ನಾನು ಮೆಚ್ಚಿದ ವಾಟ್ಸಪ್

Monday, October 30, 2023

PARYAYA: ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌....

 ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌..

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ʼಬಾನಾಸುʼ ಎಂಬ ಕಾವ್ಯನಾಮದೊಂದಿಗೆ ಸುಮಾರು ೪೩ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಕನ್ನಡ ಸಿನಿಮಾ ರಂಗದ ಅಂತರಂಗವನ್ನು ತೆರೆದು ಓದುಗರ ಮುಂದೆ ಇಟ್ಟ ಹಿರಿಯ ಚಲನಚಿತ್ರ ಪತ್ರಕರ್ತ ಬಾಡೂರು ನಾರಾಯಣ ಆಚಾರ್ಯ ಸುಬ್ರಹ್ಮಣ್ಯ (ಬಾನಾಸು) ಅವರು ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ʼಶ್ರೇಷ್ಠ ಚಲನಚಿತ್ರ ವಿಮರ್ಶಕʼ ರಾಷ್ಟ್ರೀಯ ಪ್ರಶಸ್ತಿಯನ್ನು ೨೦೨೩ರ ಅಕ್ಟೋಬರ್‌ ೧೭ರಂದು ನವದೆಹಲಿಯಲ್ಲಿ ಸ್ವೀಕರಿಸಿದರು.

೬೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ೨೦೨೩ನೇ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕನ್ನಡ ಪತ್ರಿಕೋದ್ಯಮ ರಂಗದಲ್ಲಿ ಸುಬ್ಬಣ್ಣ ಎಂದೇ ಆತ್ಮೀಯವಾಗಿ ಪರಿಚಿತರಾಗಿರುವ ಬಾನಾಸು ಮಹತ್ವದ ಸಿನಿಮಾ ಪತ್ರಕರ್ತ. ಕಾಸರಗೋಡು ಜಿಲ್ಲೆಯ ಬಾಡೂರು ಎಂಬ ಗ್ರಾಮದಲ್ಲಿರುವ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದವರು.

ನಂತರ ಕಾಸರಗೋಡಿನಲ್ಲಿ ಸರಕಾರಿ ಮಹಾ ವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಪಡೆದು ಕಲ್ಲಿಕೋಟೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸ್ನಾತಕೋತ್ತರ (ಎಂಎ) ಪದವಿಯನ್ನು 1976ರಲ್ಲಿ ಮುಗಿಸಿದರು.
ಸಿನಿಮಾ ರಂಗದತ್ತ ಆಕರ್ಷಿತರಾದ ಸುಬ್ರಹ್ಮಣ್ಯ, ಸ್ಯಾಂಡಲ್ ವುಡ್ ವಿವರಗಳನ್ನು ಅನೇಕ ಸಿನಿಮಾ ಪತ್ರಿಕೆಗಳಿಗೆ ವರದಿ ಮಾಡುವ ಮೂಲಕ  ಪ್ರಾಮಾಣಿಕವಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಅತ್ಯುತ್ತಮ ಚಲನಚಿತ್ರ ವಿಮರ್ಶಕ ರಾಷ್ಟ್ರೀಯ ಪ್ರಶಸ್ತಿಯು ಅವರ ಅಪ್ರತಿಮ ಕೊಡುಗೆಗಾಗಿ ಸಂದಿರುವ ರಾಷ್ಟ್ರೀಯ ಮಟ್ಟದ ಪುರಸ್ಕಾರವಾಗಿದೆ. ಅಭಿನಂದನೆಗಳು ಸುಬ್ಬಣ್ಣ.

ಸುಬ್ಬಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದ ಚಿತ್ರ ಹಾಗೂ ವಿಡಿಯೋ ಇಲ್ಲಿದೆ:


ಬಾನಾಸು ಜೊತೆಗೇ ಅತ್ಯುತ್ತಮ ಕನ್ನಡ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಇನ್ನೊಬ್ಬ ಕನ್ನಡಿಗ ಕಿರಣ್‌ ರಾಜ್.‌ ʼ೭೭೭ ಚಾರ್ಲಿʼ ಚಿತ್ರಕ್ಕಾಗಿ ಈ ಪ್ರಶಸ್ತಿಯನ್ನು ಪಡೆದ ಕಿರಣ್‌ ರಾಜ್‌ ಅವರು ಕೂಡಾ ಕಾಸರಗೋಡಿನವರೇ.

ಕಿರಣ್ ರಾಜ್ ಅವರು ಸಮೀಪದ ಮಲ್ಲಮೂಲೆಯ ದಿ.ಅಚ್ಚುತ ಮಣಿಯಾಣಿ ಯವರ ಸುಪುತ್ರನಾಗಿದ್ದು ಮಲ್ಲಮೂಲೆ ಹಾಗೂ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಸ್ಕೂಲ್ ನಲ್ಲಿ ಶಿಕ್ಷಣ ಪಡೆದವರು. ನಂತರ ರಂಗಭೂಮಿಗೆ ಆಕರ್ಷಿತರಾಗಿ ಕಾಸರಗೋಡಿನ ರಂಗಭೂಮಿಯಲ್ಲಿ ಖ್ಯಾತ ರಂಗನಿರ್ದೇಶಕ ಕಾಸರಗೋಡು ಉಮೇಶ ಸಾಲಿಯಾನ ಅವರ ಜೊತೆ ರತ್ನಾಕರ ಮಲ್ಲಮೂಲೆ ಅವರು ಬರೆದ “ಮಳೆ ನಿಂತ ಮೇಲೆ” ನಾಟಕದಲ್ಲಿ ಅಭಿನಯಿಸಿ ರಂಗಭೂಮಿ ಪ್ರವೇಶಿಸಿದರು.

ಆನಂತರ ಬೆಂಗಳೂರಿನ ಆದರ್ಶ ಫಿಲಂ ಸಂಸ್ಥೆಯನ್ನು ಸೇರಿದರು.  ಇವರು “ಕಾವಳ” ಎಂಬ ಟೆಲಿ ಫಿಲಂ ಮಾಡಿ ಜನಪ್ರಿಯರಾದರು. ಆನಂತರ ರಿಷಭ್ ಶೆಟ್ಟಿ ಅವರ “ಕಿರಿಕ್ ಪಾರ್ಟಿ” ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಗಳಿಸಿಕೊಂಡರು. ಬಳಿಕ ‘777 ಚಾರ್ಲಿ’ ಸಿನಿಮಾ ಕಥೆ ಹಾಗೂ ನಿರ್ದೇಶಕನಾಗಿ ಮತ್ತು ಅದರಲ್ಲೇ ಮಿಂಚಿ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದರು.

ರಂಗಭೂಮಿಯಿಂದ ಚಿತ್ರರಂಗತ್ತ ಹೊರಟು ಚಲನ ಚಿತ್ರ ತಯಾರಿಸಲು ಅವಕಾಶ ಸಿಕ್ಕಾಗ ಅವರು ಸ್ವತಃ ಬರೆದು ನಿರ್ದೇಶಿಸಿದ ಮೊತ್ತ ಮೊದಲ ಕಥೆಯೇ  ʼ೭೭೭ ಚಾರ್ಲಿʼ ಆಗಿತ್ತು ಎಂಬುದು ಇನ್ನೊಂದು ವಿಶೇಷ.

ರಕ್ಷಿತ್‌ ಶೆಟ್ಟಿ ಅವರು ಅಭಿನಯಿಸಿರುವ ಈ ಚಿತ್ರ ಇದಕ್ಕೂ ಮುನ್ನ ಇದೇ ವರ್ಷ ದೆಹಲಿಯಲ್ಲಿ ನಡೆದ ದಾದಾಸಾಹೇಬ್‌ ಫಾಲ್ಕೆ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗಿತ್ತು..

PARYAYA: ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌....:   ಅಭಿನಂದನೆಗಳು ಮತ್ತೊಮ್ಮೆ ಬಾನಾಸು, ಕಿರಣ್‌ ರಾಜ್‌.. ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ʼ ಬಾನಾಸು ʼ ಎಂಬ ಕಾವ್ಯನಾಮದೊಂದಿಗೆ ಸುಮಾರು ೪೩ ಕ್ಕೂ ಹೆಚ್ಚು ವರ್ಷಗಳಿಂದ...

Saturday, October 14, 2023

PARYAYA: ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯ...

 ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ

ಬೆಂಗಳೂರು: ರೇಡಿಯೋ ಶಿವಮೊಗ್ಗದಲ್ಲಿ 2023 ಅಕ್ಟೋಬರ್‌ 15ರ ಭಾನುವಾರ ಬೆಳಗ್ಗೆ 8  ಗಂಟೆಗೆ  ʼಆತ್ಮ ನಿರ್ಭರ ಗ್ರಾಮ ಪಂಚಾಯ್ತಿʼ ವಿಶಿಷ್ಟ ಕಾರ್ಯಕ್ರಮ ಮೂಡಿಬಂತು.

ಅಕ್ಟೋಬರ್‌ 15ರ ಭಾನುವಾರದಿಂದ ಪ್ರತಿ ಭಾನುವಾರವೂ ಬೆಳಗ್ಗೆ 8 ಗಂಟೆಗೆ ರೇಡಿಯೋ ಶಿವಮೊಗ್ಗ 90.8 ಎಫ್‌ ಎಂ ನಲ್ಲಿ ಡಿಜಿಟಲ್‌ ತಂತ್ರಜ್ಞಾನ ಪರಿಣತ ಡಾ. ಶಂಕರ ಕೆ. ಪ್ರಸಾದ್‌ ಅವರು ರಚಿಸಿರುವ 21ನೆಯ ಶತಮಾನದ ಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕೃತಿಯನ್ನು ಆಧರಿಸಿದ ಬಾನುಲಿ ಕಾರ್ಯಕ್ರಮ ಬಿತ್ತರಗೊಳ್ಳಲಿದೆ ಎಂದು ರೇಡಿಯೋ ಶಿವಮೊಗ್ಗ ಮತ್ತು ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇಂದಿನ ಬಾನುಲಿಯಲ್ಲಿ ಬಂದ ವಿಚಾರಗಳೇನು?

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ನೋಡಿ:


ಇದನ್ನೂ ಓದಿರಿ:

ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ

PARYAYA: ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯ...:   ಶಿವಮೊಗ್ಗ ಬಾನುಲಿಯಲ್ಲಿ ಬಂತು ʼ ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ʼ ಬೆಂಗಳೂರು : ರೇಡಿಯೋ ಶಿವಮೊಗ್ಗದಲ್ಲಿ 2023 ಅಕ್ಟೋಬರ್‌ 15ರ ಭಾನುವಾರ ಬೆಳಗ್ಗೆ 8   ಗಂಟೆಗೆ   ʼ...

PARYAYA: ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ

 ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ

ಬೆಂಗಳೂರು: ರೇಡಿಯೋ ಶಿವಮೊಗ್ಗದಲ್ಲಿ 2023 ಅಕ್ಟೋಬರ್‌ 15ರ ಭಾನುವಾರದಿಂದ ಪ್ರತಿ ಭಾನುವಾರ ʼಆತ್ಮ ನಿರ್ಭರ ಗ್ರಾಮ ಪಂಚಾಯ್ತಿʼ ವಿಶಿಷ್ಟ ಕಾರ್ಯಕ್ರಮ ಕೇಳಿಬರಲಿದೆ.

ಅಕ್ಟೋಬರ್‌ 15ರ ಭಾನುವಾರದಿಂದ ಪ್ರತಿ ಭಾನುವಾರವೂ ಬೆಳಗ್ಗೆ 8 ಗಂಟೆಗೆ ರೇಡಿಯೋ ಶಿವಮೊಗ್ಗ 90.8 ಎಫ್‌ ಎಂ ನಲ್ಲಿ ಡಿಜಿಟಲ್‌ ತಂತ್ರಜ್ಞಾನ ಪರಿಣತ ಡಾ. ಶಂಕರ ಕೆ. ಪ್ರಸಾದ್‌ ಅವರು ರಚಿಸಿರುವ 21ನೆಯ ಶತಮಾನದ ಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕೃತಿಯನ್ನು ಆಧರಿಸಿದ ಬಾನುಲಿ ಕಾರ್ಯಕ್ರಮ ಬಿತ್ತರಗೊಳ್ಳಲಿದೆ ಎಂದು ರೇಡಿಯೋ ಶಿವಮೊಗ್ಗ ಮತ್ತು ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು, ಗ್ರಾಮ ಪಂಚಾಯಿತಿ ಅಧಿಕಾರಿ ಸಿಬ್ಬಂದಿವರ್ಗ ಡಿಜಿಟಲ್ ಯುಗದಲ್ಲಿ ವಿಕೇಂದ್ರೀಕರಣದ ಆಶಯಗಳನ್ನು ಅಳವಡಿಸಿಕೊಳ್ಳುವಲ್ಲಿ ತಂತ್ರಜ್ಞಾನವನ್ನು ಹೇಗೆ ಪರಿಣಾಮಕಾರಿಯಾಗಿ ಸಂಪರ್ಕ ಸೇತುವೆಯಾಗಿ ಅಳವಡಿಸಿಕೊಳ್ಳಬಹುದು? ಮೊಬೈಲಿನಿಂದಲೇ ಹೇಗೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ತಮ್ಮ ಕೆಲಸಗಳನ್ನು ಮಾಡಬಹುದು ಎಂಬ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾಹಿತಿ ಸಿಗಲಿದೆ.

ಈ ಸರಣಿಯು ಗ್ರಾಮಪಂಚಾಯ್ತಿ ಸದಸ್ಯರಿಗೆ ಮಾತ್ರವಲ್ಲ, ಜನಸಾಮಾನ್ಯರಿಗೆ, ಯುವ ಸಮೂಹಕ್ಕೆ ಡಿಜಿಟಲ್ ಯುಗದ ಅನಂತ ಸಾಧ್ಯತೆಗಳನ್ನು ತೆರೆದಿಡಲಿದೆ.

ಈ ವಿಶಿಷ್ಟ ಸರಣಿ ಕಾರ್ಯಕ್ರಮಕ್ಕೆ ಡಾ. ಶಂಕರ ಪ್ರಸಾದ್‌ ಅವರು ಮಾರ್ಗದರ್ಶನ ಮಾಡಲಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮವನ್ನು ರೇಡಿಯೋ ಶಿವಮೊಗ್ಗದಲ್ಲಿ ಈ ಕೆಳಗಿನ ಲಿಂಕ್‌ ಬಳಸಿ ಕೇಳಬಹುದು :

ಆಂಡ್ರಾಯಿಡ್‌ ಫೋನುಗಳಲ್ಲಿ:

https://play.google.com/store/apps/details?id=com.atclabs.radioshivmogga

 ಆಪಲ್‌ ಫೋನುಗಳಲ್ಲಿ:

https://apps.apple.com/us/app/radio-shivamogga-fm-90-8-mhz/id1610322211?platform=iphone

ಆಲಿಸಲು  ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


PARYAYA: ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ:   ರೇಡಿಯೋ ಶಿವಮೊಗ್ಗದಲ್ಲಿ ʼ ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ʼ ಬೆಂಗಳೂರು: ರೇಡಿಯೋ ಶಿವಮೊಗ್ಗದಲ್ಲಿ 2023 ಅಕ್ಟೋಬರ್‌ 15ರ ಭಾನುವಾರದಿಂದ ಪ್ರತಿ ಭಾನುವಾರ ʼ ಆತ್ಮ ನಿ...

Wednesday, October 4, 2023

PARYAYA: ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು!

 ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು!

ಇದು ಸುವರ್ಣ ನೋಟ

ಬಿಟ್ಟು ಬಿಡಬೇಕಂತೆ

ತಮಿಳುನಾಡಿಗೆ ನೀರು

ಎಲ್ಲಿಂದ ಬಿಡಲಿ ನಾನು?

ನನ್ನ ಒಡಲೇ ಇಲ್ಲಿ ಬರಿದಾಗುತಿದೆಯಲ್ಲ?

ಎಲ್ಲಿಂದ ಬಿಡಲಿ ನೀರು?

 

ಗಿಡಮರಗಳೆಲ್ಲ

ಒಣ ಒಣಗಿ ಹೋಗುತಿವೆ

ಎಲ್ಲಿಂದ ಬಿಡಲಿ ನೀರು?

ನನ್ನನ್ನೇ ನಂಬಿರುವ

ಪ್ರಾಣಿ ಪಕ್ಷಿಗಳಿಗೆ ಇನ್ನೆಷ್ಟು

ದಿನವೋ ನೀರು?

 

ಕಾದು ಕುಳಿತಿಹೆ ನಾನು

ನೀರು ಬಿಡದಿರಲೆಂದು

ಬಿಟ್ಟು ಮನೆಯೊಡೆಯನ

ಮನೆಯ ಸೂರು!

ಆದರೂ ಅಲ್ಲೆಲ್ಲ ನಡೆಯುತಿದೆಯಂತೆ

ನೀರಿಗಾಗಿ ಕದನ ಜೋರು!

 ಚಿತ್ರಗಳು: ವಿಶ್ವನಾಥ ಸುವರ್ಣ

ಕವನ, ವಿಡಿಯೋ: ನೆತ್ರಕೆರೆ ಉದಯಶಂಕರ

ಚಿತ್ರಗಳ ಸಮೀಪ ದೃಶ್ಯಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ವಿಡಿಯೋ ನೋಡಲು ಹಾಡು ಕೇಳಲು  ಕೆಳಗಿನ ಚಿತ್ರ ಕ್ಲಿಕ್‌ ಮಾಡಿ.


PARYAYA: ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು!:   ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು! ಇದು ಸುವರ್ಣ ನೋಟ ಬಿಟ್ಟು ಬಿಡಬೇಕಂತೆ ತಮಿಳುನಾಡಿಗೆ ನೀರು ಎಲ್ಲಿಂದ ಬಿಡಲಿ ನಾನು? ನನ್ನ ಒಡಲೇ ಇಲ್ಲಿ ಬರಿದಾಗುತ...

Monday, October 2, 2023

PARYAYA: ಸ್ವಚ್ಛತೆಯೇ ಸೇವೆ.. ಸ್ವಚ್ಛತಾ ಹಿ ಸೇವಾ

 ಸ್ವಚ್ಛತೆಯೇ ಸೇವೆ.. ಸ್ವಚ್ಛತಾ ಹಿ ಸೇವಾ

ಬೆಂಗಳೂರು: ಇಂದು ೨೦೨೩ ಅಕ್ಟೋಬರ್‌ ೨ರ ಸೋಮವಾರ. ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜನ್ಮದಿನ. ಮಹಾತ್ಮ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅಪಾರ ಕೊಡುಗೆ ನೀಡಿದ್ದರೆ, ಶಾಸ್ತ್ರಿ ಅವರು ದೇಶ ರಕ್ಷಣೆಯಲ್ಲಿ ಅಪಾರ ಕೊಡುಗೆ ನೀಡಿದವರು. ಪಡೆದ ಸ್ವಾತಂತ್ರ್ಯ ಉಳಿಸಿಕೊಳ್ಳುವಲ್ಲಿ ಅವರು ಶಾಸ್ತ್ರಿ ಅವರು ನೀಡಿದ ಕೊಡುಗೆ ಮರೆಯಲಾಗದಂತಹುದು. ಅವರು ಕೊಟ್ಟ ಜೈ ಜವಾನ್‌ ಜೈ ಕಿಸಾನ್‌ ಘೋಷಣೆ ಎಂದೆಂದಿಗೂ ಮರೆಯಲಾಗದಂತಹುದು.

ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಲಭಿಸಿದ ಬಳಿಕವೂ ನಮ್ಮ ದೇಶ ಸ್ವಾವಲಂಬಿ ಆಗಬೇಕೆಂಬ ಕನಸು ಕಂಡವರು. ಅದಕ್ಕಾಗಿ ಹಳ್ಳಿ ಹಳ್ಳಿಗಳೂ ಸ್ವಾವಲಂಬಿಗಳಾಗಬೇಕು ಎಂದು ಬಯಸಿದವರು. ಜೊತೆಗೇ ಜನರಿಗೆ ಸ್ಚಚ್ಛತೆಯ ಪಾಠ ಹೇಳಿಕೊಟ್ಟವರು.

ಈ ಬಾರಿ ಈ ಮಹಾತ್ಮರ ಜನ್ಮದಿನವನ್ನು ಸ್ವಚ್ಛಾಂಜಲಿ ಮೂಲಕ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಕರೆಗೆ ಇಡೀ ದೇಶ ಸ್ಪಂದಿಸಿತು. ಲಕ್ಷಾಂತರ ಮಂದಿ ಈ ಸ್ವಚ್ಛತೆಯ ಅಭಿಯಾನದಲ್ಲಿ ಪಾಲ್ಗೊಂಡರು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದಲ್ಲಿ ಈ ಸ್ಚಚ್ಛತಾ ಅಭಿಯಾನದಲ್ಲಿ ಬಡಾವಣೆ ನಿವಾಸಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ (Click the image below to view video)

ಅಭಿಯಾನದಲ್ಲಿ ಭಾಗವಹಿಸಲು ಎಲ್ಲ ವಯಸ್ಸಿನ ಜನರು ಒಟ್ಟಾಗಿ ಯಾವುದೇ ಪಕ್ಷಭೇದ, ಜಾತಿಭೇದ, ಲಿಂಗ ಭೇದವಿಲ್ಲದೆ ಪಾಲ್ಗೊಂಡದ್ದು ಹೃದಯಸ್ಪರ್ಶಿಯಾಗಿತ್ತು.. ನಾವೆಲ್ಲರೂ ನಮ್ಮ ಸಮುದಾಯದ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ಅದನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಬಯಸುತ್ತೇವೆ ಎಂಬುದಕ್ಕೆ ಬಡಾವಣೆಯ ಜನರ ಅಗಾಧ ಬೆಂಬಲವು ಸಾಕ್ಷಿಯಾಯಿತು..

ಹಿರಿಯ ನಾಗರಿಕರು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು. ಅವರು ಜ್ಞಾನ ಮತ್ತು ಅನುಭವದ ಸಂಪತ್ತನ್ನು ಬಳಸಿ ಮಾರ್ಗದರ್ಶನ ಮಾಡಿದರು. ಅವರ ಭಾಗವಹಿಸುವಿಕೆಯು ಭವಿಷ್ಯದ ಪೀಳಿಗೆಗೆ ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ರವಾನಿಸಲು ಅವರು ಬದ್ಧರಾಗಿದ್ದಾರೆ ಎಂಬುದನ್ನು ತೋರಿಸಿತು.

ಮಹಿಳೆಯರು /ಮಾತೃಶಕ್ತಿ ಸ್ವಚ್ಛತಾ ಅಭಿಯಾನದ ಮುಂಭಾಗದಲ್ಲೇ ನಿಂತ ಪಾಲ್ಗೊಂಡರು. ಇದು ಅವರು ತಮ್ಮ ಕುಟುಂಬದ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಸ್ವಚ್ಛ ಮನೆ ಮತ್ತು ಸಮುದಾಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿರುವುದನ್ನು ತೋರಿಸಿತು.

ಕೆಲವು ಮಕ್ಕಳು ಸಹ ಸ್ವಚ್ಛತಾ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದರುಅವರಿಗೆ ಇದು ಅವರ ಪ್ರಪಂಚದಲ್ಲಿ ಒಂದು ವ್ಯತ್ಯಾಸವನ್ನು ಕಾಣುವ ಅವಕಾಶವಾಗಿತ್ತು.

ಪರಿಸರ ಸಂರಕ್ಷಣೆಯ ಈ ಕಾರ್ಯದಲ್ಲಿ ಯುವಕರಂತೂ ಅತ್ಯುತ್ಸಾಹ ತೋರಿದರು

ಕೇವಲ ೨ ಗಂಟೆಗಳ ಅಭಿಯಾನದಲ್ಲಿ ಸುಮಾರು 100 ಚೀಲ ತುಂಬಿದ ಕಸವನ್ನು ನಿವಾಸಿಗಳು ಸಂಗ್ರಹಿಸಿದರು. ಪರಿಸರ ಸ್ವಚ್ಛವಾಗಿ ಇರಿಸಿಕೊಳ್ಳದವರ ಬಾಗಿಲು ಬಡಿದು ಎಚ್ಚರಿಸಿದರು. ಸಹಾಯ ಕೋರಿ ಮನೆ ಮನೆಗಳಿಗೆ ಭೇಟಿ ಕೊಟ್ಟರು. 

ಸ್ವಚ್ಛತಾ ಅಭಿಯಾನದಲ್ಲಿ ಸಮಾಜದ ಎಲ್ಲ ವರ್ಗದ ಜನರು ಭಾಗವಹಿಸಿದ್ದು ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಸಂಕೇತವಾಗಿತ್ತು. ಪ್ರತಿಯೊಬ್ಬರಿಗೂ ಸ್ವಚ್ಛ ಮತ್ತು ಆರೋಗ್ಯಕರ ಜಗತ್ತನ್ನು ಸೃಷ್ಟಿಸುವ ನಮ್ಮ ಬಯಕೆಯಲ್ಲಿ ನಾವು ಒಂದಾಗಿದ್ದೇವೆ ಎಂಬುದನ್ನು ಇದು ತೋರಿಸಿತು.

ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ ಬಿಬಿಎಂಪಿ ಸಿಬ್ಬಂದಿ ಸಾಥ್‌ ನೀಡಿ, ಬಡಾವಣೆ ಸ್ವಚ್ಛ ಗೊಳಿಸಲು ನೆರವಾದರು.




ಅಂತಿಮವಾಗಿ: 


PARYAYA: ಸ್ವಚ್ಛತೆಯೇ ಸೇವೆ.. ಸ್ವಚ್ಛತಾ ಹಿ ಸೇವಾ:   ಸ್ವಚ್ಛತೆಯೇ ಸೇವೆ.. ಸ್ವಚ್ಛತಾ ಹಿ ಸೇವಾ ಬೆಂಗಳೂರು: ಇಂದು ೨೦೨೩ ಅಕ್ಟೋಬರ್‌ ೨ರ ಸೋಮವಾರ. ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜನ್ಮದಿನ. ಮಹಾತ...