‘ಚೌಕಿದಾರ ಚೋರ್
ಹೈ’:
ರಾಹುಲ್
ಗಾಂಧಿಗೆ
ಸುಪ್ರೀಂ
ನೋಟಿಸ್
ನವದೆಹಲಿ: ನ್ಯಾಯಾಲಯ ನಿಂದನೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಕಾಂಗ್ರೆಸ್
ಅಧ್ಯಕ್ಷ
ರಾಹುಲ್
ಗಾಂಧಿ
ಅವರಿಗೆ
ಸುಪ್ರೀಂಕೋರ್ಟ್ 2019ರ ಏಪ್ರಿಲ್
15 ಸೋಮವಾರ
ನೋಟಿಸ್
ಜಾರಿ
ಮಾಡಿದೆ.
ಏಪ್ರಿಲ್
22ಕ್ಕೆ
ಮುನ್ನ
ನೋಟಿಸಿಗೆ
ಉತ್ತರ
ನೀಡುವಂತೆ
ಸುಪ್ರೀಂಕೋರ್ಟ್
ರಾಹುಲ್
ಗಾಂಧಿ
ಅವರಿಗೆ
ನಿರ್ದೇಶನ
ನೀಡಿದೆ.
‘ರಾಹುಲ್
ಗಾಂಧಿಯವರು
ನಾವು
ಹೇಳಿದ್ದೇವೆ
ಎಂಬುದಾಗಿ
ಏನನ್ನು
ಹೇಳಿದ್ದಾರೋ
ಅದನ್ನು
ನಾವು
ಎಂದೂ
ಹೇಳಿಲ್ಲ,’
ಎಂದು
ಹೇಳಿರುವ
ಮುಖ್ಯ
ನ್ಯಾಯಮೂರ್ತಿ
ರಂಜನ್
ಗೊಗೋಯಿ
ನೇತೃತ್ವದ
ಪೀಠವು, ರಾಹುಲ್
ವಿರುದ್ಧ
ಸಲ್ಲಿಸಲಾದ
ಕ್ರಿಮಿನಲ್
ನ್ಯಾಯಾಲಯ
ನಿಂದನೆ
ಪ್ರಕರಣದಲ್ಲಿ
ಕಾರಣ
ವಿವರಿಸುವಂತೆ
ಕೇಳಿ
ನೋಟಿಸ್
ಜಾರಿ
ಮಾಡಿತು.
ಬಿಜೆಪಿ
ಸಂಸತ್
ಸದಸ್ಯೆ
ಮೀನಾಕ್ಷಿ
ಲೇಖಿ
ಅವರು
ಸುಪ್ರೀಂಕೋರ್ಟಿನಲ್ಲಿ
ರಾಹುಲ್
ಗಾಂಧಿ
ಅವರ
ವಿರುದ್ಧ
ನ್ಯಾಯಾಲಯ
ನಿಂದನೆ
ಅರ್ಜಿ
ಸಲ್ಲಿಸಿ,
ಸುಪ್ರೀಂಕೋರ್ಟ್
ಇತ್ತೀಚೆಗೆ
ರಫೇಲ್
ಪ್ರಕರಣಕ್ಕೆ
ಸಂಬಂಧಿಸಿದಂತೆ
ನೀಡಿದ
ತೀರ್ಪಿನಲ್ಲಿ
ತಮ್ಮ
ಮಾತುಗಳನ್ನು
ಸುಪ್ರೀಂಕೋರ್ಟ್
ಹೇಳಿರುವುದಾಗಿ
ಹೇಳಿಕೆ
ನೀಡಿದ್ದು,
ಅವರ
ವಿರುದ್ಧ
ನ್ಯಾಯಾಲಯ
ನಿಂದನೆ
ಕ್ರಮ
ಜರುಗಿಸಬೇಕು
ಎಂದು
ಕೋರಿದ್ದರು.
ಮುಖ್ಯ
ನ್ಯಾಯಮೂರ್ತಿ
ರಂಜನ್
ಗೊಗೋಯಿ
ನೇತೃತ್ವದ
ಪೀಠವು
ಅರ್ಜಿಯನ್ನು
ಆಲಿಸಿತು.
ನವದೆಹಲಿ
ಸಂಸದೀಯ
ಕ್ಷೇತ್ರವನ್ನು
ಪ್ರತಿನಿಧಿಸುತ್ತಿರುವ
ಲೇಖಿ
ಅವರು
ತಮ್ಮ
ವೈಯಕ್ತಿಕ
ಹೇಳಿಕೆಯನ್ನು ರಾಹುಲ್ ಗಾಂಧಿಯವರು ಸುಪ್ರೀಂಕೋರ್ಟ್ ಹೇಳಿದೆಯೆಂದು ಹೇಳುವ ಮೂಲಕ ಪೂರ್ವಾಗ್ರಹ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆಪಾದಿಸಿದ್ದರು.
ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ‘ಚೌಕಿದಾರ್ ಚೋರ್ ಹೈ’ ಎಂಬುದಾಗಿ ಹೇಳಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿರುವುದಾಗಿ ವರದಿಯಾಗಿದೆ ಎಂದು ಲೇಖಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಪೀಠಕ್ಕೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಕಳವು ಮಾಡಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷರು ಏಪ್ರಿಲ್ 10ರಂದು ಪ್ರತಿಪಾದಿಸಿದ್ದರು.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
No comments:
Post a Comment