಬೆಳಕಿಗೆ ತಂದಿದ್ದುದನ್ನು ನೆನಪಿಸಿದರು. ಈಗ ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಜೊತೆಗೆ ಇದೇ ಇಥೆನಾಲ್‌ ಬಳಸಿ ವಾಹನಗಳನ್ನು ಓಡಿಸಲಾಗುತ್ತದೆ.

ಈಗ ರೂಪಿಸಿರುವ ಯಂತ್ರವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಹಳ್ಳಿ ಹಳ್ಳಿಗಳಲ್ಲೂ ಮನೆ ಮನೆಗಳಿಗೂ ತಲುಪಿಸಲಾಗುವುದು. ಇದರಿಂದ ಪರಿಸರ ಮಾಲಿನ್ಯ ನಿವಾರಣೆಗೂ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು ಮಹೇಶ ಶಿಂಧೆ.

ಅಂದ ಹಾಗೆ ಈ ಯಂತ್ರ ದುಬಾರಿಯದ್ದೂ ಅಲ್ಲ. ಶ್ರೀ ರವಿ ಶಂಕರ ಗುರೂಜಿ ಅವರು ಹೇಳುವ ಹಾಗೆ ಎರಡು ಮೂರು ಸಾವಿರ ರೂಪಾಯಿಗಳಷ್ಟೆ. ಎರಡ್ಮೂರು ಸಾವಿರ ರೂಪಾಯಿ ವೆಚ್ಚ ಮಾಡುವುದರಿಂದ ಜೀವನ ಪರ್ಯಂತ ಇಂಧನ ವೆಚ್ಚವೇ ಇರುವುದಿಲ್ಲ.

ಇಂತಹುದೊಂದು ಆವಿಷ್ಕಾರ ಸಾಧ್ಯವೇ ಎಂದು ಮೂಗು ಮುರಿಯುವವರು ಇರುವುದು ಸಹಜ. ಆದರೆ ಸುಮಾರು ಆರು ತಿಂಗಳ ಹಿಂದೆ ತಾನು ನೀರಿನಿಂದ ಗ್ಯಾಸ್‌ ಸ್ಟವ್‌ ಉರಿಸಿದ್ದು ಹೇಗೆ ಎಂಬುದನ್ನು ಪ್ರಯೋಗಾಸಕ್ತರೊಬ್ಬರು ಯೂ ಟ್ಯೂಬ್‌ ವಿಡಿಯೋ ಒಂದರಲ್ಲಿ ವಿವರಿಸಿದ್ದರು.

ಆ ವಿಡಿಯೋವನ್ನು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ಲಿಂಕ್‌ ಕ್ಲಿಕ್‌ ಮಾಡಿ ನೋಡಬಹುದು.

ಮಹೇಶ ದಾದಾ ಶಿಂಧೆ ಅವರು ಶ್ರೀ ಶ್ರೀ ರವಿ ಶಂಕರ ಗುರೂಜಿ ಅವರ ಮುಂದೆ ಪ್ರದರ್ಶಿಸಿದ್ದು ಇದರ ಪರಿಷ್ಕೃತ ರೂಪ. ಖಂಡಿತವಾಗಿ ಇದು ದೇಶಕ್ಕೆ, ಜನತೆಗೆ ಮಹೋನ್ನತ ಕೊಡುಗೆಯಾಗಬಲ್ಲುದು. 

-ನೆತ್ರಕೆರೆ ಉದಯಶಂಕರ

PARYAYA: ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದ...:  ಇನ್ನು ನೀರಿನ ಬೆಂಕಿಯಿಂದಲೇ  ಅಡುಗೆ ಮಾಡಿ, ಎಲ್‌ಪಿಜಿಗೆ ವಿದಾಯ ಹೇಳಿ! ನಾ ಲ್ಕೈದು ದಿನಗಳ ಹಿಂದಿನ ಮಾತು. ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಮಾವೇಶವೊಂದರಲ್ಲಿ  ಮಹಾರ...

Wednesday, May 21, 2025

PARYAYA: ಇಂದಿನ ಇತಿಹಾಸ History Today ಮೇ 21

ಇಂದಿನ ಇತಿಹಾಸ History Today ಮೇ 21

2025: ಲಂಡನ್:‌ ಕನ್ನಡದ ಖ್ಯಾತ ಸಾಹಿತಿ,ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಭಾನು ಮುಷ್ತಾಕ್‌  ಹಾಗೂ ಅನುವಾದಕಿ ದೀಪಾ ಬಾಸ್ತಿ ಅವರು ಆಂತಾರಾಷ್ಟ್ರೀಯ ಬೂಕರ್‌  ಪ್ರಶಸ್ತಿಗೆ ಭಾಜನರಾಗುವ ಮೂಲಕ ಇತಿಹಾಸ ಸೃಷ್ಟಿಸಿದರು. ಭಾನು ಮುಷ್ತಾಕ್‌ ಅವರ ಸಣ್ಣ ಕಥೆಗಳ ಸಂಕಲನ ʼಎದೆಯ ಹಣತೆʼಯ ಅನುವಾದಿತ ಕೃತಿ ʼಹಾರ್ಟ್‌ ಲ್ಯಾಂಪ್‌ʼಗೆ ಈ ಬೂಕರ್‌ ಪ್ರಶಸ್ತಿ ಲಭಿಸಿತು. ತನ್ಮೂಲಕ ಕನ್ನಡದ ಕೃತಿಯೊಂದಕ್ಕೆ ಮೊತ್ತ ಮೊದಲ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದಂತಾಯಿತು.. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಕನ್ನಡದ ಅಸ್ಮಿತೆ ರಾರಾಜಿಸಿತು.

 ಸಣ್ಣ ಕಥೆ ಪ್ರಕಾರಕ್ಕೆ ದೊರೆಯುತ್ತಿರುವ ಮೊದಲ ಬೂಕರ್‌ ಪ್ರಶಸ್ತಿ ಇದು. ಹಾಸನ ಮೂಲದ ಭಾನು ಮುಷ್ತಾಕ್‌ ಅವರ ೧೨ ಕಥೆಗಳ ಸಂಕಲನವನ್ನು ಕೊಡಗಿನ ದೀಪಾ ಬಾಸ್ತಿ ಅವರು ʼಹಾರ್ಟ್‌ ಲ್ಯಾಂಪ್‌ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

 

2020:  ನವದೆಹಲಿಬಿರುಗಾಳಿ ಸಹಿತವಾದ ಧಾರಾಕಾರ ಮಳೆಯೊಂದಿಗೆ ಅಂಫಾನ್ ಚಂಡಮಾರುತ 2020 ಮೇ 20ರ ಬುಧವಾರ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ರೌದ್ರಾವತಾರ ತಾಳಿ ಭಾರೀ ಪ್ರಮಾಣದ ಹಾನಿಯನ್ನು ಉಂಟು ಮಾಡಿತು.  ಇದರ ಮಧ್ಯೆಯೇ ಒಡಿಶಾದ ರಾಜಧಾನಿ ಭುವನೇಶ್ವರದಿಂದ ಕೆಲವು ಚಿತ್ರಗಳು  2020 ಮೇ 21ರ ಗುರುವಾರ  ವೈರಲ್ ಆದವುನಗರದ ಮೂಲಕ ಚಂಡಮಾರುತವು ಹಾದುಹೋದ ನಂತರ ಒಡಿಶಾದಲ್ಲಿ ಆಕಾಶವು ನೇರಳೆ-ಗುಲಾಬಿ ಬಣ್ಣಕ್ಕೆ ತಿರುಗಿರುವುದನ್ನು  ಚಿತ್ರಗಳು ತೋರಿಸಿದವು. ‘ಅತ್ಯಂತ ಭೀಕರ ಸಮಯ ಕೂಡಾ ಮಾನವ ಚೈತನ್ಯವನ್ನು ಪುಡಿಗಟ್ಟಲು ಸಾಧ್ಯವಿಲ್ಲ’ ಎಂಬಿತ್ಯಾದಿ ಸ್ಫೂರ್ತಿದಾಯಕ ಟಿಪ್ಪಣಿಗಳೊಂದಿಗೆ ಹಲವಾರು ಮಂದಿ  ಚಿತ್ರಗಳನ್ನು ಟ್ವೀಟ್ ಮಾಡಿ ಹಂಚಿಕೊಂಡರು. "ನನ್ನ ನಗರವು ಎಷ್ಟು ಬಿರುಗಾಳಿಮಯವಾಗಿದ್ದರೂನಾವು ಅನುಗ್ರಹದೊಂದಿಗೆ ಅರಳಬಲ್ಲೆವು ಎಂಬುದಕ್ಕೆ  ವರ್ಣರಂಜಿತ ಆಕಾಶ ಉದಾಹರಣೆಯಾಗಿದೆಎಂತಹ ಸುಂದರವಾದ ಸಂಜೆಯ ಆಕಾಶ!’ ಎಂದು ಟ್ವಿಟ್ಟರ್ ಬಳಕೆದಾರೊಬ್ಬರು ಆಗಸದ ವರ್ಣಮಯ ನೋಟದ ಚಿತ್ರವನ್ನು ಹಂಚಿಕೊಳ್ಳುತ್ತಾ ಬರೆದರುಇತರ ಹಲವರು ಕೂಡಾ ನಗರದ ವಿವಿಧ ಪ್ರದೇಶಗಳಿಂದ ಚಿತ್ರಗಳನ್ನು ಹಂಚಿಕೊಂಡರು ಮತ್ತು ಪ್ರಕೃತಿಯ ಸಹಜ ಸೌಂದರ್ಯದ ಚಿತ್ರಗಳನ್ನು ತೆರೆದಿಟ್ಟರು.  (ವಿವರಗಳಿಗೆಇಲ್ಲಿ  ಕ್ಲಿಕ್   ಮಾಡಿರಿ)


2020: 
ನವದೆಹಲಿಕೋಲ್ಕತಭುವನೇಶ್ವರಭಾರತದಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಹಾಗೂ ನೆರೆಯ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಅಂಫಾನ್ ಚಂಡ ಮಾರುತವು ಪಶ್ಚಿಮ ಬಂಗಾಳದಲ್ಲಿ ತನ್ನ ರುದ್ರ ನರ್ತನವನ್ನು ತೋರಿಸಿ೭೨ ಮಂದಿಯನ್ನು ಬಲಿ ತೆಗೆದುಕೊಂಡಿದೆಮರಗಳುವಿದ್ಯುತ್ಟೆಲಿಫೋನ್ ಕಂಬಗಳು ಉರುಳಿದ್ದುಹಲವಾರು ಮನೆಗಳು ಕುಸಿದಿವೆಬೆಳೆದು ನಿಂತ ಫಸಲು ಕೂಡಾ ನಷ್ಟವಾಗಿದೆ.  ಚಂಡಮಾರುತಕ್ಕೆ ಬಲಿಯಾಗಿರುವ ೭೨ ಮಂದಿಯ ಪೈಕಿ ಬಹುತೇಕರು ವಿದ್ಯುತ್ ತಾಗಿಮರಗಳ ಅಡಿಗೆ ಸಿಲುಕಿ ಇಲ್ಲವೇ ಮನೆಗಳು ಕುಸಿದ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ ಎಂದು  2020 ಮೇ 21ರ ಗುರುವಾರ ಹೇಳಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೃತ ಕುಟುಂಬಗಳಿಗೆ ತಲಾ . ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.   ಮಧ್ಯೆ ಚಂಡಮಾರುತದಿಂದ ತೊಂದರೆಗೆ ಒಳಗಾದ ರಾಜ್ಯಗಳಿಗೆ ಸರ್ವ ನೆರವು ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆಚಂಡಮಾರುತದಿಂದ ಆಗಿರುವ ಹಾನಿಯ ಅಂದಾಜು ಮಾಡುವ ಸಲುವಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಕಳುಹಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವಿಶೇಷ ತಂಡಗಳನ್ನು ರಚಿಸುತ್ತಿದೆ.   ಪ್ರತ್ಯೇಕ ವಿಶೇಷ ತಂಡಗಳು ಉಪಕಾರ್ಯದರ್ಶಿ ಅಥವಾ ಅವರಿಗಿಂತ  ಉನ್ನತ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ರಚನೆಯಾಗುತ್ತಿದ್ದು ವಿವಿಧ ಸಚಿವಾಲಯಗಳ ಡಜನ್ ಅಧಿಕಾರಿಗಳನ್ನು ಹೊಂದಿರುತ್ತದೆತಂಡಗಳು ಗುರುವಾರ ಸಂಜೆ ಅಥವಾ ಶುಕ್ರವಾರದ ವೇಳೆಗೆ ಸಂತ್ರಸ್ಥ ರಾಜ್ಯಗಳಿಗೆ ತಲುಪಲಿವೆ ಎಂದು  ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದವು.  (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿಮುಂದಿನವಾರ ಆರಂಭವಾಗಲಿರುವ ದೇಶೀ ವಿಮಾನಯಾನಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರಿಗಾಗಿ ಹೊಸ ವಿಮಾನಯಾನ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ  2020 ಮೇ 21 ಗುರುವಾರ ಬಿಡುಗಡೆ ಮಾಡಿದ್ದು ಮೂರನೇ ಒಂದರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು ತಿಳಿಸಿತು. ಪ್ರಯಾಣಿಕರು ವಿಮಾನದ ಒಳಕ್ಕೇ ಒಯ್ಯಬಹುದಾದ ಒಂದು ಬ್ಯಾಗನ್ನು ಮಾತ್ರವೇ ಒಯ್ಯಬಹುದುಗರ್ಭಿಣಿಯರು ಮತ್ತು ಅಸ್ವಸ್ಥ ಪ್ರಯಾಣಿಕರು ವಿಮಾನಯಾನ ಮಾಡುವುದು ಬೇಡ ಎಂದು ಮಾರ್ಗಸೂಚಿ ತಿಳಿಸಿತು.  ವಿಮಾನಯಾನ ದರಗಳನ್ನು ಸರ್ಕಾರ ನಿಗದಿ ಪಡಿಸಲಿದೆ ಎಂದು ನಾಗರಿಕ ವಿಮಾನಯಾನದ ಮಾರ್ಗಸೂಚಿ ಹೇಳಿತುವಿಮಾನಯಾನ ಸಂಸ್ಥೆಗಳು ಕೋವಿಡ್ ೧೯ ಸಾಂಕ್ರಾಮಿಕದ ಅವಧಿಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ನಿಗದಿ ಪಡಿಸುವ ದರಗಳಿಗೆ ಬದ್ಧವಾಗಿರಬೇಕು ಎಂದು ಸಚಿವಾಲಯ ಹೇಳಿತು. ಭಾರತವು ಮೇ ೨೫ರಿಂದ ದೇಶೀ ವಿಮಾನಯಾನಗಳನ್ನು ಪುನಾರಂಭ ಮಾಡಲಿದೆ ಎಂದು ಸರ್ಕಾರ ಬುಧವಾರ ಪ್ರಕಟಿಸಿತ್ತುಹಿರಿಯರುಗರ್ಭಿಣಿಯರುಆರೋಗ್ಯ ಸಮಸ್ಯೆಗಳು ಇರುವವರು ಪ್ರಯಾಣ ಮಾಡದಿರುವಂತೆ ಸಲಹೆ ಮಾಡಲಾಗಿದೆಕಂಟೈನ್ ಮೆಂಟ್ ವಲಯದಲ್ಲಿ ವಾಸವಾಗಿರುವ ಪ್ರಯಾಣಿಕರಿಗೆ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದಿಲ್ಲಕೋವಿಡ್ -೧೯ ಸೋಂಕಿನ ಪಾಸಿಟಿವ್ ವರದಿ ಬಂದರೆ ಅಂತಹವರು ಪ್ರಯಾಣ ಮಾಡುವಂತಿಲ್ಲ ಎಂದು ಮಾರ್ಗಸೂಚಿ ಹೇಳಿತು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು  2020 ಮೇ 21ರ ಗುರುವಾರ . ಲಕ್ಷವನ್ನು ದಾಟಿದವು.  ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೬೦೯ ಹೊಸ ಪ್ರಕರಣಗಳು ದಾಖಲಾದವು.  ಇದು ದೇಶದಲ್ಲಿ ಒಂದೇ ದಿನದಲ್ಲಿ ದಾಖಲಾದ ಎರಡನೇ ಅತಿ ಹೆಚ್ಚಿನ ಸೋಂಕು ಪ್ರಕರಣಗಳ ಸಂಖ್ಯೆಯಾಗಿದೆ.  ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಸಂಖ್ಯೆಗಳ ಪ್ರಕಾರ ರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ,೧೨,೩೫೯ಕ್ಕೆ ಏರಿದೆ ಪೈಕಿ ೪೫,೨೯೯ ಮಂದಿ ಗುಣಮುಖರಾಗಿದ್ದುಸಕ್ರಿಯ ಪ್ರಕರಣಗಳ ಸಂಖ್ಯೆ ೬೩,೬೨೪.  ಕೊರೋನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ರಾಷ್ಟ್ರಗಳು ವಿಶ್ವಾದ್ಯಂತ ಕ್ರಮೇಣ ತೆರವುಗೊಳಿಸುತ್ತಿವೆಜಗತ್ತಿನಾದ್ಯಂತ  ಲಕ್ಷ ಜನರ ಸಾವು ಮತ್ತು ೫೦ ಲಕ್ಷ ಸೋಂಕಿನ ಪ್ರಕರಣಗಳ ದಾಖಲಾತಿಯೊಂದಿಗೆ ಕೋವಿಡ್ ೧೯ ಇನ್ನೂ ತನ್ನ ರುದ್ರ ನರ್ತನವನ್ನು ಮುಂದುವರೆಸಿದೆ ಸೋಂಕಿತ ೫೦ ಲಕ್ಷ ಮಂದಿಯ ಪೈಕಿ ೨೦ ಲಕ್ಷ ಮಂದಿ ಗುಣಮುಖರಾಗುವುದರೊಂದಿಗೆ ಜಾಗತಿಕ ಚೇತರಿಕೆ ಪ್ರಮಾಣ ಶೇಕಡಾ ೪೦ರ ಸಮೀಪಕ್ಕೆ ಬಂದಿದೆ.  (ವಿವರಗಳಿಗೆಇಲ್ಲಿ  ಕ್ಲಿಕ್   ಮಾಡಿರಿ)

2020:  ನವದೆಹಲಿಕೊರೋನಾವೈರಸ್ ಹರಡದಂತೆ ತಡೆಯಲು ಹೇರಲಾದ ಹಲವಾರು ವಾರಗಳ ಲಾಕ್ ಡೌನ್ ಬಳಿಕ ಇದೀಗ ರಾಷ್ಟ್ರವನ್ನು ಸಹಜ ಸ್ಥಿತಿಗೆ ಒಯ್ಯಲು ಇದೀಗ ಸಕಾಲ ಎಂದು  2020 ಮೇ 21ರ ಗುರುವಾರ ಇಲ್ಲಿ ನುಡಿದ ರೈಲ್ವೇ ಸಚಿವ ಪೀಯೂಷ್ ಗೋಯಲ್ಶೀಘ್ರದಲ್ಲೇ ಇನ್ನಷ್ಟು ರೈಲುಗಳು ಸಂಚಾರ ಆರಂಭಿಸಲಿವೆ ಎಂದು ಹೇಳಿದರು. ‘ಇನ್ನಷ್ಟು ರೈಲುಗಳ ಸಂಚಾರ ಪುನಾರಂಭವನ್ನು ಪ್ರಕಟಿಸಲಾಗುವುದುಇದು ಭಾರತವನ್ನು ಸಹಜ ಸ್ಥಿತಿಯತ್ತ ಒಯ್ಯುವ ಕಾಲ’ ಎಂದು ಪೀಯೂಷ್ ಗೋಯಲ್ ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು.  ಸಂಬಂಧಿತ ಬೆಳವಣಿಗೆಯೊಂದರಲ್ಲಿ ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರುಗಳಲ್ಲಿ ಬುಕಿಂಗುಗಳು ಶೀಘ್ರ ಆರಂಭವಾಗಲಿವೆ ಎಂದು ಸಚಿವರು ನುಡಿದರು.  ‘ಬುಕಿಂಗ್‌ಗಳು ಕೂಡಾ ನಿಲ್ದಾಣಗಳ ಟಿಕೆಟ್ ಕೌಂಟರುಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಆರಂಭವಾಗಲಿವೆನಾವು ಅಧ್ಯಯನಗಳನ್ನು ಮಾಡುತ್ತಿದ್ದು ಶಿಷ್ಟಾಚಾರಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ’ ಎಂದು ಸಚಿವರು ಹೇಳಿದರುಶ್ರಮಿಕ ವಿಶೇಷ ರೈಲುಗಳನ್ನು ಓಡಿಸುವಲ್ಲಿ ನೀಡಿದ ಸಹಕಾರಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ರೈಲ್ವೇ ಸಚಿವರು ಶ್ಲಾಘಿಸಿದರು ಮತ್ತು ಅಸಹಕಾರಕ್ಕಾಗಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳನ್ನು ಟೀಕಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ) 


ಇಂದಿನ ಇತಿಹಾಸ  HistoryTodayಮೇ 21  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



-ಸಂಗ್ರಹನೆತ್ರಕೆರೆ ಉದಯಶಂಕರ


PARYAYA: ಇಂದಿನ ಇತಿಹಾಸ History Today ಮೇ 21:   ಇಂದಿನ ಇತಿಹಾಸ History Today ಮೇ 21 2025: ಲಂಡನ್:‌ ಕನ್ನಡದ ಖ್ಯಾತ ಸಾಹಿತಿ,ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಭಾನು ಮುಷ್ತಾಕ್‌   ಹಾಗೂ ಅನುವಾದಕಿ ದೀಪಾ ಬಾಸ...