ಇಂದಿನ ಇತಿಹಾಸ History Today ಜನವರಿ 22
2021: ನವದೆಹಲಿ: ಸುಮಾರು ಎರಡು ತಿಂಗಳ ಸುದೀರ್ಘ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಚಳವಳಿ ನಿರತ ಕೃಷಿ ಮುಖಂಡರ ನಡುವಣ ಹನ್ನೊಂದನೇ ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸುವ ರೈತ ಸಂಘಗಳ ಜೊತೆಗಿನ ಮಾತುಕತೆಯಿಂದ ಹೊರನಡೆಯಲು ತಾನು ಸಿದ್ಧವಾಗಿರುವುದಾಗಿ ಎಂದು ಕೇಂದ್ರ ಸರ್ಕಾರ 2021 ಜನವರಿ 22ರ ಶುಕ್ರವಾರ ಸುಳಿವು ನೀಡಿತು. ತನ್ನ ನಿಲುವನ್ನು ಬಿಗಿಗೊಳಿಸಿದ ಸರ್ಕಾರ, ಕಾನೂನುಗಳ ಅನುಷ್ಠಾನವನ್ನು ೧೮ ತಿಂಗಳುಗಳವರೆಗೆ ತಡೆಹಿಡಿಯುವ ಪ್ರಸ್ತಾಪವು ತನ್ನ ‘ಅತ್ಯುತ್ತಮ ಮತ್ತು ಕೊನೆಯ ಕೊಡುಗೆ’ ಎಂದು ಹೇಳಿದೆ ಮತ್ತು ಕಾನೂನಿನಲ್ಲಿ ಯಾವುದೇ ಲೋಪವಿಲ್ಲ ಎಂದು ಪುನರುಚ್ಚರಿಸಿದ್ದರೂ ಸಹ, ಈ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಪ್ರತಿಭಟನಕಾರ ರೈತರನ್ನು ಕೋರಿತು. ಸರ್ಕಾರದ ಪ್ರಸ್ತಾವನೆಯ ಕುರಿತು ರೈತರು ಮಾತನಾಡಲು ಸಿದ್ಧರಾದಾಗ ಮಾತ್ರ ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈದಿನ ಘೋಷಿಸಿದರು. "ನಿಮ್ಮ ಕಳವಳಕ್ಕೆ ಸ್ಪಂದಿಸಲು ನಾವು ಯೋಚಿಸಿದ್ದೆವು. ಆದರೆ ಪ್ರಸ್ತಾಪದಲ್ಲಿ ಯಾವುದೇ ತಪ್ಪು ಇಲ್ಲ. ನಾವು ನಿಮಗೆ ಉತ್ತಮ ಪ್ರಸ್ತಾಪವನ್ನು ನೀಡಿದ್ದೇವೆ. ದುರದೃಷ್ಟವಶಾತ್ ನೀವು ಅದನ್ನು ತಿರಸ್ಕರಿಸಿದ್ದೀರಿ’ ಎಂದು ತೋಮರ್ ಸಭೆಯಲ್ಲಿ ಹೇಳಿದರು.(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment