ನಾನು ಮೆಚ್ಚಿದ ವಾಟ್ಸಪ್

Thursday, May 23, 2019

ಫಿರ್ ಏಕ್ ಬಾರ್ ಮೋದಿ ಸರ್ಕಾರ್

ಫಿರ್ ಏಕ್ ಬಾರ್ ಮೋದಿ ಸರ್ಕಾರ್
ನವದೆಹಲಿ: ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಾದ ೨೭೨ ಸ್ಥಾನಗಳಮ್ಯಾಜಿಕ್ ಸಂಖ್ಯೆಯನ್ನು ಮೀರಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸ್ವಂತ ಬಲದಲ್ಲೇ ೩೦೩ಕ್ಕೂ ಹೆಚ್ಚಿನ ಸ್ಥಾನಗಳು ಹಾಗೂ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಮಿತ್ರ ಪಕ್ಷಗಳ ೪೫ಕ್ಕೂ ಹೆಚ್ಚಿನ ಸ್ಥಾನಗಳೊಂದಿಗೆ ೩೫೩ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸುವುದರೊಂದಿಗೆ  2019 ಮೇ 23ರ ಗುರುವಾರ  ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ತಮ್ಮ ಪರಾಭವವನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಅಮೇಥಿ ಕ್ಷೇತ್ರದಲ್ಲಿನ ತಮ್ಮ ಎದುರಾಳಿ ಸ್ಮೃತಿ ಇರಾನಿ ಅವರನ್ನು ಅಭಿನಂದಿಸಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿಯವರು ಸಾಧಿಸಿದ್ದ ವಿಜಯವನ್ನೂ ಮೀರಿ ಪ್ರಚಂಡ ಜಯಭೇರಿ ಭಾರಿಸಿರುವ ಪ್ರಧಾನಿ ಮೋದಿ ಅವರನ್ನು ಪಾಕಿಸ್ತಾನದ ಪ್ರಧಾನಿ ಸೇರಿದಂತೆ ವಿಶ್ವದ ಪ್ರಮುಖರು ಅಭಿನಂದಿಸಿದ್ದಾರೆ.

ಮತಗಳ ಎಣಿಕೆ ಮುಂದುವರೆದಿದ್ದು ಘೋಷಿತ ಗೆಲುವು ಮತ್ತು ಮುನ್ನಡೆ ಪ್ರವೃತ್ತಿಗಳು ಬಿಜೆಪಿ ನೇತೃತ್ವದ ಎನ್ಡಿಎ ಸ್ಪಷ್ಟ ಬಹುಮತ ಸಾಧಿಸುವ ಸ್ಪಷ್ಟ ಸೂಚನೆ ನೀಡಿವೆ.

ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ಮೈತ್ರಿಕೂಟವು (ಯುಪಿಎ) ಮೂರಂಕಿ ತಲುಪುವ ಸಾಧ್ಯತೆ ಇಲ್ಲ ಎಂದು ಫಲಿತಾಂಶದ ಮುನ್ನಡೆ ಪ್ರವೃತ್ತಿಗಳು ತಿಳಿಸಿವೆ. ೫೧ ಸ್ಥಾನಗಳಲ್ಲಿ ವಿಜಯಕ್ಕೆ ಸಜ್ಜಾಗಿರುವ ಕಾಂಗ್ರೆಸ್ ೨೦೧೪ರಲ್ಲಿ ಗಳಿಸಿದ್ದ ೪೪ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ೨೦೧೪ರಲ್ಲಿ ಪಕ್ಷವು ಅದರ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಸ್ಥಾನಗಳಿಗೆ ಇಳಿದಿತ್ತು. ಕಾಂಗೆಸ್ಸಿನ ಮಿತ್ರ ಪಕ್ಷಗಳು ಹಾಗೂ ಯುಪಿಎ ಅಂಗಪಕ್ಷವಾದ ಡಿಎಂಕೆ ೨೩ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿದ್ದರೆ, ಕಾಂಗ್ರೆಸ್ ಮತ್ತು  ಡಿಎಂಕೆ ಸೇರಿದಂತೆ ಯುಪಿಎ ಮೈತ್ರಿಕೂಟವು ೯೦ ಸ್ಥಾನಗಳಲ್ಲಿ ಗೆಲವು/ ಮುನ್ನಡೆ ಸಾಧಿಸಿದೆ.

ವೈಎಸ್ಆರ್ಸಿಪಿ, ಟಿಎಂಸಿ, ಬಿಜೆಡಿ, ಬಿಎಸ್ಪಿ, ಟಿಆರ್ಎಸ್, ಎಸ್ಪಿ ಸೇರಿದಂತೆ ಇತರ ಪಕ್ಷಗಳು ಕೇವಲ ೯೯ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿವೆ.

ಲೋಕಸಭೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಕಾಂಗ್ರೆಸ್ ವಿರೋಧ ಪಕ್ಷ ನಾಯಕನ ಹುದ್ದೆ ಪಡೆಯಲು ಬೇಕಾದ ಅರ್ಹತೆಯ ಸಮೀಪದಲ್ಲಿದೆ. (ಅಧಿಕೃತ ವಿರೋಧ ಪಕ್ಷದ ನಾಯಕ ಸ್ಥಾನ ಪಡೆಯಲು ಪಕ್ಷವು ಸಂಸತ್ತಿನ ೫೪೩ ಸ್ಥಾನಗಳ ಶೇಕಡಾ ೧೦ರಷ್ಟು ಸ್ಥಾನಗಳನ್ನು ಹೊಂದಿರಬೇಕಾಗುತ್ತದೆ.) ೨೦೧೪ರ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಲಭಿಸಿರಲಿಲ್ಲ.

ಚೀನೀ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರಿಂದ ಔಪಚಾರಿಕವಾಗಿ ಮೊತ್ತ ಮೊದಲ ಅಭಿನಂದನಾ ಸಂದೇಶ ತಲುಪುತ್ತಿದ್ದಂತೆಯೇ ಪ್ರಧಾನಿ ಮೋದಿ ಅವರುಭಾರತ ಮತ್ತೊಮ್ಮೆ ಗೆದ್ದಿದೆ ಎಂದು ಟ್ವೀಟ್ ಮಾಡಿದರು. ಬಿಜೆಪಿ ವಿಜಯದ ರೂವಾರಿಯಾಗಿರುವ ಪಕ್ಷದ ಮಹಾನ್ ವ್ಯೂಹ ತಜ್ಞ ಅಮಿತ್ ಶಾ ಅವರು ಬೃಹತ್ ಮೆರವಣಿಗೆಯಲ್ಲಿ ಪಕ್ಷದ ಕಚೇರಿಗೆ ಆಗಮಿಸಿದರು.  ಬಳಿಕ ಪ್ರಧಾನಿ ಮೋದಿ ಅವರೂ ಪಕ್ಷ ಕಚೇರಿಗೆ ಆಗಮಿಸಿದರು.

ಲೋಕಸಭಾ ಚುನಾವಣೆಯ ಜೊತೆಗೇ ನಡೆದ ನಾಲ್ಕು ರಾಜ್ಯಗಳ  ವಿಧಾನಸಭಾ ಚುನಾವಣೆಗಳ ಮತಗಳ ಎಣಿಕೆಯೂ ಗುರುವಾರ ನಡೆದಿದ್ದು ಆಂಧ್ರಪ್ರದೇಶದ ಮುಖ್ಯಮಂತ್ರಿ  ತೆಲುಗುದೇಶಂ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಂಡಿದ್ದಾರೆ. ಅವರ ಎದುರಾಳಿ ಪಕ್ಷವಾದ ವೈಎಸ್ ಆರ್ ಕಾಂಗ್ರೆಸ್ ಪಕ್ಷವು ವಿಧಾನಸಭೆಯ ೧೭೫ ಸ್ಥಾನಗಳ ಪೈಕಿ ೧೫೨ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡು ಪ್ರಚಂಡ ಜಯಭೇರಿ ಭಾರಿಸಿದ್ದು, ಅದರ ನಾಯಕ ೪೬ರ ಹರೆಯದ ಜಗನ್ ಮೋಹನ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ಜಗನ್ ಅವರ ವೈಎಸ್ ಆರ್ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ೨೨ ಸ್ಥಾನಗಳಲ್ಲಿ ಗೆಲುವು / ಮುನ್ನಡೆ ದಾಖಲಿಸಿದೆ. ತೆಲುಗುದೇಶಂ ಪಕ್ಷವು ಕೇವಲ ೨೧ ಸ್ಥಾನಗಳಲ್ಲಿ ಗೆಲುವು / ಮುನ್ನಡೆ ದಾಖಲಿಸಿದೆ.

ಒಡಿಶಾ ವಿಧಾನಸಭೆಯ ೧೪೭ ಸ್ಥಾನಗಳ ಪೈಕಿ ೧೧೧ ಸ್ಥಾನಗಳನ್ನು ಬಿಜು ಜನತಾ ದಳ ಗೆದ್ದಿದ್ದು ಪಕ್ಷದ ನಾಯಕ ನವೀನ್ ಪಟ್ನಾಯಕ್ ಅವರು ಐದನೆ ಬಾರಿಗೆ ಸರ್ಕಾರ ರಚಿಸಲಿದ್ದಾರೆ. ಬಿಜೆಪಿಯು ೨೩, ಕಾಂಗ್ರೆಸ್ ೧೦ ಮತ್ತು ಇತರರು ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿದ್ದಾರೆ.

ಅರುಣಾಚಲ ಪ್ರದೇಶ ವಿಧಾನಸಭೆಯ ೬೦ ಸ್ಥಾನಗಳ ಪೈಕಿ ೩೨ ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ , ಎನ್ಪಿಪಿ , ಇತರರು ೧೧ ಸ್ಥಾನ ಗಳಿಸಿದ್ದಾರೆ.

೩೨ ಸದಸ್ಯ ಬಲದ ಸಿಕ್ಕಿಂನಲ್ಲಿ ಎಸ್ಡಿಎಫ್ ಮತ್ತು ಎಸ್ಕೆಎಂ ತಲಾ ೧೪ ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆ ಅತಂತ್ರವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಶೂನ್ಯ ಸಂಪಾದನೆ ಮಾಡಿವೆ.

ಬಿಜೆಪಿಯ ಇಂದಿನ ಗೆಲುವಿಗೆ ಪ್ರಮುಖ ಕಾಣಿಕೆ ಹಿಂದಿ ಹೃದಯಭಾಗದ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನದಿಂದ ಬಂದಿವೆ. ರಾಜ್ಯಗಳಲ್ಲಿ ಪಕ್ಷವು ೨೦೧೪ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಎದುರು ಸೋತು ಅಧಿಕಾರ ಕಳೆದುಕೊಂಡಿತ್ತು.  ಮಮತಾ ಬ್ಯಾನರ್ಜಿ ಅವರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗಂಭೀರ ಪ್ರವೇಶ ಮಾಡಿದ್ದು, ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮೈತ್ರಿಕೂಟದ ಸವಾಲಿನ ಹೊರತಾಗಿಯೂ ತನ್ನ ನಷ್ಟವನ್ನು ಕಡಿಮೆ ಮಾಡಿಕೊಳ್ಯ್ಳುವಲ್ಲಿ ಯಶಸ್ವಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ೨೧ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸಿದರೆ, ಬಿಜೆಪಿಯ ೨೦ ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ಸಾಧಿಸುವ ಮೂಲಕ ಹಣಾಹಣಿ ಸ್ಪರ್ಧೆ ನೀಡಿದೆ. ೨೦೧೪ರಲ್ಲಿ ರಾಜ್ಯದಲ್ಲಿ ಬಿಜೆಪಿ ಕೇವಲ ಸ್ಥಾನ ಗೆದ್ದರೆ, ಮಮತಾ ಪಕ್ಷವು ೩೪ ಸ್ಥಾನಗಳನ್ನು ಗೆದ್ದಿತ್ತು.

ಕರ್ನಾಟಕ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಪ್ರಚಂಡವಾಗಿ ಕೆಲಸ ಮಾಡಿದ್ದು ಅದರ ಹೊಡೆತಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಧೂಳೀಪಟವಾಗಿವೆ.

ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಐತಿ ಹಾಸಿಕ ಗೆಲುವು ಸಾಧಿಸಿದ್ದು ೨೮ ಸ್ಥಾನಗಳ ಪೈಕಿ ೨೫ ಸ್ಥಾನ ಅದರ ವಶವಾಗಿದ್ದರೆ ಮೈತ್ರಿ ಕೂಟದ ಅಂಗಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ತಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರಲ್ಲೇ ಸುಸ್ತಾಗಿ ಕುಳಿತಿವೆ.

ಮೋದಿ ಅಲೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿ ಕಾರ್ಜುನ ಖರ್ಗೆ, ಮಾಜಿ ಮುಖ್ಯ ಮಂತ್ರಿ ಎಂ. ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಸಂಸದ ಕೆ.ಎಚ್. ಮುನಿ ಯಪ್ಪ, ಪಂಚಾಯತ್ರಾಜ್ ಸಚಿವ ಕೃ?ಬೈರೇಗೌಡ ಹಾಗೂ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತು ಮೂಲೆಗುಂಪಾಗಿದ್ದಾರೆ.

ಸಿಎಲ್ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯಅವರಯಾವ ಬೆಂಬಲಿಗರೂ ಗೆಲುವು ಸಾಧಿಸಲು ವಿಫಲ ರಾಗಿದ್ದು ಸಚಿವ ಡಿ.ಕೆ.ಶಿ ಸಹೋದರ, ಡಿ.ಕೆ. ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಗೂ ಶ್ರೀನಿವಾಸಪ್ರಸಾದ್ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ವತಿಯಿಂದ ಗೆಲುವು ಸಾಧಿಸಿದ್ದಾರೆ.

ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಲು ಸಫಲರಾಗಿದ್ದು ಇದರಿಂದ ಜೆಡಿಎಸ್ ಬಾವುಟ ಸಂಸ ತ್ತಿನಲ್ಲಿ ಉಳಿಯುವಂತಾ ಗಿದೆ. ಜಿದ್ದಾಜಿದ್ದಿಗೆ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಭಾರೀ ಅಂತರದಿಂದ ಪರಾಭವಗೊಳಿಸಿ, ಇತ್ತೀಚಿನ ದಿನಗ ಳಲ್ಲಿ ಕರ್ನಾಟಕದಿಂದ ಮೊದಲ ಪಕ್ಷೇತರ ಅಭ್ಯರ್ಥಿ ಯಾಗಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ.

ಕೇಂದ್ರ ಸಚಿವ ರಮೇಶ್ಜಿಗಜಿಣಗಿ, ಡಿವಿ ಸದಾನಂದಗೌಡ, ಅನಂತಕುಮಾರ್ ಹೆಗ್ಡೆ, ಶೋಭಾ ಕರಂದ್ಲಾಜೆ, ಪಿಸಿ ಗದ್ದಿಗೌಡರ್, ಸುರೇಶ್ ಅಂಗಡಿ, ಕರಡಿ ಸಂಗಣ್ಣ, ಶಿವಕುಮಾರ್ ಉದಾಸಿ, ಪಿಸಿ ಮೋಹನ್ ಮತ್ತೆ ಬಿಜೆಪಿಯಿಂದ ಗೆಲುವು ಸಾಧಿಸಿ ದ್ದಾರೆ. ಇವರಲ್ಲದೆ, ಪ್ರಹ್ಲಾದ್ ಜೋಶಿ, ಜಿ.ಎಸ್. ಸಿದ್ದೇಶ್ವರ್, ಬಿ.ವೈ. ರಾಘವೇಂದ್ರ, ನಳೀನ್ಕುಮಾರ್ ಕಟೀಲ್, ಭಗವಂತ ಖೂಬಾ, ಪ್ರತಾಪ್ ಸಿಂಹ ಪುನರ್ ಆಯ್ಕೆಗೊಂಡಿದ್ದಾರೆ.

ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಬಚ್ಚೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರನ್ನು ಸೋಲಿಸಿ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರೆ, ಕೋಲಾರದಲ್ಲಿ ಸತತವಾಗಿ ಏಳು ಬಾರಿ ಲೋಕಸಭೆ ಪ್ರವೇಶಿಸಿದ ಮುನಿಯಪ್ಪ ಅವರನ್ನು ಬಿಜೆಪಿಯ ಮುನಿಸ್ವಾಮಿ ಭಾರೀ ಅಂತರದಿಂದ ಪರಾಭವಗೊಳಿಸಿದ್ದಾರೆ.
 
ರಾಷ್ಟ್ರವ್ಯಾಪಿ ಹಿಂಸಾಚಾರ ಸಾಧ್ಯತೆಯ ಬಗ್ಗೆ ಕೇಂದ್ರ ಗೃಹ ಇಲಾಖೆಯು ನೀಡಿದ್ದ ಮುನ್ನೆಚ್ಚರಿಕೆಯ ನಡುವೆ ಗುರುವಾರ ಬೆಳಗ್ಗೆ ಗಂಟೆಗೆ ಬಿಗಿಭದ್ರತೆಯ ಮಧ್ಯೆ ಮತಗಳ ಎಣಿಕೆ ಆರಂಭವಾಗಿತ್ತು.

ರಾಷ್ಟ್ರೀಯ ಚುನಾವಣೆಯಲ್ಲಿ  ಮುಖ್ಯವಾಗಿ ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ  ಯಪಿಎ ಮಧ್ಯೆ ಕದನ ನಡೆದಿತ್ತು. ಏನಿದ್ದರೂ ಯುಪಿಎ ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ- ಬಹುಜನ ಸಮಾಜ ಪಕ್ಷ- ರಾಷ್ಟ್ರೀಯ ಲೋಕದಳ ಮೈತ್ರಿಕೂಟ, ಹಾಗೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಒಡಿಶಾದಲಿ ಬಿಜು ಜನತಾದಳಗಳ ಜೊತೆಗೆ ಬಿಜೆಪಿ ಸ್ಪರ್ಧಿಸಬೇಕಾಗಿತ್ತು. ದಕ್ಷಿಣದ ಉಳಿದ ರಾಜ್ಯಗಳಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳ ಜೊತೆ ಬಿಜೆಪಿಯ ಸೆಣಸಾಟ ಇತ್ತು.

ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೆ ಏರುವ ಬಗ್ಗೆ ಭವಿಷ್ಯ ನುಡಿದಿದ್ದವು. ವಿರೋಧ ಪಕ್ಷಗಳು ಸಮೀಕ್ಷೆಗಳನ್ನು ತಳ್ಳಿ ಹಾಕಿದ್ದವು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಮೀಕ್ಷೆಗಳನ್ನುಕಪಟ ಎಂಬುದಾಗಿ ಬಣ್ಣಿಸಿದ್ದರು.

೫೪೨ ಸ್ಥಾನಗಳಿಗೆ ಹಂತಗಳಲ್ಲಿ ಚುನಾವಣೆಗಳು ನಡೆದಿದ್ದವು. ಭಾರತದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಅಂದರೆ ಶೇಕಡಾ ೬೭.೧ರಷ್ಟು ಮತದಾನ ಬಾರಿ ನಡೆದಿತ್ತು. ೨೦೧೪ರ ಚುನಾವಣೆಯಲ್ಲಿ ಶೇಕಡಾ ೬೬.೪ರಷ್ಟು ಮತದಾನವಾಗಿತ್ತು.

ಚುನಾವಣಾ ಫಲಿತಾಂಶ ಬರುತ್ತಿದ್ದಂತೆಯೇ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮೋತ್ಸಾಹ ಮುಗಿಲು ಮುಟ್ಟಿತ್ತು. ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರು ಪ್ರಿಯಾಂಕಾ ಜೊತೆ ತಮ್ಮ ನಿವಾಸದಲ್ಲಿ ಫಲಿತಾಂಶದ ಬಗ್ಗೆ ಚರ್ಚಿಸಿದರು.

ರಾಹುಲ್ ಗಾಂಧಿಯರನ್ಯಾಯ ಯೋಜನೆಯ ಘೋಷಣೆ, ಚೌಕೀದಾರ್ ಚೋರ್ ಹೈ ಘೋಷಣೆ, ರಫೇಲ್ ಅವ್ಯವಹಾರದ ಆರೋಪಗಳು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ ಎಂಬುದು ಫಲಿತಾಂಶದೊಂದಿಗೆ ಖಚಿತವಾಯಿತು.

ಬದಲಿಗೆ ರಾಷ್ಟ್ರದ ರಕ್ಷಣೆ, ಉಗ್ರ ನಿಗ್ರಹ, ಆರ್ಥಿಕ ಸುಧಾರಣಾ ಕ್ರಮಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿ ಬಿಜೆಪಿ ಗೆಲುವಿಗೆ ಸಹಕಾರಿಯಾದವು.

No comments:

Post a Comment