ಇದು
ವಿಶ್ವದ
ಅತೀದೊಡ್ಡ ವಿಮಾನ
ಲಾಸ್
ಏಂಜಲೀಸ್: ವಿಶ್ವದ ಅತೀ ದೊಡ್ಡ ವಿಮಾನ ಎಂದೇ ಪರಿಗಣಿಸಲಾಗಿರುವ ’ಜೋಡಿ ವಿಮಾನ-ರೋಕ್’ 2019 ಏಪ್ರಿಲ್ 14ರ ಭಾನುವಾರ ಅಮೆರಿಕದ ಕ್ಯಾಲಿಫೋರ್ನಿಯಾದ ಮೊಝಾವೇ
ಮರುಭೂಮಿಯಲ್ಲಿ ತನ್ನ ಚೊಚ್ಚಲ ಪರಿಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು.
ಮೈಕ್ರೋಸಾಫ್ಟ್‌ನ
ಮಾಜೀ ಸಹ ಸಂಸ್ಥಾಪಕರಲಿ ಒಬ್ಬರಾದ ಪೌಲ್ ಅಲೆನ್ ಅವರ ಸ್ಟ್ರಾಟೋ ಲಾಂಚ್ ಸಿಸ್ಟಮ್ಸ್ ಕಾರ್ಪ್ ಸಂಸ್ಥೆಯು
ನಿರ್ಮಿಸಿರುವ ಈ ದೈತ್ಯ ವಿಮಾನವು ಮುಂಬರುವ ದಿನಗಳಲ್ಲಿ ರಾಕೆಟುಗಳನ್ನೇ ಬಾಹ್ಯಾಕಾಶಕ್ಕೆ ಒಯ್ದು ಉಪಗ್ರಹಗಳನ್ನು
ಅಂತರಿಕ್ಷ ಕಕ್ಷೆಗೆ ಸೇರಿಸುವ ಕಾರ್‍ಯವನ್ನು ಸುಗಮಗೊಳಿಸುವ ಮಹಾನ್ ಉದ್ದೇಶಕ್ಕೆ ಬಳಕೆಯಾಗುವ ವಿಶ್ವಾಸ
ಇದೆ ಎಂದು ವಿಮಾನ ನಿರ್ಮಾಣ ಕಂಪೆನಿ ಹೇಳಿತು.
ಬಿಳಿಯ
ಬಣ್ಣದ ಈ ವಿಮಾನ ಅದೆಷ್ಟು ದೊಡ್ಡದಿದೆ ಅಂದರೆ ಅದರೆ ರೆಕ್ಕೆಗಳ ಗಾತ್ರ ಅಮೆರಿಕಾದ ಒಂದು ಫುಟ್‌ಬಾಲ್
ಮೈದಾನಕ್ಕಿಂತಲೂ ವಿಶಾಲವಾಗಿದೆ. ಇದು ಇದು ಒಂದು ಏರ್ ಬಸ್
ಎ೩೮೦ರ ೧.೫ ಪಟ್ಟಿನಷ್ಟಾಗುತ್ತದೆ.
ರೆಕ್ಕೆಯ
ನಿರ್ದಿಷ್ಟ ವಿಸ್ತೀರ್ಣ ೧೧೭ ಮೀಟರುಗಳು. ಏರ್ ಬಸ್ ಎ೩೮೦ರ ರೆಕ್ಕೆಯ ವಿಸ್ತೀರ್ಣ ಕೇವಲ ೮೦ ಮೀಟರುಗಳು. ಈ ಸಯಾಮಿ ಮಾದರಿಯ ’ಜೋಡಿ ವಿಮಾನ ಆರು ಬೋಯಿಂಗ್
೭೪೭ ಎಂಜಿನ್‌ಗಳನ್ನು ಹೊಂದಿದೆ.
ಭವಿಷ್ಯದ
ಬಾಹ್ಯಕಾಶ ವಿಜ್ಞಾನ ಕ್ಷೇತ್ರದಲ್ಲಿ ’ಆಟ ಪರಿವರ್ತಕ’ (ಗೇಮ್ ಚೇಂಜರ್) ಎಂದೇ
ಬಿಂಬಿತವಾಗಿರುವ ಈ ’ರೋಕ್’ ವಿಮಾನವು ಭಾನುವಾರದ
ತನ್ನ ಪರೀಕ್ಷಾರ್ಥ ಹಾರಾಟದಲ್ಲಿ ಸುಮಾರು ಎರಡು ಗಂಟೆಗಳವರೆಗೆ ಆಗಸದಲ್ಲಿ ಹಾರಾಡಿತು. ಬಳಿಕ ಮೊಝಾವೆಯಲ್ಲಿರುವ
ಏರ್ ಆಂಡ್ ಸ್ಪೇಸ್ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಯಿತು. ಇದಕ್ಕೆ ಮುನ್ನ ವಿಮಾನವನ್ನು ನೆಲದಲ್ಲಿ
ಮಾತ್ರವೇ ಪರೀಕ್ಷಿಸಲಾಗಿತ್ತು.
ಯಶಸ್ವೀ
ಹಾರಾಟದ ಬಳಿಕ ಬಂದಿಳಿದ ದೈತ್ಯ ವಿಮಾನವನ್ನು ಅದರ ಹಾರಾಟಕ್ಕೆ ಸಾಕ್ಷಿಯಾಗಿದ್ದ ನೂರಾರು ಜನರು ಹರ್ಷೋದ್ಘಾರದೊಂದಿಗೆ
ಸ್ವಾಗತಿಸಿದರು.
ಸ್ಟ್ರಾಟೋ
ಲಾಂಚ್ ಕಂಪೆನಿಯ ಸಂಸ್ಥಾಪಕ ಪೌಲ್ ಅಲೆನ್ ಅವರ ಕನಸಿನ ಕೂಸಾದ ಈ ’ಜೋಡಿ ವಿಮಾನ’ದ ನಿರ್ಮಾಣ ರೂಪುರೇಷೆಯನ್ನು ಪೌಲ್ ಅವರೇ ರೂಪಿಸಿದ್ದರು.
ಆದರೆ ಈ ವಿಮಾನ ಮಾದರಿ ನಿರ್ಮಾಣ ಹಂತದಲ್ಲಿರುವಾಗಲೇ ಅಂದರೆ ೨೦೧೮ ಅಕ್ಟೋಬರ್ ತಿಂಗಳಿನಲ್ಲಿ ಪೌಲ್
ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು.
ಪೌಲ್
ಅವರಿಂದ ೨೦೧೧ರಲ್ಲಿ ಸ್ಥಾಪಿಸಲ್ಪಟ್ಟ ಸ್ಟ್ರಾಟೋ ಲಾಂಚ್ ಕಂಪೆನಿಯು ತನ್ನ ಈ ಹೊಸ ಸಯಾಮಿ ಮಾದರಿಯ ರೋಕ್
ವಿಮಾನದ ಮೂಲಕ ೨೦೨೦ರ ಒಳಗೆ ಮೊದಲ ರಾಕೆಟ್ ಅನ್ನು ಅಂತರಿಕ್ಷಕ್ಕೆ ಉಡಾಯಿಸುವ ಗುರಿಯನ್ನು ಹೊಂದಿದೆ.
೫
ಲಕ್ಷ ಪೌಂಡ್‌ವರೆಗಿನ ತೂಕದ ರಾಕೆಟ್‌ಗಳು ಮತ್ತು ಇತರ ಬಾಹ್ಯಾಕಾಶ ವಾಹನಗಳನ್ನು ೩೫ ಸಾವಿರ ಅಡಿ ಅಂತರದ
ಕಕ್ಷೆಗೆ ಸೇರಿಸುವ ಸಾಮರ್ಥ್ಯವನ್ನು ಈ ’ಜೋಡಿ ವಿಮಾನ’ ಹೊಂದಿದೆ.
ರೋಕ್
ತನ್ನ ಪ್ರಯೋಗಾರ್ಥ ಹಾರಾಟ ಸಂದರ್ಭದಲ್ಲಿ ಭೂಮಿಯಿಂದ ೧೭,೦೦೦ ಅಡಿಗಳವರೆಗೆ ಅಥವಾ ೫,೧೮೨ ಮೀಟರಿನಷ್ಟು ಎತ್ತರಕ್ಕೆ ಏರಿ ಗಂಟೆಗೆ ಗರಿಷ್ಠ ೩೦೪
ಕಿಲೋ ಮೀಟರ್ (೧೮೯ ಮೈಲು) ವೇಗದಲ್ಲಿ ಹಾರಾಟ ನಡೆಸಿತು ಎಂದು ಸುದ್ದಿ ಮೂಲಗಳು ತಿಳಿಸಿದವು.
’ಎಂತಹ ಅದ್ಭುತ ಚೊಚ್ಚಲ ಹಾರಾಟ’ ಎಂದು ಸ್ಟ್ರಾಟೋ ಲಾಂಚ್‌ನ ಸಿಇಒ ಜೀನ್ ಫ್ಲಾಯ್ಡ್
ಉದ್ಘರಿಸಿದರು.
ಭವಿಷ್ಯದಲ್ಲಿ
ರಾಕೆಟ್ ಹಾಗೂ ಉಪಗ್ರಹಗಳ ಉಡಾವಣೆ ‘ಒಂದು ವಿಮಾನ ಬುಕ್ ಮಾಡಿದಷ್ಟೇ ಸುಲಭವಾಗಲಿದೆ.’ ಎಂದು ರೋಕ್ ನಿರ್ಮಾತೃ
ಕಂಪೆನಿ ಹೇಳಿತು.
ರಾಕೆಟನ್ನು
ಬಾಹ್ಯಾಕಾಶಕ್ಕೆ ಒಯ್ದು, ಅಂತರಿಕ್ಷದಲ್ಲಿ ಇಳಿಸಿ ಬಳಿಕ ರಾಕೆಟನ್ನು ಬೆಂಕಿಹತ್ತಿಸಿ ಕಾಯಿಸುವ ಮೂಲಕ
ಉಪಗ್ರಹಗಳನ್ನು ಕಕ್ಷೆಗೆ ಕೂರಿಸುವ ಕೆಲಸವನ್ನು ಮಾಡಲು ಸಾಧ್ಯವಾಗುವಂತೆ ಈ ’ಜೋಡಿ ವಿಮಾನ’ವನ್ನು ವಿನ್ಯಾಸಗೊಳಿಸಲಾಗಿದೆ.
ಉಪಗ್ರಹಗಳನ್ನು
ಅಂತರಿಕ್ಷ ಕಕ್ಷೆಗೆ ಸೇರಿಸಲು ಲಂಬಕೋನದಲ್ಲಿ ರಾಕೆಟುಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸುವ ಕ್ಲಿಷ್ಟಕರ
ವಿಧಾನಕ್ಕೆ ಬದಲಿಯಾಗಿ ಸರಳ ವಿಧಾನವನ್ನು ಈ ’ಜೋಡಿ ವಿಮಾನ’ ಒದಗಿಸಲಿದೆ.
ಏಕೆಂದರೆ ಈ ವಿಮಾನವನ್ನು ಗಗನಕ್ಕೆ ಹಾರಿಸಲು ಬೇಕಾಗುವುದು ಉದ್ದವಾದ ರನ್ ವೇ ಮಾತ್ರ.
ಏಕೆಂದರೆ ಈ ವಿಮಾನವನ್ನು ಗಗನಕ್ಕೆ ಹಾರಿಸಲು ಬೇಕಾಗುವುದು ಉದ್ದವಾದ ರನ್ ವೇ ಮಾತ್ರ.
ವಿಮಾನವನ್ನು
ಸ್ಕೇಲ್ಡ್ ಕಂಪೋಸೈಟ್ಸ್ ಎಂಬ ಎಂಜಿನಿಯರಿಂಗ್ ಕಂಪೆನಿಯು ನಿರ್ಮಿಸಿದೆ.
ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ
No comments:
Post a Comment