Friday, June 3, 2016

ಬೆಂಗಳೂರಿನಲ್ಲಿ ‘ಕಲಾರ್ಣವ- ೨೦೧೬’

ಬೆಂಗಳೂರಿನಲ್ಲಿ ಕಲಾರ್ಣವ- ೨೦೧೬
ಜೂನ್ ಮತ್ತು ೫ರಂದು
ಬೆಂಗಳೂರು: ಅಬ್ಬಬ್ಬಾ ! ಒಂದೇ ಸೂರಿನಡಿಯಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಹಬ್ಬದ ದಿಬ್ಬಣ. ಅಲ್ಲಿ ಸಂಗೀತವಿದೆ. ನೃತ್ಯವಿದೆ. ನೃತ್ಯ ರೂಪಕವಿದೆ. ಹಾಸ್ಯವಿದೆ. ಅತಿರಥ ಮಹಾರಥ ಕಲಾವಿದರು, ಸಂಗೀತ ಲೋಕದ ದಿಗ್ಗಜರ ಒಟ್ಟು ಸೇರುವಿಕೆಯಿದೆ, ಹೆಸರು ಕಲಾರ್ಣವ. ಅರ್ಥಾತ್ ಕಲಾಸಾಗರ.

ಜೂನ್ ಮತ್ತು ಶನಿವಾರ ಭಾನುವಾರದಂದು ಬೆಂಗಳೂರಿನ ಜನತೆಗೆ ಇದು ವೀಕೆಂಡ್ ವಿಶೇಷ. ವರ್ಷದಿಂದ ವರ್ಷಕ್ಕೆ ಹಲವು ಹೊಸತನಗಳ ಮೂಲಕ ಸಂಗೀತ, ಸಾಂಸ್ಕೃತಿಕ ಆಸಕ್ತರು ಹುಬ್ಬೇರುವಂತೆ ಮಾಡುವ ಕಲಾರ್ಣವ-೨೦೧೬ ಅನ್ನು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ದಯಾನಂದ ಸಾಗರ ಕಾಲೇಜ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ನಗರದ
ಗೋಕುಲಂ ಸಂಗೀತ ಶಾಲೆ ಕಾರ್ಯಕ್ರಮದ ಪ್ರೇರಕ ಶಕ್ತಿ. ದಿನವಿಡೀ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ಹಿರಿಯ- ಕಿರಿಯ ಸಂಗೀತಗಾರರು ನೃತ್ಯಕಲಾವಿದರು ಕಲೆಯ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ.

ದಯಾನಂದ ಸಾಗರ ಕಾಲೇಜ್ ಆಫ್ ಎಂಜಿನಿಯರಿಂಗ್, ದಯಾನಂದ ಸಾಗರ ಯುನಿವರ್ಸಿಟಿ ಮತ್ತು ಡಾ. ಡಿ.ಪ್ರೇಮಚಂದ್ರ ಸಾಗರ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ಸಹಯೋಗದಲ್ಲಿ ಗೋಕುಲಂ ಸಂಗೀತ ಶಾಲೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ. ಗೋಕುಲಂ ಸಂಗೀತ ಶಾಲೆ, ಖ್ಯಾತ ಕೊಳಲುವಾದಕರಾದ ವೇಣುಗೋಪಾಲ್ ಅವರ ಪರಿಕಲ್ಪನೆಯ ಕೂಸು.

ಕಾರ್ಯಕ್ರಮ ವೈವಿಧ್ಯ :
ಕೃಷ್ಣ ಲೀಲಾರ್ಣವ:  ಭಾರತದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಬಳಸಿ ಕೃಷ್ಣ ಲೀಲಾರ್ಣವ ರೂಪಕಕ್ಕೆ ನೃತ್ಯ ಸಂಯೋಜನೆ ಮಾಡಲಾಗಿದೆ. ಇದು ಬಾರಿಯ ವಿಶೇಷ. ಹುಟ್ಟಿನಿಂದ- ಭಗವದ್ಗೀತೆಯವರೆಗೆ ಕೃಷ್ಣನ ಅದ್ಭುತ, ರಮ್ಯ ಸಾಹಸಗಾಥೆಯನ್ನು ಸಾರುವ ವಿಶಿಷ್ಟ ನೃತ್ಯರೂಪಕ ಇದಾಗಿದ್ದು, ೧೦ಕ್ಕೂ ಹೆಚ್ಚು ನೃತ್ಯಪಟುಗಳ ತಂಡಗಳು, ಕೃಷ್ಣ ಲೀಲಾರ್ಣವ ನೃತ್ಯರೂಪಕವನ್ನು ಪ್ರಸ್ತುತಪಡಿಸುತ್ತಿರುವುದು ವಿಶೇಷಸುಮಾರು ೧೨೦ಕ್ಕೂ ಹೆಚ್ಚು ಮಂದಿ ನೃತ್ಯಪಟುಗಳ ನಾಟ್ಯದಲ್ಲಿ ಕೃಷ್ಣಲೀಲಾಮೃತದ ಮಂಥನ ನಡೆಯಲಿದೆ.

 ಮರು ಭೂಮಿ ಸಂಗೀತ ಬೆಂಗಳೂರಿನಲ್ಲಿ :  ಖ್ಯಾತ ರಾಜಸ್ತಾನಿ ಜಾನಪದ ಸಂಗೀತಗಾರ ಮಂಗನಿಯಾರ್ ದಿಯು ಖಾನ್ ಅವರಿಂದ ರಾಜಸ್ತಾನಿ ಜಾನಪದ ಸಂಗೀತ. ಕಮೈಚಾರ್, ಕರ್‌ತಾಲ್ ಮತ್ತು ಡೋಲಕ್ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿ ಹಾಡುವ ರಾಜಸ್ತಾನದ ಜಾನಪದ ಸಂಗೀತ ಕೇಳುವುದೇ ಒಂದು ಖುಷಿ. ಬಾರಿ ಇಂಥ ವಿಶಿಷ್ಟ ಮರುಭೂಮಿಯ ಜಾನಪದ ಸಂಗೀತ ಕಲಾರ್ಣವದಲ್ಲಿ ಕೇಳಿಬರಲಿದೆ.
ಇಷ್ಟೇ ಅಲ್ಲ, ತಾಳಯೋಗಿ ಎಂದೇ ಖ್ಯಾತರಾಗಿರುವ ಪಂ. ಸುರೇಶ್ ತಲ್ವಲ್ಕರ್ ಅವರಿಂದ ತಾಳಕೀರ್ತನ್ ಎಂಬ ಶಾಸ್ತ್ರೀಯ ಕೀರ್ತನೆ. ರಂಗ ಸೌರಭದಿಂದ ಗಂಗಾವತರಣಶತಾವಧಾನಿ ಡಾ. ಆರ್ ಗಣೇಶ್ ಅವರಿಂದ ಬೆಳ್ಳಿತೆರೆಯ ಹೊನ್ನಿನ ಹಾಡು ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ದಕ್ಷಿಣ ಭಾರತದ ಎವರ್‌ಗ್ರೀನ್ (ನಿತ್ಯನೂತನ) ಸಿನಿಮಾ ಗೀತೆಗಳ ಸಾಹಿತ್ಯದ ಕುರಿತು ವಿಶಿಷ್ಟ ವಿಶ್ಲೇಷಣೆ ನಡೆಸಲಿದ್ದಾರೆ. ಪ್ರೊ. ಕೃಷ್ಣೇಗೌಡರಿಂದ ಚಟಾಕಿ, ಪ್ರವೀಣ್ ಡಿ ರಾವ್ ಅವರ ಪುತ್ರ ಸೂರ್ಯ ಪ್ರವೀಣ್ ಅವರಿಂದ, ಸ್ಟ್ರಮ್ ಸ್ಟೇಷನ್, ಖ್ಯಾತ ಕಲಾವಿದರಾದ ವಿಲಾಸ್ ನಾಯಕ್, ರಾಘವೇಂದ್ರ ಹೆಗಡೆ ಪ್ರಹ್ಲಾದ ಆಚಾರ್ಯ, ವಿನೋದ್ ಗೌಡ ಮತ್ತು ಸಹ ಕಲಾವಿದರಿಂದ ವಿಷುವಲ್ ಆರ್ಟ್... ಹೀಗೆ ತರಾವರಿ ಕಾರ್ಯಕ್ರಮಗಳ ಉತ್ಸವ ಕಲಾಭಿಮಾನಿಗಳನ್ನು ಕೈ ಬೀಸಿ ಕರೆಯಲಿದೆ.

ಖ್ಯಾತ ದ್ವಂದ್ವ ಪಿಟೀಲು ವಾದಕರಾದ ಶ್ರೀ ಮೈಸೂರು ನಾಗರಾಜ್ ಹಾಗೂ ಡಾ. ಶ್ರೀ ಮೈಸೂರು ಮಂಜುನಾಥ್ ಲಯತರಂಗ ತಂಡದೊಂದಿಗೆ ವಿಶಿಷ್ಟ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಕು.ವಾರಿಜಶ್ರೀ ಮತ್ತು ವರುಣ್ ಪ್ರದೀಪ್ ಅವರಿಂದ ಮೆಡ್ಲಿ ಕಾರ್ಯಕ್ರಮ ನಡೆಯಲಿದೆ.  ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾಜಿ ಸಚಿವ ಆರ್. ಅಶೋಕ್ ಪಾಲ್ಗೊಳ್ಳಲಿದ್ದಾರೆ.


ವಿದ್ಯಾರ್ಣವ ಮತ್ತು ಕಲಾವತಂಸ ಪ್ರಶಸ್ತಿ ಬಾರಿ ಶ್ರೇಷ್ಠ ವಿದ್ವಾಂಸರಿಗೆ ಹಾಗೂ ಕಲಾವಿದರಿಗೆ ವಿದ್ಯಾರ್ಣವ ಮತ್ತು ಕಲಾವತಂಸ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಾನ ಗಾರುಡಿಗ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಖ್ಯಾತ ಗಾಯಕ ಹರಿಹರನ್ ವಿದ್ಯಾರ್ಣವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜತೆಗೆ ವೇಗದ ಚಿತ್ರಕಲಾವಿದ ಎಂದೇ ಖ್ಯಾತರಾಗಿರುವ ವಿಲಾಸ್ ನಾಯಕ್, ಖ್ಯಾತ ಸ್ಯಾಂಡ್ ಆರ್ಟಿಸ್ಟ್ (ಮರಳು ಚಿತ್ರಕಾರ) ರಾಘವೇಂದ್ರ ಹೆಗಡೆ ಮತ್ತು ಖ್ಯಾತ ನೆರಳು ಬೆಳಕಿನಾಟದ ಮಾಂತ್ರಿಕ ಪ್ರಹ್ಲಾದ ಆಚಾರ್ಯ ಅವರಿಗೆ ಕಲಾವತಂಸ ಪ್ರಶಸ್ತಿ ನೀಡಲಾಗುವುದು.

No comments:

Post a Comment