ನಾನು ಮೆಚ್ಚಿದ ವಾಟ್ಸಪ್

Monday, September 19, 2022

PARYAYA: ಜಗತ್ತನ್ನು ನಡುಗಿಸುವ ದಿನಾಂಕ ‘19’

 ಜಗತ್ತನ್ನು ನಡುಗಿಸುವ ದಿನಾಂಕ ‘19’

2022 ಸೆಪ್ಟೆಂಬರ್‌ 19ರ ಸೋಮವಾರ ಅಂದರೆ ಭಾರತದಲ್ಲಿ 2022 ಸೆಪ್ಟೆಂಬರ್‌ 20ರ ಮಂಗಳವಾರ ಉತ್ತರ ಅಮೆರಿಕದ ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪನವು ಸಂಭವಿಸಿತು. ಈ ಭೂಕಂಪವು ಪಶ್ಚಿಮ ಮೆಕ್ಸಿಕೋವನ್ನು ಬೆಚ್ಚಿಬೀಳಿಸಿತುಮೆಕ್ಸಿಕೋ ನಗರದಲ್ಲಿ ಕನಿಷ್ಠ ಒಬ್ಬರು ಸತ್ತರು ಮತ್ತು ಅದು ಅಪಾರ ಬೀತಿಯನ್ನು ಉಂಟು ಮಾಡಿತು. ರಿಕ್ಟರ್‌ ಮಾಪಕದಲ್ಲಿ 7.7 ತೀವ್ರತೆಯ ಈ ಭೂಕಂಪವು ಕಟ್ಟಡಗಳನ್ನು ನಿಂತ ವಾಹನಗಳನ್ನು ಗಡಗಡ ನಡುಗಿಸಿತು ಮತ್ತು ಜನರು ರಾಜಧಾನಿಯ ಬೀದಿಗಳಿಗೆ ಓಡಿದರು.

ಹಾಗೆ ನೋಡಿದರೆ, ಭೂಕಂಪವು ಮೆಕ್ಸಿಕೋ ದೇಶವನ್ನು ಅಲುಗಾಡಿಸಿದ ಘಟನೆ ಇದೇ ಮೊದಲನೆಯದಲ್ಲಆದರೆ ಕಂಪನದ ದಿನಾಂಕಕ್ಕೆ ಸಂಬಂಧಿಸಿದ ಕಾಕತಾಳೀಯತೆಯು ದೇಶವು ಐದು ವರ್ಷಗಳವರೆಗೆ ಕಂಡ ತೀವ್ರ ನಡುಕವನ್ನು ಜನರು ನೆನಪಿಸಿಕೊಳ್ಳುವಂತೆ ಮಾಡಿತು. ಈದಿನದ ಭೂಕಂಪನವು ಸೆಪ್ಟೆಂಬರ್ 19 ರ ದಿನದಂದು ಲ್ಯಾಟಿನ್ ಅಮೇರಿಕನ್ ದೇಶವನ್ನು ಅಪ್ಪಳಿಸಿದ ದಾಖಲೆಯ ಮೂರನೇ ಪ್ರಮುಖ ಭೂಕಂಪವಾಗಿರುವುದೇ ಇದಕ್ಕೆ ಕಾರಣ. ಈ ದಿನವು 1985ರಲ್ಲಿ ಸಾವಿರಾರು ಮಂದಿ ಮತ್ತು 2017 ರಲ್ಲಿ ನೂರಾರು ಜನರನ್ನು ಬಲಿತೆಗೆದುಕೊಂಡ ಭೂಕಂಪನಗಳ ವಾರ್ಷಿಕೋತ್ಸವ ದಿನವಾಗಿದೆ.

“ಇದಕ್ಕೂ ಹೆಚ್ಚಾಗಿ ಸೋಮವಾರದ ಭೂಕಂಪದ ಸಮಯವು ಕೇವಲ ಕಾಕತಾಳೀಯವಲ್ಲ ಎಂದು ರಾಷ್ಟ್ರೀಯ ಭೂಕಂಪನ ಸಂಸ್ಥೆ ಹೇಳಿದೆ. "ಇದನ್ನು ವಿವರಿಸಲು ಯಾವುದೇ ವೈಜ್ಞಾನಿಕ ಕಾರಣವಿಲ್ಲ" ಎಂದೂ ಅದು ಹೇಳಿತು.ಮೆಕ್ಸಿಕೋ ನಗರದ ಕೆಲವು ನಿವಾಸಿಗಳು ಇತರ ಕಾರಣಗಳನ್ನು ಹುಡುಕುತ್ತಿದ್ದಾರೆ.

ಇದು ಬಹುದೊಡ್ಡ ಕಾಕತಾಳೀಯ! ಇದು ದೇವರ ಸೂಚನೆಯಾಗಿರಲೂಬಹುದು ಎಂಬುದನ್ನು ನಾನು ತಳ್ಳಿಹಾಕುವುದಿಲ್ಲ" ಎಂದು 57 ವರ್ಷದ ಫೆಡೆರಿಕೊ ಗಾರ್ಸಿಯಾ ಹೇಳಿದರು. 1985 ಮತ್ತು 2017ರ ವಿಪತ್ತುಗಳ  ನೆನಪಿನಲ್ಲಿ ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕವಾಯತಿನ ತುರ್ತು ಅಭ್ಯಾಸಗಳನ್ನು ರಾಜಧಾನಿ ನಡೆಸಿದ ಒಂದು ಗಂಟೆಯೊಳಗೆ ಮೆಕ್ಸಿಕೋ ನಗರದಲ್ಲಿ  ಭೂಮಿ ಗಡಗಡ ನಡುಗಿತು.

ಸೆಪ್ಟೆಂಬರ್ 2017ರ ಭೂಕಂಪನ

2017 ರಲ್ಲಿಇದೇ ದಿನಾಂಕದಂದು ಅಂದರೆ, ಸೆಪ್ಟೆಂಬರ್‌ 19ರಂದು, ಅದಕ್ಕೂ ಹಿಂದಿನ ಭೂಕಂಪನದ ನೆನಪಿನಲ್ಲಿ ನಡೆಸಿದ ಎಚ್ಚರಿಕೆಯ ಸಾಂಪ್ರದಾಯಿಕ ಕವಾಯತಿನ ಕೆಲವೇ ಗಂಟೆಗಳಲ್ಲಿ ರಿಕ್ಟರ್‌ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮೆಕ್ಸಿಕೋ ನಗರದಲ್ಲಿ ಈ ಸಮಯದಲ್ಲಿ ಶಾಲೆಗಳುಮನೆಗಳು ಮತ್ತು ಕಚೇರಿಗಳನ್ನು ಸ್ಥಳಾಂತರಿಸುವುದನ್ನು ಇಡೀ ನಗರವು ಅಭ್ಯಾಸ ಮಾಡುತ್ತದೆ. ಇಂತಹ ಅಭ್ಯಾಸದ ಸ್ವಲ್ಪವೇ ಹೊತ್ತಿನಲ್ಲಿ ದೇಶದಲ್ಲಿ ಸಂಭವಿಸಿದ ಭೂಕಂಪನಕ್ಕೆ ಹತ್ತಾರು ಕಟ್ಟಡಗಳು ಕುಸಿತು 370 ಮಂದಿ ಸಾವನ್ನಪ್ಪಿದ್ದರು. ಪ್ಯೂಬ್ಲಾ ರಾಜ್ಯದಲ್ಲಿ ಭೂಕಂಪನದ ಕೇಂದ್ರಬಿಂದು ಇತ್ತು.

1985ರಲ್ಲಿ ವಿನಾಶಕಾರಿ ಭೂಕಂಪ

1985 ರ ವರ್ಷ ಸೆಪ್ಟೆಂಬರ್ 19 ರಂದು ಮೆಕ್ಸಿಕೋದಲ್ಲಿ ವಿನಾಶಕಾರಿ ಭೂಕಂಪನ ಸಂಭವಿಸಿತ್ತು. ಇದು ಮೆಕ್ಸಿಕನ್ ದೇಶದ ಮೈಕೋಕಾನ್ ಕರಾವಳಿಯಲ್ಲಿ ವ್ಯಾಪಕ ಸಾವು ಮತ್ತು ನೋವುಗಳಿಗೆ ಕಾರಣವಾಗಿತ್ತು.

ಈ ಭೂಕಂಪನದಲ್ಲಿ 10,000 ಜನರು ಪ್ರಾಣ ಕಳೆದುಕೊಂಡಿದ್ದರು. 30,000 ಜನರು ಗಾಯಗೊಂಡಿದ್ದರು ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದರು. ಇದು ರಿಕ್ಟರ್‌ ಮಾಪಕದಲ್ಲಿ 8.1 ತೀವ್ರತೆಯ ತೀವ್ರ ಭೂಕಂಪವಾಗಿದ್ದುಇದು ಮೆಕ್ಸಿಕೋ ನಗರದಲ್ಲಿ 3,000 ಕಟ್ಟಡಗಳನ್ನು ನೆಲಸಮಗೊಳಿಸಿತ್ತ. 100,000 ಕಟ್ಟಡಗಳು ಗಂಭೀರವಾಗಿ ಜಖಂಗೊಂಡಿದ್ದವು.

ಹಾಗಾದರೆ ʼಸೆಪ್ಟೆಂಬರ್‌ 19ʼ ಮೆಕ್ಸಿಕೋ ಪಾಲಿನ ದುರದೃಷ್ಟಕರ ದಿನವೇ?

ಹಾಗೇನಿಲ್ಲ. ಮೆಕ್ಸಿಕೋ ದೇಶಕ್ಕೆ ಮಾತ್ರವೇ ಈ ʼಸೆಪ್ಟೆಂಬರ್‌ 19ʼರ ದಿನಾಂಕ ದುರದೃಷ್ಟಕರ ದಿನವಲ್ಲ. ಈ ವರ್ಷದಲ್ಲಿ ಪ್ರತಿ ತಿಂಗಳ ʼ19ʼನೇ ದಿನಾಂಕ ಕೂಡಾ ಜಗತ್ತಿನಾದ್ಯಂತ ವಿನಾಶಕಾರಿ ದಿನವಾಗಿದೆ ಎಂಬುದು ರಿಕ್ಟರ್‌ ಮಾಪಕದ ಮೂಲಕ ಬೆಳಕಿಗೆ ಬಂದಿದೆ.

ಟೋಂಗಾ ಭೂಕಂಪ

2022ರ ಮಾರ್ಚ್ 19 ರಂದು ಭೂಕಂಪನವು ಟೋಂಗಾದ ದಕ್ಷಿಣಕ್ಕೆ ಅಪ್ಪಳಿಸಿದೆ. ರಿಕ್ಟರ್‌ ಮಾಪಕದಲ್ಲಿ 6.3 ತೀವ್ರತೆಯಿದ್ದ ಈ ಭೂಕಂಪವು ಟೋಂಗಾದ ಓಹೊನುವಾದಿಂದ 455.5 ಕಿಲೋಮೀಟರ್ ದಕ್ಷಿಣ-ನೈಋತ್ಯಕ್ಕೆ ಅಪ್ಪಳಿಸಿತು. ಭೂಕಂಪವು 10.0 ಕಿಮೀ (6.21 ಮೈಲುಗಳು) ಆಳದಲ್ಲಿತ್ತುಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಿರಲಿಲ್ಲ ಎಂದು ಯುಎಸ್‌ ಜಿಎಸ್‌ (USGS) ಹೇಳಿದೆ.

ಫಿಲಿಪೈನ್ಸ್ ಮತ್ತು ಜಪಾನ್‌ನಲ್ಲಿ

2022 ವರ್ಷದ ಆರಂಭದಲ್ಲಿ ಏಪ್ರಿಲ್‌ 19ರ ಮಂಗಳವಾರ ಫಿಲಿಪೈನ್ಸ್‌ ದೇಶದ ಮಿಂಡಾನಾವೊ ದ್ವೀಪದಲ್ಲಿ ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಯುರೋಪಿಯನ್ ಮೆಡಿಟರೇನಿಯನ್ ಸೆಸ್ಮಾಲಾಜಿಕಲ್ ಸೆಂಟರ್ (EMSC) ಪ್ರಕಾರ ಭೂಕಂಪವು 10 ಕಿಲೋಮೀಟರ್ (6.21 ಮೈಲುಗಳು) ಆಳದಲ್ಲಿ ದಾಖಲಾಗಿತ್ತು.

ಮ್ಯಾಕ್ವಾರಿ ದ್ವೀಪ ಪ್ರದೇಶದಲ್ಲಿ ಭೂಕಂಪದ ಪೆಟ್ಟು

ಈ ವರ್ಷ ಮೇ 19 ರಂದುದಕ್ಷಿಣ ಪೆಸಿಫಿಕ್ ಮಹಾಸಾಗರದ ಮ್ಯಾಕ್ವಾರಿ ದ್ವೀಪ ಪ್ರದೇಶದಲ್ಲಿ ರಿಕ್ಟರ್‌ ಮಾಪಕದಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ರಿಕ್ಟರ್‌ ಮಾಪಕದಲ್ಲಿ 7.3 ರ ಆರಂಭಿಕ ತೀವ್ರತೆಯಿದ್ದ ಭೂಕಂಪವು 10 ಕಿ.ಮೀ ಆಳದಲ್ಲಿ ದಾಖಲಾಗಿತ್ತು.

ಭೂಕಂಪದ ನಂತರ ಯಾವುದೇ ಸುನಾಮಿ ಎಚ್ಚರಿಕೆ ನೀಡಿರಲಿಲ್ಲ ಎಂದು ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆ ಹೇಳಿದೆ. ಮ್ಯಾಕ್ವಾರಿ ದ್ವೀಪವು ಟ್ಯಾಸ್ಮೆನಿಯಾದ ಆಗ್ನೇಯಕ್ಕೆ 1,600 ಕಿಮೀ ದೂರದಲ್ಲಿದೆನ್ಯೂಜಿಲೆಂಡ್ ಮತ್ತು ಅಂಟಾರ್ಕ್ಟಿಕಾ ನಡುವೆ ಅರ್ಧದಾರಿಯಲ್ಲೇ ಇದೆ.

ಜಪಾನಿನಲ್ಲಿ ಭೂಕಂಪನ

2022 ರ ಜೂನ್ 19 ರಂದು ಜಪಾನ್ ಸಮುದ್ರದ ಇಶಿಕಾವಾದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪವು ಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿತು. ಆದರೆ ಸುನಾಮಿಯ ಯಾವುದೇ ಲಕ್ಷಣ ಬೆದರಿಕೆ ಇರಲಿಲ್ಲ.

ಅಮೆರಿಕದಲ್ಲಿ ಎರಡು ಭೂಕಂಪಗಳು

ಅಮೆರಿಕದ ಮಿಡ್ಲ್ಯಾಂಡ್ಸ್ ಪ್ರದೇಶದಲ್ಲಿ ಎರಡು ಭೂಕಂಪಗಳು ವರದಿಯಾಗಿದೆ. ವಾಟ್ಸ್ ಹಿಲ್ ರೋಡ್ ಬಳಿ ಎಲ್ಜಿನ್‌ನಿಂದ ಈಶಾನ್ಯಕ್ಕೆ 3.2 ಮೈಲಿ ಕೇಂದ್ರೀಕೃತ ಪ್ರದೇಶದಲ್ಲಿ ಮಧ್ಯಾಹ್ನ 12:06 ಕ್ಕೆ ಮೊದಲ ಭೂಕಂಪ ವರದಿಯಾಗಿದೆ.

ಆರು ನಿಮಿಷಗಳ ನಂತರ ಮಧ್ಯಾಹ್ನ 12:12 ಗಂಟೆಗೆಫೋರ್ಟ್ ಜಾಕ್ಸನ್ ರಸ್ತೆಯ ಬಳಿ ಎಲ್ಜಿನ್‌ನ ಪೂರ್ವ-ಆಗ್ನೇಯಕ್ಕೆ 3.7 ಮೈಲುಗಳಷ್ಟು ದೂರದಲ್ಲಿ 2.11 ತೀವ್ರತೆಯ ಭೂಕಂಪನ ಸಂಭವಿಸಿದ್ದನ್ನು ದಾಖಲಿಸಲಾಯಿತು.

ಆಗಸ್ಟ್ 19ರಂದು ಉತ್ತರಪ್ರದೇಶದಲ್ಲಿ ಭೂಕಂಪ

2022ರ ಶುಕ್ರವಾರ (ಆಗಸ್ಟ್ 19) ಬೆಳ್ಳಂಬೆಳಗ್ಗೆ ಉತ್ತರ ಪ್ರದೇಶದ ಲಕ್ನೋ ಬಳಿ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪನದ ಅನುಭವವಾಯಿತು. ಭೂಕಂಪವು ಲಕ್ನೋದ ಉತ್ತರ-ಈಶಾನ್ಯಕ್ಕೆ ಸುಮಾರು 139 ಕಿ.ಮೀ ದೂರದಲ್ಲಿ ಅನುಭವಕ್ಕೆ ಬಂತು. ಇದು ಭೂಮಿಯಿಂದ 82 ಕಿ.ಮೀ ಆಳದಲ್ಲಿತ್ತು.

ಇದೇ ಆಗಸ್ಟ್ 19 ರಂದು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ 3.1 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರಬಿಂದುವು ಕಿನ್ನೌರ್ ಜಿಲ್ಲೆಯಲ್ಲಿ ಕಿಮೀ ಆಳದಲ್ಲಿತ್ತು ಮತ್ತು 12.02 ಗಂಟೆಗೆ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿತ್ತು.

ಮೆಕ್ಸಿಕೋ ದಲ್ಲಿ ಭೂಕಂಪನ ಸಂಭವಿಸುವುದಕ್ಕೆ ಒಂದು ದಿನ ಮುಂಚೆ ಅಂದರೆ ಸೆಪ್ಟೆಂಬರ್‌ 18ರಂದು ತೈವಾನಿನಲ್ಲಿ ಕೂಡಾ ತೀವ್ರ ರೀತಿಯ ಭೂಕಂಪ ಸಂಭವಿಸಿತ್ತು. ಅದರ ತೀವ್ರತೆಯ ವಿಡಿಯೋವನ್ನು ಇಲ್ಲಿ ನೋಡಿ:


ಈಗ ಹೇಳಿ ಹಾಗಾದರೆ ʼ18-19ʼರ ದಿನಾಂಕ ಭೂಮಿಯ ನಿವಾಸಿಗಳ ಪಾಲಿಗೆ ʼಮಾರಕ ದಿನಾಂಕʼವೇ?

ಈ ಪ್ರಶ್ನೆಗೆ ಉತರ ನೀಡುವ ಮುನ್ನ ವಿಶ್ವದ ವಿವಿಧ ಕಡೆಗಳಲ್ಲಿ ಸಂಭವಿಸಿದ ಭೂಕಂಪನಗಳ ಬಗೆಗಿನ ಮಾಹಿತಿಯನ್ನು ಈ ಕೆಳಗಿನ ಕೊಂಡಿಯಲ್ಲಿ (ಲಿಂಕ್)‌ ನೋಡಿಕೊಂಡು ಉತ್ತರಿಸಿ.

ವಿಶ್ವಾದ್ಯಂತ ಭೂಕಂಪನಗಳು


PARYAYA: ಜಗತ್ತನ್ನು ನಡುಗಿಸುವ ದಿನಾಂಕ ‘19’:   ಜಗತ್ತನ್ನು ನಡುಗಿಸುವ ದಿನಾಂಕ ‘19’ 2022 ಸೆಪ್ಟೆಂಬರ್‌ 19ರ ಸೋಮವಾರ ಅಂದರೆ ಭಾರತದಲ್ಲಿ 2022 ಸೆಪ್ಟೆಂಬರ್‌ 20ರ ಮಂಗಳವಾರ ಉತ್ತರ ಅಮೆರಿಕದ ಮೆಕ್ಸಿಕೋದಲ್ಲಿ ಪ್ರಬಲ ...

No comments:

Post a Comment