ನಾನು ಮೆಚ್ಚಿದ ವಾಟ್ಸಪ್

Thursday, June 16, 2016

ಈ ಅರೆ ಉಪಗ್ರಹ ಭೂಮಿಯ ನಿರಂತರ ಗೆಳೆಯ !

ಅರೆ ಉಪಗ್ರಹ ಭೂಮಿಯ

ನಿರಂತರ ಗೆಳೆಯ !
ನಾಸಾ:  ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಜೊತೆ ಜೊತೆಗೇ ಸಾಗುವ ಇನ್ನೊಂದು ಕಾಯ ಇರುವುದು ಗೊತ್ತೇ?


ಹೌದು. ಭೂಮಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಕ್ಷುದ್ರ ಗ್ರಹವೊಂದು ಭೂಮಿಯ ಜೊತೆ ಜೊತೆಗೇ ಸಾಗುತ್ತಿರುವುದು ಬೆಳಕಿಗೆ ಬಂದಿದೆ.ಇದು ಚಂದ್ರನಂತೆ ಇರುವ ಉಪಗ್ರಹ  ಅಲ್ಲ.  ಅತ್ಯಂತ ಪುಟ್ಟಗಾತ್ರದ ಕ್ಷುದ್ರಗ್ರಹ. ಇದು 120 ಅಡಿಗಳಿಗಿಂತ ವಿಶಾಲ ಆದರೆ 300 ಅಡಿಗಳಿಗಿಂತ ಕಡಿಮೆ ಗಾತ್ರ ಇರಬಹುದು ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.ಅನಾದಿ ಕಾಲದಿಂದ ಭೂಮಿಯ ಜೊತೆಗೇ ಹೆಜ್ಜೆ ಹಾಕುತ್ತಿರುವ ಅರೆ ಉಪಗ್ರಹ ಮುಂದಿನ ಶತಮಾನಗಳ ಕಾಲವೂ ಭೂಮಿಯೊಂದಿಗೆ ಹೀಗೆಯೇ ಹೆಜ್ಜೆ ಹಾಕಲಿದೆ ಎಂದಿದ್ದಾರೆ ವಿಜ್ಞಾನಿಗಳುಇದಕ್ಕೆ ಅವರು  ‘2016 ಎಚ್ಓ 3’ ಎಂಬುದಾಗಿ ಹೆಸರು ಕೊಟ್ಟಿದ್ದಾರೆ.

ಭೂಮಿ ತನ್ನಪಥದಲ್ಲಿ ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಅರೆ ಉಪಗ್ರಹಭೂಮಿಯ ಜೊತೆ  ಜೊತೆಗೇ ಸೂರ್ಯನಿಗೆ ಸುತ್ತು ಹಾಕುತ್ತದೆ. ವಿಶೇಷವೆಂದರೆ ಕೆಲವೊಮ್ಮೆ ಭೂಮಿಯ ಹಿಂದಿನಿಂದ ಸಾಗಿದರೆ, ಕೆಲವೊಮ್ಮೆ ಭೂಮಿಯಿಂದ ಮುಂದಕ್ಕೆ ಓಡುತ್ತದೆ. ಅದರ ಚಲನೆಯಯನ್ನು ಗಮನಿಸಿದರೆ ಮಕ್ಕಳು ಆಡುವಹೊಳೆ ದಡಆಟ ನೆನಪಾಗಬಹುದು.

      ಅರೆ ಉಪಗ್ರಹಕ್ಕೆ ಸಂಬಂಧಿಸಿ ವಿಡಿಯೋ ಒಂದು ಇಲ್ಲಿದೆ. ಕೆಳಗಿನ ಚಿತ್ರ ಕ್ಲಿಕ್ಕಿಸಿ:

No comments:

Post a Comment