ನಾನು ಮೆಚ್ಚಿದ ವಾಟ್ಸಪ್

Friday, May 31, 2019

ಜೈ ಜವಾನ್, ಜೈ ಕಿಸಾನ್…! ಮೋದಿ ಸರ್ಕಾರದ ಕಾರ್ಯಾರಂಭ

ಜೈ ಜವಾನ್, ಜೈ ಕಿಸಾನ್……! ಮೋದಿ ಸರ್ಕಾರದ ಕಾರ್ಯಾರಂಭ
 ನವದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿ ಸಚಿವ ಸಂಪುಟವು 2019 ಮೇ 31 ಶುಕ್ರವಾರ ನಡೆದ ತನ್ನ ಎರಡನೇ ಅವಧಿಯ ತನ್ನ ಚೊಚ್ಚಲ ಸಭೆಯಲ್ಲಿ  ಸೈನಿಕರು ಮತ್ತು ರೈತರ ಹಿತಕ್ಕೆ ಆದ್ಯತೆ ನೀಡಿ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸುವ ನಿರ್ಧಾರದ ಮೂಲಕಜೈಜವಾನ್,ಜೈಕಿಸಾನ್ಮಂತ್ರದ ಅಡಿಯಲ್ಲಿ ಕಾರ್ಯಾರಂಭ ಮಾಡಿತು.

ಯೋಧರ ಮಕ್ಕಳಿಗೆ ಶಿಷ್ಯವೇತನ ಹೆಚ್ಚಳ ಹಾಗೂ ಅದನ್ನು ಭಯೋತ್ಪಾದನೆ ಹಾಗೂ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೂ ವಿಸ್ತರಿಸುವ ಮೂಲಕ ಸಂಪುಟದ ಮೊದಲ ನಿರ್ಧಾರವನ್ನುದೇಶದ ರಕ್ಷಕರಿಗೆ ಅರ್ಪಿಸಿದರೆ, ಇನ್ನೊಂದು ಮಹತ್ವದ ಕ್ರಮವಾಗಿ  ರೈತರಿಗೆ ವರ್ಷಕ್ಕೆ  6000 ರೂಪಾಯಿಗಳ  ಗೌರವ ಧನಒದಗಿಸುವ  ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಎಲ್ಲ ರೈತರಿಗೂ ವಿಸ್ತರಿಸುವ ಹಾಗೂ 2 ಹೆಕ್ಟೇರ್  ಮಿತಿ ರದ್ದು ಪಡಿಸುವ ನಿರ್ಧಾರವನ್ನು ಕೈಗೊಂಡಿದೆ. ಜೊತೆಗೆ 60 ವರ್ಷ ಮೀರಿದ ರೈತರಿಗೆ  ಮತ್ತು ವರ್ತಕರಿಗೆ ಪಿಂಚಣಿ ಒದಗಿಸುವ ನಿರ್ಧಾರವನ್ನು ಕೈಗೊಂಡಿದೆ.

ಸರ್ಕಾರದ ಕ್ರಮವು ಸುಮಾರು ೧೫ ಕೋಟಿಗೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮಕ್ಕಳಿಗೆ ನೀಡಲಾಗುತ್ತಿದ್ದ ಶಿಷ್ಯ ವೇತನ ಯೋಜನೆಯನ್ನು (ಸ್ಕಾಲರ್ ಶಿಪ್ ಸ್ಕೀಮ್) ನಕ್ಸಲ್ ಮತ್ತು ಭಯೋತ್ಪಾದಕ ದಾಳಿಗಳಲ್ಲಿ ಹುತಾತ್ಮರಾದ ರಾಜ್ಯ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ವಿಸ್ತರಿಸಿದ್ದಾರೆ.

ಸರ್ಕಾರವು ರಾಷ್ಟ್ರೀಯ ರಕ್ಷಣಾ ನಿಧಿ ಯೋಜನೆಯಡಿಯಲ್ಲಿ ಮಕ್ಕಳಿಗೆ ನೀಡಲಾಗುವ ಮಾಸಿಕ ಶಿಷ್ಯವೇತನವನ್ನು ಬಾಲಕರಿಗೆ ೨೦೦೦ ರೂಪಾಯಿಗಳಿಂದ ೨೫೦೦ ರೂಪಾಯಿಗಳಿಗೆ ಮತ್ತು ಬಾಲಕಿಯರಿಗೆ ,೨೫೦ ರೂಪಾಯಿಯಿಂದ ,೦೦೦ ರೂಪಾಯಿಗಳಿಗೆ ಏರಿಸಿದೆ.

ನಮ್ಮ ಸರ್ಕಾರದ ಮೊದಲ ನಿರ್ಧಾರವನ್ನು ಭಾರತವನ್ನು ಸಂರಕ್ಷಿಸುವವರಿಗೆ ಸಮರ್ಪಣೆ ಮಾಡಲಾಗಿದೆ. ರಾಷ್ಟ್ರೀಯ ರಕ್ಷಣಾ ನಿಧಿಯಡಿಯ ಪ್ರಧಾನ ಮಂತ್ರಿಗಳ ಶಿಷ್ಯವೇತನ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಭಯೋತ್ಪಾದಕ ಅಥವಾ ಮಾವೋವಾದಿ ದಾಳಿಗಳಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಶಿಷ್ಯ ವೇತನ ವಿಸ್ತರಣೆಯೂ ಸೇರಿದೆಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸರ್ಕಾರದ ಪ್ರಥಮ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡ ತತ್ ಕ್ಷಣವೇ ಟ್ವೀಟ್ ಮಾಡಿದರು.

೧೭ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನವನ್ನು ಜೂನ್ ೧೭ರಿಂದ ಜುಲೈ ೨೬ರವರೆಗೆ ನಡೆಸಲು ಮತ್ತು ಜುಲೈ ೫ರಂದು ೨೦೧೯-೨೦ರ ಸಾಲಿನ ಮುಂಗಡಪತ್ರವನ್ನು ಮಂಡಿಸಲೂ ಸಂಪುಟ ಸಭೆ ನಿರ್ಧರಿಸಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನದ ಮೊದಲ ದಿನವೇ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದು ಅಧಿವೇಶನದಲ್ಲೇ ಜುಲೈ ೫ರಂದು ಮುಂಗಡಪತ್ರದ ಮಂಡನೆಯಾಗಲಿದೆ.

ಹಂಗಾಮೀ ಸಭಾಧ್ಯಕ್ಷೆಯಾಗಿ ಗುರುವಾರ ನೇಮಕಗೊಂಡಿರುವ ಮೇನಕಾ ಗಾಂಧಿಯವರು ಜೂನ್ ೧೯ರಂದು ಲೋಕಸಭೆಯ ನೂತನ ಸಭಾಧ್ಯಕ್ಷರ ಆಯ್ಕೆಗೆ, ಮುನ್ನ ಹೊಸದಾಗಿ ಆಯ್ಕೆಯಾಗಿರುವ ಸಂಸತ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವರು.

ಸಭಾಧ್ಯಕ್ಷರ ನೇಮಕದ ಬಳಿಕ ಉಭಯ ಸದನಗಳು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಚರ್ಚೆಗೆ ಎತ್ತಿಕೊಳ್ಳಲಿದ್ದು ಅದಕ್ಕೆ ಪ್ರಧಾನಿ ಮೋದಿಯವರು ಉತ್ತರ ನೀಡುವರು.

೧೭ನೇ ಲೋಕಸಭೆಯ ಚೊಚ್ಚಲ ಅಧಿವೇಶನದಲ್ಲೇ ಕೇಂದ್ರ ಸರ್ಕಾರದ ಮುಂಗಡಪತ್ರದ ಮಂಡನೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ನೂತನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಗಡಪತ್ರ ಮಂಡಿಸುವರು.

ಸಂಸತ್ ಅಧಿವೇಶನದ ದಿನಾಂಕಗಳ ಬಗ್ಗೆ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು.

೨೦೧೯-೨೦ರ ಸಾಲಿನ ಮಧ್ಯಂತರ ಮುಂಗಡಪತ್ರವನ್ನು ಆಗಿನ ಹಣಕಾಸು ಸಚಿವ ಪೀಯೂಶ್ ಗೋಯಲ್ ಅವರು ೨೦೧೯ರ ಫೆಬ್ರುವರಿ ೧ರಂದು ಮಂಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿ ಎರಡನೇ ಅವಧಿಗೆ ಚುನಾಯಿತರಾದ ಮೊದಲ ಬಿಜೆಪಿ ನಾಯಕರಾಗಿದ್ದು, ಇಂತಹ ಸಾಧನೆಯನ್ನು ಹಿಂದೆ ಮೂವರು ಕಾಂಗ್ರೆಸ್ ನಾಯಕರು - ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಮಾತ್ರ ಮಾಡಿದ್ದರು.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ ೩೫೨ ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಗಳಿಸಿ ಅಧಿಕಾರಕ್ಕೆ ಏರಿದೆ. ಬಿಜೆಪಿ ಒಂದೇ ಪಕ್ಷ ಸ್ವಂತ ಬಲದಲ್ಲೇ ೩೦೩ ಸ್ಥಾನ ಗೆದ್ದಿದೆ.

ಕಾಂಗ್ರೆಸ್ ಪಕ್ಷವು ಕೇವಲ ೫೨ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ್ದ ೪೪ ಸ್ಥಾನಗಳಿಗಿಂತ ಸ್ಥಾನಗಳನ್ನು ಮಾತ್ರ ಹೆಚ್ಚು ಗಳಿಸಿದೆ.

 ಪ್ರಧಾನಿ ಮೋದಿ ಮತ್ತು ಅವರ ೫೭ ಸದಸ್ಯರ ಸಚಿವ ಸಂಪುಟವು ಗುರುವಾರ ಪ್ರಮಾಣ ವಚನ ಸ್ವೀಕರಿಸಿತ್ತು.

ಶುಕ್ರವಾರ ಸಂಪುಟ ಸಭೆಗೆ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿದರು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:


ಯಾರಿಗೆ ಯಾವ ಖಾತೆ?
ನರೇಂದ್ರ ಮೋದಿ: ಪ್ರಧಾನ ಮಂತ್ರಿಗಳು, ಸಿಬ್ಬಂದಿ ಖಾತೆ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ; ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ ಮತ್ತು ಎಲ್ಲ ಪ್ರಮುಖ ನೀತಿ ನಿರೂಪಣಾ ಅಧಿಕಾರ ಹಾಗೂ ಯಾರಿಗೂ ಹಂಚಿಕೆಯಾಗದ ಇತರ ಖಾತೆಗಳು.

ಸಂಪುಟ ದರ್ಜೆ ಸಚಿವರು:
.    ರಾಜನಾಥ್ ಸಿಂಗ್- ರಕ್ಷಣೆ,
.    ಅಮಿತ್ ಶಾ- ಗೃಹ,
.    ನಿತಿನ್ ಗಡ್ಕರಿ- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ,
.    ಡಿ.ವಿ ಸದಾನಂದ ಗೌಡ- ರಾಸಾಯನಿಕ ಮತ್ತು ರಸಗೊಬ್ಬರ,
.    ನಿರ್ಮಲಾ ಸೀತಾರಾಮನ್- ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ,
.    ರಾಮ್ ವಿಲಾಸ್ ಪಾಸ್ವಾನ್- ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ,
.    ನರೇಂದ್ರ ಸಿಂಗ್ ತೋಮರ್- ಕೃಷಿ ಮತ್ತು ರೈತರ ಕಲ್ಯಾಣ; ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್.
.   ರವಿಶಂಕರ್ ಪ್ರಸಾದ್- ಕಾನೂನು ಮತ್ತು ನ್ಯಾಯ; ಸಂಪರ್ಕ ಖಾತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.
.    ಹರ್ಸಿಮ್ರತ್ ಕೌರ್ ಬಾದಲ್- ಆಹಾರ ಸಂಸ್ಕರಣೆ,
೧೦.  ಥಾವರ್ ಚಂದ್ ಗೆಹ್ಲೋಟ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.
೧೧.  ಡಾ. ಸುಬ್ರಹ್ಮಣ್ಯಂ ಜೈಶಂಕರ್- ವಿದೇಶಾಂಗ ವ್ಯವಹಾರ,
೧೨.  ರಮೇಶ್ ಪೊಕ್ರಿಯಾಲ್ ನಿಶಾಂಕ್- ಮಾನವ ಸಂಪನ್ಮೂಲ ಅಭಿವೃದ್ಧಿ,
೧೩.  ಅರ್ಜುನ್ ಮುಂಡಾ- ಬುಡಕಟ್ಟು ವ್ಯವಹಾರ,
೧೪.  ಸ್ಮೃತಿ ಝುಬಿನ್ ಇರಾನಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವುಳಿ ಖಾತೆ.
೧೫.  ಡಾ. ಹರ್ಷವರ್ಧನ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ; ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ,
೧೬.  ಪ್ರಕಾಶ್ ಜಾವಡೇಕರ್- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ,
೧೭.  ಪಿಯೂಶ್ ಗೋಯಲ್- ರೈಲ್ವೇ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ,
೧೮.  ಧರ್ಮೇಂದ್ರ ಪ್ರಧಾನ್- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಖಾತೆ,
೧೯.  ಮುಖ್ತಾರ್ ಅಬ್ಬಾಸ್ ನಖ್ವಿ- ಅಲ್ಪಸಂಖ್ಯಾತ ವ್ಯವಹಾರ,
೨೦.  ಪ್ರಹ್ಲಾದ್ ಜೋಷಿ- ಸಂಸದೀಯ ವ್ಯವಹಾರಗಳು; ಕಲ್ಲಿದ್ದಲು ಮತ್ತು ಗಣಿ ಖಾತೆ.
೨೧.  ಡಾ. ಮಹೇಂದ್ರನಾಥ್ ಪಾಂಡೆ- ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ,
೨೨.  ಅರವಿಂದ ಗಣಪತ್ ಸಾವಂತ್- ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ,
೨೩.  ಗಿರಿರಾಜ್ ಸಿಂಗ್- ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ,
೨೪.  ಗಜೇಂದ್ರ ಸಿಂಗ್ ಶೆಖಾವತ್- ಜಲಶಕ್ತಿ ಖಾತೆ.

ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ)
.    ಸಂತೋಷ್ ಕುಮಾರ್ ಗಂಗ್ವಾರ್- ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ).
.    ರಾವ್ ಇಂದ್ರಜಿತ್ ಸಿಂಗ್- ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ (ಸ್ವತಂತ್ರ ನಿರ್ವಹಣೆ) ಹಾಗೂ ಯೋಜನಾ ಖಾತೆ ಸಹಾಯ ಸಚಿವರು (ಸ್ವತಂತ್ರ ನಿರ್ವಹಣೆ),
.    ಶ್ರೀಪಾದ ಯಸ್ಸೋ ನಾಯಕ್- ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ (ಆಯುಷ್) ಹಾಗೂ ರಕ್ಷಣಾ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ),
.    ಡಾ. ಜಿತೇಂದ್ರ ಸಿಂಗ್- ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ); ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಹಾಯಕ ಸಚಿವರು, ಅಣುಶಕ್ತಿ ಇಲಾಖೆ ಸಹಾಯಕ ಸಚಿವರು ಮತ್ತು ಬಾಹ್ಯಾಕಾಶ ಇಲಾಖೆ ಸಹಾಯಕ ಸಚಿವರು,
.    ಕಿರಣ್ ರಿಜಿಜು- ಯುವಜನ ವ್ಯವಹಾರ ಮತ್ತು ಕ್ರೀಡೆ (ಸ್ವತಂತ್ರ ನಿರ್ವಹಣೆ), ಅಲ್ಪಸಂಖ್ಯಾತ ವ್ಯವಹಾರಗಳ ಸಹಾಯಕ ಸಚಿವರು,
.    ಪ್ರಹ್ಲಾದ್ ಸಿಂಗ್ ಪಟೇಲ್- ಸಂಸ್ಕೃತಿ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ) ಮತ್ತು ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ),
.    ರಾಜ್ಕುಮಾರ್ ಸಿಂಗ್- ವಿದ್ಯುತ್ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ), ನವೀನ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ), ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಹಾಯಕ ಸಚಿವರು.
.   ಹರ್ದೀಪ್ ಸಿಂಗ್ ಪುರಿ- ಗೃಹ ಮತ್ತು ನಗರ ವ್ಯವಹಾರಗಳ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ); ನಾಗರಿಕ ವಿಮಾನಯಾನ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ); ವಾಣಿಜ್ಯ ಮತ್ತು ಉದ್ಯಮ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ).
.    ಮನ್ಸುಖ್ ಎಲ್ ಮಾಂಡವೀಯ- ಹಡಗು ಖಾತೆ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವರು.

ರಾಜ್ಯ ದರ್ಜೆ ಸಚಿವರು:
.    ಫಗನ್ ಸಿಂಗ್ ಕುಲಸ್ತೆ- ಉಕ್ಕು ಖಾತೆ ಸಹಾಯಕ ಸಚಿವರು.
.    ಆಶ್ವಿನಿ ಕುಮಾರ್ ಚೌಬೆ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ.
.    ಅರ್ಜುನ್ ರಾಮ್ ಮೇಘ್ವಾಲ್- ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವರು; ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆ ಸಹಾಯಕ ಸಚಿವರು.
.    ಜನರಲ್ (ನಿವೃತ್ತ) ವಿ.ಕೆ ಸಿಂಗ್- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಹಾಯಕ ಸಚಿವ.
.    ಕೃಷ್ಣ ಪಾಲ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ.
.    ಧನ್ವೇ ರಾವ್ ಸಾಹೇಬ್- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣೆ ಸಹಾಯಕ ಸಚಿವರು.
.    ಜಿ. ಕಿಶನ್ ರೆಡ್ಡಿ- ಗೃಹ ಖಾತೆ ಸಹಾಯಕ ಸಚಿವ.
.   ಪುರುಷೋತ್ತಮ್ ರೂಪಾಲ- ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವ.
.    ರಾಮದಾಸ್ ಅಠವಳೆ- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಹಾಯಕ ಸಚಿವ.
೧೦.  ಸಾಧ್ವಿ ನಿರಂಜನ್ ಜ್ಯೋತಿ- ಗ್ರಾಮೀಣಾಭಿವೃದ್ಧಿ ಸಹಾಯಕ ಸಚಿವೆ.
೧೧.  ಬಾಬುಲ್ ಸುಪ್ರಿಯೋ- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಹಾಯಕ ಸಚಿವ.
೧೨.  ಸಂಜೀವ್ ಕುಮಾರ್ ಬಲ್ಯಾನ್- ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಾಯಕ ಸಚಿವ.
೧೩.  ಧೋತ್ರೆ ಸಂಜಯ್ ಶಾಮ್ರಾವ್- ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಪರ್ಕ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಗಳ ಸಹಾಯಕ ಸಚಿವರು.
೧೪.  ಅನುರಾಗ್ ಸಿಂಗ್ ಠಾಕೂರ್- ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಗಳ ಸಹಾಯಕ ಸಚಿವರು.
೧೫.  ಅಂಗಡಿ ಸುರೇಶ್ ಚನ್ನಬಸಪ್ಪ- ರೈಲ್ವೇ ಖಾತೆ ಸಹಾಯಕ ಸಚಿವ.
೧೬.  ನಿತ್ಯಾನಂದ ರಾಯ್- ಗೃಹ ಖಾತೆ ಸಹಾಯಕ ಸಚಿವ.
೧೭.  ರತನ್ಲಾಲ್ ಖಟಾರಿಯಾ- ಜಲಶಕ್ತಿ ಖಾತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಗಳ ಸಹಾಯಕ ಸಚಿವರು.
೧೮.  ವಿ. ಮುರಳೀಧರನ್- ವಿದೇಶಾಂಗ ವ್ಯವಹಾರಗಳ ಖಾತೆ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವರು.
೧೯.  ರೇಣುಕಾ ಸಿಂಗ್ ಸರೂಟ- ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವೆ.
೨೦.  ಸೋಮ್ ಪ್ರಕಾಶ್- ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಹಾಯಕ ಸಚಿವ.
೨೧.  ರಾಮೇಶ್ವರ ತೇಲಿ- ಆಹಾರ ಸಂಸ್ಕರಣೆ ಉದ್ಯಮ ಖಾತೆ ಸಹಾಯಕ ಸಚಿವ.
೨೨.  ಪ್ರತಾಪ್ ಚಂದ್ರ ಸಾರಂಗಿ- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ ಹಾಗೂ ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ ಖಾತೆಗಳ ಸಹಾಯಕ ಸಚಿವರು.
೨೩.  ಕೈಲಾಶ್ ಚೌಧರಿ- ಕೃಷಿ ಮತ್ತು ರೈತರ ಕಲ್ಯಾಣ ಸಹಾಯ ಸಚಿವರು.
೨೪.  ದೇಬಶ್ರೀ ಚೌಧರಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಹಾಯಕ ಸಚಿವೆ. 

No comments:

Post a Comment