ನಾನು ಮೆಚ್ಚಿದ ವಾಟ್ಸಪ್

Thursday, May 30, 2019

ಮೋದಿ ಸರ್ಕಾರ-೨ ಅಧಿಕಾರಕ್ಕೆ

ಮೋದಿ ಸರ್ಕಾರ- ಅಧಿಕಾರಕ್ಕೆ

ನವದೆಹಲಿ:  ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ಅವರು ೨೪ ಮಂದಿ ಸಂಪುಟ ದರ್ಜೆ ಸಚಿವರು ಮತ್ತು  ೩೧ ಮಂದಿ ಸಹಾಯಕ ಸಚಿವರ ಜೊತೆಗೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಎರಡನೇ ಅವಧಿಯ ಸರ್ಕಾರ ಗುರುವಾರ ಸಂಭ್ರಮೋತ್ಸಾಹದ ಮಧ್ಯೆ ಅಧಿಕಾರಕ್ಕೆ ಏರಿತು. ಇದರೊಂದಿಮೋದಿ ಸರ್ಕಾರ- ಯುಗ ಆರಂಭಗೊಂಡಿತು.

ಪ್ರಧಾನಿ ಮೋದಿ ಸೇರಿದಂತೆ  ಒಟ್ಟು 8 ಮಂದಿಯನ್ನು ಒಳಗೊಂಡ  ಸಚಿವ ಸಂಪುಟದ ನೂತನ ಸದಸ್ಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

೨೦೧೪ರಲ್ಲಿ ಅಧಿಕಾರಕ್ಕೆ ಏರಿದ್ದ ಮೋದಿ ಅವರ ಮೊದಲ ಸರ್ಕಾರದಲ್ಲಿ ಸಚಿವರಾಗಿದ್ದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಡಿ.ವಿ. ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ರವಿಶಂಕರ ಪ್ರಸಾದ್ ಮತ್ತಿತರರ ಜೊತೆಗೆ ಬಿಜೆಪಿ ಪ್ರಚಂಡ ಗೆಲುವಿನ ರೂವಾರಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವಾರು ಮಂದಿ ಹೊಸಬರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

೨೫ ಸಂಸತ್ ಸದಸ್ಯರನ್ನು ಲೋಕಸಭೆಗೆ ಕಳುಹಿಸಿಕೊಟ್ಟಿರುವ ಕರ್ನಾಟಕದಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸದರಾಗಿ ಪುನರಾಯ್ಕೆಯಾಗಿರುವ  ಕೇಂದ್ರ ಸಚಿವರಾಗಿದ್ದ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ  ನಿರ್ಮಲಾ ಸೀತಾರಾಮನ್ ಅವರು ಮತ್ತೆ ಮೋದಿ ಸಂಪುಟಕ್ಕೆ ಸಂಪುಟದದರ್ಜೆ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಅದಲ್ಲದೆ ಧಾರವಾಡ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಪ್ರಹ್ಲಾದ ಜೋಶಿ ಅವರು ಸಂಪುಟ ದರ್ಜೆ ಸಚಿವರಾಗಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಇದಲ್ಲದೆ, ಕರ್ನಾಟಕದ ಬೆಳಗಾವಿಯಿಂದ ಲೋಕಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿರುವ ಸುರೇಶ್ ಅಂಗಡಿ ಅವರೂ ಹೊಸದಾಗಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪರಾಭವಗೊಳಿಸಿದ ಸ್ಮೃತಿ ಇರಾನಿ ಅವರು ಮತ್ತೆ ಸಂಪುಟದಲ್ಲಿ ಸಂಪುಟ ದರ್ಜೆ ಸ್ಥಾನ ಗಿಟ್ಟಿಸಿದ್ದಾರೆ.

ಕೇಂದ್ರ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಹೊರತಾಗಿ ಹೊರತಾಗಿ ಸಾಧ್ವಿ ನಿರಂಜನ್ ಜ್ಯೋತಿ, ದೇಬಶ್ರೀ ಚೌಧರಿ ಮತ್ತು  ರೇಣುಕಾ ಸಿಂಗ್ ಸರೂಟ ಮಹಿಳಾ ಪ್ರತಿನಿಧಿಗಳಾಗಿ ಸೇರ್ಪಡೆಯಾಗಿದ್ದಾರೆ.

ಗಂಟೆಗೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಆರಂಭವಾಗಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ನಡೆದ ಸಂಭ್ರಮದ ಪ್ರಮಾಣ ವಚನ ಸಮಾರಂಭವನ್ನು ದೇಶ ವಿದೇಶಗಳ ೮೦೦೦ ಮಂದಿ ಗಣ್ಯ ಅತಿಥಿಗಳು ಕಣ್ತುಂಬಿಕೊಂಡರು. ಗಣ್ಯರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿ, ಸುಷ್ಮಾಸ್ವರಾಜ್ ಮತ್ತಿರರು ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವ ಸಂಪುಟದ ವಿವರ:
.        ನರೇಂದ್ರ ದಾಮೋದರ ದಾಸ್ ಮೋದಿ- ಪ್ರಧಾನಿ (ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ)
.        ರಾಜನಾಥ್ ಸಿಂಗ್-  ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ. (ಹಿಂದಿನ ಸರ್ಕಾರದ ಗೃಹ ಸಚಿವ)
.        ಅಮಿತ್ ಶಾ (ಹಿಂದಿಯಲ್ಲಿ ಪ್ರಮಾಣ ವಚನ)- ಬಿಜೆಪಿ ಅಧ್ಯಕ್ಷ- ಈಶ್ವರನ ಹೆಸರಿನಲಿ (ಗಾಂಧಿನಗರ ಅಭ್ಯರ್ಥಿ) - ಮೊದಲ ಬಾರಿಗೆ ಸಚಿವ.
.        ನಿತಿನ್ ಗಡ್ಕರಿ (ಹಿಂದಿ) - ನಾಗಪುರ ಸಂಸದ), ಮಾಜಿ ರಸ್ತೆ ಸಾರಿಗೆ ಸಚಿವ
.        ಡಿ.ವಿ.ಸದಾನಂದ ಗೌಡ (ಇಂಗ್ಲಿಷಿನಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ) ಬೆಂಗಳೂರು ಉತ್ತರ ಸಂಸದ -ಮಾಜಿ ಕೇಂದ್ರ ಸಚಿವ.
.        ನಿರ್ಮಲಾ ಸೀತಾರಾಮನ್ (ರಾಜ್ಯಸಭಾ ದಸ್ಯೆ, ಮಾಜಿ ರಕ್ಷಣಾ ಸಚಿವೆ) ೨೦೦೮ರಲ್ಲಿ ಬಿಜೆಪಿಗೆ ಸೇರ್ಪಡೆ- ದೇವರ ಹೆಸರಿನಲ್ಲಿ ಪ್ರಮಾಣ.
.        ರಾಂ ವಿಲಾಸ್ ಪಾಸ್ವಾನ್ (ರಾಜ್ಯಸಭಾ ಸದಸ್ಯ- ಲೋಕಜನ ಪಕ್ಷ- ಮಾಜಿ ಕೇಂದ್ರ ಸಚಿವ- ಹಿಂದಿಯಲ್ಲಿ ಪ್ರಮಾಣ- ಬಿಹಾರದ ದಲಿತ ನಾಯಕ)
.        ನರೇಂದ್ರ ಸಿಂಗ್ ತೋಮರ್ (.ಪ್ರ. ಮೊರೇನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
.        ರವಿ ಶಂಕರ ಪ್ರಸಾದ್ ಪಾಟ್ನಾ ಸಾಹಿಬ್ ಸಂಸದ (ಮಾಜಿ ಕಾನೂನುಸಚಿವ ಸಚಿವ) -ಬಿಜೆಪಿ ಹಿಂದಿಯಲ್ಲಿ ಈಶ್ವರನ ಹೆಸರಲ್ಲಿ ಪ್ರಮಾಣ..
೧೦.      ಹರ್ಸಿಮ್ರತ್ ಕೌರ್ ಬಾದಲ್ (ಶಿರೋಮಣಿ ಅಕಾಲಿದಳ - ಪಂಜಾಬ್) ಇಂಗ್ಲಿಷಿನಲ್ಲಿ ಪ್ರಮಾಣ. ಭಟಿಂದ ಸಂಸದೆ
೧೧.      ಥಾವರ್ ಚಂದ್ ಗೆಹ್ಲೋಟ್- (ಹಿಂದಿಯಲ್ಲಿ- ಈಶ್ವರನ ಹೆಸರಲಿ ಪ್ರಮಾಣ)
೧೨.      ಸುಬ್ರಮಣಿಯನ್  ಜೈಶಂಕರ್ (ಮಾಜಿ ವಿದೇಶಾಂಗ ಕಾರ್ಯದರ್ಶಿ- ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು.)
೧೩.      ರಮೇಶ್ ಪೋಖ್ರಿಯಾಲ್: (ಉತ್ತರಾಖಂಡ (ಹೊಸ ಮುಖ) ಹರಿದ್ವಾರ ಸಂಸದ)
೧೪.     ಅರ್ಜುನ ಮುಂಡಾ:  (ಜಾರ್ಖಂಡ್ ಖುಂಠಿ ಸಂಸದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ.)
೧೫.     ಸ್ಮೃತಿ ಇರಾನಿ: (ಅಮೇಥಿ ಸಂಸದೆ ಮಾಜಿ ಕೇಂದ್ರ ಸಚಿವೆ- ರಾಹುಲ್ ಗಾಂಧಿ ಸೋಲಿಸಿದ ಎದುರಾಳಿ).
೧೬.      ಡಾ. ಹರ್ಷವರ್ಧನ್: (ಕೇಂದ್ರ ವಿಜ್ಞಾನ ಸಚಿವ)- ಈಶ್ವರನ ಹೆಸರಲ್ಲಿ- ದೆಹಲಿ ಚಾಂದನಿ ಚೌಕ ಸಂಸದ)
೧೭.      ಪ್ರಕಾಶ್ ಜಾವಡೇಕರ್ (ಮಾಜಿ ಮಾನವ ಸಂಪನ್ಮೂಲ ಸಚಿವ- ಮೋದಿ, ಅಮಿತ್ ಶಾ ಆಪ್ತ, ಪಕ್ಷದ ಅಧಿಕೃತ ವಕ್ತಾರ.)
೧೮.     ಪೀಯೂಶ್ ಗೋಯಲ್ (ರಾಜ್ಯಸಭಾ ಸದಸ್ಯ, ಮಾಜಿ ರೈಲ್ವೆ ಹಂಗಾಮಿ ಹಣಕಾಸು ಸಚಿವ. ಸಾಮಾಜಿಕ ಮಾಧ್ಯಮ ಅಭಿಯಾನದ ನೇತೃತ್ವ ವಹಿಸಿದ್ದರು. ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್.)
೧೯.      ಧರ್ಮೇಂದ್ರ ಪ್ರಧಾನ್ (ಬಿಜೆಪಿ ಒಡಿಶಾ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ, ಕೇಂದ್ರ ಪೆಟ್ರೋಲಿಯಂ ಸಚಿವರಾಗಿದ್ದರು ಹಿಂದಿಯಲ್ಲಿ ಪ್ರಮಾಣ)
೨೦.      ಮುಖ್ತಾರ್ ಅಬ್ಬಾಸ್ ನಖ್ವಿ (ಮಾಜಿ ಕೇಂದ್ರ ಅಲ್ಪಸಂಖ್ಯಾತ ಸಚಿವ, ಮೂಲತಃ .ಪ್ರ. ರಾಂಪುರ ಕ್ಷೇತ್ರದವರು. ವಾಜಪೇಯಿ ಸರ್ಕಾರದಲ್ಲೂ ಸಚಿವರಾಗಿದ್ದರು.)
೨೧.      ಪ್ರಹ್ಲಾದ ವೆಂಕಟೇಶ ಜೋಶಿ (ಕರ್ನಾಟಕ (ಇಂಗ್ಲಿಷಿನಲ್ಲಿ ಪ್ರಮಾಣವಚನ) ಧಾರವಾಡ ಸಂಸದ, ೪ನೇ ಬಾರಿಗೆ ಆಯ್ಕೆಯಾಧ ಸಂಸದ, ದಿ. ಅನಂತಕುಮಾರ ಕೈಕೆಳಗೆ ಬೆಳೆದ ನಾಯಕ- ಈದ್ಗಾ ಮೈದಾನ ಹೋರಾಟದಲ್ಲಿ ಭಾಗಿ.)
೨೨.      ಡಾ. ಮಹೇಂದ್ರನಾಥ್ ಪಾಂಡೆ (ಹಿಂದಿಯಲ್ಲಿ ಪ್ರಮಾಣ- ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ.)
೨೩.      ಅರವಿಂದ್ ಗಣಪತ್ ಸಾವಂತ್ (ಹಿಂದಿ ಶಿವಸೇನೆ  ಮುಂಬೈ ದಕ್ಷಿಣ -ಶಿವಸೇನೆ ಸಂಸದ.)
೨೪.     ಗಿರಿರಾಜ್ ಸಿಂಗ್ (ಬೆಗುಸರಾಯ್ ಕ್ಷೇತ್ರ- ಕನ್ನಯ್ಯ ಕುಮಾರ್ ಸೋಲಿಸಿ ಸಂಸತ್ತಿಗೆ- ಬಿಜೆಪಿಯ ಉಗ್ರ ಹಿಂದುತ್ವವಾದಿ)
೨೫.     ಗಜೇಂದ್ರ ಸಿಂಗ್ ಶೆಖಾವತ್ (ಜೋಧಪುರ ಬಿಜೆಪಿ ಸಂಸದ ಅಶೋಕ ಗೆಹ್ಲೋಟ್ ಪುತ್ರನನ್ನು ಸೋಲಿಸಿ ೨ನೇ ಬಾರಿಗೆ ಸಂಸತ್ತಿಗೆ ಆಯ್ಕೆ  ( ಎಲ್ಲರೂ ಸಂಪುಟ ದರ್ಜೆ ಸಚಿವರು)

ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ)
೨೬.      ಸಂತೋಷ ಕುಮಾರ್ ಗಂಗ್ವಾರ್ (ಬರೇಲಿ ತುರ್ತುಪರಿಸ್ಥಿತಿ ವಿರೋಧಿಸಿಜೈಲಿಗೆ, ಮೊದಲ ಬಾರಿಗೆ ಸಂಸದ., ಮಾಜಿಕೇಂದ್ರ ಕಾರ್ಮಿಕ ಸಚಿವ )
೨೭.      ರಾವ್ ಇಂದ್ರಜಿತ್ ಸಿಂಗ್ (ಗುರುಗ್ರಾಮ ಸಂಸದ, )
೨೮.     ಶ್ರೀಪಾದ ಯಶೋ ನಾಯಕ್ (ಉತ್ತರ ಗೋವಾ ಬಿಜೆಪಿ ಸಂಸದ.)
೨೯.      ಡಾ. ಜಿತೇಂದ್ರ ಸಿಂಗ್ (ಉಧಮ್ ಪುರ, ಜಮ್ಮು -ಕಾಶ್ಮೀರ.)
೩೦.      ಕಿರಣ್ ರಿಜಿಜು (ಅರುಣಾಚಲ ಪಶ್ಚಿಮ ಸಂಸದ (ಮಾಜಿ ಕೇಂದ್ರ ಗೃಹಖಾತೆ ರಾಜ್ಯ ಸಚಿವ- ಈಶಾನ್ಯ ರಾಜ್ಯದ ಬಿಜೆಪಿ ಪ್ರಮುಖ ನಾಯಕ.)
೩೧.      ಪ್ರಹ್ಲಾದ್ ಸಿಂಗ್ ಪಟೇಲ್ (ಮಧ್ಯಪ್ರದೇಶದ ಧಾಮೋಹ್ ಕ್ಷೇತ್ರದ ಸಂಸದ.)
೩೨.      ಆರ್.ಕೆ. ಸಿಂಗ್ (ಅರ್ಕಾರ ಕ್ಷೇತ್ರದ ಶಾಸಕ, ಮಾಜಿ ಇಂಧನ ಸಚಿವ, ಯುಪಿಎ ಅವಧಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ)
೩೩.      ಹರ್ದೀಪ್ ಸಿಂಗ್(ಪುರಿ, ಮಾಜಿ ನಗರಾಭಿವೃದ್ಧಿ ಸಚಿವ)
೩೪.     ಮನ್ ಸುಖ್ ಮಾಂಡವೀಯ ( ರಾಜ್ಯಸಭಾ ಸದಸ್ಯ, ಮಾಜಿ ರಸ್ತೆಸಾರಿಗೆ, ಹೆದ್ದಾರಿ, ರಸಗೊಬ್ಬರ ಸಚಿವ, ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ.)

ಸಹಾಯಕ ಸಚಿವರು:
೩೫.     ಫಗನ್ ಸಿಂಗ್ ಕುಲಸ್ತೆ
೩೬.      ಅಶ್ವಿನ್ ಕುಮಾರ್ ಚೌಬೆ
೩೭.      ಅರ್ಜುನ್ ರಾಮ್ ಮೇಘವಾಲ್ (ಬಿಕಾನೇರ್ ಬಿಜೆಪಿ ಸಂಸದ, ಮಾಜಿ ಹಣಕಾಸು ರಾಜ್ಯ ಸಚಿವ)
೩೮.     ಜನರಲ್ ವಿ.ಕೆ. ಸಿಂಗ್ (ಗಾಜಿಯಾಬಾದ್ ಬಿಜೆಪಿ ಸಂಸದ, ಮಾಜಿ ವಿದೇಶಾಂಗ ರಾಜ್ಯ ಸಚಿವ, ಮಾಜಿ ವಾಯುಪಡೆ ಮುಖ್ಯಸ್ಥ.)
೩೯.      ಕೃಷ್ಣಪಾಲ್ ಗುರ್ಜರ್ (ಹರಿಯಾಣದ ಫರೀದಾಬಾದ್ ಸಂಸದ)
೪೦.     ರಾವ್ ದಾನಸಾಹೇಬ್.
೪೧.     ಕಿಶನ್ ರೆಡ್ಡಿ (ಸಿಕಂದರಾಬಾದ್ ಬಿಜೆಪಿ ಸಂಸದ.ತೆಲಗಾಣ ಬಿಜೆಪಿ ಮುಖ್ಯಸ್ಥ.)
೪೨.     ಪುರುಷೋತ್ತಮ್ ರೂಪಾಲ (ರಾಜ್ಯಸಭಾಸದಸ್ಯ.)
೪೩.     ರಾಮದಾಸ್ ಅಠಾವಳೆ (ರಾಜ್ಯಸಭಾ ಸದಸ್ಯ - ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ ಪಿಐ) ಮುಖ್ಯಸ್ಥ, ಪ್ರಭಾವಿ ದಲಿತ ನಾಯಕ.)
೪೪.     ಸಾಧ್ವಿ ನಿರಂಜನ್ ಜ್ಯೋತಿ ((ಹಮೀರ್ ಪುರ ಬಿಜೆಪಿ ಸಂಸದೆ)
೪೫.     ಬಾಬುಲ್ ಸುಪ್ರಿಯೋ (ಅಸಾನ್ಸ ಸೋಲ್ ಕ್ಷೇತ್ರದ ಸಂಸದ- ಪಶ್ಚಿಮ ಬಂಗಾಳ- ಅತ್ಯಂತ ಕಿರಿಯ ಸಚಿವ)
೪೬.     ಸಂಜೀವ್ ಬಾಲ್ಯಾನ್ (ಮುಜಾಫರ್ ನಗರ - ಬಿಜೆಪಿಯ ಉಗ್ರ ಹಿಂದೂತ್ವವಾದಿ ಆರ್ ಎಲ್ ಡಿಯ ಅಜಿತ್ ಸಿಂಗ್ ಅವರನ್ನು ಸೋಲಿಸಿ ಲೋಕಸಭೆಗೆ ಪುನರಾಯ್ಕೆ, ಮಾಜಿ ಕೇಂದ್ರ ಸಚಿವ.)
೪೭.     ಧೋತ್ರೆ ಸಂಜಯ್ (ಪ್ರಥಮ ಬಾರಿಗೆ ಸಚಿವ)
೪೮.     ಅನುರಾಗ್ ಸಿಂಗ್ ಠಾಕೂರ್ (ಮಾಜಿ ಬಿಸಿಸಿಐ ಅಧ್ಯಕ್ಷ, ಹಿಮಾಚಲ ಪ್ರದೇಶ ಹಮೀರಪುರ ಬಿಜೆಪಿ ಸಂಸದ).
೪೯.     ಸುರೇಶ್ ಅಂಗಡಿ (ಬೆಳಗಾವಿ(ಕರ್ನಾಟಕ ) ಸಂಸದ- ೪ನೇ ಬಾರಿಗೆ ಆಯ್ಕೆಯಾಗಿರುವ ಕರ್ನಾಟಕದ ಬೆಳಗಾಗಿ ಸಂಸದ. ಮೊದಲ ಬಾರಿಗೆ ಸಚಿವ. )
೫೦.     ನಿತ್ಯಾನಂದ ರಾಂii (ಬಿಜೆಪಿಯ ಬಿಹಾರ ಮುಖ್ಯಸ್ಥ - ಉಪೇಂದ್ರ ಕುಶವಾಹ (ಆರ್ ಎಲ್ ಎಸ್ಪಿ) ಪರಾಭವಗೊಳಿಸಿದವರು.)
೫೧.     ರತನ್ ಲಾಲ್ ಕಠಾರಿಯಾ (ಹರಿಯಾಣ ಬಿಜೆಪಿ ನಾಯಕ. ಅಂಬಾಲಾ ಕ್ಷೇತ್ರದ ಸಂಸದ.)
೫೨.     ವಿ. ಮುರಳೀಧರನ್ (ರಾಜ್ಯಸಭಾ ಸದಸ್ಯ- ಅಮಿತ್ ಶಾ ಆಪ್ತ - ರಾಜ್ಯಸಭೆಗೆ ಮಹಾರಾಷ್ಟ್ರದಿಂದ ಆಯ್ಕೆ.)
೫೩.     ಶ್ರೀಮತಿ ರೇಣುಕಾ ಸಿಂಗ್ ಸರೂಟ (ಮೊದಲ ಬಾರಿಗೆ ಸಚಿವೆ- ಛತ್ತೀಸ್ ಗಢ ಬಿಜೆಪಿ ನಾಯಕಿ.)
೫೪.     ಸೋಮ್ ಪ್ರಕಾಶ್ (ಹೋಶಿಯಾರಪುರ ಬಿಜೆಪಿ ಸಂಸದ- ಜಲಂಧರ್ ಮಾಜಿ ಜಿಲ್ಲಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ, ಪ್ರಗ್ವಾರ್ ಕ್ಷೇತ್ರದ ಶಾಸಕರಾಗಿದ್ದರು.)
೫೫.     ರಾಮೇಶ್ವರ ತೇಲಿ (ಅಸ್ಸಾಂನ ದಿಬ್ರುಗಢ ಕ್ಷೇತ್ರದ ಸಂಸದ.)
೫೬.     ಪ್ರತಾಪ್ ಚಂದ್ರ ಸಾರಂಗಿ.
57. ಕೈಲಾಶ್ ಚೌಧರಿ.
58. ದೇಬಶ್ರೀ ಚೌಧರಿ

No comments:

Post a Comment