ನಾನು ಮೆಚ್ಚಿದ ವಾಟ್ಸಪ್

Sunday, July 31, 2022

PARYAYA: ಚೆಸ್‌ ಪಂದ್ಯ ಉದ್ಘಾಟನೆಗೆ ಸುಂದರ ಗೌರವ

ಚೆಸ್‌ ಪಂದ್ಯ ಉದ್ಘಾಟನೆಗೆ ಸುಂದರ ಗೌರವ

ಮಹಾಬಲಿಪುರಂ, ಚೆನ್ನೈ (ತಮಿಳುನಾಡು): ೪೪ನೇ  ಫಿಡೆ ಚೆಸ್‌  ಒಲಂಪಿಯಾಡನ್ನು (44th FIDE Chess Olympiad) ಜುಲೈ ೨೦೨೨ ಜುಲೈ ೨೮ರ ಗುರುವಾರ ತಮಿಳುನಾಡಿನ ಚೆನ್ನೈಗೆ ೬೦ ಕಿಮೀ ದಕ್ಷಿಣಕ್ಕೆ ಇರುವ ಮಹಾಬಲಿಪುರಂನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಉಪಸ್ಥಿತಿಯಲ್ಲಿ ಸಂಭ್ರಮದೊಂದಿಗೆ ಉದ್ಘಾಟಿಸಲಾಯಿತು. ಪ್ರಮುಖ ತಂಡಗಳ ಪಥ ಸಂಚಲನ, ನೃತ್ಯ ಸಂಗೀತದ ಮೇಳೈಸುವಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಈ ಒಲಂಪಿಯಾಡಿನ ಓಪನ್‌ ವಿಭಾಗದಲ್ಲಿ ೧೮೭ ತಂಡಗಳು ಹ್ಯಾಮಿಲ್ಟನ್‌ -ರಸೆಲ್‌ ಕಪ್‌ ಗಾಗಿ ಹಾಗೂ ಮಹಿಳೆಯರ ವಿಭಾಗದ ೧೬೨ ತಂಡಗಳು ವೆರಾ ಮೆಂಚಿಕ್‌ ಕಪ್‌ ಸಲುವಾಗಿ ಸೆಣಸಲಿವೆ.

ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಒಲಂಪಿಯಾಡಿಗೆ ಮಹಾಬಲಿಪುರಂನ ಜಿಲ್ಲಾಧಿಕಾರಿಯಾಗಿರುವ (ಡಿಸ್ಟ್ರಿಕ್ಟ್‌ ಕಲೆಕ್ಟರ್)‌ ಕವಿತಾ ರಾಮ್‌ ಸ್ವತಃ ಸುಂದರವಾದ ನೃತ್ಯ ಸಂಯೋಜನೆ ಮೂಲಕ ಗೌರವ ಸಲ್ಲಿಸುವ ವ್ಯವಸ್ಥೆ ಮಾಡಿದ್ದರು.

ಆ ಸುಂದರವಾದ ನೃತ್ಯ ಸಂಯೋಜನೆಯ ತುಣಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಆ ಸುಂದರವಾದ ʼಚದುರಂಗದಾಟʼದ ಪುಟ್ಟ ವಿಡಿಯೋವನ್ನು ಕ್ಲಿಕ್‌ ಮಾಡಿ ಕೆಳಗೆ ನೋಡಿರಿ.



PARYAYA: ಚೆಸ್‌ ಪಂದ್ಯ ಉದ್ಘಾಟನೆಗೆ ಸುಂದರ ಗೌರವ:   ಚೆಸ್‌ ಪಂದ್ಯ ಉದ್ಘಾಟನೆಗೆ ಸುಂದರ ಗೌರವ ಮಹಾಬಲಿಪುರಂ, ಚೆನ್ನೈ (ತಮಿಳುನಾಡು) : ೪೪ನೇ  ಫಿಡೆ ಚೆಸ್‌  ಒಲಂಪಿಯಾಡನ್ನು ( 44th FIDE Chess Olympiad ) ಜುಲೈ ೨೦೨೨...

Wednesday, July 27, 2022

PARYAYA: ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು

ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ (ಪ್ರಿವೆಂಷನ್‌ ಆಫ್‌ ಮನಿ ಲಾಂಡರಿಂಗ್‌ ಆಕ್ಟ್‌/ ಪಿಎಂಎಲ್‌ ಎ)  ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಇರುವ ಅಧಿಕಾರವನ್ನು ಸುಪ್ರೀಂ ಕೋರ್ಟ್ 2022 ಜುಲೈ 27 ಬುಧವಾರ ಎತ್ತಿ ಹಿಡಿಯಿತು.

ಕಾಂಗ್ರೆಸ್ ಸಂಸತ್‌ ಸದಸ್ಯ ಕಾರ್ತಿ ಚಿದಂಬರಂ ಅವರು ಸೇರಿದಂತೆ ಪಿಎಂಎಲ್‌ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸುತ್ತಿರುವ ಹಲವಾರು ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿತು.

ಸಂವಿಧಾನವು 20 ಮತ್ತು 21ನೇ ವಿಧಿಗಳ ಅಡಿಯಲ್ಲಿ ಒದಗಿಸಿರುವ ಸ್ವಾತಂತ್ರ್ಯದ ಹಕ್ಕು ಮತ್ತು ಸ್ವಯಂ-ಅಪರಾಧದ ವಿರುದ್ಧದ ಹಕ್ಕುಗಳನ್ನು ಖಾತರಿಯನ್ನು ಹಣ ವರ್ಗಾವಣೆ ತಡೆ ಕಾಯ್ದೆಯು ಉಲ್ಲಂಘಿಸಿತ್ತದೆ ಎಂದು ಕಾರ್ತಿ ಚಿದಂಬರಂ ಮತ್ತು ಇತರರ ಅರ್ಜಿಗಳು ಆಪಾದಿಸಿದ್ದವು.

ಯಾವುದೇ ಅಪರಾಧವನ್ನು ಹಣ ವರ್ಗಾವಣೆ ಅಪರಾಧವನ್ನಾಗಿ ಪರಿವರ್ತಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ನೀಡಲಾದ ಅನಿಯಂತ್ರಿತ ಅಧಿಕಾರವನ್ನೂ ಅವರು ಪ್ರಶ್ನಿಸಿದ್ದರು.


PARYAYA: ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು:   ಹಣ ವರ್ಗಾವಣೆ ತಡೆ ಕಾನೂ ನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಯಲ್ಲಿ (ಪ್ರಿವೆಂಷನ್‌ ಆಫ್‌ ಮನಿ ಲಾಂಡರಿಂಗ್‌ ...

Monday, July 25, 2022

PARYAYA: ಇಂದಿನ ಇತಿಹಾಸ History Today ಜುಲೈ 25

ಇಂದಿನ ಇತಿಹಾಸ History Today ಜುಲೈ 25

ಇಂದಿನ ಇತಿಹಾಸ History Today ಜುಲೈ 25

2022: ನವದೆಹಲಿ:
 ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ 2022 ಜುಲೈ 25ರ ಸೋಮವಾರ ಬೆಗ್ಗೆ 10.15ಕ್ಕೆ ನಡೆದ ಕಾರ್ಯಕ್ರಮದಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುಪ್ರೀಂ  ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಪ್ರಮಾಣವಚನ ಬೋಧಿಸಿದರು.  ಇದರೊಂದಿಗೆ ದ್ರೌಪದಿ ಮುರ್ಮುರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎನಿಸಿದರು. ಪ್ರಮಾಣವಚನಕ್ಕೆ ಮುನ್ನನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ನೂತನ ರಾಷ್ಟ್ರಪತಿ ಮುರ್ಮು ಅವರು ವಿಧಿಯುಕ್ತ ಮೆರವಣಿಗೆಯಲ್ಲಿ ಸಂಸತ್ತಿಗೆ ಆಗಮಿಸಿದರು. ಇದಕ್ಕೂ ಮೊದಲು ರಾಜ್‌ಘಾಟ್‌ಗೆ ತೆರಳಿದ ದ್ರೌಪದಿ ಮುರ್ಮುರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸಿದರು.ಪ್ರಧಾನಿ ನರೇಂದ್ರ ಮೋದಿಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.  

2019: ನವದೆಹಲಿಒಂದೇ ಉಸಿರಿನಲ್ಲಿ ಮೂರು ಬಾರಿ ’ತಲಾಖ್’ ಪದವನ್ನು ಉಸುರಿ ವಿವಾಹ ವಿಚ್ಛೇದನ ನೀಡುವ  ’ತ್ರಿವಳಿ ತಲಾಖ್’ ಪದ್ಧತಿಯನ್ನು ಕಾನೂನು ಬಾಹಿರವನ್ನಾಗಿ ಮಾಡುವ ಮತ್ತು ಇಂತಹ ತಲಾಖ್ ನೀಡುವ ಪತಿಗೆ ಸೆರೆವಾಸದ ಶಿಕ್ಷೆ ವಿಧಿಸುವ ಮುಸ್ಲಿಂ ಮಹಿಳಾ (ಮದುವೆ ಹಕ್ಕಿನ ರಕ್ಷಣೆಮಸೂದೆ ೨೦೧೯ಕ್ಕೆ ಲೋಕಸಭೆ  ತನ್ನ ಅನುಮೋದನೆ ನೀಡಿತುಇದರೊಂದಿಗೆ ಮಸೂದೆಯನ್ನು ಲೋಕಸಭೆಯು ೩ನೇ ಬಾರಿ ಅನುಮೋದಿಸಿದಂತಾಯಿತು.  ಮಸೂದೆಗೆ ಇನ್ನು ರಾಜ್ಯಸಭೆಯು ಒಪ್ಪಿಗೆ ನೀಡಬೇಕಾಗಿದ್ದುರಾಜ್ಯಸಭೆಯಲ್ಲಿನ ಅಡಚಣೆ ನಿವಾರಿಸಿಕೊಂಡ ಬಳಿಕ ಅದು ಕಾನೂನು ಆಗಿ ಜಾರಿಗೆ ಬರಲಿದೆ.  ೩೦೩ ಪರ ಮತ್ತು ೮೨ ವಿರುದ್ಧ ಮತಗಳೊಂದಿಗೆ ಲೋಕಸಭೆಯು ಮಸೂದೆಯನ್ನು ಅಂಗೀಕರಿಸುತ್ತಿದ್ದಂತೆಯೇ ಜೆಡಿ(ಯು), ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸತ್ ಸದಸ್ಯರು ತ್ರಿವಳಿ ತಲಾಖ್ ಮಸೂದೆಯನ್ನು ತೀವ್ರವಾಗಿ ವಿರೋಧಿಸಿ ಸಭಾತ್ಯಾಗ ಮಾಡಿದವುಪ್ರಸ್ತುತ ಸರ್ಕಾರವು ತ್ರಿವಳಿ ತಲಾಖ್ ಪದ್ಧತಿಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿತ್ತು. ಈದಿನ  ಅಂಗೀಕರಿಸಿದಂತಹುದೇ ಮಸೂದೆಯನ್ನು ೧೬ನೇ ಲೋಕಸಭೆಯು ಅನುಮೋದಿಸಿದ ಬಳಿಕಮೇಲ್ಮನೆಯು ಅನುಮೋದನೆ ನೀಡಲು ನಿರಾಕರಿಸಿದ್ದರಿಂದ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತ್ತುಪ್ರಧಾನಿ ನರೇಂದ್ರ ಮೋದಿ ಸರ್ಕಾರವು ೨೦೧೯ರ ಮೇ ತಿಂಗಳಲ್ಲಿ ತಾನು ಪುನರಾಯ್ಕೆಯಾದ ಬಳಿಕತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನು ಬಾಹಿರವನ್ನಾಗಿ ಮಾಡುವ ಮತ್ತು ಅದನ್ನು ದಂಡನಾರ್ಹ ಅಪರಾಧವನ್ನಾಗಿ ಮಾಡುವ ಹೊಸ ಮಸೂದೆಯನ್ನು ರೂಪಿಸಿ ಒಪ್ಪಿಗೆಗಾಗಿ ಲೋಕಸಭೆಯಲ್ಲಿ ಮಂಡಿಸಿತ್ತುಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಮಸೂದೆ ಮಂಡನೆ ಬಳಿಕ ಅದರ ಮೇಲೆ ಚರ್ಚೆ ಆರಂಭಿಸಿತ್ರಿವಳಿ ತಲಾಖ್ ಪದ್ಧತಿಯನ್ನು ಅಕ್ರಮ ಎಂಬುದಾಗಿ ಘೋಷಿಸಿಸುಪ್ರೀಂಕೋರ್ಟ್ ಎರಡು ವರ್ಷಗಳ ಹಿಂದೆ ನೀಡಿದ ತೀರ್ಪಿನ ಹೊರತಾಗಿಯೂ ಪದ್ಧತಿ ನಿಂತಿಲ್ಲಆದ್ದರಿಂದ ಅದನ್ನು ನಿಷೇಧಿಸಿ ಕಾನೂನು ರೂಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.  ‘೨೦೧೭ರ ಜನವರಿಯಿಂದೀಚೆಗೆ ೫೭೪ ’ತಲಾಖ್ --ಬಿದ್ದತ್’ ಪ್ರಕರಣಗಳು ವರದಿಯಾಗಿವೆ’ ಎಂದು ಪ್ರಸಾದ್ ನುಡಿದರು.  ‘ಲಿಂಗ ಸಮಾನತೆಯ ಸಾಧನೆ ಮತ್ತು ನ್ಯಾಯದ ಸಲುವಾಗಿ ಕಾನೂನು ಅಗತ್ಯವಾಗಿದೆಅದನ್ನು ಧರ್ಮದ ಕಿರಿದಾದ ದೃಷ್ಟಿಯಿಂದ ನೋಡಬಾರದು’ ಎಂದು ಹೇಳಿದ ಸಚಿವರು ಟೀಕಾಕಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರುಕಾನೂನಿನ ದುರುಪಯೋಗವಾದಂತೆ ನೋಡಿಕೊಳ್ಳುವ ಸಲುವಾಗಿ ವಿಚಾರಣೆ ಆರಂಭವಾಗುವುದಕ್ಕೆ ಮುನ್ನ ಆರೋಪಿಗೆ ಜಾಮೀನು ಪಡೆಯುವ ಅವಕಾಶವನ್ನು ಮಸೂದೆಯಲ್ಲಿ ಒದಗಿಸಲಾಗಿದೆ. ’ಪತ್ನಿಯ ಅಹವಾಲು ಆಲಿಸಿದ ಬಳಿಕ ಮ್ಯಾಜಿಸ್ಟ್ರೇಟರಿಗೆ ಜಾಮೀನು ಮಂಜೂರು ಮಾಡುವ ಅವಕಾಶವನ್ನು ಮಸೂದೆಯಲ್ಲಿ ಹೊಸದಾಗಿ ಸೇರಿಸಲಾಗಿದೆ’ ಎಂದು ಸಚಿವರು ನುಡಿದರುಸುದೀರ್ಘ ಚರ್ಚೆಯ ಬಳಿಕ ಸದನವು ಮಸೂದೆಯನ್ನು ಅಂಗೀಕರಿಸಿತುಸುಪ್ರೀಂಕೋರ್ಟ್ ೨೦೧೭ರಲ್ಲಿ ತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಿ ತೀರ್ಪು ನೀಡಿತ್ತು.  ಮೇ ತಿಂಗಳಲ್ಲಿ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮೊದಲ ಅಧಿವೇಶನದಲ್ಲಿ ಮಂಡಿಸಿದ ಮೊದಲ ಕರಡು ಮಸೂದೆ ಇದಾಗಿದೆ.  ಕಾಂಗ್ರೆಸ್ತೃಣಮೂಲ ಕಾಂಗ್ರೆಸ್ಮತ್ತು ಡಿಎಂಕೆಯಂತಹ ಪಕ್ಷಗಳು ಮಸೂದೆಯನ್ನು ಪರಾಮರ್ಶೆಗಾಗಿ ಸಂಸದೀಯ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದವು.  ಜನತಾದಳ(ಯು)ದಂತಹ ಬಿಜೆಪಿಯ ಕೆಲವು ಮಿತ್ರ ಪಕ್ಷಗಳೂ ಮಸೂದೆಗೆ ಆಕ್ಷೇಪ ವ್ಯಕ್ತ ಪಡಿಸಿದವುಮಸೂದೆಯನ್ನು ಧಾರ್ಮಿಕ ಕನ್ನಡಕದಿಂದ ನೋಡಬಾರದುವಾಸ್ತವಾಗಿ ಅದು ಲಿಂಗ ಸಮಾನತೆ ಮತ್ತು ನ್ಯಾಯ ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರಾದರೂವಿರೋಧ ಪಕ್ಷಗಳು ಮಸೂದೆಯು ಮುಸ್ಲಿಮರ ಬಗ್ಗೆ ತಾರತಮ್ಯ ಎಸಗಿದೆ ಎಂದು ಹೇಳಿದರು ಮಧ್ಯೆರಾಜ್ಯಸಭೆಯಲ್ಲಿನ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಬ್ರಿಯನ್ ಅವರು ಕೂಡಾ ಮಸೂದೆಗಳನ್ನು ಅನುಮೋದಿಸುವುದು ಅಂದರೆ ಟಿ೨೦  ಪಂದ್ಯ ಅಲ್ಲಮಸೂದೆ ಬಗ್ಗೆ ಪರಾಮರ್ಶೆಗೆ ವಿರೋಧ ಪಕ್ಷಗಳಿಗೆ ಹೆಚ್ಚಿನ ಕಾಲಾವಕಾಶ ಬೇಕುಆದ್ದರಿಂದ  ಮಸೂದೆಯನ್ನು ಆರ್ಟಿಐ ಮಸೂದೆಯ ಜೊತೆಗೆ ಸಂಸದೀಯ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದರು..

2019: ನವದೆಹಲಿಪಾರದರ್ಶಕತೆ ಕಾನೂನಿಗೆ ಮಹತ್ವದ ಬದಲಾವಣೆಗಳನ್ನು ಕೋರಿದ ಮಾಹಿತಿ ಹಕ್ಕು (ಆರ್ಟಿಐಮಸೂದೆಗೆ ವಿರೋಧ ಪಕ್ಷಗಳ ತೀವ್ರ ವಿರೋಧಸಭಾತ್ಯಾಗದ ಮಧ್ಯೆ ರಾಜ್ಯಸಭೆಯು  ಧ್ವನಿಮತದ ಮೂಲಕ ತನ್ನ ಅನುಮೋದನೆಯನ್ನು ನೀಡಿತುಬಿಜು ಜನತಾದಳ (ಬಿಜೆಡಿ), ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್ಮತ್ತು ವೈಎಸ್ಆರ್ ಕಾಂಗ್ರೆಸ್ನಂತಹ ಕೆಲವು ಪಕ್ಷಗಳ ಬೆಂಬಲದೊಂದಿಗೆ ಮಸೂದೆಗೆ ಅನುಮೋದನೆ ಪಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಶಸ್ವಿಯಾಯಿತು.  ತೃಣಮೂಲ ಕಾಂಗೆಸ್ಸಿನ ನಾಯಕ ಡೆರೆಕ್ ಬ್ರಿಯನ್ ಸೇರಿದಂತೆ ವಿರೋಧ ಪಕ್ಷಗಳು ಮಸೂದೆಯನ್ನು ಹೆಚ್ಚಿನ ಪರಾಮರ್ಶೆಗಾಗಿ ಆಯ್ಕೆ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದವುಮಸೂದೆಯು ಧ್ವನಿಮತದೊಂದಿಗೆ ಅಂಗೀಕರಿಸುತ್ತಿದ್ದಂತೆಯೇ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವುಲೋಕಸಭೆ ಸೋಮವಾರ ಮಸೂದೆಗೆ ಅನುಮೋದನೆ ನೀಡಿತ್ತು.  ಬ್ರಿಯನ್ ಅವರು ಇದು ಟಿ-೨೦ ಪಂದ್ಯ ಅಲ್ಲಪರಾಮರ್ಶೆಗೆ ಸಮಯ ಬೇಕು’ ಎಂದು ಹೇಳಿದರೆಇನ್ನೊಬ್ಬ ವಿರೋಧಿ ಸದಸ್ಯ ’ಮಸೂದೆ ಅಂಗೀಕಾರ ಎಂದರೆ ’ಮಸಾಲೆ ದೋಸೆ ಮಾಡುವುದಲ್ಲ’ ಎಂದು ಟೀಕಿಸಿದರು.  ತಾವು ಮಸೂದೆಯನ್ನು ಬೆಂಬಲಿಸುವುದಾಗಿ ಇದಕ್ಕೆ ಮುನ್ನ ವೈಎಸ್ಆರ್ ಕಾಂಗ್ರೆಸ್ಸಿನ ವಿಜಯಸಾಯಿ ರೆಡ್ಡಿ ಹೇಳಿದ್ದರುಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸವಂತೆ ಆಗ್ರಹಿಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದರು.  ನಮ್ಮ ಕಾಳಜಿಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುತ್ತೇವೆಸಮಾಧಾನಕರ ಉತ್ತರ ಲಭಿಸಿದರೆ ಮಸೂದೆಯನ್ನು ಬೆಂಬಲಿಸುವ ಬಗ್ಗೆ ಯೋಚಿಸುತ್ತೇವೆ ಎಂದು ಬಿಜೆಡಿಯ ಪ್ರಸನ್ನ ಆಚಾರ್ಯ  ಹೇಳಿದ್ದರುಹಿಂದೆ ಮಸೂದೆಯನ್ನು ವಿರೋಧಿಸಿದ್ದ ಟಿಆರ್ಎಸ್ಕೇಂದ್ರ ಗೃಹಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತೆಲಂಗಾಣ ಮುಖ್ಯಮಂತ್ರಿ ಕೆಚಂದ್ರಶೇಖರ ರಾವ್ ಅವರ ಬಳಿ ದೂರವಾಣಿಯಲ್ಲಿ ಮಾತನಾಡಿದ ಬಳಿಕ ನಿಲವು ಬದಲಾಯಿಸಿತು ಎಂದು ಹೇಳಲಾಯಿತು. ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಬಲ ೧೧೮ ಆಗಿದ್ದುಬಹುಮತಕ್ಕೆ  ಮತಗಳ ಕೊರತೆ ಇದೆಏನಿದ್ದರೂಇತರ ಪಕ್ಷಗಳ ಬೆಂಬಲದ ಬಳಿಕ ಸದನದಲ್ಲಿ ಸರ್ಕಾರವು ೧೨೯ ಸದಸ್ಯರ ಬೆಂಬಲ ಪಡೆದಿತ್ತು.

2019: ನವದೆಹಲಿಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಸಹಸ್ರಾರು ಪ್ರಕರಣಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿಪ್ರತಿ ಜಿಲ್ಲೆಯಲ್ಲೂ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋಕಾಯ್ದೆಯ ಅಡಿಯಲ್ಲಿ ವಿಶೇಷ ನ್ಯಾಯಾಲಯಗಳನ್ನು ರಚಿಸುವಂತೆ ಸುಪ್ರಿಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತುಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ವಿಶೇಷ ನ್ಯಾಯಾಲಗಳನ್ನು ೬೦ ದಿನಗಳ ಒಳಗಾಗಿ ರಚಿಸುವಂತೆಯೂ ಆಜ್ಞಾಪಿಸಿತು.  ಕೇಂದ್ರ ಯೋಜನೆಯ ಅಡಿಯಲ್ಲಿ ಪೋಸ್ಕೋ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಮತ್ತು ಅವುಗಳ ವೆಚ್ಚವನ್ನು ಪೂರ್ಣವಾಗಿ ಕೇಂದ್ರವು ಭರಿಸುವುದುಅಂದರೆ ನ್ಯಾಯಾಲಯದ ಮುಖ್ಯಸ್ಥರುಸಿಬ್ಬಂದಿ ಮತ್ತು ಮಕ್ಕಳಿಗೆ ಹಿತಕರವಾದ ಮೂಲಸವಲತ್ತು ಕಲ್ಪಿಸುವ ಬೆಂಬಲಿಗ ವ್ಯಕ್ತಿಗಳ ವೇತನ ಪಾವತಿಗೆ ಕೂಡಾ ಕೂಡಾ ಕೇಂದ್ರ ಸರ್ಕಾರವೇ ಹಣ ಒದಗಿಸಲಿದೆ.  ನಾಲ್ಕು ವಾರಗಳಲ್ಲಿ  ಕುರಿತ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರಿಗೆ ನ್ಯಾಯಾಲಯ ಸೂಚಿಸಿತುವಿಷಯವನ್ನು ತಾನು ಪುನಃ ಸೆಪ್ಟೆಂಬರ್ ೨೬ರಂದು ಎತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿತುಮಕ್ಕಳ ಮೇಲಿ ಹಲ್ಲೆಲೈಂಗಿಕ ದೌರ್ಜನ್ಯ ಪ್ರಕರಣಗಳು ಅತಿಯಾಗಿ ಹೆಚ್ಚುತ್ತಿರುವ ಹಾಗೂ ನ್ಯಾಯಾಲಯಗಳಲ್ಲಿ  ಪ್ರಕರಣಗಳು ದೀರ್ಘಕಾಲದಿಂದ ಇತ್ಯರ್ಥವಾಗದೇ ಬಾಕಿ ಉಳಿಯುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಕಳವಳ ವ್ಯಕ್ತ ಪಡಿಸಿದ ಸುಪ್ರಿಂಕೋರ್ಟ್ ಸ್ವ ಇಚ್ಛೆಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಬಳಿಕ  ಆದೇಶವನ್ನು ನೀಡಿತುಇಂತಹ ಪ್ರಕರಣಗಳಲ್ಲಿ ಮಕ್ಕಳು ಬಲಿಪಶುಗಳಾಗಿದ್ದಾರೆ ಎಂಬುದರತ್ತ ಬೊಟ್ಟು ಮಾಡಿದ ಮುಖ್ಯ ನ್ಯಾಯಮೂರ್ತಿಯವರು ಅವರಿಗೆ ನ್ಯಾಯ ಒದಗಿಸುವಲ್ಲಿ ಆಗುತ್ತಿರುವ ಸುದೀರ್ಘ ವಿಳಂಬಕ್ಕೆ ಕ್ಷಮೆ ಇಲ್ಲ  ಎಂದು ಹೇಳಿದರುಇಂತಹ ಪ್ರಕರಣಗಳಲ್ಲಿ ಮಾನಸಿಕ ಆಘಾತಕ್ಕೆ ಒಳಗಾದ ಮಕ್ಕಳಿಗೆ ಅನುಕಂಪಪೂರ್ವಕವಾದ ಚಿಕಿತ್ಸೆ ಒದಗಿಸಬೇಕಾದ ಅಗತ್ಯವಿದೆ.  ಪೋಸ್ಕೋ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಸಂಪೂರ್ಣ ಭಿನ್ನ ಮಾರ್ಗ ಹಿಡಿಯುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿತು.  ರಾಷ್ಟ್ರದ ರಾಜಧಾನಿಯ ಸಾಕೇತ ನ್ಯಾಯಾಲಯ ಸಮುಚ್ಚಯದಲ್ಲಿ ಎರಡು ವಿಶೇಷ ಪೋಸ್ಕೋ ನ್ಯಾಯಾಲಯಗಳಿವೆ ಎಂಬುದಾಗಿ ತಿಳಿಸಿದಾಗಸಿಜೆಐ ಅವರು ಸುಪ್ರೀಂಕೋರ್ಟ್ ಸಾಕೇತವನ್ನು ಉಲ್ಲೇಖಿಸಿ ಮಾತನಾಡುತ್ತಿಲ್ಲಬದಲಿಗೆ ಖಾಸಗಿತನ ಎಂದರೆ ಪೋಸ್ಕೋ ಪ್ರಕರಣದ ಸಂತ್ರಸ್ಥ ಮತ್ತು ಆರೋಪಿಗಳ ಮಧ್ಯೆ ನ್ಯಾಯಾಲಯದಲ್ಲಿ ಒಂದು ಪರದೆ ಎಳೆಯುವುದು ಎಂಬುದಾಗಿ ಕೆಲವು ರಾಜ್ಯಗಳಲ್ಲಿ ಅರ್ಥೈಸಿಕೊಂಡಿರುವ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದರು.  ‘ಯಾವುದೇ ಮೂಲಸವಲತ್ತು ಇಲ್ಲದೆ ಇರುವಎಲ್ಲಿ ಮ್ಯಾಜಿಸ್ಟ್ರೇಟರಿಗೆ ಒಂದು ಕೊಠಡಿ ಕೂಡಾ ಇಲ್ಲವೋಎಲ್ಲಿ ಅವರು ನಾಲ್ಕು ಆವರಣಗಳ ಮಧ್ಯೆ ಕುಳಿತುಕೊಳ್ಳಬೇಕಾಗಿದೆಯೋ ಅಂತಹ ರಾಜ್ಯಗಳ ಬಗ್ಗೆ ನಾವು ಚಿಂತಿಸುತ್ತಿದ್ದೇವೆಹೊಸ ಕಾನೂನಿನ ಅಡಿಯಲ್ಲಿ ಬರುವ ಪ್ರಕರಣಗಳ ವಿಚಾರಣೆಗೆ ಮೂಲ ಸವಲತ್ತುಗಳೇ ಇಲ್ಲದೆ ನ್ಯಾಯಾಧೀಶರು ಕೆಲಸ ಮಾಡುತ್ತಿದ್ದಾರೆಹೊಸ ಕಾನೂನು ಅಂದರೆ ಹೊಸ ಜವಾಬ್ದಾರಿ ಮತ್ತು ಅವರ ಮೇಲೆ ಹೆಚ್ಚುವರಿ ಭಾರ ಎಂದು ಅರ್ಥನ್ಯಾಯಾಂಗವನ್ನು ಬಾಧಿಸುತ್ತಿರುವ ನೈಜ ವಿಷಯಗಳು ಇವುಸುಪ್ರೀಂಕೋರ್ಟ್ ಕೊಲಿಜಿಯಂನ್ನು ಬಾಧಿಸುತ್ತಿರುವ ವಿಷಯ ಇದಲ್ಲ’ ಎಂದು ಮುಖ್ಯ  ನ್ಯಾಯಮೂರ್ತಿ ಗೊಗೋಯಿ ಹೇಳಿದರು.  ಕೋರ್ಟ್ ಅಧಿಕಾರಿಯೊಬ್ಬರು ಪೋಸ್ಕೋ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇನ್ನಷ್ಟು ಹೆಚ್ಚಿನ ಕಾಲಾವಕಾಶ ಕೋರಿದಾಗಸಿಜೆಐ ಅವರು ’ಇಲ್ಲಿ ಯಾವ ಹೆಚ್ಚಿನ ಮಾಹಿತಿ ಬೇಕಾಗಿದೆದೇಶದಲ್ಲಿ ನ್ಯಾಯಾಧೀಶರಿಗಿಂತ ಹೆಚ್ಚಿನ ಪ್ರಕರಣಗಳಿವೆ ಎಂಬುದನ್ನು ತೋರಿಸುವ ಮಾಹಿತಿಯೋ?’ ಎಂದು ಪ್ರಶ್ನಿಸುವ ಮೂಲಕ ಅಧಿಕಾರಿಯ ಮಾತನ್ನು ತುಂಡರಿಸಿದರು.  ಸಾಲಿಸಿಟರ್ ಜನರಲ್ ಅವರತ್ತ ತಿರುಗಿದ ಮುಖ್ಯ ನ್ಯಾಯಮೂರ್ತಿ ’ಮಿಸ್ಟರ್ ಮೆಹ್ತಹಣ ಒದಗಿಸುವಂತೆ ನಿಮ್ಮ ಸರ್ಕಾರಕ್ಕೆ ಹೇಳಿ  (ವಿಶೇಷ ಪೋಸ್ಕೋ ನ್ಯಾಯಾಲಯಗಳ ಸ್ಥಾಪನೆಗೆಎಂದು ನಿರ್ದೇಶಿಸಿದರುಸಂತ್ರಸ್ಥ ಮಗು ಮತ್ತು ನ್ಯಾಯಾಲಯದ ಅಧಿಕಾರಿಗಳು ಹಾಗೂ ತನಿಖಾಧಿಕಾರಿಗಳ ಮಧ್ಯೆ ಸೇತುವಾಗಿ ನಿರ್ಣಾಯಕ ಪಾತ್ರ ವಹಿಸುವ  ನ್ಯಾಯಾಲಯಗಳ ಬೆಂಬಲಿಗ ವ್ಯಕ್ತಿಗಳು ಸಮರ್ಪಣಾ ಮನೋಭಾವದ ವ್ಯಕ್ತಿಗಳಾಗಿರಬೇಕುಶ್ರೇಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು ಮತ್ತು ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುವವರಾಗಿರಬೇಕು ಎಂದು ನ್ಯಾಯಾಲಯ ಹೇಳಿತು ವರ್ಷ ಜನವರಿ ೧ರಿಂದ ಜೂನ್ ೩೦ರವರೆಗಿನ ಅವಧಿಯಲ್ಲಿ ದೇಶಾದ್ಯಂತ ಮಕ್ಕಳ ದುರುಪಯೋಗಹಲ್ಲೆಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ೨೪,೨೧೨ ಮೊದಲ ಮಾಹಿತಿ ವರದಿಗಳು (ಎಫ್ ಐಆರ್ದಾಖಲಾದುದನ್ನು ತೋರಿಸುವ ಕೋರ್ಟಿನ ಸ್ವಂತ ವರದಿಯನ್ನು ಆಧರಿಸಿ ನ್ಯಾಯಾಲಯವು ಸ್ವ ಇಚ್ಛೆಯ ಸಾರ್ವಜನಿಕ ಹಿತಾಸಕ್ತಿ ಖಟ್ಲೆಯನ್ನು ದಾಖಲಿಸಿಕೊಂಡಿತು ಪ್ರಕರಣಗಳ ಪೈಕಿ ೧೧,೯೮೧ ಪ್ರಕರಣಗಳನ್ನು ಇನ್ನೂ ಪೊಲೀಸರು ತನಿಖೆ ಮಾಡುತ್ತಿದ್ದು೧೨,೩೩೧ ಪ್ರಕರಣಗಳಲ್ಲಿ ದೋಷಾರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ,೪೪೯ ಪ್ರಕರಣಗಳಲ್ಲಿ ಮಾತ್ರ ವಿಚಾರಣೆ ಪ್ರಾರಂಭವಾಗಿದೆ,೮೭೧ ಪ್ರಕರಣಗಳಲ್ಲಿ ವಿಚಾರಣೆ ಇನ್ನೂ ಆರಂಭವಾಗಬೇಕಾಗಿದೆವಿಚಾರಣಾ ನ್ಯಾಯಾಲಯಗಳು ೯೧೧ ಪ್ರಕರಣಗಳನ್ನು ಮಾತ್ರ ಅಂದರೆ ದಾಖಲಾದ ಪ್ರಕರಣಗಳ ಶೇಕಡಾ ೪ರಷ್ಟು ಪ್ರಕರಣಗಳನ್ನು ಮಾತ್ರ ಇತ್ಯರ್ಥ ಪಡಿಸಿವೆ ಎಂದು ನ್ಯಾಯಾಲಯದ ವರದಿ ಹೇಳಿತು.
2019: ಬೆಂಗಳೂರುಕಾಂಗ್ರೆಸ್ಜನತಾದಳ (ಎಸ್ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ ಅವರು ವಿಶ್ವಾಸಮತ ಕಳೆದುಕೊಂಡು ರಾಜೀನಾಮೆ ನೀಡಿದ ಎರಡು ದಿನಗಳ ಬಳಿಕ ವಿಧಾನಸಭಾಧ್ಯಕ್ಷ ಕೆ.ಆರ್ರಮೇಶ ಕುಮಾರ್ ಅವರು ಮೂರು ಮಂದಿ ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರು.  ಕಾಂಗ್ರೆಸ್ ಶಾಸಕರಾದ ಆರ್ಶಂಕರ್ರಮೇಶ ಜಾರಕಿಹೊಳಿ ಮತ್ತು ಮಹೇಶ ಕುಮಠಳ್ಳೀ ಅವರನ್ನು ಹಾಲಿ ವಿಧಾನಸಭೆಯಿಂದ ಅದರ ಅವಧಿ ಪೂರ್ಣಗೊಳ್ಳುವವರೆಗೂ ಅನರ್ಹಗೊಳಿಸುರುವುದಾಗಿ ಸಭಾಧ್ಯಕ್ಷರು ಈದಿನ  ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರುಅನರ್ಹಗೊಂಡಿರುವವರು ಹಾಲಿ ವಿಧಾನಸಭೆಗೆ ಪುನಃ ಸ್ಪರ್ಧಿಸುವಂತಿಲ್ಲ ಮತ್ತು ಸಚಿವರಾಗುವಂತಿಲ್ಲ ಎಂದೂ ರಮೇಶ ಕುಮಾರ್ ಅವರು ಸ್ಪಷ್ಟ ಪಡಿಸಿದರು.  ಉಳಿದ ಶಾಸಕರ ರಾಜೀನಾಮೆಗಳು ಹಾಗೂ ಅವರನ್ನು ಅನರ್ಹಗೊಳಿಸುವಂತೆ ಬಂದಿರುವ ದೂರುಗಳ ಬಗ್ಗೆ ಇನ್ನಷ್ಟು ಪರಿಶೀಲಿಸಬೇಕಾಗಿದ್ದುಮುಂದೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭಾಧ್ಯಕ್ಷರು ನುಡಿದರುರಮೇಶ ಜಾರಕಿಹೊಳಿ ಮತ್ತು ಮಹೇಶ ಕುಮಠಳ್ಳಿ ಅವರನ್ನು ಕರ್ನಾಟಕ ವಿಧಾನಸಭೆಯ ಸದಸ್ಯತ್ವದಿಂದಹಾಲಿ ವಿಧಾನಸಭೆಯ ಅವಧಿ ಮುಗಿಯುವವರೆಗೂ ಶೆಡ್ಯೂಲು ೧೦ರ ಸೆಕ್ಷನ್ ()(ಅಡಿಯಲ್ಲಿ ಅನರ್ಹಗೊಳಿಸಲಾಗಿದೆ ಎಂದು ರಮೇಶಕುಮಾರ್ ಹೇಳಿದರುಇದಕ್ಕೆ ಮುನ್ನ ಶಾಸಕ ಆರ್ಶಂಕರ್ ಅವರನ್ನು ತಮ್ಮ ಪಕ್ಷ ಕೆಪಿಜೆಪಿಯನ್ನು ಕಾಂಗ್ರೆಸ್ ಜೊತೆಗೆ  ವರ್ಷ ಜೂನ್ ೧೪ರಂದು ವಿಲೀನಗೊಳಿಸಿದ್ದರ ಹೊರತಾಗಿಯೂ ಬಿಜೆಪಿಯನ್ನು ಬೆಂಬಲಿಸಿದ್ದಕ್ಕಾಗಿ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಸಭಾಧ್ಯಕ್ಷರು ನುಡಿದರು೧೫ನೇ ವಿಧಾನಸಭೆಯ ಅವಧಿ ಅವಧಿ ೨೦೨೩ರಲ್ಲಿ ಮುಕ್ತಾಯಗೊಳ್ಳಲಿದ್ದುಅಲ್ಲಿಯವರೆಗೂ ಆರ್ಶಂಕರ್ ಅವರ ಅನರ್ಹರಾಗಿದ್ದಾರೆ ಎಂದು ಸಭಾಧ್ಯಕ್ಷರು ಹೇಳಿದರುಆರ್ಶಂಕರ್ ಅವರು ರಾಜ್ಯ ವಿಧಾನಸಭೆಗೆ ಕೆಪಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಗೆದ್ದಿದ್ದರುಬಳಿ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆಗೆ ವಿಲೀನಗೊಳಿಸಲು ಕೋರಿದ್ದು೨೦೧೯ರ ಜೂನ್ ೧೪ರಂದು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿದ್ದರು.  ಕಾಂಗೆಸ್ ಶಾಸಕಾಂಗ ಪಕ್ಷದ ಮುಖ್ಯಸ್ಥ ಸಿದ್ದರಾಮಯ್ಯ ಅವರು ಅದೇ ದಿನ ಕೆಪಿಜೆಪಿ ವಿಲೀನದ ಬಗ್ಗೆ ಪತ್ರದ ಮೂಲಕ ಸಭಾಧ್ಯಕ್ಷರಿಗೆ ತಿಳಿಸಿದ್ದರುಕಾಂಗ್ರೆಸ್ ಶಾಸಕರ ಜೊತೆ ಆಸನದ ವ್ಯವಸ್ಥೆ ಮಾಡುವ ಬಗ್ಗೆ ಪರಿಶೀಲಿಸಲಾಗಿದೆ ಎಂದು ಶಂಕರ್ ಅವರಿಗೆ ಲಿಖಿತ ನಿರ್ದೇಶನ ನೀಡುವುದರೊಂದಿಗೆ ಜೂನ್ ೨೫ರಂದು ವಿಲೀನ ಪ್ರಕ್ರಿಯೆ ಪೂರ್ಣಗೊಂಡಿತ್ತು ಎಂದು ಸಭಾಧ್ಯಕ್ಷರು ವಿವರಿಸಿದರು೧೫ ಶಾಸಕರ ರಾಜೀನಾಮೆ ಮತ್ತು ೧೭ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಮತ್ತು ಜನತಾದಳ (ಎಸ್ಮಾಡಿದ್ದ ಮನವಿ ಬಗೆಗಿನ ತಮ್ಮ ನಿರ್ಧಾರವನ್ನು ಸಭಾಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2019: ನವದೆಹಲಿಪಾಕಿಸ್ತಾನದ ನಿಯಂತ್ರಣದಲ್ಲಿ ಇರುವ ಪ್ರದೇಶಗಳಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ವಿಶ್ವಾಸಾರ್ಹ ಕ್ರಮಕೈಗೊಳ್ಳುವಂತೆ ಭಾರತವು  ಪಾಕಿಸ್ತಾನವನ್ನು ಆಗ್ರಹಿಸಿತುಪಾಕಿಸ್ತಾನದ ನೆಲದಲ್ಲಿ ಈಗಲೂ ಸುಮಾರು ೪೦,೦೦೦ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂಬುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಒಪ್ಪಿಕೊಂಡ ಬೆನ್ನಲ್ಲೇ ಭಾರತ  ಆಗ್ರಹವನ್ನು ಮಾಡಿತು.  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ ಕುಮಾರ್ ಅವರನ್ನು ಉಲ್ಲೇಖಿಸಿದ ವರದಿ, ’ಪಾಕಿಸ್ತಾನದ ಪ್ರಧಾನಿಯವರು ತಮ್ಮ ದೇಶದಲ್ಲಿ ಭಯೋತ್ಪಾದಕರ ಅಸ್ತಿತ್ವ ಮತ್ತು ತರಬೇತಿ ಶಿಬಿರಗಳಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಿ ಕಾಶ್ಮೀರಕ್ಕೆ ಕಳುಹಿಸಲಾಗುತ್ತಿದೆ ಎಂಬ ವಾಸ್ತವಾಂಶವನ್ನು ಒಪ್ಪಿಕೊಂಡಿರುವುದರಿಂದಪಾಕಿಸ್ತಾನದ ಸ್ವಾಮ್ಯದಲ್ಲಿ ಇರುವ ಪ್ರದೇಶಗಳಲ್ಲಿನ ಭಯೋತ್ಪಾದಕ ತರಬೇತಿ ಶಿಬಿರಗಳ ವಿರುದ್ಧ ವಿಶ್ವಾಸಾರ್ಹ ಕ್ರಮ ಕೈಗೊಳ್ಳಲು ಈಗ ಅವರಿಗೆ ಸಕಾಲವಾಗಿದೆ’ ಎಂದು ಹೇಳಿತು.  ಇಮ್ರಾನ್ ಖಾನ್ ಅವರು ಅಮೆರಿಕದ ವಾಷಿಂಗ್ಟನ್ನಲ್ಲಿ ಅಮೆರಿಕನ್ ಕಾಂಗ್ರೆಸಿನ ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ನಲ್ಲಿ ನಡೆದ ಸಂವಾದದ ವೇಳೆಯಲ್ಲಿ ತಮ್ಮ ರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಉಗ್ರಗಾಮಿಗಳು ಇರುವುದನ್ನು ಒಪ್ಪಿಕೊಂಡಿದ್ದರು.  ಉಗ್ರಗಾಮಿಗಳ ನಿಶ್ಯಸ್ತ್ರೀಕರಣದ ತಮ್ಮ ಯತ್ನಕ್ಕೆ ಬಲಾಢ್ಯ ಸೇನೆ ತಮ್ಮ ಸರ್ಕಾರದ ಜೊತೆ ನಿಂತಿದೆ ಎಂಬುದಾಗಿ ಖಾನ್ ಪ್ರತಿಪಾದಿಸಿದ್ದರು.  ‘ಪಾಕಿಸ್ತಾನದ ಸರ್ಕಾರಗಳು ನಿರಂತರವಾಗಿ ಅಮೆರಿಕಕ್ಕೆ ಸತ್ಯ ಹೇಳಲಿಲ್ಲ... ಪಾಕಿಸ್ತಾನದ ನೆಲದಲ್ಲಿ ೪೦ ವಿವಿಧ ಭಯೋತ್ಪಾದಕ ಗುಂಪುಗಳು ಕಾರ್ಯಾಚರಿಸುತ್ತಿವೆದೇಶದಲ್ಲಿ ಈಗಲೂ ತರಬೇತಿ ಪಡೆದ ಸುಮಾರು ೩೦,೦೦೦ದಿಂದ ೪೦,೦೦೦ ಉಗ್ರಗಾಮಿಗಳು ಇದ್ದು ಅವರು ಆಫ್ಘಾನಿಸ್ಥಾನ ಅಥವಾ ಕಾಶ್ಮೀರದಲ್ಲಿ ಹೋರಾಡುತ್ತಿದ್ದಾರೆ.. ಜೈಶ್ --ಮೊಹಮ್ಮದ್ ಭಾರತದಲ್ಲಿ ಕಾರ್ಯಾಚರಿಸುತ್ತಿತ್ತು...’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಅಮೆರಿಕ ಭೇಟಿಯ ಕಾಲದಲ್ಲಿ ನಡೆದ ವಿವಿಧ ಸಮಾರಂಭಗಳಲ್ಲಿ ಬಹಿರಂಗ ಪಡಿಸಿದ್ದರು.

2019: ವೆಲ್ಲೂರು: ರಾಜೀವಗಾಂಧಿ ಹತ್ಯೆ ಪ್ರಕರಣದ ಶಿಕ್ಷಿತ ಅಪರಾಧಿ ನಳಿನಿ ಶ್ರೀಹರನ್ ಅವರನ್ನು ತಮಿಳುನಾಡಿನ ವೆಲ್ಲೂರು ಕೇಂದ್ರೀಯ  ಸೆರೆಮನೆಯಿಂದ ಈದಿನ ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತುತನ್ನ ಪುತ್ರಿಯ ಮದುವೆ ವ್ಯವಸ್ಥೆಗಳನ್ನು ಮಾಡುವ ಸಲುವಾಗಿ ಪೆರೋಲ್ ನೀಡುವಂತೆ ನಳಿನಿ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ್ದ ಮದ್ರಾಸ್ ಹೈಕೋರ್ಟ್ ಜುಲೈ 5ರಂದು ಪೆರೋಲ್ ಮಂಜೂರು ಮಾಡಿತ್ತುನಳಿನಿಯ ಪುತ್ರಿ ಹರಿಥ್ರಾ ಸೆರೆಮನೆಯಲ್ಲೇ ಜನಿಸಿದ್ದು ಪ್ರಸ್ತುತ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾಳೆ.  ರಾಜೀವಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 28 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿರುವ ನಳಿನಿಗೆ  ಒಮ್ಮೆ ಮಾತ್ರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಂದು ದಿನದ ಮಟ್ಟಿಗೆ ಬಿಡುಗಡೆ ಮಾಡಲಾಗಿತ್ತು.

2018: ನವದೆಹಲಿ:  ಬ್ರಿಟನ್ ಮೂಲದ ಯುಗೌ ಸಮೀಕ್ಷೆಯು ತಯಾರಿಸಿದ ೨೦೧೮ರ ಸಾಲಿನ ವಿಶ್ವದ ಅತ್ಯಂತ ಜನಮೆಚ್ಚುಗೆಯ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಬಾಲಿವುಡ್ ಚಿತ್ರ ನಟ ಅಮಿತಾಭ್ ಬಚ್ಚನ್ಅವರ ಸೊಸೆಕನ್ನಡತಿ ಐಶರ್ಯ ರೈ ಬಚ್ಚನ್ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಸ್ಥಾನ ಪಡೆದರುಯುಗೌ ಸಮೀಕ್ಷೆಯು ೩೫ ರಾಷ್ಟ್ರಗಳಿಂದ ಅತ್ಯಂತ ಹೆಚ್ಚು ಜನಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗ ಪಡಿಸಿದ್ದುಭಾರತದ ಸಿನಿಮಾ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರಗಳಿಂದ ಒಬ್ಬೊಬ್ಬ ಪುರುಷರು ಮತ್ತು ಸಿನಿಮಾ ಕ್ಷೇತ್ರದ ಮೂವರು ನಟಿಯರನ್ನು ಅತ್ಯಂತ ಮೆಚ್ಚುಗೆಯ ವ್ಯಕ್ತಿಗಳು ಎಂಬುದಾಗಿ ಗುರುತಿಸಿತು೨೦೧೮ರ ಅತ್ಯಂತ ಮೆಚ್ಚುಗೆಯ ಪುರುಷರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಅಗ್ರಸ್ಥಾನ ಪಡೆದಿದ್ದರೆಅತ್ಯಂತ ಮೆಚ್ಚುಗೆಯ ಮಹಿಳಾ ಪಟ್ಟಿಯಲ್ಲಿ ಏಂಜೆಲಿನಾ ಜೋಲೀ ಮೊದಲ ಸ್ಥಾನ ಪಡೆದಿದ್ದಾರೆಪಟ್ಟಿಯು ಅಮಿತಾಭ್ ಬಚ್ಚನ್ಅವರ ಸೊಸೆ ಚಿತ್ರನಟಿ ಐಶ್ವರ್ಯ ರೈ ಬಚ್ಚನ್ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಹೆಸರನ್ನು ಆಯಾಯ ವರ್ಗಗಳಲ್ಲಿ ಹೆಸರಿಸಿದೆಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಅಮಿತಾಭ್  ಬಚ್ಚನ್ ಹೆಸರಿಗಿಂತ ಮೊದಲಿನ ಸ್ಥಾನದಲ್ಲಿ ಇದೆ.  ೩೫ ರಾಷ್ಟ್ರಗಳ ೩೭,೦೦೦ ಜನರನ್ನು ಅಂತರ್ಜಾಲದ (ಆನ್ ಲೈನ್ಮೂಲಕ ಸಂದರ್ಶನ ನಡೆಸಿದ ಬಳಿಕ ೨೦ ಪುರುಷರು ಮತ್ತು ೨೦ ಮಹಿಳೆಯರ ಪಟ್ಟಿಯನ್ನು ಪ್ರಕಟಿಸಲಾಯಿತು.  ಬಿಲ್ ಗೇಟ್ಸ್ ಮತ್ತು ಏಂಜೆಲಿನಾ ಜೋಲೀ ಅವರು ವಿಶ್ವದ ಅತ್ಯಂತ ಮೆಚ್ಚುಗೆಯ ವ್ಯಕ್ತಿಗಳು ಎಂದು ಸಮೀಕ್ಷೆ ಮಾನ್ಯ ಮಾಡಿದೆಇವರಿಬ್ಬರೂ ೨೦೧೫ರಲ್ಲಿ ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ಪಟ್ಟಿಗಳನ್ನು ಪ್ರಕಟಿಸಲು ಆರಂಭಿಸಿದಂದಿನಿಂದ ಪ್ರತಿವರ್ಷದ ಪಟ್ಟಿಯಲ್ಲೂ ಅಗ್ರಸ್ಥಾನವನ್ನೇ ಪಡೆಯುತ್ತಾ ಬಂದಿದ್ದರುಭಾರತದ ನಾಲ್ವರೂ ಚಿತ್ರ ನಟ-ನಟಿಯರು ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದರು.  ಅಮಿತಾಭ್ ಬಚ್ಚನ್ ಅವರು ಪುರುಷರ ಪಟ್ಟಿಯಲ್ಲಿ ೯ನೇ ಸ್ಥಾನವನ್ನು ಪಡೆದಿದ್ದುಪ್ರಧಾನಿ ನರೇಂದ್ರ ಮೋದಿ ಅವರು ಬಚ್ಚನ್ ಗಿಂತ ಒಂದು ಸ್ಥಾನ ಮೊದಲು (೮ನೇ ಸ್ಥಾನಇದ್ದಾರೆಮೋದಿ ಅವರ ಜನಪ್ರಿಯತೆ ಹಿಂದಿಗಿಂತ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿತುಮಹಿಳೆಯರ ವರ್ಗದಲ್ಲಿ ಐಶ್ವರ್ಯ ರೈ ವಿಶ್ವದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ ಪಟ್ಟಿಯಲ್ಲಿ ೧೧ ನೇ ಸ್ಥಾನ ಪಡೆದಿದ್ದಾರೆದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಅವರು ಐಶ್ವರ್ಯ ರೈ ನಂತರದ (೧೧೧೨ಸ್ಥಾನ ಪಡೆದಿದ್ದಾರೆವಂಡರ್ ವುಮನ್ ಸ್ಟಾರ್ ಗಾಲ್ ಗಡೋಟ್ ಅವರಿಗಿಂತ ಮೇಲಿನ ಸ್ಥಾನವನ್ನು  ಮೂವರೂ ಬಾಲಿವುಡ್ ನಟ-ನಟಿಯರು ಪಡೆದರುಅತಿ ಮೆಚ್ಚುಗೆಯ ಮಹಿಳೆಯರ ಪಟ್ಟಿಯ ಮೊದಲ ೨೦ ಸ್ಥಾನಗಳಲ್ಲಿ ಉದ್ಯಮಿಗಳುನಟಿಯರುಗಾಯಕಿಯರು ಅಥವಾ ಟಿವಿ ನಿರೂಪಕಿಯರು ಪ್ರಾಬಲ್ಯ ಪಡೆದಿದ್ದಾರೆಇವರ ಪೈಕಿ ಎಮ್ಮಾ ವಾಟ್ಸನ್ ಮತ್ತು ಆಂಜೆಲಿನಾ ಜೋಲಿಯಂತಹ ಕೆಲವರು ಮಾತ್ರ ತಮ್ಮ ಮಾನವೀಯ ಕೆಲಸಗಳಿಂದ ಗುರುತಿಸಲ್ಪಟ್ಟಿದ್ದಾರೆ.  ಇದಕ್ಕೆ ವ್ಯತಿರಿಕ್ತವಾಗಿ ಅತಿ ಮೆಚ್ಚುಗೆಯ ಪುರುಷರ ಪಟ್ಟಿಯಲ್ಲಿ ಬಹುತೇಕ ಮಂದಿ ರಾಜಕೀಯವ್ಯಾಪಾರ ಮತ್ತು ಕ್ರೀಡಾಹಿನ್ನೆಲೆಯ ಮಂದಿ ಪ್ರಾಬಲ್ಯ ಪಡೆದಿದ್ದಾರೆ.  ಬಿಲ್ ಗೇಟ್ಸ್ ನಂತರದ ಸ್ಥಾನಗಳಲ್ಲಿ ಬರಾಕ್ ಒಬಾಮಾಜಾಕೀ ಚಾನ್ ಮತ್ತು ಕ್ಷಿ ಜಿನ್ ಪಿಂಗ್ ಇದ್ದರೆಮಹಿಳಾ ಪಟ್ಟಿಯಲ್ಲಿ ಜೋಲೀ ನಂತರದ ಸ್ಥಾನಗಳಲ್ಲಿ ಮಿಷೆಲ್ ಒಬಾಮಾ ಮತ್ತು ಒಪ್ರಾಹ್ ವಿನ್ಫ್ರೇ ಇದ್ದಾರೆ.  ವಿಶ್ವದ ಅತ್ಯಂತ ಮೆಚ್ಚುಗೆಯ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕನ್ನಡತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇವಲ  ದಿನಗಳ ಹಿಂದೆ ಮೇಡಮ್ ಟುಸ್ಸಾಡ್ ಅವರ ಲಂಡನ್ ಮತ್ತು ದೆಹಲಿಯ ವ್ಯಾಕ್ಸ್ (ಮೇಣದಪ್ರತಿಮೆಗಳ ಗ್ಯಾಲರಿಗೆ ಸೇರ್ಪಡೆಯಾಗಲು ಆಯ್ಕೆಯಾಗಿದ್ದರುಮೇಡಂ ಟುಸ್ಸಾಡ್ ಅವರ ಲಂಡನ್ ವ್ಯಾಕ್ಸ್ ಪ್ರತಿಮೆಗಳ ಗ್ಯಾಲರಿಯಲ್ಲಿ ಈಗಾಗಲೇ ಬಾಲಿವುಡ್ ನಟ ನಟಿಯರಾದ ಅಮಿತಾಭ್ ಬಚ್ಚನ್ಸಲ್ಮಾನ್ ಖಾನ್ಕತ್ತೀನಾ ಕೈಫ್ ಮತ್ತಿತರರು ಸೇರ್ಪಡೆಯಾಗಿದ್ದಾರೆ.

2018: ಮೆಹ್ಸಾನಾ (ಅಹ್ಮದಾಬಾದ್): ೨೦೧೫ರಲ್ಲಿ ಪಾಟೀದಾರ ಪ್ರತಿಭಟನೆ ವೇಳೆ ನಡೆಸಿದ್ದ ಗಲಭೆಗೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ತಪ್ಪಿತಸ್ಥ ಎಂದು ಆದೇಶ ನೀಡಿದ ಗುಜರಾತಿನ ವಿಸ್ ನಗರ್ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸದ ಶಿಕ್ಷೆ ಜೊತೆಗೆ ೫೦ ಸಾವಿರ ರೂಪಾಯಿ ದಂಡವನ್ನೂ ವಿಧಿಸಿ ತೀರ್ಪು ನೀಡಿತು೨೦೧೫ರ ಜುಲೈ ೨೩ರಂದು ಪಾಟೀದಾರ್ ಅನಾಮತ್ ಆಂದೋಲನ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಸುಮಾರು ೫೦೦ ಮಂದಿ ಪಟೇಲ್ ಸಮುದಾಯದವರು ವಿಸ್ ನಗರದಲ್ಲಿನ ಬಿಜೆಪಿ ಶಾಸಕರ ಕಚೇರಿಯನ್ನು ಧ್ವಂಸಗೊಳಿಸಿದ್ದರುಅಲ್ಲದೇ ಪತ್ರಕರ್ತರ ಮೇಲೂ ಹಲ್ಲೆ ನಡೆಸಿದ್ದರು.   ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಹಾಗೂ ೧೭ ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.

2018: ಮುಂಬೈಮರಾಠಾ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಚಳವಳಿ ಆರಂಭಿಸಿದ್ದ ಮರಾಠಾ ಕ್ರಾಂತಿ ಮೋರ್ಚಾಬುಧವಾರ ಇಡೀದಿನದ ಪ್ರತಿಭಟನೆಗಳ ಬಳಿಕ ಸಂಜೆಯ ವೇಳೆಗೆ ತನ್ನ ಹಿಂಸಾತ್ಮಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತುಮಧ್ಯಾಹ್ನ  ಗಂಟೆ ವೇಳೆಗೆ ಚಳವಳಿ ಹಿಂತೆಗೆದುಕೊಳ್ಳುವ ಮುನ್ನ ಮಹಾರಾಷ್ಟ್ರ ಬಂದ್ ಕರೆಯಿಂದಾಗಿ ರಾಜಧಾನಿ ಮುಂಬೈ ಸೇರಿದಂತೆ ರಾಜ್ಯದ ಬಹಳಷ್ಟು ಭಾಗಗಳಲ್ಲಿ ಅರಾಜಕ ಪರಿಸ್ಥಿತಿ ನಿರ್ಮಾಣಗೊಂಡಿತ್ತುಪ್ರತಿಭಟನಕಾರರು ನವೀ ಮುಂಬೈ ಟೌನ್ ಶಿಪ್ ಮತ್ತು ಸತಾರಾ ಜಿಲ್ಲೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಿದ ಪರಿಣಾಮವಾಗಿ ಮರಾಠಾ ಸಮುದಾಯದ ಬಂದ್ ಹಿಂಸೆಗೆ ತಿರುಗಿ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡರು

2018: ಪಟ್ನಾ: ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕಸಮತಾ ಪಕ್ಷದ (ಆರ್ ಎಲ್ ಎಸ್ ಪಿನಾಯಕ ಉಪೇಂದ್ರ ಕುಶವಾಹ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಮತ್ತು ೨೦೨೦ರ ವಿಧಾನಸಭಾ ಚುನಾವಣೆಗೆ ಹೊಸ ನಾಯಕನನ್ನು ಬಿಂಬಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಲಹೆ ಮಾಡಿದರುನಿತೀಶ್ ಕುಮಾರ್ ಅವರಂತಹ ಎತ್ತರದ ನಾಯಕರಿಗೆ ಎತ್ತರದ ಸ್ಥಾನದಲ್ಲಿ ಉಳಿಯಲು ೧೫ ವರ್ಷಗಳು ಬೇಕಾದಷ್ಟಾಯಿತುಕುಮಾರ್ ಅವರು ಇನ್ನು ದೊಡ್ಡ ರಾಜಕೀಯ ಪಾತ್ರ ವಹಿಸಬೇಕು ಎಂದು ಅವರು ನುಡಿದರು

2018: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಸಲ್ಲಿಸಲಾಗಿರುವ ಹಕ್ಕುಚ್ಯುತಿ ನೋಟಿಸ್ ಗಳು ತಮ್ಮ ಪರಿಶೀಲನೆಯಲ್ಲಿ ಇವೆ ಎಂದು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಇಲ್ಲಿ ಹೇಳಿದರುತಮಗೆ ಪ್ರಧಾನಿಯವರ ವಿರುದ್ಧ ಐದು ಹಕ್ಕುಚ್ಯುತಿ ನೋಟಿಸ್ಗಳು ಮತ್ತು ರಕ್ಷಣಾ ಸಚಿವರ ವಿರುದ್ಧ ಐದು ಹಕ್ಕು ಚ್ಯುತಿ ನೋಟಿಸ್ ಗಳು ವಿರೋಧ ಪಕ್ಷ ಸದಸ್ಯರಿಂದ ಬಂದಿದ್ದು ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ಕಾಲದಲ್ಲಿ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸದನವನ್ನು ದಾರಿ ತಪ್ಪಿಸಿದ್ದಕ್ಕಾಗಿ ಇವುಗಳನ್ನು ನೀಡಲಾಗಿದೆ ಎಂದು ಮಹಾಜನ್ ನುಡಿದರು.  

2018: ಇಸ್ಲಾಮಾಬಾದ್ಕರಾಚಿಪೇಶಾವರ: ಬಿಗಿ ಭದ್ರತೆಯೊಂದಿಗೆ ನಡೆದ ಪಾಕಿಸ್ತಾನದ ಸಂಸತ್ ಚುನಾವಣೆಯಲ್ಲಿ ಹಿಂಸಾಚಾರ ಭುಗಿಲೆದ್ದುಬಲೂಚಿಸ್ತಾನದ ಕ್ವೆಟ್ವಾ ಮತಗಟ್ಟೆ ಸಮೀಪ ಸಂಭವಿಸಿದ ಮಾನವ ಬಾಂಬ್ ದಾಳಿಗೆ ೩೧ ಮಂದಿಯಾಗಿರುವುದು ಸೇರಿದಂತೆ ವಿವಿಧ ಹಿಂಸಾಕೃತ್ಯಗಳಲ್ಲಿ ಕನಿಷ್ಠ ೩೪ ಮಂದಿ ಸಾವನ್ನಪ್ಪಿ೩೬ಕ್ಕೂ ಹೆಚ್ಚು ಮಂದಿ ಗಾಯಗೊಂಡರುಕ್ವೆಟ್ಟಾದಲ್ಲಿ ನಡೆದ ಮಾನವ ದಾಳಿಯ ಹೊಣೆಯನ್ನು ಐಸಿಸ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತುಮಾನವ ಬಾಂಬರ್ ಮತಗಟ್ಟೆಯೊಳಗೆ ಪ್ರವೇಶಿಸಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಆತನನ್ನು ತಡೆಯಲು ಯತ್ನಿಸಿದರುಆಗ ಆತ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಸ್ಥಳೀಯ ಆಡಳಿತಾಧಿಕಾರಿ ಸುದ್ದಿ ಸಂಸ್ಥೆಗೆ ತಿಳಿಸಿದರು.  

2017: ನವದೆಹಲಿಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ ಅವರು ಪ್ರಮಾಣವಚನ ಸ್ವೀಕರಿಸಿದರುಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್  ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರುರಾಷ್ಟ್ರಪತಿ ಭವನದ ಮುಂದೆ ಹಾಲಿ ಮತ್ತು ನಿಯೋಜಿತ ರಾಷ್ಟ್ರಪತಿಗಳಿಗೆ  ರಾಷ್ಟ್ರಪತಿಗಳ ಬೆಂಗಾವಲು ಪಡೆಯಿಂದ ಗೌರವ ರಕ್ಷೆ ನೀಡಲಾಯಿತುಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ,ಉಪರಾಷ್ಟ್ರಪತಿ ಹಮೀದ್ ಅನ್ಸಾರಿಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಎಚ್.ಡಿ.ದೇವೇಗೌಡ,ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ನಿತಿನ್ ಗಡ್ಕರಿಅನಂತ್ ಕುಮಾರ್ , ಸಂಸದರುಮುಖ್ಯಮಂತ್ರಿಗಳುಶಾಸಕರು ಭಾಗಿಯಾಗಿದ್ದರು
2017: ಚೆನ್ನೈ : ತಮಿಳು ನಾಡಿನಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ  ವಂದೇ ಮಾತರಂ ರಾಷ್ಟ್ರ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಅಥವಾ ನುಡಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಆದೇಶಿಸಿತು. '' ದೇಶದ ಎಲ್ಲ ಪ್ರಜೆಗಳಲ್ಲಿ ದೇಶ ಪ್ರೇಮ ಇರಲೇಬೇಕಾದ ಆವಶ್ಯಕ ಗುಣವಾಗಿದೆಆದುದರಿಂದ ಎಲ್ಲ ಶಾಲೆಕಾಲೇಜುವಿದ್ಯಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಪ್ರತೀ ಸೋಮವಾರ ಅಥವಾ ಶುಕ್ರವಾರಕನಿಷ್ಠ ವಾರಕ್ಕೊಮ್ಮೆ ವಂದೇ ಮಾತರಂ ರಾಷ್ಟ್ರಗೀತೆಯನ್ನು ಹಾಡಬೇಕು ಇಲ್ಲವೇ ನುಡಿಸಬೇಕುಅದೇ ರೀತಿ ಎಲ್ಲ ಸರಕಾರಿ ಕಚೇರಿಗಳುಖಾಸಗಿ ಕಂಪೆನಿಗಳುಕಾರ್ಖಾನೆಗಳುಕೈಗಾರಿಕೆಗಳು ಕನಿಷ್ಠ ತಿಂಗಳಿಗೊಮ್ಮೆ ವಂದೇ ಮಾತರಂ ಹಾಡಬೇಕು ಅಥವಾ ನುಡಿಸಬೇಕು'' ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿತು.
2017: ಅಹಮದಾಬಾದ್ಗುಜರಾತಿನ ಉತ್ತರ ಮತ್ತು ಕೇಂದ್ರ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಪ್ರವಾಹ ಉಂಟಾಗಿದ್ದುಪರಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದರುಬೆಳಿಗ್ಗೆ ದೆಹಲಿಯಲ್ಲಿ ಸಂಸತ್ನಲ್ಲಿ ನಡೆದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಅವರುಮಧ್ಯಾಹ್ನದ ನಂತರ ವೈಮಾನಿಕ ಸಮೀಕ್ಷೆಗೆ ಅಹಮದಾಬಾದ್ಗೆ ಬಂದಿಳಿದರುಸಮೀಕ್ಷೆಗೂ ಮುನ್ನ ಮೋದಿ ಅವರು ಪ್ರವಾಹ ಸ್ಥಿತಿ ಕುರಿತು ಉನ್ನತ ಅಧಿಕಾರಿಗಳ ಸಭೆ ನಡೆಸಿದರು.
2017: ನವದೆಹಲಿಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ವಿಜ್ಞಾನಿಪದ್ಮ ಭೂಷಣ,
ಪದ್ಮ ವಿಭೂಷಣ ಯಶ್ಪಾಲ್(90) ಅವರು ಉತ್ತರಪ್ರದೇಶದ ನೋಯ್ಡಾದಲ್ಲಿ ಹಿಂದಿನ ದಿನ 24 ಜುಲೈ 2017 ರಾತ್ರಿ ನಿಧನರಾದರುಸೂರ್ಯ ಕಿರಣಗಳ ಅಧ್ಯಯನಭೌತಶಾಸ್ತ್ರಖಗೋಳ ವಿಜ್ಞಾನ ಅಧ್ಯಯನದ ಮೂಲಕ ಅವರು ವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದರುಕೊನೆಯವರೆಗೂ ವಿಜ್ಞಾನವನ್ನೇ ಉಸಿರಾಗಿಸಿಕೊಂಡ ಯಶ್‌ ಪಾಲ್‌ ವಿಜ್ಞಾನಿ ಮಾತ್ರವಾಗಿರಲಿಲ್ಲಸಮಾಜಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಜ್ಞಾನದ ನಿಧಿಯಾಗಿದ್ದರು. ‘ಯಶ್‌ ಪಾಲ್‌ ಸಿಂಗ್‌’  ಅವರು ಸೂರ್ಯನಿಂದ ಹೊರಹೊಮ್ಮವ ವಿಶ್ವ ಕಿರಣಗಳ (ಕಾಸ್ಮಿಕ್ ರೇಸ್‌) ಅಧ್ಯಯನ ಕ್ಷೇತ್ರದಲ್ಲಿ  ಬಹುದೊಡ್ಡ ಹೆಸರುಹಾಗಂತ  ಅವರ ಕಾರ್ಯಕ್ಷೇತ್ರ  ಪ್ರಯೋಗಾಲಯದ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಲಿಲ್ಲಪ್ರಯೋಗಾಲಯಗಳಿಗಿಂತ  ಸದಾ ಜನರ ಮಧ್ಯೆ ಇರುತ್ತಿದ್ದ ಅಪರೂಪದ ವಿಜ್ಞಾನಿ ಅವರಾಗಿದ್ದರುವಿಜ್ಞಾನಿಶಿಕ್ಷಣ ತಜ್ಞ,  ಉತ್ತಮ ಆಡಳಿಗಾರಚತುರ ಮಾತುಗಾರಸದಾ ಸಮಾಜದ ಒಳಿತಿಗಾಗಿ ತುಡಿಯುತ್ತಿದ್ದ  ಬಹುಮುಖ ವ್ಯಕ್ತಿತ್ವದ ಸಂಗಮದಂತಿದ್ದ ಅವರು ನೇರ ನಡೆನುಡಿಗಳಿಗಾಗಿ ಹೆಸರಾಗಿದ್ದರುಯಶ್‌ ಪಾಲ್‌ ಹುಟ್ಟಿದ್ದು (1926) ಝಾಂಗ್‌ ಎಂಬ ಹಳ್ಳಿಯಲ್ಲಿಅದು ಈಗ ಪಾಕಿಸ್ತಾನದಲ್ಲಿದೆ.  
2016: ನವದೆಹಲಿಗರ್ಭ ಧರಿಸಿದ 24 ವಾರಗಳ ಬಳಿಕ ಗರ್ಭಪಾತಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತುಗರ್ಭಸ್ಥ ಶಿಶು ಅಸಹಜ ಬೆಳವಣಿಗೆ ಹೊಂದಿರುವ ಹಿನ್ನೆಲೆಯಲ್ಲಿ ಭ್ರೂಣ ತೆಗೆಸಲು ಅವಕಾಶ ಕೋರಿ ಅತ್ಯಾಚಾರ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್  ಆದೇಶ ನೀಡಿತುಸಂತ್ರಸ್ತ ಮಹಿಳೆಯ ವೈದ್ಯಕೀಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಮುಂಬೈನ ಕಿಂಗ್ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಗೆ ಸುಪ್ರೀಂಕೋರ್ಟ್ ಸೂಚಿಸಿತ್ತುತಪಾಸಣೆ ನಡೆಸಿದ ವೈದ್ಯರು ಗರ್ಭಪಾತದಿಂದ ಸಂತ್ರಸ್ತ ಮಹಿಳೆಗೆ ಯಾವುದೇ ತೊಂದರೆಯಾಗುವುದಿಲ್ಲವಿಕೃತ ಭ್ರೂಣವನ್ನು
ಬೆಳೆಯಲು ಬಿಟ್ಟರೆ ತಾಯಿಗೆ ಅಪಾಯವಿದೆ ಎಂದು ವರದಿ ನೀಡಿದರುಇದನ್ನು ಆಧರಿಸಿ ನ್ಯಾಯಮೂರ್ತಿಗಳಾದ ಜೆ.ಎಸ್ಖೇಹರ್ ಮತ್ತು ಅರುಣ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಗರ್ಭಪಾತಕ್ಕೆ ಅನುಮತಿ ನೀಡಿ ಆದೇಶ ನೀಡಿತು ಪ್ರಕರಣದ ಹಿನ್ನೆಲೆಮುಂಬೈನ ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿದ ಗೆಳೆಯ ಅತ್ಯಾಚಾರ ಎಸಗಿದ್ದಗರ್ಭದಲ್ಲಿರುವ ಮಗುವಿಗೆ ಜನ್ಮ ನೀಡಿ ಸಲಹಲು ಸಂತ್ರಸ್ತೆ ನಿರ್ಧರಿಸಿದ್ದಳುಆದರೆ 20 ವಾರಗಳ ಬಳಿಕ ತಪಾಸಣೆ ನಡೆಸಿದಾಗ ಭ್ರೂಣಕ್ಕೆ ಮೂಳೆಪಿತ್ತಜನಕಾಂಗಗಳು ಇಲ್ಲ ಎಂಬುದು ಪತ್ತೆಯಾಗಿತ್ತುಗುಣಪಡಿಸಲಾಗದ ಸಮಸ್ಯೆಯಾದ್ದರಿಂದ ಅಕಸ್ಮಾತ್ ಮಗು ಜನಿಸಿದರೂ ಬದುಕುಳಿಯುವುದಿಲ್ಲಜತೆಗೆ ಪ್ರಸವದ ಸನ್ನಿವೇಶದಲ್ಲಿ ಮಹಿಳೆಯ ಜೀವಕ್ಕೂ ಅಪಾಯವಿದೆ ಎಂದು ವೈದ್ಯರು ಹೇಳಿದ್ದರು.
 
2016: ನವದೆಹಲಿ: ಸಂಸತ್ ಭದ್ರತೆ ಕುರಿತು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ವಿವಾದ ಸೃಷ್ಟಿಸಿದ್ದ ಆಮ್ ಆದ್ಮಿ ಪಕ್ಷದ (ಆಪ್)  ಸಂಸತ್ ಸದಸ್ಯ ಭಗವಂತ ಮಾನ್ ವಿರುದ್ಧ ತನಿಖೆ ನಡೆಸಲು ಸ್ಪೀಕರ್ ಸುಮಿತ್ರಾ ಮಹಾಜನ್ ಸಮಿತಿಯೊಂದನ್ನು ರಚಿಸಿದರುಸಮಿತಿ ವರದಿ ನೀಡುವವರೆಗೂ ಸಂಸತ್ ಕಲಾಪಗಳಲ್ಲಿ ಪಾಲ್ಗೊಳ್ಳದಂತೆ ಅವರು ಮಾನ್ಗೆ ನಿರ್ಬಂಧ ವಿಧಿಸಿದರು. 9 ಸದಸ್ಯರ ಸಮಿತಿ ಆಗಸ್ಟ್ 3 ಒಳಗಾಗಿ ವರದಿ ಸಲ್ಲಿಸುವ ನಿರೀಕ್ಷೆ ಇದೆತನಿಖೆ ಮುಗಿಯುವವರೆಗೆ ಅಧಿವೇಶನದಲ್ಲಿ ಭಾಗವಹಿಸದಂತೆ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ಸಂಸದ ಭಗವಂತ್ ಮಾನ್ಗೆ ಸೂಚನೆ ನೀಡಿದರು.
2016: ಜೈಪುರಕೃಷ್ಣಮೃಗ ಹಾಗೂ ಜಿಂಕೆ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿತುಇದರಿಂದ ಜೈಲು ಭೀತಿಗೆ ಗುರಿಯಾಗಿದ್ದ ನಟ ಸಲ್ಮಾನ್ ನಿರಾಳರಾದರುಇದರೊಂದಿಗೆ ಹಿಟ್ ಆಂಡ್ ರನ್ ಪ್ರಕರಣದ ನಂತರ ಮತ್ತೊಂದು ಪ್ರಮುಖ ಪ್ರಕರಣದಲ್ಲಿ ಸಲ್ಮಾನ್ ಖುಲಾಸೆಗೊಂಡಂತಾಯಿತುಕೃಷ್ಣಮೃಗದ ದೇಹದಲ್ಲಿ ಸಿಕ್ಕ ಗುಂಡುಗಳು ಸಲ್ಮಾನ್ ಲೈಸೆನ್ಸ್ ಹೊಂದಿದ್ದ ಬಂದೂಕಿನಿಂದ ಸಿಡಿದಿರಲಿಲ್ಲ ಎಂದು ನ್ಯಾನಿರ್ಮಲ್ಜಿತ್ ಕೌರ್ ಹೇಳಿದರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತುಈಗಾಗಲೇ 12 ಜನರು ಖುಲಾಸೆಗೊಂಡಿದ್ದಾರೆಹೀಗಾಗಿ ಸಲ್ಮಾನ್ ವಿರುದ್ಧದ ಆರೋಪದಲ್ಲೂ ಹುರುಳಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
2016: 
ಮುಂಬೈ: ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಮಾಜಿ ಫುಟ್ಬಾಲ್ ಆಟಗಾರ ಮರಿಟೊ ಗ್ರೇಸಿ ಯಸ್ ನಿಧನರಾದರು. 75 ಹರೆಯದ ಗ್ರೇಸಿಯಸ್ ಅವರಿಗೆ ಹೃದಯಾಘಾತವಾದ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲಮಹಾರಾಷ್ಟ್ರ ಹಾಗೂ ಟಾಟಾ ಸ್ಪೋರ್ಟ್ಸ್ ಕ್ಲಬ್ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದ ಗ್ರೇಸಿಯಸ್ತಂಡದ ಪ್ರಮುಖ ಸ್ಟ್ರೈಕರ್ ಆಗಿ ಗುರುತಿಸಿಕೊಂಡಿದ್ದರುಅಷ್ಟೇ ಅಲ್ಲ ರಾಷ್ಟ್ರೀಯ ತಂಡದಲ್ಲಿ ಕೂಡ ಸ್ಥಾನ ಪಡೆದ  ಆಟಗಾರ ಹಾಂಕಾಂಗ್ ವಿರುದ್ದದ ಸರಣಿಯಲ್ಲಿ ಹ್ಯಾಟ್ರಿಕ್ ಗೋಲುಗಳಿಸಿದ್ದರುಇದರಿಂದಾಗಿ ಸರಣಿಯಲ್ಲಿ ಭಾರತ 4-0 ಅಂತರದಲ್ಲಿ ಜಯ ದಾಖಲಿಸಿತ್ತು.
2016: 
ನವದೆಹಲಿಎರಡನೇ ಹಂತದಲ್ಲಿ ನಿರ್ಮಾಣವಾದ ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು ಹಿಂದಿನ ರಾಷ್ಟ್ರಪತಿಗಳುಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ವೀಕ್ಷಿಸಿದ ಪ್ರಧಾನಿ ಪುಳಕಿತರಾದರುಮೋದಿ ಅವರಿಗೆ ರಾಷ್ಟ್ರಪತಿ ಪ್ರಣವ್  ಮುಖರ್ಜಿಉಪರಾಷ್ಟ್ರಪತಿ ಹಮೀದ್ ಅನ್ಸಾರಿಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಾಥ್ ನೀಡಿದರುಹತ್ತೊಂಭತ್ತು ತಿಂಗಳಿನಲ್ಲಿ ನಡೆದ ವಸ್ತು ಸಂಗ್ರಹಾಲಯದ ಕಾಮಗಾರಿಗೆ ಬರೋಬ್ಬರಿ 80 ಕೋಟಿ ರೂವೆಚ್ಚವಾಗಿತ್ತುದೇಶದ ಮೊದಲ ಭೂಗತ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಯಿತು

2016: ಮುಂಬೈ: 26/11 ಮುಂಬೈ ತಾಜ್ ಮೇಲಿನ ಉಗ್ರರ ದಾಳಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 4 ಪೊಲೀಸ್ ಶ್ವಾನಗಳ ಪೈಕಿ ಇತ್ತೀಚೆಗೆ ನಿಧನವಾದ ನಾಯಿ ‘ಟೈಗರ್’ ಅಗಲಿಕೆಯಿಂದ ತಂಡದ ಮತ್ತೊಂದು ನಾಯಿ ಸೀಸರ್ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಶ್ವಾನಗಳ ಉಸ್ತುವಾರಿ ವಹಿಸಿರುವ ಫಿಜಾ ತಿಳಿಸಿದರುಲಾಬ್ರಾಡಾರ್ ತಳಿಯ  ನಾಯಿಗಳು ಫ್ರೆಂಡ್ಲಿ ಡಾಗ್ ಎಂದೆ ಖ್ಯಾತ.. ಅಷ್ಟೇ ಚುರುಕು ಕೂಡಮುಂಬೈ ಉಗ್ರರ ಜಾಡನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದ 4 ಶ್ವಾನಗಳ ಪೈಕಿ ಮ್ಯಾಕ್ಸ್ ಮತ್ತು ಸುಲ್ತಾನ್ ಎಂಬ 2 ಶ್ವಾನಗಳು ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದವು

2008: ಮಳೆ ಬರುವ ಮತ್ತು ಮೋಡ ಕವಿದ ವಾತಾವರಣದಿಂದ ಮಂಕಾಗಿದ್ದ ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಒಂಬತ್ತು ಬಾಂಬ್ಗಳು ಸ್ಫೋಟಿಸಿ ನಾಗರಿಕರನ್ನು ಬೆಚ್ಚಿ ಬೀಳಿಸಿದವುಸರಣಿ ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಳಾಗಿಎಂಟು ಮಂದಿ ಗಾಯಗೊಂಡರು.

2007: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಈದಿನ ಮಧ್ಯಾಹ್ನ ಅಧಿಕಾರ ಸ್ವೀಕರಿಸುವ ಮೂಲಕ 72 ವರ್ಷದ ಪ್ರತಿಭಾ ಪಾಟೀಲ್ ನೂತನ ಇತಿಹಾಸ ಸೃಷ್ಟಿಸಿದರುದೆಹಲಿಯ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ಹನ್ನೆರಡನೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರುಇಂಗ್ಲಿಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರತಿಭಾ ಅವರು ಎಪಿಜೆ ಅಬ್ದುಲ್ ಕಲಾಂ ಜೊತೆ ಕುರ್ಚಿ ಬದಲಾಯಿಸಿಕೊಂಡರು ಸಂದರ್ಭದಲ್ಲಿ 21 ಕುಶಾಲುತೋಪುಗಳನ್ನು ಹಾರಿಸಲಾಯಿತು.

2007: ಭಾರತಅಮೆರಿಕ ಪರಮಾಣು ಒಪ್ಪಂದವನ್ನು ಜಾರಿಗೆ ತರಲು ಅನುವಾಗುವ 123ನೇ ಒಡಂಬಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತುರಾಜಕೀಯ ವ್ಯವಹಾರ ಮತ್ತು ಭದ್ರತೆ ಕುರಿತ ಸಂಪುಟ ಸಮಿತಿಗಳ ಜಂಟಿ ಸಭೆಯಲ್ಲಿ  ಒಪ್ಪಂದಕ್ಕೆ ಒಪ್ಪಿಗೆ ನೀಡಲಾಯಿತುಹಿಂದಿನ ವಾರ ವಾಷಿಂಗ್ಟನ್ನಿನಲ್ಲಿ ನಡೆದ ಉಭಯ ದೇಶಗಳ ಅಧಿಕಾರಿ ಮಟ್ಟದ ಉನ್ನತ ಸಭೆಯಲ್ಲಿ  ಒಡಂಬಡಿಕೆಯ ಕರಡು ಸಿದ್ಧಪಡಿಸಲಾಗಿತ್ತುಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸಚಿವರಾದ .ಕೆಆಂಟನಿಪ್ರಣವ್ ಮುಖರ್ಜಿಶಿವರಾಜ ಪಾಟೀಲ್ಪಿಚಿದಂಬರಂಶರದ್ ಪವಾರ್ಲಾಲೂ ಪ್ರಸಾದ್ ಮತ್ತು ಟಿ.ಆರ್ಬಾಲು ಭಾಗವಹಿಸಿದ್ದರುಇದರೊಂದಿಗೆ ಭಾರತ ಮತ್ತು ಅಮೆರಿಕ ನಡುವೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆಗಳಿಗೆ ತೆರೆ ಬಿದ್ದಿತು.

2007: ಬದುಕಿನಲ್ಲಿ ಸರಳವಾದದ್ದೆಲ್ಲವನ್ನೂ ಪ್ರೀತಿಸುವ `ಕ್ಷಿಪಣಿ ಮನುಷ್ಯಡಾ. ಪಿ ಜೆ ಅಬ್ದುಲ್ ಕಲಾಂ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದ ಎದುರು ಭವ್ಯವಾದ ಬೀಳ್ಕೊಡುಗೆ ನೀಡಲಾಯಿತು. 300 ಕೊಠಡಿಗಳ ಭವ್ಯ ಭವನದಲ್ಲಿ 5 ವರ್ಷ ಕಳೆದ ಕಲಾಂ ಈದಿನ ರಾತ್ರಿ ತಾತ್ಕಾಲಿಕವಾಗಿ ನೀಡಲಾದ 5 ಕೊಠಡಿಗಳ ಸೇನಾ ವಸತಿಗೃಹದಲ್ಲಿ ತಂಗಿದರುಅವರ ಕುಟುಂಬದ ನಿಕಟ ಸಂಬಂಧಿಗಳು  ಸಂದರ್ಭದಲ್ಲಿ ಜೊತೆಗಿದ್ದರು.

2007: ಓಂಕಾರ ಆಶ್ರಮದ ಶಿವಪುರಿ ಸ್ವಾಮೀಜಿ (69) ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರುತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹರ್ತಿ ಗ್ರಾಮದ ಯಲ್ಲಪ್ಪ ಹಾಗೂ ತಾಯಮ್ಮ ಅವರ ಪುತ್ರರಾದ ಸ್ವಾಮೀಜಿ ಕೈಲಾಸ ಆಶ್ರಮದ ತಿರುಚ್ಚಿ ಶ್ರೀಗಳ ಶಿಷ್ಯರಾಗಿದ್ದರುಎಳೆಯ ವಯಸ್ಸಿ ನಿಂದಲೇ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿವಹಿಸಿದ್ದರುಇವರು 1994ರಲ್ಲಿ ಒಂಕಾರ ಆಶ್ರಮ ಸ್ಥಾಪಿಸಿದ್ದರು.

2007: 1993 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿತುತಲೆಮರೆಸಿಕೊಂಡ ಪ್ರಮುಖ ಆರೋಪಿ ಟೈಗರ್ ಮೆಮನ್  ಆಪ್ತ ಸ್ನೇಹಿತನಾಗಿದ್ದ ಫಾರೂಕ್ ಪಾಲ್ವೆ ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿಈತ ದಾದರ್ನ ಶಿವಸೇನಾ ಭವನ ಮತ್ತು ನರಿಮನ್ ಪಾಯಿಂಟ್ ಬಳಿಯ ಏರ್ ಇಂಡಿಯಾ ಕಟ್ಟಡದಲ್ಲಿ ಬಾಂಬ್ ಇರಿಸಿದ್ದಫಾರೂಕ್ ಅಡಗಿಸಿಟ್ಟ ಬಾಂಬ್ ಸ್ಫೋಟಗೊಂಡು 24 ಜನರು ಬಲಿಯಾಗಿ, 79 ಮಂದಿ ಗಾಯಗೊಂಡಿದ್ದರುಕಳೆದ ವರ್ಷದ ಅಕ್ಟೋಬರ್ 9 ರಂದು ಫಾರೂಕ್ ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿತ್ತುಟಾಡಾ ನ್ಯಾಯಾಲಯ ಈತನಿಗೆ 2 ಲಕ್ಷ 65 ಸಾವಿರ ರೂಪಾಯಿ ದಂಡ ತೆರುವಂತೆಯೂ ಆದೇಶಿಸಿತು.

2007: ದೇಶದ 12ನೇ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡ ಮರುಗಳಿಗೆಯಲ್ಲೇ ಸೈಬರ್ ಲೋಕದಲ್ಲಿ ಮಾಜಿ ರಾಷ್ಟ್ರಪತಿ ಡಾ..ಪಿ.ಜೆ ಅಬ್ದುಲ್ ಕಲಾಂ ಅವರ ಜನಪ್ರಿಯ ವೆಬ್ಸೈಟ್ ಮಾಯವಾಯಿತುಕಲಾಂ ಅವರು ಜನತೆಯ ರಾಷ್ಟ್ರಪತಿಯೆಂದೇ ಬಿಂಬಿತವಾಗಲು  ವೆಬ್ಸೈಟ್ ಪ್ರಮುಖ ಪಾತ್ರವಹಿಸಿತ್ತುಈದಿನ ಮಧ್ಯಾಹ್ನ 2.30ಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲಿನಲ್ಲಿ ಪ್ರತಿಭಾ ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಕಲಾಂ ಅವರು `ಮಾಜಿ'ಯಾದರುಜತೆಗೆ ಅವರ ವೆಬ್ಸೈಟ್ ಕೂಡಮೂರು ವರ್ಷಗಳಲ್ಲಿ ಡಾ.ಕಲಾಂ ಅವರ ವೆಬ್ಸೈಟ್ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ ಪ್ರತಿ ಸೆಕೆಂಡ್ಗೆ ಮೂರು ಜನರು  ವೆಬ್ಸೈಟನ್ನು ನೋಡುತ್ತಿದ್ದರುಸರಾಸರಿ ದಿನವೊಂದಕ್ಕೆ 2.50 ಲಕ್ಷ ಜನ  ವೆಬ್ಸೈಟಿಗೆ ಭೇಟಿ ನೀಡಿದ್ದಾರೆ. 2004 ಆಗಸ್ಟ್ ತಿಂಗಳಿನಲ್ಲಿ  ವೆಬ್ಸೈಟನ್ನು ಮರು ವಿನ್ಯಾಸಗೊಳಿಸಿ ಸರ್ಕಾರಿ ಶೈಲಿಗಿಂತ ವಿಭಿನ್ನವಾದ ಆಕರ್ಷಕ ವೆಬ್ಸೈಟನ್ನಾಗಿ ಪರಿವರ್ತಿಸಲಾಗಿತ್ತು.

2007: ವಾಯವ್ಯ ಪಾಕಿಸ್ತಾನದ ಬನ್ನು ನಗರದ ಮೇಲೆ ಅತಿಕ್ರಮಣಕಾರರು ನಸುಕಿನ ಜಾವ ನಡೆಸಿದ ರಾಕೆಟ್ ದಾಳಿಯಲ್ಲಿ 10 ಜನ ಸತ್ತು, 35ಕ್ಕೂ ಹೆಚ್ಚು ಜನರು ಗಾಯಗೊಂಡರುನಾಲ್ಕು ರಾಕೆಟ್ಗಳು ಇಲ್ಲಿನ ಎರಡು ಮನೆಮಸೀದಿ ಮತ್ತು ಅಂಗಡಿಯೊಂದರ ಮೇಲೆ ಅಪ್ಪಳಿಸಿದವು.

2007: ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಕನಿಷ್ಠ 60 ಮಂದಿ ಬಲಿಯಾದರು.

2007: ಆಸ್ಟ್ರೇಲಿಯಾದ ನಾರ್ ಫೋಕ್ ದ್ವೀಪದಲ್ಲಿ 2002ರಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಕಗ್ಗೊಲೆ ಮಾಡಿದ ಅಪರಾಧಕ್ಕಾಗಿ ನ್ಯೂಜಿಲೆಂಡಿನ ಅಡುಗೆ ಕೆಲಸಗಾರನಿಗೆ ಸ್ಥಳೀಯ ನ್ಯಾಯಾಲಯ ಕನಿಷ್ಠ 18 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತುಒಂದು ಕಾಲದಲ್ಲಿ ದಕ್ಷಿಣ ಪೆಸಿಫಿಕ್ನ ಬ್ರಿಟಿಷ್ ಕಾಲೋನಿಯಾಗಿದ್ದ  ಪುಟ್ಟ ದ್ವೀಪದಲ್ಲಿ ಕಳೆದ 150 ವರ್ಷಗಳ ಅವಧಿಯಲ್ಲಿ ನಡೆದ ಮೊದಲ ಹತ್ಯೆ ಇದುಆರೋಪಿ ಗ್ಲೆನ್ ಮೆಕ್ ನೆಲ್ (29) ಎಂಬಾತನು ಜನೆಲ್ಲಿ ಪ್ಯಾಟನ್ (29) ಎಂಬ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿ ಇರಿದು ಕೊಂದಿದ್ದಆಗ ಪ್ಯಾಟನ್ ಮೂಳೆ ಮುರಿತ ಮತ್ತು ಹಲವು ಇರಿತ ಸೇರಿದಂತೆ 64 ಕಡೆ ತೀವ್ರತರ ಗಾಯಗಳಾಗಿದ್ದವು ಹಿನ್ನೆಲೆಯಲ್ಲಿ ಗ್ಲೆನ್ಗೆ ಗರಿಷ್ಠ 24 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ನ್ಯಾಯಾಲಯ ಆದೇಶಿಸಿತು.

2007: ಖ್ಯಾತ ಚಿತ್ರನಟಿ ಜಯಮಾಲಾ (ಜಯಂತಿಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ `ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿಪದವಿ ನೀಡಿದೆಇವರಿಗೆ `ಕೆಂಪೇಗೌಡ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ಕೇಂದ್ರ ನಿರ್ದೇಶಕ ಎಂ.ಜಿ.ಕೃಷ್ಣನ್ ಮಾರ್ಗದರ್ಶಕರಾಗಿದ್ದರುಮಂಗಳೂರಿನಲ್ಲಿ ಜನಿಸಿದ ಜಯಮಾಲ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರುಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಖಜಾಂಚಿಯಾದ ಇವರು ತುಳುಕನ್ನಡತಮಿಳುತೆಲುಗುಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ಅಭಿನಯಿಸಿರುವವರುಹದಿಮೂರು ವರ್ಷದವರಿದ್ದಾಗ `ಕಾಸ್ ದಾಯೆ ಕಂಡನೆಎಂಬ ತುಳು ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿಈವರೆಗೆ ದಕ್ಷಿಣ ಭಾರತ ಐದು ಭಾಷೆಗಳಲ್ಲಿ ಒಟ್ಟು 75 ಚಿತ್ರಗಳಲ್ಲಿ ಅಭಿನಯಿಸಿದ್ದಾರೆಐದು ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಕೂಡಾ ಇವರದು.

2006: ಕೊಚ್ಚಿಯ ರಾ (ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗಮುಖ್ಯಸ್ಥ ಎಚ್ತಾರಕನ್ ಅವರು ವಿ.ಆರ್ಕೃಷ್ಣ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದರು.

2006: ಕೊಂಕಣಿ ಕೂಟಮ್ ಬಹರೇನ್ ನೀಡುವ `ಕೊಂಕಣಿ ಕೂಟಮ್ 2006' ಪ್ರಶಸ್ತಿಗೆ ಖ್ಯಾತ ಕೊಂಕಣಿ ಭಾಷಾ ಲೇಖಕಕವಿಸಾಹಿತಿ ಮೆಲ್ವಿನ್ ರಾಡ್ರಿಗಸ್ ಕುಲಶೇಕರ ಅವರು ಆಯ್ಕೆಯಾದರು.

2006: ಕರ್ನಾಟಕದ 865 ಗ್ರಾಮಗಳು ಹಾಗೂ ಬೆಳಗಾವಿ ಸೇರಿದಂತೆ ಆರು ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅಲ್ಲಿನ ಉನ್ನತ ನಿಯೋಗವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿತು.

1970: ಕೇರಳದ ಮಾಜಿ ಮುಖ್ಯಮಂತ್ರಿ ಪಿಳ್ಳೈ ಥಾನು ನಿಧನ.

1950: ಖ್ಯಾತ ಚಿಂತಕಿಸ್ತ್ರೀವಾದಿ ಪ್ರಭಾವತಿ ಅವರು ವೆಂಕಟಸುಬ್ಬಯ್ಯರತ್ನಮ್ಮ ದಂಪತಿಯ ಮಗಳಾಗಿ ಮಂಡ್ಯ ಜಿಲ್ಲೆಯ ಕೆ.ಆರ್ಪೇಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಜನಿಸಿದರು.

1938: ಖ್ಯಾತ ಹಿಂದಿ ಕವಿ ಕಾಳಿಚರಣ್ ಜನನ.

1929: ಲೋಕಸಭಾ ಮಾಜಿ ಅಧ್ಯಕ್ಷ ಸೋಮನಾಥ ಚಟರ್ಜಿ ಜನನ.


PARYAYA: ಇಂದಿನ ಇತಿಹಾಸ History Today ಜುಲೈ 25: ಇಂದಿನ ಇತಿಹಾಸ History Today ಜುಲೈ 25 2022: ನವದೆಹಲಿ: ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ 2022 ಜುಲೈ 25ರ ಸೋಮವಾರ ಬೆ ಳ ಗ್ಗೆ 10.15 ಕ್ಕೆ ನಡೆದ ಕಾರ್ಯಕ್ರಮದಲ...