ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು!
ಇದು ಸುವರ್ಣ ನೋಟ
ಬಿಟ್ಟು ಬಿಡಬೇಕಂತೆ
ತಮಿಳುನಾಡಿಗೆ ನೀರು
ಎಲ್ಲಿಂದ ಬಿಡಲಿ ನಾನು?
ನನ್ನ ಒಡಲೇ ಇಲ್ಲಿ ಬರಿದಾಗುತಿದೆಯಲ್ಲ?
ಎಲ್ಲಿಂದ ಬಿಡಲಿ ನೀರು?
ಗಿಡಮರಗಳೆಲ್ಲ
ಒಣ ಒಣಗಿ ಹೋಗುತಿವೆ
ಎಲ್ಲಿಂದ ಬಿಡಲಿ ನೀರು?
ನನ್ನನ್ನೇ ನಂಬಿರುವ
ಪ್ರಾಣಿ ಪಕ್ಷಿಗಳಿಗೆ ಇನ್ನೆಷ್ಟು
ದಿನವೋ ನೀರು?
ನೀರು ಬಿಡದಿರಲೆಂದು
ಬಿಟ್ಟು ಮನೆಯೊಡೆಯನ
ಮನೆಯ ಸೂರು!
ಆದರೂ ಅಲ್ಲೆಲ್ಲ ನಡೆಯುತಿದೆಯಂತೆ
ನೀರಿಗಾಗಿ ಕದನ ಜೋರು!
ಚಿತ್ರಗಳು: ವಿಶ್ವನಾಥ ಸುವರ್ಣ
ಕವನ, ವಿಡಿಯೋ: ನೆತ್ರಕೆರೆ ಉದಯಶಂಕರ
ಚಿತ್ರಗಳ ಸಮೀಪ ದೃಶ್ಯಕ್ಕೆ ಚಿತ್ರಗಳನ್ನು ಕ್ಲಿಕ್ ಮಾಡಿ.
ವಿಡಿಯೋ ನೋಡಲು ಹಾಡು ಕೇಳಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ.
No comments:
Post a Comment