ಇಂದಿನ ಇತಿಹಾಸ History Today ಜನವರಿ 16
2021: ನವದೆಹಲಿ: ನೈರ್ಮಲ್ಯ ಕಾರ್ಯಕರ್ತ ಮನೀಶ ಕುಮಾರ್ ಅವರು 2021 ಜನವರಿ 16ರ ಶನಿವಾರ ಕೋವಿಡ್ -೧೯ ವಿರುದ್ಧ ಲಸಿಕೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದಿನದ ಅಂತ್ಯದ ವೇಳೆಗೆ 1.91 ಚುಚ್ಚುಮದ್ದು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬೃಹತ್ ಚುಚ್ಚುಮದ್ದು ಅಭಿಯಾನ ಪ್ರಾರಂಭದ ಅಂಗವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಮುಂಚೂಣಿ ಕಾರ್ಮಿಕರು ಮತ್ತು ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದರು ಮತ್ತು ಲಸಿಕೆಗಳ ಬಗ್ಗೆ ಪ್ರಚಾರ ಅಥವಾ ವದಂತಿಗಳಿಗೆ ಸಿಲುಕದಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದರು . ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಆಲ್-ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ -ಏಮ್ಸ್) ನಲ್ಲಿ ಮನೀಶ ಕುಮಾರ್ ತಮ್ಮ ಮೊದಲ ಚುಚ್ಚುಮದ್ದು ಪಡೆದರು. ಇದು ದೇಶಾದ್ಯಂತ ಸ್ಥಾಪಿಸಲಾದ ೩,೦೦೦ ಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಒಂದಾಗಿದೆ. ರೋಗನಿರೋಧಕ ಅಭಿಯಾನದ ಮೊದಲ ದಿನ, ೩ ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದೆ ಎಂದು ಸರ್ಕಾರ ಹೇಳಿದೆ. ದಿನದ ಅಂತ್ಯದ ವೇಳೆಗೆ ೧.೯೧ ಲಕ್ಷ ಚುಚ್ಚುಮದ್ದು ನೀಡಲಾಗಿದೆ ಎಂದು ಅದು ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment