ಭಾರತದ ನೂತನ ಸಿಡಿಎಸ್: ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ)
ನವದೆಹಲಿ: ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಸುಮಾರು 10 ತಿಂಗಳ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 28 ಸೆಪ್ಟೆಂಬರ್ 2022ರ ಬುಧವಾರ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ (ಸಿಡಿಎಸ್) ನೇಮಿಸಿದೆ..
ಚೌಹಾಣ್ ಅವರು ಮಿಲಿಟರಿ ವ್ಯವಹಾರಗಳ ಇಲಾಖೆ (DMA) ಕಾರ್ಯದರ್ಶಿಯೂ ಆಗಿರುತ್ತಾರೆ. ಇದರೊಂದಿಗೆ, ಸಿಡಿಎಸ್ ಮತ್ತು ಕಾರ್ಯದರ್ಶಿ ಡಿಎಂಎ ಹುದ್ದೆಗಳನ್ನು ವಿಭಜಿಸುವ ಕುರಿತ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.
61ರ ಹರೆಯದ ಲೆಫ್ಟಿನೆಂಟ್ ಜನರಲ್ ಚೌಹಾಣ್, ಅವರು ಪೂರ್ವ ಸೇನಾ ಕಮಾಂಡರ್ ಆಗಿ ಸೇನೆಯಿಂದ ನಿವೃತ್ತರಾದ ನಂತರ ಲೆಫ್ಟಿನೆಂಟ್ ಜನರಲ್ ವಿಜಿ ಖಂಡಾರೆ (ನಿವೃತ್ತ) ಅವರಿಂದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಸೇನಾ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು. 40 ವರ್ಷಗಳ ವಿಶಿಷ್ಟ ವೃತ್ತಿಜೀವನದಲ್ಲಿ ಅವರು ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ನೇಮಕಾತಿಗಳಲ್ಲಿ ಪ್ರಮುಖ ಸ್ಥಾನ ಹೊಂದಿದ್ದರು. ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದರು.
ಈ ತಿಂಗಳ ಆರಂಭದಲ್ಲಿ, ಅವರು ಕಿಬಿತು ಮಿಲಿಟರಿ ನಿಲ್ದಾಣಕ್ಕೆ ʼಜನರಲ್ ಬಿಪಿನ್ ರಾವತ್ ಮಿಲಿಟರಿ ಗ್ಯಾರಿಸನ್ʼ ಎಂದು ಮರುನಾಮಕರಣ ಮಾಡಿದ ಸಮಾರಂಭದಲ್ಲಿ ಜನರಲ್ ರಾವತ್ ಅವರ ಪುತ್ರಿ ತಾರಿಣಿ ರಾವತ್ ಮತ್ತು ಇತರ ಗಣ್ಯರೊಂದಿಗೆ ಭಾಗವಹಿಸಿದ್ದರು. ಅವರು ಜನರಲ್ ರಾವತ್ ಅವರ ಘಟಕದಿಂದಲೇ ಬಂದವರು.
No comments:
Post a Comment