‘ವಿದ್ಯಾರ್ಣವ’ ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ಎಸ್ಪಿಬಿ
ಕನ್ನಡಿಗರ ಅಪೂರ್ವ ಪ್ರೀತಿಗೆ ಸದಾಋಣಿ’
ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕರೊಬ್ಬರು, ಮತ್ತೊಬ್ಬ ಮೇರುಗಾಯಕನನ್ನು ಅಭಿನಂದಿಸಿದ ಅಪೂರ್ವ ಕ್ಷಣಕ್ಕೆ ಗೋಕುಲಂ ಸಂಗೀತ ಶಾಲೆಯ ‘ಕಲಾರ್ಣವ’ ಸಂಗೀತ
ಕಾರ್ಯಕ್ರಮ ಸಾಕ್ಷಿಯಾಯಿತು.
ಗಜಲ್ ಗಾರುಡಿಗ ಹಾಗೂ ಹಿನ್ನೆಲೆ ಸಂಗೀತ ಮಾಂತ್ರಿಕ ಹರಿಹರನ್, ಖ್ಯಾತ ಹಿನ್ನೆಲೆ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಈ ಬಾರಿಯ ‘ವಿದ್ಯಾರ್ಣವ’ ಪ್ರಶಸ್ತಿ ಪ್ರದಾನ ಮಾಡಿದರು.
ಗೋಕುಲಂ ಸಂಗೀತ ಶಾಲೆ ಪ್ರತಿ ವರ್ಷ ಆಯೋಜಿಸುವ ಸಂಗೀತ ಹಬ್ಬದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವುದು ವಾಡಿಕೆ, ಅದರಂತೆ ಈ ಬಾರಿ ಗಾನ ಗಾರುಡಿಗ ಎಸ್ಪಿಬಿ ಅವರಿಗೆ ‘ವಿದ್ಯಾರ್ಣವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್ಪಿಬಿ,
ಕರುನಾಡಿನ ಜನತೆ ನನ್ನ ಮೇಲೆ ಇಟ್ಟಿರುವ ಈ ಅಪೂರ್ವ ಪ್ರೀತಿಗೆ ನಾನು ಸದಾಋಣಿ. ಇದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವುಕರಾದರು.
ಹೊಸ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಹೆಚ್ಚು ಹೆಚ್ಚು ಅವಕಾಶ ನೀಡುವಂತಾಗಬೇಕು.. ಜತೆಗೆ ಹಿರಿಯ ಗಾಯಕರು, ಸಂಗೀತಗಾರರು, ಸಂಗೀತ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಸಂಗೀತದ ಮೂಲಕವೇ ಎಸ್ಪಿಬಿ,
ತಮ್ಮ ತಾಯಿಗೆ ಭಾವಪೂರ್ಣ ಗಾನನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಇದೇವೇಳೆ, ಶೀಘ್ರ ಚಿತ್ರಕಲಾವಿದ ವಿಲಾಸ್ ನಾಯಕ್, ಖ್ಯಾತ ಸ್ಯಾಂಡ್ ಆರ್ಟಿಸ್ಟ್ ರಾಘವೇಂದ್ರ ಹೆಗ್ಡೆ ಮತ್ತು ಖ್ಯಾತ ನೆರಳು ಬೆಳಕಿನಾಟದ ಮಾಂತ್ರಿಕ ಪ್ರಹ್ಲಾದ ಆಚಾರ್ಯ ಅವರಿಗೆ ‘ಕಲಾವತಂಸ’ ಪ್ರಶಸ್ತಿ
ಪ್ರದಾನ ಮಾಡಲಾಯಿತು.
ಖ್ಯಾತ ಶಾಡೋ ಪ್ಲೇಯರ್ ಪ್ರಹ್ಲಾದ ಆಚಾರ್ಯ ಅವರ ಬೆರಳುಗಳ ಕೈಚಳಕದಲ್ಲಿ ಕನ್ನಡ ರೋಮಾಂಚನವೀ ಕನ್ನಡ.. ಸಿನಿಮಾಗೀತೆಗೆ ಮೂಡಿಬಂದಿದ್ದು ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಸ್ಯಾಂಡ್ ಆರ್ಟಿಸ್ಟ್ ರಾಘವೇಂದ್ರ ಹೆಗ್ಡೆ ಅವರ ಮರಳಿನ ಕಲೆಯಲ್ಲಿ ಹಿಂದೂಸ್ಥಾನವು ಎಂದೂ ಮರೆಯದ.. ಎಂಬ ಹಾಡು ಅಲೆಅಲೆಯಾಗಿ ತೇಲಿಬಂತು.
ಶತಾವಧಾನಿ ಡಾ.ಆರ್.ಗಣೇಶ್, ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕ ವಿಜಯ ಪ್ರಕಾಶ್, ‘ಗೋಕುಲಂ’ ಸಂಗೀತ
ಶಾಲೆಯ ಮುಖ್ಯಸ್ಥ ವೇಣುಗೋಪಾಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
No comments:
Post a Comment