"ಪರ್ವತಗಳು" ಮತ್ತು "ಕಣಿವೆಗಳ" ಭೂದೃಶ್ಯ!
ವಾಷಿಂಗ್ಟನ್: ಇದು ಎನ್ ಜಿಸಿ 3324 ಎಂಬುದಾಗಿ ಕರೆಯಲಾಗಿರುವ ಕ್ಯಾರಿನಾ ನೀಹಾರಿಕೆಯಲ್ಲಿ (ನೆಬ್ಯುಲಾ) ರೂಪುಗೊಳ್ಳುತ್ತಿರುವ ಯುವ ನಕ್ಷತ್ರ ಪ್ರದೇಶವೊಂದರ ಅಂಚು ಇದು. ಪರ್ವತಗಳು ಮತ್ತು ಕಣಿವೆಗಳ ಭೂದೃಶ್ಯದಂತೆ ಕಾಣುತ್ತಿರುವ ಇದು ಹೊಳೆಯುವ ನಕ್ಷತ್ರಗಳಿಂದ ಕಂಗೊಳಿಸುತ್ತಿದೆ.
ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ಅತಿಗೆಂಪು ಬೆಳಕಿನಿಂದ (ಇನ್ ಫ್ರಾರೆಡ್ ಲೈಟ್) ಸೆರೆಹಿಡಿಯಲಾದ ಈ ಚಿತ್ರವು ಮೊದಲ ಬಾರಿಗೆ ನಕ್ಷತ್ರದ ಜನನದ ಹಿಂದಿನ ಅಗೋಚರ ಪ್ರದೇಶಗಳನ್ನು ಬಹಿರಂಗಪಡಿಸುತ್ತದೆ. ಈ ಚಿತ್ರವನ್ನು ನಾಸಾ 2022 ಜುಲೈ 13ರ ಬುಧವಾರ (ಅಮೆರಿಕದಲ್ಲಿ ಮಂಗಳವಾರ) ಬಿಡುಗಡೆ ಮಾಡಿದೆ. ವಿಡಿಯೋ ನೋಡಿ:
ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ.
No comments:
Post a Comment