Tuesday, December 31, 2024

PARYAYA: ೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

 ೨೦೨೪ರ ಕೊನೆಯ ಸೂರ್ಯಾಸ್ತಮಾನ
ಇದು ʼಸುವರ್ಣʼ ನೋಟ..!
ಲ್ಲರೂ ೨೦೨೫ರ ಹೊಸ ವರ್ಷಕ್ಕಾಗಿ ಕಾದಿದ್ದಾಗ ಇವರು ಹಳೆಯದರ ನೆನಪಿನಲ್ಲಿ ಇದ್ದರು. ೨೦೨೪ರ ಸಂಜೆ ವಿಧಾನಸೌಧದ ಸುತ್ತ ಅಡ್ಡಾಡುತ್ತಿದ್ದರು. ಆಗ ಅವರಿಗೆ ಕಂಡು ಬಂದ - ಮುಗಿಲ ಮಧ್ಯೆ ಮರೆಯಾಗುತ್ತಿದ್ದ ಸೂರ್ಯ!. 

ತನ್ನ ವರ್ಷ ಮುಗಿಯಿತು ಎಂದು ಮುಖವನ್ನು ಮರೆ ಮಾಚುತ್ತಿದ್ದಾನೇನೋ ಎಂಬಂತಿದ್ದ ಈ ಸೂರ್ಯನ ಕಡೆಗೆ ಕ್ಯಾಮರಾ ತಿರುಗಿಸಿದ ಈ ವ್ಯಕ್ತಿ, ಸೂರ್ಯನನ್ನು ಬಂಧಿಸಿಯೇ ಬಿಟ್ಟರು.


ಆಗ ಸೂರ್ಯ ಹೇಗಿದ್ದ ನೋಡಿ. ಇದು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಹಿಡಿದಿಟ್ಟ ೨೦೨೪ರ ಕೊನೆಯ ಸೂರ್ಯಾಸ್ತಮಾನದ ದೃಶ್ಯ. ಚಿತ್ರವನ್ನು  ಕ್ಲಿಕ್‌ ಮಾಡಿ. ಸಮೀಪದಿಂದ ಅದನ್ನು ನೋಡಿ ಸವಿಯಿರಿ.

-ನೆತ್ರಕೆರೆ ಉದಯಶಂಕರ

ಕೆಳಗಿನವುಗಳನ್ನೂ ಓದಿರಿ: 

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

PARYAYA: ೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!:  ೨೦೨೪ರ ಕೊನೆಯ ಸೂರ್ಯಾಸ್ತಮಾನ ಇದು ʼಸುವರ್ಣʼ ನೋಟ..! ಎ ಲ್ಲರೂ ೨೦೨೫ರ ಹೊಸ ವರ್ಷಕ್ಕಾಗಿ ಕಾದಿದ್ದಾಗ ಇವರು ಹಳೆಯದರ ನೆನಪಿನಲ್ಲಿ ಇದ್ದರು. ೨೦೨೪ರ ಸಂಜೆ ವಿಧಾನಸೌಧದ ಸುತ...

Friday, December 27, 2024

PARYAYA: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ

ವಿವಿಧ ಬ್ರಾಹ್ಮಣ ಸಂಸ್ಥೆಗಳಿಗೆ ಸನ್ಮಾನ


ಕೆಳಗಿನದ್ದನ್ನೂ ನೋಡಿರಿ: 

ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

PARYAYA: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ ಕೆ...

PARYAYA: ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ವಿಶ್ವ  ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೧.೧೨.೨೦೨೪ರ ಶುಕ್ರವಾರ ಆರಂಭವಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೆಲವು ಪಾರ್ಶ್ವನೋಟಗಳ ಚಿತ್ರಗಳು ಇಲ್ಲಿವೆ.

































ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.
ಸಮ್ಮೇಳನದ ನೇರ ಪ್ರಸಾರ ವೀಕ್ಷಣೆಗೆ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿರಿ:

PARYAYA: ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು: ವಿಶ್ವ  ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೧.೧೨.೨೦೨೪ರ ಶುಕ್ರವಾರ ಆರಂಭವಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೆಲವು ಪಾರ್ಶ್ವನೋಟಗಳ ಚಿತ...

Thursday, December 26, 2024

PARYAYA: ಹವ್ಯಕ ಸಮ್ಮೇಳನ ಸಡಗರ ಆರಂಭ

 ಹವ್ಯಕ ಸಮ್ಮೇಳನ ಸಡಗರ ಆರಂಭ


ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಡಗರ ಆರಂಭಗೊಂಡಿದೆ.

ಶನಿವಾರ ರಾತ್ರಿ ಮೇಲಾರಕ್ಕೆ ಕೊರೆಯುವ ಸಂಭ್ರಮದೊಂದಿಗೆ ಸಮ್ಮೇಳನದ ಕಳೆಗಟ್ಟತೊಡಗಿದೆ.

ಭವ್ಯವಾದ ವೇದಿಕೆ ಸಜ್ಜುಗೊಂಡಿದೆ.



ಸಮ್ಮೇಳನದ ಸಡಗರದ ಕೆಲವು ಚಿತ್ರಗಳು, ವಿಡಿಯೋ  ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.



PARYAYA: ಹವ್ಯಕ ಸಮ್ಮೇಳನ ಸಡಗರ ಆರಂಭ:   ಹವ್ಯಕ ಸಮ್ಮೇಳನ ಸಡಗರ ಆರಂಭ ಬೆಂ ಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಡಗರ ಆರಂಭಗೊಂಡಿದೆ. ಶನಿವಾರ ರಾತ್ರಿ ಮೇಲಾರಕ್ಕೆ ಕೊರೆಯುವ ಸಂಭ್ರಮದೊಂದಿಗೆ ಸಮ್ಮ...

Monday, December 23, 2024

PARYAYA: ವಾಟ್- ಸುದ್ದಿ

ಹಗರಣ-ದೂರು-ತನಿಖೆ-ನಿಂದನೆ!

ದೆಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಈ ಸಂಬಂಧವಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಮಾಡಿದ್ದ ಆರೋಪಕ್ಕೆ ಪ್ರಧಾನಿ ನೀಡಿದ್ದ ಉತ್ತರದಲ್ಲಿನ ಈ ಭಾಗದ ವಿಡಿಯೋ ತುಣುಕು ಇದೀಗ ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:
PARYAYA: ವಾಟ್- ಸುದ್ದಿ: ಹಗರಣ-ದೂರು-ತನಿಖೆ-ನಿಂದನೆ! ದೆ ಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತ...

Sunday, December 22, 2024

PARYAYA: ಎತ್ತಲೀ ಪಯಣ ?

 ಎತ್ತಲೀ ಪಯಣ ?


2024 ಡಿಸೆಂಬರ್‌ 20, 21 ಮತ್ತು 22 ರಂದು ಕರ್ನಾಟಕದ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬಂದ ಸಂದರ್ಭದ ಒಂದು ಮೆಲುಕು.


ಯುಟ್ಯೂಬ್‌ ವಿಡಿಯೋ ನೋಡಲು ಈ ಕೆಳಗಿನ ಕೊಂಡಿ ಕ್ಲಿಕ್‌ ಮಾಡಿರಿ.

https://youtu.be/PQxGob7GanM

PARYAYA: ಎತ್ತಲೀ ಪಯಣ ?:   ಎತ್ತಲೀ ಪಯಣ ? 2024 ಡಿಸೆಂಬರ್‌ 20, 21 ಮತ್ತು 22 ರಂದು ಕರ್ನಾಟಕದ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ...

Tuesday, December 17, 2024

PARYAYA: ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್...

 ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್ಮೇಳನ

ಬೆಂಗಳೂರು:  ಭವಿಷ್ಯದ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ಬಹುಶಿಸ್ತಿನ ವಿಧಾನ ಮತ್ತು ನವೀನ ಉದಯೋನ್ಮುಖ ತಂತ್ರಜ್ಞಾನ ಬಳಕೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವೊಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಭೌಗೋಳಿಕ ಮತ್ತು ಭೌಗೋಳಿಕ ಮಾಹಿತಿ ವಿಭಾಗದಲ್ಲಿ ಡಿಸೆಂಬರ್‌ 19 ಮತ್ತು 20ರಂದು ನಡೆಯಲಿದೆ.

ಇದು ಯೂನಿಯನ್ ಆಫ್ ಜಿಯೋಗ್ರಾಫಿಕ್ ಇನ್ಫರ್ಮೇಷನ್ ಟೆಕ್ನಾಲಜಿಸ್ಟ್ಸ್ (UGIT) ಸಂಘಟಿಸುತ್ತಿರುವ 13ನೇ ಅಂತಾರಾಷ್ಟ್ರೀಯ ಸಮ್ಮೇಳನವಾಗಿದ್ದು, ಭಾರತದ ಬೆಂಗಳೂರು ವಿಶ್ವವಿದ್ಯಾಲಯ, ಇಂಗ್ಲೆಂಡಿನ  ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯ,  ದಿ ಆರ್ಟ್ ಆಫ್ ಲಿವಿಂಗ್ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (EMPRI), ಮತ್ತು ಪ್ರಧಾನ ಮಂತ್ರಿ ಉನ್ನತ ಶಿಕ್ಷಾ ಅಭಿಯಾನ (PM-USHA) ಭೌಗೋಳಿಕ ಮತ್ತು  ಭೌಗೋಳಿಕ ಮಾಹಿತಿ ಈ ಸಂಸ್ಥೆಗಳು ಸಹಯೋಗ ನೀಡಿವೆ.

ಬೆಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಎಸ್.‌ ಎಂ. ಜಯಕರ, ಶೇಖ್‌ ಲತೀಫ್‌, ಪ್ರೊ. ಡಾ. ಅಶೋಕ ಡಿ. ಹಂಜಗಿ, ಡಾ.ಎಚ್.ಪಿ. ರವಿ, ವಿ. ರಶ್ಮಿ, ಡಾ. ಪ್ರಸನ್ನ ಪ್ರಭು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಭಾಷಣಕಾರರಾಗಿ  ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಪ್ರೊ. ಸುಭಾಷಿಣಿ ಸುರೇಶ್‌, ಡಾ. ಸುರೇಶ ರೇಣುಕಪ್ಪ, , ಪ್ರೊ.ಪನಾಜಿಯೋಟಿಸ್ ಜಾರ್ಗಲ್ಸಿಸ್, ಇಸ್ರೋದ ಡಾ. ಗಣೇಶ ರಾಜ್‌, ಇನ್ಫೋಸಿಸ್‌ನ ಡಾ. ಗುರುಪ್ರಸಾದ್‌ ಶಾಸ್ತ್ರಿ, ಸಂಪೂರ್ಣ ಸ್ವರಾಜ್‌ ಫೌಂಡೇಶನ್ನಿನ ಡಾ. ಶಂಕರ ಪ್ರಸಾದ್‌, ಗಾಂಧಿನಗರ ಐಐಪಿಎಚ್‌ನ  ಡಾ. ಮಹಾವೀರ ಗೋಲೆಚ್ಛ, ಬೆಂಗಳೂರು ಐಐಟಿ-ಬಿಯ ಡಾ. ರಮೇಶ ಕೆ.ಎನ್, ವಿಪ್ರೋ ಫೌಂಡೇಷನ್ನಿನ ಡಾ. ಅರ್ಚನಾ ಅಶೋಕ, ಇ ಎಸ್‌ ಜಿ ಮತ್ತು ಸಸ್ಟೈನಿಬಿಲಿಟಿಯ ಉಪಾಧ್ಯಕ್ಷ ನಿರ್ಭಯ್‌ ಲುಮ್ಡೆ ಅವರು ಪಾಲ್ಗೊಳ್ಳಲಿದ್ದಾರೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


 

 Get the Pass Word to continue the reading of above  E-Book by Payment of Fifty percent of the Price of Printed Book. Contact: Dr. Shankara K. Prasad - 9845049970 or Nethrakere Udaya Shankara - 9480215706. You can visit: https://www.sampoornaswaraj.org/ and get your copy through it also.

PARYAYA: ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್...:   ಭವಿಷ್ಯದ ನಗರಗಳ ಸುಸ್ಥಿರತೆ: ಬೆಂಗಳೂರಿನಲ್ಲಿ ಯುಜಿಐಟಿ ಸಮ್ಮೇಳನ ಬೆಂ ಗಳೂರು:   ಭವಿಷ್ಯದ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ಬಹುಶಿಸ್ತಿನ ವಿಧಾನ ಮತ್ತು ನವೀನ ಉದಯೋ...

Monday, December 16, 2024

PARYAYA: ಚಳಿ ಚಳಿ ತಾಳೆನು ಈ ಚಳಿಯ….

 ಚಳಿ ಚಳಿ ತಾಳೆನು ಈ ಚಳಿಯ….

ಬೆಂಗಳೂರು: ಬೆಂಗಳೂರು ಈ ವಾರ ಡಿಸೆಂಬರ್ ರಾತ್ರಿಯಲ್ಲಿ ಅಸಾಧಾರಣವಾದ ಚಳಿಯ ಅನುಭವ ಪಡೆಯಲಿದೆ. ತಾಪಮಾನವು 2010 ರಿಂದ ಕನಿಷ್ಠ ಮಟ್ಟಕ್ಕೆ ಇಳಿಯಲು ಸಜ್ಜಾಗಿದೆ.

ಮಂಗಳವಾರ ರಾತ್ರಿ ಕನಿಷ್ಠ ತಾಪಮಾನವು 12.4 ° ಸೆಂಟಿಗ್ರೇಡ್‌ ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಭವಿಷ್ಯ ಅಂದಾಜು ಮಾಡಿದೆ.

ಇದು 14 ವರ್ಷಗಳ ದಾಖಲೆಯನ್ನು ಮುರಿಯುತ್ತದೆ. ಡಿಸೆಂಬರ್ 24, 2011 ರಂದು ಪಾದರಸವು 12.8 ° ಸೆಂಟಿಗ್ರೇಡಿಗೆ ಕುಸಿದದ್ದೇ  ಡಿಸೆಂಬರ್ ತಾಪಮಾನದಲ್ಲಿ ಕೊನೆಯ ಗಮನಾರ್ಹ ಕುಸಿತವಾಗಿತ್ತು ಹವಾಮಾನ ಇಲಾಖೆಯ ವರದಿ ಹೇಳಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

PARYAYA: ಚಳಿ ಚಳಿ ತಾಳೆನು ಈ ಚಳಿಯ….:   ಚಳಿ ಚಳಿ ತಾಳೆನು ಈ ಚಳಿಯ…. ಬೆಂ ಗಳೂರು: ಬೆಂಗಳೂರು ಈ ವಾರ ಡಿಸೆಂಬರ್ ರಾತ್ರಿ ಯಲ್ಲಿ ಅಸಾಧಾರಣವಾದ ಚಳಿಯ ಅನುಭವ ಪಡೆಯಲಿದೆ. ತಾಪಮಾನವು 2010 ರಿಂದ ಕನಿಷ್ಠ ಮಟ್ಟಕ...

PARYAYA: ತಬಲಾ ನಿಲ್ಲಿಸಿದ ʼಮಾಂತ್ರಿಕʼ

 ತಬಲಾ ನಿಲ್ಲಿಸಿದ ʼಮಾಂತ್ರಿಕʼ

ವದೆಹಲಿ: ಮೂರು ʼಪದ್ಮʼ ಪ್ರಶಸ್ತಿಗಳು ಮತ್ತು ನಾಲ್ಕು ಗ್ರ್ಯಾಮಿ ಪ್ರಶಸ್ತಿಗಳನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದ ವಿಶ್ವ ವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್‌ ಹುಸೇನ್‌ ಅವರು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಸೋಮವಾರ (16.12.2024) ನಸುಕಿನಲ್ಲಿ ನಿಧನರಾಗಿದ್ದಾರೆ.

ನಿಧನಕಾಲಕ್ಕೆ ಅವರಿಗೆ 73 ವರ್ಷವಾಗಿತ್ತು. ಹೃದಯ ಸಂಬಂಧಿ ಕಾಯಿಲೆಗಳಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಹೇಳಿಕೆ ತಿಳಿಸಿದೆ.

ಎರಡುವಾರಗಳಿಂದ ಆಸ್ಪತ್ರೆಯಲ್ಲಿದ್ದ ಅವರ ಸ್ಥಿತಿ ಹದಗೆಟ್ಟ ಬಳಿಕ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿತ್ತು.

ಸ್ಯಾನ್‌ ಫ್ರಾನ್ಸಿಸ್ಕೋದ ಸಮಯ ನಸುಕಿನ ೪ ಘಂಟೆಗೆ ಅಂದರೆ ಭಾರತೀಯ ಕಾಲಮಾನ ಬೆಳಗಿನ 5.30 ಘಂಟೆಗೆ ಅವರು ಕೊನೆಯುಸಿರು ಎಳೆದರು ಎಂದು ಅವರ ಸಹೋದರಿ ಖುರ್ಷಿದ್‌ ಔಲಿಯಾ ತಿಳಿಸಿದರು.

ತಮ್ಮ ಪೀಳಿಗೆಯ ಶ್ರೇಷ್ಠ ತಬಲಾ ವಾದಕ ಎಂದು ಪರಿಗಣಿಸಲ್ಪಟ್ಟ ಝಾಕಿರ್ ಹುಸೇನ್ ಅವರು ಪತ್ನಿ ಆಂಟೋನಿಯಾ ಮಿನ್ನೆಕೋಲಾ ಮತ್ತು ಪುತ್ರಿಯರಾದ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಅವರನ್ನು ಅಗಲಿದ್ದಾರೆ.

ಮಾರ್ಚ್ 9, 1951 ರಂದು ಜನಿಸಿದ ಅವರು ಪ್ರಸಿದ್ಧ ತಬಲಾ ಮಾಸ್ಟರ್ ಉಸ್ತಾದ್ ಅಲ್ಲಾ ರಖಾ ಅವರ ಪುತ್ರ.

ಜಾಕಿರ್ ಹುಸೇನ್ ಅವರು  ಈ ವರ್ಷದ ಆರಂಭದಲ್ಲಿ  ನಡೆದ 66ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಡೆದ ಮೂರು ಪ್ರಶಸ್ತಿಗಳು ಸೇರಿದಂತೆ ನಾಲ್ಕು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಅವರು ತಾಳವಾದ್ಯಕ್ಕಾಗಿ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

PARYAYA: ತಬಲಾ ನಿಲ್ಲಿಸಿದ ʼಮಾಂತ್ರಿಕʼ:   ತಬಲಾ ನಿಲ್ಲಿಸಿದ ʼ ಮಾಂತ್ರಿಕ ʼ ನ ವದೆಹಲಿ: ಮೂರು ʼ ಪದ್ಮ ʼ ಪ್ರಶಸ್ತಿಗಳು ಮತ್ತು ನಾಲ್ಕು ಗ್ರ್ಯಾಮಿ ಪ್ರಶಸ್ತಿಗಳನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದ ವಿಶ್ವ ವಿ...

Sunday, December 1, 2024

PARYAYA: ರಾಮಮಂದಿರದ ಪ್ರಬಲ ಬೆಂಬಲಿಗ ʼಕಾಶ್‌ʼ ಪಟೇಲ್ ಎಫ್‌ ಬಿಐ ಮುಖ...

 ರಾಮಮಂದಿರದ ಪ್ರಬಲ ಬೆಂಬಲಿಗ ʼಕಾಶ್‌ʼ ಪಟೇಲ್ ಎಫ್‌ ಬಿಐ ಮುಖ್ಯಸ್ಥ

ಬೆಂಗಳೂರು: ವಿವೇಕ ರಾಮಸ್ವಾಮಿ ಮತ್ತು ತುಳಸಿ ಗಬ್ಬಾರ್ಡ್‌ ಅವರ ಬಳಿಕ ಭಾರತ ಪರ ಅಭಿಪ್ರಾಯ ಹೊಂದಿರುವ ಮೂರನೇ ಪ್ರಬಲ ಹಾಗೂ ತಮ್ಮ ನಿಷ್ಠಾವಂತ ವ್ಯಕ್ತಿ ಕಶ್ಯಪ್‌ ಪಟೇಲ್‌ ಅವರನ್ನು ಫೆಡರಲ್‌ ಬ್ಯೂರೋ ಆಫ್‌ ಇನ್‌ ವೆಸ್ಟಿಗೇಶನ್‌ (ಎಫ್‌ ಬಿ ಐ) ಮುಖ್ಯಸ್ಥರಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇಮಕ ಮಾಡಿದ್ದಾರೆ.

ʼಕಾಶ್‌ʼ ಪಟೇಲ್‌ ಎಂಬುದಾಗಿಯೇ ಖ್ಯಾತಿ ಪಡೆದಿರುವ ಕಶ್ಯಪ್ ಪಟೇಲ್ ಅವರು ಟ್ರಂಪ್‌ ಕ್ಯಾಬಿನೆಟ್‌ ಗೆ ಸೇರಿರುವ ಎರಡನೇ ಭಾರತೀಯ ಮೂಲದ ಅಮೆರಿಕನ್‌ ಆಗಿದ್ದಾರೆ. ವಿವೇಕ ರಾಮಸ್ವಾಮಿ ಮೊದಲ ಭಾರತೀಯ ಮೂಲದ ಅಮೆರಿಕನ್.‌ ತುಳಸಿ ಗಬ್ಬಾರ್ಡ್‌ ಭಾರತೀಯ ಮೂಲದವರಲ್ಲದಿದ್ದರೂ ಹಿಂದೂ ಧರ್ಮವನ್ನು ಪ್ರೀತಿಸಿ ಅಪ್ಪಿಕೊಂಡವರು.

ಕಾಶ್‌ ಪಟೇಲ್‌ ನೇಮಕಾತಿಯ ವಿಚಾರವನ್ನು ಟ್ರಂಪ್‌ ಅವರು ಸಾಮಾಜಿಕ ಜಾಲತಾಣ ಸಂದೇಶದಲ್ಲಿ ಪ್ರಕಟಿಸಿದ್ದಾರೆ.

ʼಭಾರತೀಯ-ಅಮೆರಿಕನ್ ಕಾಶ್  ಅವರು ಗೌರವಾನ್ವಿತ ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರ ನೇತೃತ್ವದಲ್ಲಿ ಎಫ್‌ಬಿಐಗೆ ನಿಷ್ಠೆಶೌರ್ಯ ಮತ್ತು ಸಮಗ್ರತೆಯನ್ನು ಪುನಃಸ್ಥಾಪಿಸಲು ಕೆಲಸ ಮಾಡುತ್ತಾರೆʼ ಎಂದು ಹೇಳಿದ್ದಾರೆ.

 "ಕಶ್ಯಪ್ 'ಕಾಶ್ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ಮುಂದಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಕಾಶ್ ಅವರು ಅಸಾಧಾರಣ ವಕೀಲರುತನಿಖಾಧಿಕಾರಿ ಮತ್ತು 'ಅಮೆರಿಕ ಮೊದಲುʼ ಸಿದ್ಧಾಂತದ ಪ್ರತಿಪಾದಕರಾಗಿದ್ದು, ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಮತ್ತು ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಅಮೆರಿಕದ ಜನರನ್ನು ರಕ್ಷಿಸಲು ತಮ್ಮ ವೃತ್ತಿಜೀವನವನ್ನು ಮುಡಿಪಾಗಿಟ್ಟಿದ್ದಾರೆʼ ಎಂದು ಟ್ರಂಪ್‌ ಬರೆದಿದ್ದಾರೆ.

"ರಷ್ಯಾರಷ್ಯಾರಷ್ಯಾ" ಸುಳ್ಳನ್ನು ಬಹಿರಂಗಪಡಿಸುವಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸಿದ್ದರು. ಸತ್ಯಹೊಣೆಗಾರಿಕೆ ಮತ್ತು ಸಂವಿಧಾನದ ಪರವಾಗಿ ಸ್ಥಿರವಾಗಿ ನಿಂತಿದ್ದಾರೆ. ನನ್ನ ಮೊದಲ ಅವಧಿಯಲ್ಲಿ ಕಾಶ್ ಅವರು ರಕ್ಷಣಾ ಇಲಾಖೆಯಲ್ಲಿ ಸಿಬ್ಬಂದಿ ಮುಖ್ಯಸ್ಥರ ಸ್ಥಾನ ಹೊಂದಿದ್ದರು. ರಾಷ್ಟ್ರೀಯ ಗುಪ್ತಚರ ವಿಭಾಗದ ಉಪ ನಿರ್ದೇಶಕರು ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಭಯೋತ್ಪಾದನೆ ನಿಗ್ರಹದ ಹಿರಿಯ ನಿರ್ದೇಶಕರಾಗಿದ್ದರು” ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ಜಾಗತಿಕ ಮತ್ತು ದೇಶೀಯ ವಿಷಯಗಳ ಕುರಿತು ಕಾಶ್ ಪಟೇಲ್ ಅವರ ಅಭಿಪ್ರಾಯಗಳು ಅಮೆರಿಕದ ಮುಖ್ಯವಾಹಿನಿಯ ಮಾಧ್ಯಮದಿಂದ ಭಿನ್ನವಾಗಿರುವುದು ಎದ್ದು ಕಾಣುತ್ತದೆ. ಭಾರತೀಯ-ಅಮೆರಿಕನ್ ಮತ್ತು ಟ್ರಂಪ್ ನಿಷ್ಠಾವಂತರಾದ ಪಟೇಲ್ ಅವರು ಅಯೋಧ್ಯೆಯ ರಾಮ ಮಂದಿರದ ಬೆಂಬಲದ ಪ್ರಬಲ ಧ್ವನಿಯಾಗಿದ್ದಾರೆ.

ಪಾಶ್ಚ್ಯಾತ್ಯ ಮಾಧ್ಯಮ ನಿರೂಪಣೆಗಳು ಐತಿಹಾಸಿಕ ಮಹತ್ವವನ್ನು ನಿರ್ಲಕ್ಷಿಸಿವೆ ಎಂಬುದಾಗಿ ಕಾಶ್‌ ಪಟೇಲ್‌ ಹೇಳಿದ್ದರು.

ಪಾಶ್ಚ್ಯಾತ್ಯ ಮಾಧ್ಯಮಗಳ ಟೀಕೆಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂ "ತಪ್ಪು ಪ್ರಚಾರ" ಎಂದು ಅವರು ವಿವರಿಸಿದ್ದರು.

ರಾಮ ಮಂದಿರದ ಪ್ರತಿಷ್ಠಾಪನೆಯ ಸಮಯದಲ್ಲಿʼರಾಮ ಮಂದಿರ ನಿರ್ಮಾಣದಿಂದ ತಮಗೆ ತೊಂದರೆಯಾಗಿದೆʼ ಎಂದು ʼವಾಯ್ಸ್‌ ಆಫ್‌ ಅಮೇರಿಕʼ ಕ್ಕೆ ಹೇಳುವ ಮೂಲಕ ಯುಎಸ್‌  ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಂ (USCIRF) ಕಳವಳ ವ್ಯಕ್ತಪಡಿಸಿತ್ತು. ಅದೇ ರೀತಿದಿ ನ್ಯೂಯಾರ್ಕ್ ಟೈಮ್ಸ್ ಇದನ್ನು "ಹಿಂದೂ-ಫಸ್ಟ್ ಇಂಡಿಯಾ ಕಡೆಗೆ ವಿಜಯೋತ್ಸವ" ಎಂದು ಕರೆದಿತ್ತು.  "ಅಯೋಧ್ಯೆ ರಾಮಮಂದಿರ: ಭಾರತದ ಪ್ರಧಾನಿ ಮೋದಿ ಧ್ವಂಸಗೊಂಡ ಬಾಬರಿ ಮಸೀದಿ ಸ್ಥಳದಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು." ಎಂದು ಸಿಎನ್‌ ಎನ್‌ ವರದಿ ಮಾಡಿತ್ತು. ಇವುಗಳನ್ನು ಟೀಕಿಸಿದ್ದ ಕಾಶ್‌ ಪಟೇಲ್ ʼಅಮೆರಿಕದ ಮಾಧ್ಯಮವು ದೇವಾಲಯದ ಐತಿಹಾಸಿಕ ಬೇರುಗಳನ್ನು ನಿರ್ಲಕ್ಷಿಸಿ, ಕಳೆದ 50 ವರ್ಷಗಳ ಮೇಲೆ ಗಮನ ಕೇಂದ್ರೀಕರಿಸಿದೆʼ ಎಂದು ಆಪಾದಿಸಿದ್ದರು.

"ನೀವು ಹಿಂದೂ ಅಥವಾ ಮುಸ್ಲಿಮ್ ಆಗಿರಲಿ ಅಥವಾ ಇಲ್ಲದಿರಲಿ ಈ ವಿಚಾರ ಸತ್ಯ. 1500 ವರ್ಷಗಳ ಹಿಂದೆ ಹಿಂದೂ ಪಂಥೀಯರ  ಸರ್ವೋತ್ಕೃಷ್ಟ ದೇವರುಗಳಲ್ಲಿ ಒಂದಕ್ಕೆ ಹಿಂದೂ ದೇವಾಲಯವಿತ್ತುಅದನ್ನು ಉರುಳಿಸಲಾಯಿತು ಮತ್ತು ಅದನ್ನು ಮರಳಿ ಪಡೆಯಲು ಅವರು 500 ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ವಾಷಿಂಗ್ಟನ್ ಸಂಸ್ಥೆಗಳು ಇತಿಹಾಸದ ಈ ಭಾಗವನ್ನು ತಮ್ಮ ಜಾಣತನಕ್ಕೆ ತಕ್ಕಂತೆ  ಮರೆತಿವೆ ”ಎಂದು ಕಾಶ್‌ ಪಟೇಲ್‌ ಕಳೆದ ಫೆಬ್ರುವರಿಯಲ್ಲಿ ಹೇಳಿದ್ದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


PARYAYA: ರಾಮಮಂದಿರದ ಪ್ರಬಲ ಬೆಂಬಲಿಗ ʼಕಾಶ್‌ʼ ಪಟೇಲ್ ಎಫ್‌ ಬಿಐ ಮುಖ...:   ರಾಮಮಂದಿರದ ಪ್ರಬಲ ಬೆಂಬಲಿಗ ʼ ಕಾಶ್‌ ʼ ಪಟೇಲ್ ಎಫ್‌ ಬಿಐ ಮುಖ್ಯಸ್ಥ ಬೆಂ ಗಳೂರು: ವಿವೇಕ ರಾಮಸ್ವಾಮಿ ಮತ್ತು ತುಳಸಿ ಗಬ್ಬಾರ್ಡ್‌ ಅವರ ಬಳಿಕ ಭಾರತ ಪರ ಅಭಿಪ್ರಾಯ ಹ...