Showing posts with label ರಥೋತ್ಸವ. Show all posts
Showing posts with label ರಥೋತ್ಸವ. Show all posts

Sunday, April 26, 2026

PARYAYA: ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

 ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

ಬೆಂಗಳೂರು ಗಿರಿನಗರದ ಒಡೆಯ ಶ್ರೀ ಮಹಾಗಣಪತಿಯ ರಥೋತ್ಸವವು ೨೦೨೬ ಏಪ್ರಿಲ್‌ ೨೬ರ ಭಾನುವಾರ ಸಡಗರದೊಂದಿಗೆ ನೆರವೇರಿತು.

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶ್ರೀ ಮಹಾಗಣಪತಿ ಜಾತ್ರೆಯ ಪ್ರಯುಕ್ತ ಏಪ್ರಿಲ್‌ ೨೨ರಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೨ರಂದು ನವಗ್ರಹ ಶಾಂತಿ ಹೋಮ, ಅಥರ್ವ ಶೀರ್ಷ ಹೋಮ, ಏಪ್ರಿಲ್‌ ೨೩ರಂದು ಅಥರ್ವ ಶೀರ್ಷ ಹೋಮ, ದುರ್ಗಾ ದೀಪ ನಮಸ್ಕಾರ, ಏಪ್ರಿಲ್‌ ೨೪ರಂದು ಸುಬ್ರಹ್ಮಣ್ಯ ಹೋಮ, ರಂಗಪೂಜೆ, ಏಪ್ರಿಲ್‌ ೨೫ರಂದು ನಾಗಮೂಲಮಂತ್ರ ಹೋಮ, ಆಶ್ಲೇಷಬಲಿ, ಪಲ್ಲಕ್ಕಿ ಉತ್ಸವ ನಡೆದವು.

ಏಪ್ರಿಲ್‌ ೨೬ರಂದು ಅಥರ್ವಶೀರ್ಷ ಹೋಮ, ರಥೋತ್ಸವ, ದೇವನೃತ್ಯ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೭ರಂದು ಸಹಸ್ರಮೋದಕ ಅಥರ್ವಶೀರ್ಷ ಹವನ ಹಾಗೂ ಅವಭೃತದೊಂದಿಗೆ ಜಾತ್ರೆ ಮುಕ್ತಾಯ.

ಭಾನುವಾರ ನಡೆದ ಸಂಭ್ರಮದ ರಥೋತ್ಸವದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಈ ಸಂದರ್ಭದ ಕೆಲವು ವಿಡಿಯೋಗಳು ಹಾಗೂ ಚಿತ್ರಗಳು ಇಲ್ಲಿವೆ.

PARYAYA: ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ:   ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ ಬೆಂ ಗಳೂರು ಗಿರಿನಗರದ ಒಡೆಯ ಶ್ರೀ ಮಹಾಗಣಪತಿಯ ರಥೋತ್ಸವವು ೨೦೨೬ ಏಪ್ರಿಲ್‌ ೨೬ರ ಭಾನುವಾರ ಸಡಗರದೊಂದಿಗೆ ನೆರವೇರಿತು. ಶ್ರೀ ರಾಮ...

Monday, May 1, 2023

PARYAYA: ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

 ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

ಹೌದು. ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ. ಇದು ಬೆಂಗಳೂರಿನ ಗಿರಿನಗರದ ಮೂಲ ದೇವರಾದ ಮಹಾಗಣಪತಿಯ ರಥೋತ್ಸವ.
ಬೆಂಗಳೂರಿನ ಗಿರಿನಗರದಲ್ಲಿ ಮಹಾಗಣಪತಿ ರಥೋತ್ಸವ ಏಪ್ರಿಲ್‌ ೨೬ರಿಂದ ಮೇ ೦೧ರವರೆಗೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು.

ಕರ್ನಾಟಕದ ಪಶ್ಚಿಮ ಕರಾವಳಿಯ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳದಲ್ಲಿ ನಡೆಯುವ ಮಾದರಿಯಲ್ಲಿ ಜಾತ್ರೆ ಹಾಗೂ ರಥೋತ್ಸವ ಇಲ್ಲಿನ ಆಸುಪಾಸಿನ ಭಕ್ತಾದಿಗಳನ್ನು ವಿಶೇಷವಾಗಿ ಆಕರ್ಷಿಸಿತು.

ಕೇರಳ, ದಕ್ಷಿಣ ಕನ್ನಡ, ಉಡುಪಿ ದೇವಾಲಯಗಳ ಮಾದರಿಯ  ದರ್ಶನಬಲಿ, ದೇವನೃತ್ಯ, ರಂಗಪೂಜೆ, ಮತ್ತು ವಿಶೇಷವಾಗಿ ಚೆಂಡೆ ವಾದನ, ಕೊಂಬು ಕಹಳೆಯೊಂದಿಗೆ ಮಹಾರಥೋತ್ಸವ ಜರುಗಿತು.


ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕೂಡಾ ೨೦೨೨ರಲ್ಲಿ ಕೇರಳ, ಕರ್ನಾಟಕದ ಪಶ್ಚಿಮ ಕರಾವಳಿ ಮಾದರಿಯಲ್ಲೇ ನೆರವೇರಿತ್ತು.


ಏಪ್ರಿಲ್‌ ೩೦ರಂದು ನಡೆದ ಮಹಾಗಣಪತಿ ದೇವರ ರಥೋತ್ಸವ ಸಂಭ್ರಮದ ವಿಡಿಯೋಗಳು ಇಲ್ಲಿವೆ.


PARYAYA: ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..:   ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ.. ಹೌದು. ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ. ಇದು ಬೆಂಗಳೂರಿನ ಗಿರಿನಗರದ ಮೂಲ ದೇವರಾದ ಮಹಾಗಣಪತಿಯ ರಥೋತ್ಸವ. ಬೆಂಗಳೂರ...

Monday, January 21, 2019

ವಿಟ್ಲ ರಥೋತ್ಸವ ವೈಭವ


ವಿಟ್ಲ ರಥೋತ್ಸವ ವೈಭವ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ  ದೇವರ ರಥೋತ್ಸವವು 2019 ಜನವರಿ 21ರ ಸೋಮವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಸಂದರ್ಭದ ವಿಡಿಯೋ ಇಲ್ಲಿದೆ:  

(ಕೃಪೆ : ವಿಟ್ಲ ಸುದ್ದಿಗಳು ಆಪ್)