ನಾನು ಮೆಚ್ಚಿದ ವಾಟ್ಸಪ್

Saturday, April 27, 2019

ಬರಲಿದೆ 20 ರೂಪಾಯಿಯ ಹೊಸ ನೋಟು

ಬರಲಿದೆ 20 ರೂಪಾಯಿಯ ಹೊಸ ನೋಟು
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕು ಶೀಘ್ರದಲ್ಲೇ 20 ರೂಪಾಯಿ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡಲಿದೆ. ಹೊಸ ನೋಟುಗಳು ಹಸಿರು ಹಳದಿ ಬಣ್ಣವನ್ನು ಹೊಂದಿರಲಿದ್ದು ಮಹಾತ್ಮಾಗಾಂಧಿ ಸರಣಿಯ ಮುಂದುವರಿಕೆಯಾಗಿರುತ್ತದೆ.

20 ರೂಪಾಯಿಗಳ ಹೊಸ ನೋಟಿನ ಹಿಂಭಾಗದಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿದ್ದು ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.

ನೋಟಿನ ತಳಭಾಗದಲ್ಲಿ ಹಸಿರುಮಿಶ್ರತ ಹಳದಿ ಬಣ್ಣ ಇರಲಿದ್ದು, ಒಟ್ಟಾರೆ ಬಣ್ಣಗಳಿಗೆ ಹೊಂದುವಂತಹ ವಿನ್ಯಾಸಗಳನ್ನು ಹೊಂದಿರುತ್ತದೆ.

ಇದೇ ವೇಳೆಗೆ 20 ರೂಪಾಯಿ ಮುಖಬೆಲೆಯ ಹಿಂದಿನ ನೋಟುಗಳ ಚಲಾವಣೆ ಮುಂದುವರೆಯುತ್ತದೆ ಎಂದು ಆರ್ ಬಿಐ ತಿಳಿಸಿದೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


Thursday, April 25, 2019

ಗುಮ್ನಾಮಿ ಬಾಬಾ ಅವರೇ ನೇತಾಜಿ ಕೈಬರಹದ ಪತ್ರಗಳು ಬಹಿರಂಗ ಪಡಿಸಿದ ಸತ್ಯ

ಗುಮ್ನಾಮಿ ಬಾಬಾ ಅವರೇ ನೇತಾಜಿ
ಕೈಬರಹದ ಪತ್ರಗಳು ಬಹಿರಂಗ ಪಡಿಸಿದ ಸತ್ಯ
ನವದೆಹಲಿ: ಸ್ವಾತಂತ್ರ್ಯಾನಂತರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಗುಮ್ನಾಮಿ ಬಾಬಾ ಹೆಸರಿನಲ್ಲಿ  ಭಾರತದಲ್ಲೇ ಹಲವು ದಶಕಗಳ ಕಾಲ ಮಾರುವೇಶದಲ್ಲಿ ಬದುಕಿದ್ದುದು ಖಚಿತ ಎಂದು ಅಮೆರಿಕದ ಮುಂಚೂಣಿಯ  ಕೈಬರಹ ತಜ್ಞರು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೊಸ ಪುಸ್ತಕವೊಂದು ಪ್ರತಿಪಾದಿಸಿದೆ.

ನೇತಾಜಿ ಸುಭಾಶ್ಚಂದ್ರ ಬೋಸ್ ಮತ್ತು ಗುಮ್ನಾಮಿ ಬಾಬಾ ಅವರು ಬರೆದಿರುವ  ಪತ್ರಗಳ ಅಧ್ಯಯನದ ಬಳಿಕ ಅಮೆರಿಕದ ಹಸ್ತಾಕ್ಷರತಜ್ಞ ಕಾರ್ಲ್ ಬಗ್ಗೆಟ್ ಅವರು ತೀರ್ಮಾನಕ್ಕೆ ಬಂದಿದ್ದಾರೆ.

ಬಗ್ಗೆಟ್ ಅವರು ಕೈಬರಹಗಳ ಬಗ್ಗೆ ೪೦ ವರ್ಷಗಳಿಂದ ಅಧ್ಯಯನ ನಡೆಸುತ್ತಿರುವ ಹಸ್ತಾಕ್ಷರ ತಜ್ಞರಾಗಿದ್ದು, ೫೦೦೦ಕ್ಕೂ ಹೆಚ್ಚು ಪ್ರಕರಣಗಳ:ಲ್ಲಿ ಸಾಕ್ಷ್ಯ ನೀಡಿದ್ದಾರೆ. ಅಮೆರಿಕದ ಎಲ್ಲ ರಾಜ್ಯಗಳಲ್ಲೂ ಹಸ್ತಾಕ್ಷರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಗ್ಗೆಟ್ ಅವರು ಸಾಕ್ಷ್ಯ ನೀಡಿದ್ದಾರೆ. ಅಮೆರಿಕನ್ ಬ್ಯೂರೋ ಆಫ್ ಡಾಕ್ಯುಮೆಂಟ್ ಎಕ್ಸಾಮಿನರ್ಸ್ ಸಂಸ್ಥೆಯಿಂದ ಸರ್ಟಿಫಿಕೇಟ್ ಪಡೆದಿರುವ ಕಾರ್ಲ್ ಬಗ್ಗೆಟ್ ಅರು ಅಮೆರಿಕದ ವಿಶ್ವಸನೀಯ ಕೈ ಬರಹತಜ್ಞರೆಂದು ಖ್ಯಾತಿ ಗಳಿಸಿದ್ದಾರೆ.

ಕಾರ್ಲ್ ಬಗ್ಗೆಟ್ ಅವರಿಗೆ ಬರೆದವರ ಗುರುತು ವಿವರಗಳನ್ನು ನೀಡದೆಯೇ ಎರಡು ಪ್ರತಿ ಪತ್ರಗಳನ್ನು ವಿಶ್ಲೇಷಣೆ ಸಲುವಾಗಿ ನೀಡಲಾಗಿತ್ತು. ಪತ್ರಗಳನ್ನು ವಿಶ್ಲೇಷಿಸಿದ ಬಳಿಕ ಬಗ್ಗೆಟ್ ಅವರು  ಪತ್ರಗಳೆಲ್ಲವನ್ನೂ ಒಬ್ಬರೇ ವ್ಯಕ್ತಿ ಬರೆದದ್ದು ಎಂದು ಅಭಿಪ್ರಾಯ ನೀಡಿದರು. ಪತ್ರಗಳು ನೇತಾಜಿ ಸುಭಾಶ್ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ್ದು ಎಂದು ಬಳಿಕ ಅವರಿಗೆ ತಿಳಿಸಲಾಯಿತು. ಬಗ್ಗೆಟ್ ಅವರು ಆಗಲೂ ತಮ್ಮ ತೀರ್ಮಾನಕ್ಕೆ ಬದ್ದರಾದರು. ಮತ್ತು ತಮ್ಮ ಹೇಳಿಕೆಯನ್ನು ದೃಢಪಡಿಸಿ ಸಹಿ ಮಾಡಿಕೊಟ್ಟರು.

ದಾಖಲೆಗಳ ಪ್ರಕಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ೧೯೪೫ರ ಆಗಸ್ಟ್ ತಿಂಗಳಲ್ಲಿ ತೈವಾನಿನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರಾದರು ಎಂದು ಹೇಳಲಾಗುತ್ತಿದ್ದು ಅವರ ಚಿತಾಭಸ್ಮವನ್ನು ಬಳಿಕ ಟೋಕಿಯೋದ ರೆಂಕೋಜಿ ದೇವಾಲಯದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಭಾರತದಲ್ಲಿ ಬಹಳಷ್ಟು ಮಂದಿ ಇದನ್ನು ಇಂದಿಗೂ ನಂಬುತ್ತಿಲ್ಲ. ನೇತಾಜಿ ಅವರು ದುರಂತದಲ್ಲಿ ಬದುಕಿ ಉಳಿದಿದ್ದು ರಶ್ಯಾಕ್ಕೆ ತೆರಳಿದ್ದರೆಂದೂ, ಬಳಿಕ ಅಲ್ಲಿಂದ ಭಾರತಕ್ಕೆ ವಾಪಸಾಗಿ ಉತ್ತರಪ್ರದೇಶದ ಫೈಜಾಬಾದಿನಲ್ಲಿ ಗುಮ್ನಾಮಿ  ಬಾಬಾ ಹೆಸರಿನಲ್ಲಿ ದಶಕಗಳ ಕಾಲ ವಾಸವಾಗಿದ್ದರು ಎಂಬ ವಾದಗಳಿವೆ.

ಚಂದ್ರಚೂಡ ಘೋಷ್ ಮತ್ತು ಅನುಜ್ ಧರ್ ಅವರು ಬರೆದಿರುವಕೊನುಂಡ್ರಮ್: ಸುಭಾಶ್ ಬೋಸಸ್ ಲೈಫ್ ಆಫ್ಟರ್ ಡೆತ್((Conundrum: Subhas Bose’s Life After Death) ಹೆಸರಿನ ಹೊಸ ಪುಸ್ತಕವು ಗುಮ್ನಾಮಿ ಬಾಬಾ ಅವರು ಪವಿತ್ರ (ಪಬಿತ್ರ) ಮೋಹನ್ ರಾಯ್ ಅವರಿಗೆ ಬರೆದ ೧೩೦ ಪತ್ರಗಳ ಕಂತಿನ ಬಗ್ಗೆ ಪ್ರಸ್ತಾಪಿಸಿದೆ.
೧೯೬೨ರಿಂದ
೧೯೮೫ರ ನಡುವಣ ಅವಧಿಯಲ್ಲಿ ಪತ್ರಗಳನ್ನು ಬರೆಯಲಾಗಿದೆ. ರಾಯ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ (ಐಎನ್ ) ಸೇವೆ ಸಲ್ಲಿಸಿದ್ದು, ನೇತಾಜಿ ಅವರ ಆಪ್ತರಾಗಿದ್ದರು. ಪುಸ್ತಕದ ಪ್ರಕಾರ ಅವರು ಗುಮ್ನಾಮಿ ಬಾಬಾ ಅವರ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು ಮತ್ತು ಅವಧಿಯಲ್ಲಿ ಹಲವಾರು ಬಾರಿ ಬಾಬಾ ಅವರನ್ನ ಭೇಟಿ ಮಾಡಿದ್ದರು.

ಪುಸ್ತಕವು ಇತರ ಐಎನ್ ಸದಸ್ಯರು ಬರೆದ ಪತ್ರಿಕೆಗಳು ಸೇರಿದಂತೆ ೧೦,೦೦೦ ಪುಟಗಳ ದಾಖಲೆಯನ್ನೂ ಉಲ್ಲೇಖಿಸಿದೆ. ಐಎನ್ಎಯ   ಸದಸ್ಯರೂ ಇದೇ ಅವಧಿಯಲ್ಲಿ ಗುಮ್ನಾಮಿ ಬಾಬಾ ಅವರನ್ನು ಭೇಟಿ ಮಾಡಿದ್ದರು. ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ (ಆರ್ಟಿಐ) ದಾಖಲೆಗಳನ್ನು ಗ್ರಂಥಕರ್ತರು ನ್ಯಾಯಮೂರ್ತಿ ಮುಖರ್ಜಿ ಆಯೋಗದಿಂದ ಪಡೆದಿದ್ದಾರೆ.

ಗುಮ್ನಾಮಿ ಬಾಬಾ ಅವರು ರಾಯ್ ಅವರಿಗೆ ಬರೆದ ಪತ್ರಗಳು ಮತು ಇತರ ಕ್ರಾಂತಿಕಾರಿಗಳಿಗೆ ಬರೆದ ಪತ್ರಗಳ ಪರಿಶೀಲನೆ ಮತ್ತು ಬೋಸ್ ಅವರ ಬರವಣಿಗೆಗಳ ಜೊತೆ ಅವುಗಳನ್ನು ತುಲನೆ ಮಾಡಿದ ಬಳಿಕ ಕಾರ್ಲ್ ಬಗ್ಗೆಟ್ ಅವರು ಎರಡೂ ಕೈಬರಹಗಳು ಒಬ್ಬರೇ ವ್ಯಕ್ತಿಯದ್ದು ಎಂಬ ತೀರ್ಮಾನಕ್ಕೆ ಬಂದರು .
ತಮ್ಮ
ಪ್ರಮಾಣ ಪತ್ರದಲ್ಲಿ ಬಗ್ಗೆಟ್ಅವರು ಐಟಂಗಳ ವಿಸ್ತೃತವಾದ ವಿಶ್ಲೇಷಣೆಯ ನೆಲೆಯಲ್ಲಿ ಮತ್ತು ಅಂಗೀಕೃತ ವಿಧಿವಿಜ್ಞಾನ ಪರೀಕ್ಷಾ ಉಪಕರಣಗಳು ಮತ್ತು ಸಿದ್ಧಾಂತ ಹಾಗೂ ತಂತ್ರಗಳನ್ನು ಅನ್ವಯಿಸಿ ನಡೆಸಿದ ಪರಿಶೀಲನೆಯ ಬಳಿಕ, ಪರಿಚಿತ ಕೈಬರಹ (ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಕೈಬರಹ) ಮತ್ತು ಪ್ರಶ್ನಿತ ಕೈಬರಹ (ರಾಯ್ ಮತ್ತು ಇತರ ಕ್ರಾಂತಿಕಾರಿಗಳಿಂದ ಪಡೆದ ದಾಖಲೆಗಳಲ್ಲಿನ ಕೈಬರಹ) ಎರಡೂ  ಕೈ ಬರಹಗಳನ್ನೂ ಒಬ್ಬರೇ ವ್ಯಕ್ತಿ ಬರೆದಿದ್ದಾರೆ ಎಂಬದು ನನ್ನ ವೃತ್ತಿ ಪರಿಣತಿಯ ಅಭಿಪ್ರಾಯ ಎಂಬುದಾಗಿ ಬರೆದಿದ್ದಾರೆ.

ಹಾಗಿದ್ದರೆ ಬೋಸ್ ಅವರು ಅಜ್ಞಾತರಾಗಿ ಅಷ್ಟೊಂದು ವರ್ಷಗಳ ಕಾಲ ಇದ್ದದ್ದು ಏಕೆ ಎಂಬ ಪ್ರಶ್ನೆಗೂ ಪುಸ್ತಕ ಉತ್ತರವನು ಪಡೆಯಲು ಯತ್ನಿಸಿದೆ. ಗುಮ್ನಾಮಿ ಬಾಬಾ ಅವರು ಬರೆದಿರುವ  ಪತ್ರಗಳನ್ನು ಪರಿಶೀಲಿಸಿದ ಮಾನಸಿಕ ತಜ್ಞರು, ಬಹುಶಃ ರಶ್ಯಾದಲ್ಲಿ ನೀಡಲಾಗಿದ್ದ ಚಿತ್ರಹಿಂಸೆ ಪರಿಣಾಮವಾಗಿ ಬೋಸ್ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದಿರುವ ಸಾಧ್ಯತೆಗಳಿಗೆ ಎಂದು ಹೇಳಿದ್ದಾರೆ ಎಂದು ಪುಸ್ತಕ ತಿಳಿಸಿದೆ.

ಮಾನಸಿಕ ಆಘಾತದಿಂದ ಉಂಟಾಗುವಪೋಸ್ಟ್ ಟ್ರುಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ಎಂಬ  ಅಸ್ವಸ್ಥತೆಯು ಬೋಸ್ ಅವರು ಭೂಗತರಾಗಿ ಜೀವನ ನಡೆಸಲು ಕಾರಣವಾಗಿರಬಹುದು. ಅಸ್ವಸ್ಥತೆಯು ಅವರಲ್ಲಿ ಎಂದಾದರೂ ಒಮ್ಮೆ ತಪ್ಪು ಭ್ರಮೆಗಳು, ನೆನಪುಗಳನ್ನು ತರುತ್ತಿದ್ದಿರಬಹುದು. ಇತರರು ಬಾಬಾ ಅವರನ್ನು ದೇವ ಸಮಾನ ವ್ಯಕ್ತಿಯಾಗಿ ಪರಿಗಣಿಸುತ್ತಿದ್ದುದರಿಂದ ಅವರಿಗೆ ಬೋಸ್ ಅವರ ಮಾನಸಿಕ ಸ್ಥಿತಿಯನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಹೋಗಿರಬಹುದು ಎಂದು ಘೋಷ್ ಬರೆದಿದ್ದಾರೆ.

ರಾಯ್ ಕುಟುಂಬ ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿರುವ  ಪತ್ರಗಳು ಬೋಸ್ ಅವರಿಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯಾಧಾರವಾಗಬಹುದು ಮತ್ತು ಬೋಸ್ ಸಾವಿನ ಕುರಿತ ನಿಗೂಢ ಒಡೆಯಲುಬಹು ಆಯಾಮದ ತನಿಖೆ ಗೆ ಆದೇಶ ನೀಡುವಂತೆ ನ್ಯಾಯಾಲಯವನ್ನು ಕೋರಿ ಒತ್ತಡತರಲು ನೆರವಾಗಬಹುದು ಎಂದು ಪುಸ್ತಕದ ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಸೀಮಿತ ಸಂಪನ್ಮೂಲಗಳಿಂದ ಇಷ್ಟೊಂದು ವಿಶ್ಲೇಷಣೆ ನಡೆಸಲು ನಮಗೆ ಸಾಧ್ಯವಾಗಿರುವಾಗ, ಕೋರ್ಟ್ ಆದೇಶದ ಮೂಲಕ ತನಿಖೆ ನಡೆದರೆ ಇನ್ನಷ್ಟು ಹೆಚ್ಚಿನದನ್ನು ಸಾಧಿಸಬಹುದು. ಏಕೆಂದರೆ ನಮಗೆ ಲಭಿಸಿರುವ ದಾಖಲೆಗಳು ಶೇಕಡಾ ೨೦ರಷ್ಟು ಮಾತ್ರ ಎಂದು ಧರ್ ಹೇಳಿದ್ದಾರೆ.

Sunday, April 21, 2019

ಭೂ ದಿನ: ‘ಪ್ರಕೃತಿ’ ವರ್ಣಚಿತ್ರ ಪ್ರದರ್ಶನ

ಭೂ ದಿನ: ‘ಪ್ರಕೃತಿವರ್ಣಚಿತ್ರ ಪ್ರದರ್ಶನ
ಬೆಂಗಳೂರು: ಪ್ರಕೃತಿಗೂ  ಗೌತಮ ಬುದ್ಧ ಮತ್ತು ಆತ ಬೋಧಿಸಿದ ಬೌದ್ಧಮತಕ್ಕೂ ಅವಿನಾಭಾವ ಸಂಬಂಧವಿದೆ. ಸಂಬಂಧವನ್ನು ಚಿತ್ರಿಸಿರುವಪ್ರಕೃತಿವಿಶಿಷ್ಟ ವರ್ಣಚಿತ್ರ ಪ್ರದರ್ಶನವನ್ನು ಏಪ್ರಿಲ್ 22ಭೂ ದಿನ ಸಲುವಾಗಿ ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯ ನವರತನ್  ಕಲಾ ಗ್ಯಾಲರಿಯಲ್ಲಿ ಸಂಘಟಿಸಲಾಗಿದೆ.

ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಸ್ತುತ ಅರಣ್ಯಪಡೆಯ ಮುಖ್ಯಸ್ಥರಾಗಿರುವ ಎಂ. ಲೋಕೇಶ್ವರ ರಾವ್ (ಐಎಫ್ಎಸ್) ಅವರು ವರ್ಣ ಚಿತ್ರಗಳನ್ನು ರಚಿಸಿದ್ದಾರೆ.

          ಲೋಕೇಶ್ವರ ರಾವ್ ಅವರು ಪ್ರಸ್ತುತ ನಮ್ಮ ತಳಿಗಳನ್ನು ಸಂರಕ್ಷಿಸಲು ಯೋಜಿಸಲಾಗಿರುವಭೂ ದಿನ ಜಾಲ ಪ್ರಚಾರಾಭಿಯಾನದ ನಿರ್ದೇಶಕರೂ ಆಗಿದ್ದು ಏಪ್ರಿಲ್ 20ರಿಂದಲೇ ಆರಂಭವಾಗಿರುವ ವರ್ಣಚಿತ್ರ ಪ್ರದರ್ಶನವು ಏಪ್ರಿಲ್ 23ರವರೆಗೂ ಮುಂದುವರೆಯುತ್ತದೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ: