ಇಂದಿನ ಇತಿಹಾಸ History Today ಜನವರಿ 21
2021: ನವದೆಹಲಿ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಟ್ಟಡದಲ್ಲಿ 2021 ಜನವರಿ 21ರ ಗುರುವಾರ ಎರಡು ಬಾರಿ ಅಗ್ನಿಅನಾಹುತ ಸಂಭವಿಸಿದ್ದು, ಮೊದಲಿಗೆ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಐದು ಸುಟ್ಟ ಶವಗಳು ಪತ್ತೆಯಾಗಿವೆ ಎಂದು ಪುಣೆಯ ಮೇಯರ್ ಮುರಳೀಧರ್ ಮೊಹೋಲ್ ಹೇಳಿದರು. ಕಟ್ಟಡದಲ್ಲಿ ಸಿಕ್ಕಿಬಿದ್ದ ಇತರ ಕೆಲವರನ್ನು ರಕ್ಷಿಸಲಾಗಿದೆ. ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ವೆಲ್ಡಿಂಗ್ ಕೆಲಸವು ಬೆಂಕಿಗೆ ಕಾರಣವಾಗಿದೆ ಎಂದು ಊಹಿಸಲಾಗಿದೆ ಎಂದು ಅವರು ಹೇಳಿದರು. ಕಂಪೆನಿಯ ಸಿಇಒ ಮೊದಲಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದರು, ಆದರೆ ಸಾವುಗಳು ದೃಢಪಟ್ಟ ನಂತರ ತಮ್ಮ ಹೇಳಿಕೆಯನ್ನು ಪರಿಷ್ಕರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2021: ನವದೆಹಲಿ: ಎರಡನೇ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಗಗಳಿಗೆ ಕೋವಿಡ್ -೧೯ ವಿರುದ್ಧ ಲಸಿಕೆ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ೫೦ ವರ್ಷಕ್ಕಿಂತ ಮೇಲ್ಪಟ್ಟ ಇತರ ರಾಜಕಾರಣಿಗಳ ಸರದಿ ಮುಂದಿನ ಹಂತದಲ್ಲಿ ಬರಲಿದೆ ಎಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಹೇಳಿದರು. ಹೆಲ್ತ್ಕೇರ್ ಮತ್ತು ಮುಂಚೂಣಿ ಕಾರ್ಯಕರ್ತರಾದ ಪೋಲಿಸ್, ಸಶಸ್ತ್ರ ಪಡೆ ಮತ್ತು ಪೌರ ಕಾರ್ಮಿಕ ನಂತರ, ಲಸಿಕೆ ಹಾಕುವ ಮೂರನೇ ವರ್ಗವು ೫೦ ವರ್ಷಕ್ಕಿಂತ ಮೇಲ್ಪಟ್ಟವರಾಗಿರಬಹುದು, ನಂತರ ಸಹ ಕಾಯಿಲೆಗಳಿಂದ ಬಳಲುತ್ತಿರುವ ೫೦ ಕ್ಕಿಂತ ಕಡಿಮೆ ವಯಸ್ಸಿನವರಿಗೆ ಚಚ್ಚುಮದ್ದು ನೀಡಲಾಗುವುದು. ನವೆಂಬರ್ ೨೪ ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಮುಖ್ಯಮಂತ್ರಿಗಳ ನಡುವಣ ಸಭೆಯಲ್ಲಿ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಆದ್ಯತೆಯ ಬಗ್ಗೆ ಚರ್ಚಿಸಲಾಗಿತ್ತು ಮತ್ತು ರಾಜ್ಯ ಸರ್ಕಾರಗಳಿಗೆ ಆ ಬಗ್ಗೆ ತಿಳಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2021: ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ನಗರ ಪ್ರದೇಶಗಳಲ್ಲಿ ೧.೬೮ ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 2021 ಜನವರಿ 21ರ ಗುರುವಾರ ಅನುಮೋದನೆ ನೀಡಿತು. ಕೇಂದ್ರ ಅನುಮೋದನೆ ಮತ್ತು ನಿರ್ವಹಣಾ ಸಮಿತಿ (ಸಿಎಸ್ಎಂಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿತು. ಸಭೆಯಲ್ಲಿ ೧೪ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು. ಪಿಎಂಎವೈ-ಯು ಅಡಿಯಲ್ಲಿ ಇದುವರೆಗೆ ೪೧ ಲಕ್ಷ ಮನೆಗಳು ಪೂರ್ಣಗೊಂಡಿದ್ದು, ೭೦ ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ಸಚಿವಾಲಯ ತಿಳಿಸಿತು. ಪಿಎಂಎವೈ (ನಗರ) ಅಡಿಯಲ್ಲಿ ಕೇಂದ್ರ ಮಂಜೂರು ಮತ್ತು ನಿರ್ವಹಣಾ ಸಮಿತಿ (ಸಿಎಸ್ಎಂಸಿ) ಸಭೆಯಲ್ಲಿ ೧,೬೮,೬೦೬ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment