Tuesday, July 12, 2022

PARYAYA: ನಾವು ಕಾಣದ ಬ್ರಹ್ಮಾಂಡ (The Universe which we have no...

ನಾವು ಕಾಣದ ಬ್ರಹ್ಮಾಂಡ (The Universe which we have not seen)

ಬೆಂಗಳೂರು: ಬ್ರಹಾಂಡದ ಗಾತ್ರ ಎಷ್ಟು ಎಂಬುದು ನಮ್ಮ ಕಲ್ಪನೆಗೂ ನಿಲುಕದಂತಹ ವಿಚಾರ. ಇದನ್ನು 2022 ಜುಲೈ 12ರ ಮಂಗಳವಾರ (ಅಮೆರಿಕದಲ್ಲಿ ಸೋಮವಾರ) ಅಮೆರಿಕದ ನಾಸಾ ಬಿಡುಗಡೆ ಮಾಡಿದ ಬ್ರಹ್ಮಾಂಡದ ಚಿತ್ರಗಳು ಮತ್ತೊಮ್ಮೆ ಸಾಬೀತು ಪಡಿಸಿವೆ. ಬಾಹ್ಯಾಕಾಶದ ನಿಗೂಢಗಳನ್ನು ಭೇದಿಸಲೆಂದೇ ನಾಸಾ ಗಗನಕ್ಕೆ ಹಾರಿಸಿದ್ದ ಜೇಮ್ಸ್‌ ವೆಬ್‌ ಬಾಹ್ಯಾಕಾಶ ದೂರದರ್ಶಕವು (ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್)‌ ಬಾಹ್ಯಾಕಾಶದ ಬಗ್ಗೆ ಮಾನವ ಎಂದೂ ಕಾಣದ ಚಿತ್ರಗಳನ್ನು ಕಳುಹಿಸಿದ್ದು ಅದನ್ನು ನಾಸಾ ಬಿಡುಗಡೆ ಮಾಡಿದೆ.

“ಈ ಚಿತ್ರಗಳೂ ಬ್ರಹ್ಮಾಂಡದ ಆಳವಾದ ನೋಟವನ್ನು ಮನುಕುಲಕ್ಕೆ ನೀಡುತ್ತದೆ. ಈ ಪ್ರತಿಯೊಂದು ಚಿತ್ರ ಕೂಡಾ ನಾವು ಹಿಂದೆಂದೂ ಕಾಣದ ಬ್ರಹ್ಮಾಂಡದ ನೋಟವನ್ನು ನೀಡುತ್ತದೆʼ ಎಂದು ನಾಸಾ ನಿರ್ವಾಹಕ ಬಿಲ್‌ ನೆಲ್ಸನ್‌ ಹೇಳಿದರು.

ನಾಸಾ ಬಿಡುಗಡೆ ಮಾಡಿದ ಬ್ರಹ್ಮಾಂಡದ ಈ ಚಿತ್ರಗಳು ಟ್ವಿಟ್ಟರಿನಲ್ಲಿ ಹರಿದಾಡುತ್ತಿದ್ದಂತೆಯೇ ಟ್ವಿಟ್ಟಿಗರು ಮೂಕ ವಿಸ್ಮತರಾಗಿದ್ದಾರೆ. ʼಬ್ರಹ್ಮಾಂಡದ ಬೆಳಕಿನಲ್ಲಿ ತಮ್ಮ ಚಿಂತೆಗಳೂ ಕರಗಿ ಹೋದವುʼ ಎಂದು ಕೆಲವರು ಟ್ವೀಟ್‌ ಮಾಡಿದರೆ, ಇತರ ಕೆಲವರು ತಾವು ʼಅಸ್ತಿತ್ವದ ಬಿಕ್ಕಟ್ಟಿಗೆʼ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ಬರೆದರು.

ನಾಸಾ ಬಿಡುಗಡೆ ಮಾಡಿದ ಈ ಹೊಸ ʼಬ್ರಹಾಂಡದ ಚಿತ್ರಗಳಲ್ಲಿ ಒಂದು ಕರೀನಾ ಎಂಬ ನೀಹಾರಿಕೆ (ನೆಬ್ಯೂಲ) ಅಥವಾ ಆಕಾಶ ಗಂಗೆಯದ್ದಾಗಿದ್ದು ಅದು ಅಲ್ಲಿ ಇದೇ ತಾನೇ ಜನಿಸುತ್ತಿರುವ ಶಿಶು ನಕ್ಷತ್ರಗಳನ್ನು ತೋರಿಸಿದೆ. ಅಲ್ಲಿ ಅಲ್ಟ್ರಾವಯಲೆಟ್‌ ಅಥವಾ ನೇರಳಾತೀತ ವಿಕಿರಣ ಮತ್ತು ನಕ್ಷತ್ರ ಮಾರುತಗಳು ದೂಳು ಹಾಗೂ ಅನಿಲದ ಬೃಹತ್‌ ಗೋಡೆಗಳನ್ನು ಸೃಷ್ಟಿಸಿವೆ. ಇನ್ನೊಂದು ಸದರ್ನ್‌ ರಿಂಗ್‌ ನೀಹಾರಿಕೆಯು ದೂಳು ಮತ್ತು ಬೆಳಕಿನ ಪದರಗಳಲ್ಲಿ ಮುಚ್ಚಿ ಹೋಗಿರುವ ಸಾಯುತ್ತಿರುವ ನಕ್ಷತ್ರವನ್ನು ತೋರಿಸಿದೆ.

ಮಂಗಳವಾರ ಬಿಡುಗಡೆ ಮಾಡಲಾಗಿರುವ ಒಂದು ಫೊಟೋ ಸಹಸ್ರಾರು ನೀಹಾರಿಕೆಗಳನ್ನು ತೋರಿಸಿದೆ ಮತ್ತು ಕೆಲವು ಮಸುಕಾದ ವಸ್ತುಗಳನ್ನೂ ತೋರಿಸಿದೆ.

ಈ ಬ್ರಹಾಂಡದ ಚಿತ್ರಗಳನ್ನು ಸೆರೆ ಹಿಡಿದಿರುವ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಎಷ್ಟು ಚಿಕ್ಕದು ಎಂದರೆ ಅಂಗೈಯಲ್ಲಿ ಹಿಡಿದ ಮರಳಿನ ಒಂದು ಕಣದಷ್ಟು. ಅಂದರೆ ಹುಲು ಮಾನವರಾದ ನಾವು ಬ್ರಹ್ಮಾಂಡದ ಮುಂದೆ ಅದೆಷ್ಟು ಕುಬ್ಜರು ಎಂಬುದನ್ನು ಕಲ್ಪಿಸಿದರೆ ಮನುಷ್ಯನ ಅಹಂಕಾರ ಕ್ಷಣದಲ್ಲಿ ದೂಳೀಪಟವಾಗಬಹುದು.

ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಸೆರೆ ಹಿಡಿದಿರುವ ನಮಗೆ ಅತಿ ದೂರದಲ್ಲಿರುವ ಬೃಹತ್‌ ಬ್ರಹಾಂಡವು ಇಂತಹ ಲಕ್ಷಾಂತರ ಬ್ರಹ್ಮಾಡಗಳನ್ನು ಒಳಗೊಂಡಿರುವ ಆಕಾಶದಲ್ಲಿ ಹೇಗೆ ಕಾಣುತ್ತದೆ ಎಂಬುದನ್ನು ಈ ಪುಟ್ಟ ವಿಡಿಯೋ ತೋರಿಸುತ್ತದೆ ನೋಡಿ.

-ನೆತ್ರಕೆರೆ ಉದಯಶಂಕರ

PARYAYA: ನಾವು ಕಾಣದ ಬ್ರಹ್ಮಾಂಡ (The Universe which we have no...:   ನಾವು ಕಾಣದ ಬ್ರಹ್ಮಾಂಡ (The Universe which we have not seen) ಬೆಂಗಳೂರು : ಬ್ರಹಾಂಡದ ಗಾತ್ರ ಎಷ್ಟು ಎಂಬುದು ನಮ್ಮ ಕಲ್ಪನೆಗೂ ನಿಲುಕದಂತಹ ವಿಚಾರ. ಇದನ್ನು 202...

No comments:

Post a Comment