ನಾನು ಮೆಚ್ಚಿದ ವಾಟ್ಸಪ್

Wednesday, January 20, 2016

ಇಂದಿನ ಇತಿಹಾಸ History Today ಜೂನ್ 14

 

ಇಂದಿನ ಇತಿಹಾಸ
ಜೂನ್ 14

ಮನೆಗೆಲಸದವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಬಾಲಿವುಡ್ ನಟ ಶಿನೆ ಅಹುಜಾ ಅವರನ್ನು ವಿಚಾರಣೆಗಾಗಿ ಬಂಧಿಸಿದ ಪ್ರಸಂಗ ಮುಂಬೈಯ ಒಶಿವಾರಾ ಉಪನಗರದಲ್ಲಿ ಘಟಿಸಿತು ಅಹುಜಾ ಅವರ ಮನೆಯ ಕೆಲಸದಾಕೆ ತನ್ನ ಮೇಲೆ ಅಹುಜಾ ಅತ್ಯಾಚಾರ ನಡೆಸಿದರು ಎಂದು ಸ್ವತಃ ದೂರು ನೀಡಿದ್ದರಿಂದ ಅಹುಜಾ ಅವರನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಡಿಸಿಪಿ ನಿಕೇತ್ ಕೌಶಿಕ್ ತಿಳಿಸಿದರು
2016: ರೋಮ್: ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರ ಸಂಘಟನೆಯ ಮುಖಂಡ ಅಬುಬಕರ್ ಅಲ್ ಬಗ್ದಾದಿ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯು ದಾಳಿಯಲ್ಲಿ ಹತ್ಯೆಯಾಗಿರುವುದನ್ನು ಐಸಿಸ್ ದೃಢ ಪಡಿಸಿರುವುದಾಗಿ ವರದಿಗಳು ಈದಿನ ತಿಳಿಸಿದವು. ಉತ್ತರ ಸಿರಿಯಾದ ರಖ್ಖಾ ಎಂಬಲ್ಲಿ ರಂಜಾನಿನ ಐದನೇ ದಿನ ಅಮೆರಿಕಾ ನಡೆಸಿದ ದಾಳಿಯಲ್ಲಿ ಅಬುಬಕರ್ ಅಲ್ ಬಗ್ದಾದಿ ಹತ್ಯೆಯಾಗಿರುವುದಾಗಿ ಐಸಿಸ್ ಸ್ವಾಮ್ಯದ ಅರಬಿಕ್ ಸುದ್ದಿ ಸಂಸ್ಥೆ ಅಲ್-ಅಮಾಖ್ನ್ನು ಉಲ್ಲೇಖಿಸಿ ಟರ್ಕಿ ಪತ್ರಿಕೆ ಎನ್ನಿಸ್ ಸಫಕ್ ವರದಿ ಮಾಡಿತು.
ಇದಕ್ಕೆ ಮುನ್ನ ಮೊಸುಲ್ ನಗರದಿಂದ 65 ಕಿಮೀ. ದೂರದ ಪ್ರದೇಶವೊಂದರಲ್ಲಿ ಜೂನ್ 12ರ ಭಾನುವಾರ ಮಿತ್ರಪಡೆಗಳು ನಡೆಸಿದ ವಾಯುದಾಳಿಯಲ್ಲಿ ಬಗ್ದಾದಿ ಮತ್ತು ಇತರರು ತೀವ್ರವಾಘಿ ಗಾಯಗೊಂಡಿರುವುದಾಗಿ ಇರಾಕಿ ಟಿವಿ ವಾಹಿನಿ ವರದಿ ಮಾಡಿತ್ತು.
2016: ಮುಂಬೈ: ಬ್ಯಾಂಕ್ ಸಾಲ ಮರುಪಾವತಿ ವಿಷಯದಲ್ಲಿ ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಮುಂಬೈಯ ವಿಶೇಷ ನ್ಯಾಯಾಲಯವು ಉದ್ಯಮಿ ವಿಜಯ್ ಮಲ್ಯ ಅವರು ಘೋಷಿತ ಅಪರಾಧಿ ಎಂದು ಘೋಷಿಸಿತು. ಸದ್ಯ ಲಂಡನ್ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಅವರುಗೆ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತನ್ನ ಮುಂದೆ ಹಾಜರಾಗುವಂತೆ ಹಲವಾರು ಬಾರಿ ಜಾರಿ ನಿರ್ದೇಶನಾಲಯವು ನಿರ್ದೇಶನ ನೀಡಿತ್ತು. ಮಲ್ಯ ಅವರು ಇದಕ್ಕೆ ಸ್ಪಂದಿಸದ ಕಾರಣ ಅವರನ್ನು ಘೋಷಿತ ಅಪರಾಧಿ ಎಂಬುದಾಗಿ ಘೋಷಿಸುವಂತೆ ಜಾರಿ ನಿರ್ದೇಶನಾಲಯ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಘೋಷಿತ ಅಪರಾಧಿ ಎಂಬುದಾಗಿ ಘೋಷಿಸಿದ್ದರಿಂದ ಕಾನೂನಿನ ಪ್ರಕಾರ ಈಗ ಮಲ್ಯ ಅವರು ಮುಂದಿನ 30 ದಿನಗಳ ಒಳಗಾಗಿ ನ್ಯಾಯಾಲಯವು ಸೂಚಿಸಿದ ಸ್ಥಳದಲ್ಲಿ, ಸೂಚಿಸಿದ ವೇಳೆಗೆ ಹಾಜರಾಗಬೇಕಾಗುತ್ತದೆ. ಆರೋಪಿಯನ್ನು ಹಾಜರಾಗುವಂತೆ ಮಾಡಲು ಇದು ಏಕೈಕ ಪರಿಣಾಮಕಾರಿ ಕ್ರಮವಾಗಿದೆ. ಹಾಜರಾಗದೇ ಇದ್ದಲ್ಲಿ ಅವರ ಎಲ್ಲಾ ಆಸ್ತಿಪಾಸ್ತಿಯನ್ನೂ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಬಹುದಾಗಿದೆಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿಯನ್ನು ಕೂಡಾ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇಡಿ ಈಗಾಗಲೇ ಮಲ್ಯರ ಪಾಸ್ಪೋರ್ಟ್ ರದ್ದುಗೊಳಿಸಿದ್ದು, ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಬಹುದಾದ ಮುನ್ಸೂಚನೆ ನೀಡಿತ್ತು.  ಮಲ್ಯರಿಗೆ ಆಶ್ರಯ ನೀಡದಂತೆ ಬ್ರಿಟನ್ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಘೋಷಿತ ಅಪರಾಧಿಯಾದ ಮಲ್ಯರನ್ನು ವಿಚಾರಣೆಗೆ ಸ್ವದೇಶಕ್ಕೆ ಕರೆತರುವ ಕಾರ್ಯವನ್ನು ಜಾರಿ ನಿರ್ದೇಶನಾಲಯ ಚುರುಕುಗೊಳಿಸಲಿದೆ ಎಂದು ಮೂಲಗಳು ಹೇಳಿದವು.

2016: ನವದೆಹಲಿ: ದೆಹಲಿಯ ಆಮ್ ಆದ್ಮಿ ಸರ್ಕಾರದ ಸಾರಿಗೆ ಸಚಿವ ಗೋಪಾಲ್ ರೈ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಲೋಕೋಪಯೋಗಿ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಸಾರಿಗೆ ಇಲಾಖೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿದವು. ಗೋಪಾಲ್ ರೈ ಅವರು ತಮ್ಮ ಕತ್ತಿನಲ್ಲಿ 17 ವರ್ಷಗಳಿಂದ ಇದ್ದ ಬುಲೆಟ್ ತೆಗೆಯಲು ನಡೆದ ಸರ್ಜರಿಯ ಹಿನ್ನೆಲೆಯಲ್ಲಿ ತಮ್ಮನ್ನು ಸಚಿವಾಲಯ ಕರ್ತವ್ಯದಿಂದ ಮುಕ್ತರನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮನವಿ ಮಾಡಿದ್ದರು. ರೈ ಅವರು ಆಪ್ ಸರ್ಕಾರದಲ್ಲಿ ಹಲವಾರು ಸಾರಿಗೆ ಯೋಜನೆಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದರು. ಪ್ರಸ್ತುತ ಬೆನ್ನಹುರಿ ಚಿಕಿತ್ಸಾ ಕೇಂದ್ರದಲ್ಲಿ ಅವರು ಫಿಸಿಯೋಥೆರೆಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೈ ಅವರು ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ಹೊಣೆಯನ್ನೂ ಹೊಂದಿದ್ದರು. ಶಸ್ತ್ರಚಿಕಿತ್ಸೆ ಬಳಿಕದ ಪರಿಸ್ಥಿತಿಯಲ್ಲಿ ತಮಗೆ ಸಚಿವರಾಗಿ ನಿರ್ವಹಿಸಬೇಕಾದ ಹೊಣೆಗಾರಿಕೆಗೆ ನ್ಯಾಯ ಒದಗಿಸಲಾಗುತ್ತಿಲ್ಲ ಎಂದು ಅವರು ಕೇಜ್ರಿವಾಲ್ ಅವರಿಗೆ ತಿಳಿಸಿದ್ದರು ಎಂದು ಹೇಳಲಾಯಿತು.

2016: ಕ್ಯಾಲಿಫೋರ್ನಿಯಾ: ಭೂಮಿಯಿಂದಾಚೆ ಏಕಕಾಲದಲ್ಲಿಜೋಡಿ ಸೂರ್ಯರನ್ನು ಸುತ್ತುತ್ತಿರುವ, ಹೆಚ್ಚೂಕಡಿಮೆ ಗುರು ಗ್ರಹದಷ್ಟೇ ದೊಡ್ಡದಾದ ಇನ್ನೊಂದು ಗ್ರಹಕೆಪ್ಲರ್​1647ಬಿಇರುವುದನ್ನು ಪತ್ತೆ ಮಾಡಲಾಗಿದೆ ಮೇರಿಲ್ಯಾಂಡ್ನಲ್ಲಿರುವ ಗಾಡ್ಗಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಮತ್ತು ಸ್ಯಾನ್ ಡೀಗೋ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞರ ತಂಡ, ಕೆಪ್ಲರ್ ದೂರದರ್ಶಕದ ಸಹಾಯದೊಂದಿಗೆ ಇಂತಹದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾಗಿ ಹೇಳಿಕೊಂಡಿದೆ. ಸ್ಯಾನ್ ಡೀಗೋನಲ್ಲಿ ನಡೆದ ಅಮೆರಿಕ ಖಗೋಳಶಾಸ್ತ್ರಜ್ಞರ ಒಕ್ಕೂಟದ ಸಭೆಯ ಬಳಿಕ ಸಂಶೋಧನೆಯ ಮಾಹಿತಿಯನ್ನು ನೀಡಲಾಯಿತು. ಬಾಹ್ಯಾಕಾಶದಲ್ಲಿ ಗ್ರಹವೊಂದುಜೋಡಿ ನಕ್ಷತ್ರವ್ಯವಸ್ಥೆಯಲ್ಲಿ ಸುತ್ತುವ ಪ್ರಕ್ರಿಯೆ ಸಾಬೀತು ಪಡಿಸಲಿಕ್ಕೆ ಅಧ್ಯಯನ ಅತ್ಯುತ್ತಮ ಉದಾಹರಣೆ ಆಗಲಿದೆ ಎಂದು ಖಗೋಳಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬರಿಗಣ್ಣಿನಲ್ಲಿ ಅಸ್ಪಷ್ಟವಾಗಿ ಗೋಚರಿಸುವ ಪ್ರಕ್ರಿಯೆ ದೂರದರ್ಶಕದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಜೋಡಿ ನಕ್ಷತ್ರಗಳನ್ನು ಸುತ್ತುವ ವ್ಯವಸ್ಥೆಯಲ್ಲಿನ ಗ್ರಹಗಳನ್ನು ಸರ್ಕ್ಯುಂಬೈನರಿ ಗ್ರಹ ಎಂದು ಗುರುತಿಸಲಾಗುತ್ತದೆ. ಅಥವಾ ಕೆಲವೊಮ್ಮೆಟಾಟೋಯಿನ್ಗ್ರಹಗಳು ಎಂದು ಕರೆಯಲಾಗುತ್ತದೆ. ಆದರೆ ಅಧ್ಯಯನದ ವರದಿಯ ಪ್ರಕಾರ ಏಕ ನಕ್ಷತ್ರದ ಸುತ್ತ ಸುತ್ತುವ ಗ್ರಹಗಳಿಗಿಂತ ಜೋಡಿ ನಕ್ಷತ್ರಗಳ ಸುತ್ತ ಸುತ್ತುವ ಗ್ರಹ ಒರಟಾಗಿರುತ್ತದೆ ಎಂದು ಖಗೋಳಶಾಸ್ತ್ರಜ್ಞ ವಿಲಿಯಮ್ ವೆಲ್ಷ್ ಹೇಳಿದ್ದಾರೆ. ವೆಲ್ಷ್ ಪತ್ರಿಕೆಯೊಂದರ ಅಂಕಣಕಾರ ಕೂಡ ಆಗಿದ್ದಾರೆ.  ‘ಕೆಪ್ಲರ್​1647ಬಿಅಂದಾಜು 3,700 ಜ್ಯೋತಿವರ್ಷಗಳಷ್ಟು ದೂರದಲ್ಲಿದ್ದು, ಹೆಚ್ಚೂಕಡಿಮೆ 4.4 ಬಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಅಂದರೆ ಭೂಮಿಯಷ್ಟೇ ಹಳೆಯ ಗ್ರಹ ಎಂದು ಅಂದಾಜಿಸಲಾಗಿದೆ. ಜೋಡಿ ಸೂರ್ಯರಿಗೆ ಪ್ರದಕ್ಷಿಣೆ ಹಾಕಲು ಗ್ರಹ 1,107 ದಿನಗಳನ್ನು (ಮೂರಕ್ಕಿಂತಲೂ ಹೆಚ್ಚು ವರ್ಷ) ತೆಗೆದುಕೊಳ್ಳುತ್ತದೆ.

2016: ವಿಶ್ವಸಂಸ್ಥೆ: ಅತಿ ಪುಟ್ಟದಾದ ಫೆಸಿಫಿಕ್ ದ್ವೀಪರಾಷ್ಟ್ರ ಫಿಜಿಯ ರಾಯಭಾರಿ ಪೀಟರ್ ಥಾಮ್ಸನ್ ಅವರು ಹಿಂದಿನ ದಿನ ನಡೆದ ಅಪರೂಪದ ಚುನಾವಣೆಯಲ್ಲಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಥಾಮ್ಸನ್ ಅವರು ಸೈಪ್ರಸ್ ಮಾವ್ರೊಯಿಯನ್ನಿಸ್ ಅವರನ್ನು 94 ಮತ ಗಳಿಸಿ 4 ಮತಗಳ ಅಲ್ಪ ಅಂತರದಲ್ಲಿ ಪರಾಭವಗೊಳಿಸಿದರು. ಮಾವ್ರೊಯಿಯನ್ನಿಸ್ ಅವರಿಗೆ 90 ಮತಗಳು ಲಭಿಸಿದವು. ಹೆಸರಿಗಷ್ಟೇ ಇರುವ ಹುದ್ದೆಯಾಗಿದ್ದರೂ ಮಹತ್ವದ ವೈಧಾನಿಕ ಪ್ರಕ್ರಿಯೆಗಳಿಗೆ ಸಂಬಂಧಿದ ಅತ್ಯಂತ ಉನ್ನತ ಹುದ್ದೆ ಇದಾಗಿದೆ. ಸಾಮಾನ್ಯವಾಗಿ ಒಬ್ಬರೇ ಅಭ್ಯರ್ಥಿಯನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತದೆ. ಆದರೆ ಬಾರಿ ಮಾತ್ರ ಹುದ್ದೆಗೆ ಅಪರೂಪದ ಚುನಾವಣೆ ನಡೆಯಿತು. 2013-14 ಸಾಲಿನಲ್ಲಿ ಇದ್ದ ತಮ್ಮ ಪೂರ್ವಾಧಿಕಾರಿಯ ವಿರುದ್ಧ ಅಮೆರಿಕದ ಅಧಿಕಾರಿಗಳು ಚೀನೀ ವ್ಯಾಪಾರಿಯಿಂದ 1.3 ಮಿಲಿಯ ಡಾಲರ್ ಲಂಚ ಪಡೆದ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡುವುದಾಗಿ ಥಾಮ್ಸನ್ ಹೇಳಿದರು. ವಿಶ್ವಸಂಸ್ಥೆಯ ಹಾಲಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಸ್ಥಾನಕ್ಕೆ ನೂತನ ವ್ಯಕ್ತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಥಾಮ್ಸನ್ ನೋಡಿಕೊಳ್ಳಲಿದ್ದಾರೆ.

2016: ನವದೆಹಲಿ: ದೆಹಲಿ ಮುಖ್ಯಮಂತ್ರಿಯಿಂದ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡ 21 ಮಂದಿ ಆಮ್ ಆದ್ಮಿ ಪಕ್ಷದ ಶಾಸಕರನ್ನು ರಕ್ಷಿಸುವ ಸಲುವಾಗಿ ತರಲಾಗಿದ್ದ ಲಾಭದ ಹುದ್ದೆ ಮಸೂದೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಹಿಂದಿನ ರಾತ್ರಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಿದರು. ಲಾಭದ ಹುದ್ದೆ ಮಸೂದೆಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿರುವುದರಿಂದ ಈಗ ಆಮ್ ಆದ್ಮಿ ಪಕ್ಷದ 21 ಶಾಸಕರು ಅನರ್ಹಗೊಳ್ಳುವ ಸಾಧ್ಯತೆ ಇದೆ. ಕೇಂದ್ರದ ಮೋದಿ ಸರ್ಕಾರದ ಶಿಫಾರಸು ಪ್ರಕಾರವೇ ತಾನು ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡುವ ಆದೇಶ ಹೊರಡಿಸಿದ್ದಾಗಿ ಹೇಳಿದ ಕೇಜ್ರಿವಾಲ್ ಅವರುಪ್ರಧಾನಿಯವರಿಗೆ ದೆಹಲಿ ಪರಾಭವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲಎಂದು ಜರೆದರು. ದೆಹಲಿ ಪರಾಭವವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲವಾದ ಕಾರಣ ನೀವು ದೆಹಲಿ ಸರ್ಕಾರವನ್ನು ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲವೇ ಎಂದು ಮೋದೀಜಿ ಅವರನ್ನು ನಾನು ಕೇಳಬಯಸುತ್ತೇನೆಎಂದು ಕೇಜ್ರಿವಾಲ್ ಪ್ರಶ್ನಿಸಿದರು. ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಆಡಳಿತ ಇರುವ ಹರಿಯಾಣ, ನಾಗಾಲ್ಯಾಂಡ್, ರಾಜಸ್ಥಾನ, ಪಂಜಾಬ್, ಗುಜರಾತ್ ಮತ್ತಿತರ ರಾಜ್ಯಗಳಲ್ಲೂ ಸಂಸದೀಯ ಕಾರ್ಯದರ್ಶಿಗಳು ಇದ್ದಾರೆ. ಮೋದೀಜಿ ಅವರಿಗೆ ದೆಹಲಿ ಸಂಸದೀಯ ಕಾರ್ಯದರ್ಶಿಗಳನ್ನು ಮಾತ್ರವೇ ಅನರ್ಹಗೊಳಿಸುವ ಉಮೇದು ಏಕೆ?’ ಎಂದೂ ಕೇಜ್ರಿವಾಲ್ ಕೇಳಿದರು. ಚುನಾಯಿತ ಸದಸ್ಯ ಲಾಭದ ಹುದ್ದೆಯನ್ನು ಹೊಂದಿದ್ದರೆ ಆತ ಸಂವಿಧಾನವನ್ನು ಉಲ್ಲಂಘಿಸಿದಂತಾಗುತ್ತದೆ. ರಾಷ್ಟ್ರಪತಿಯವರು ಆಪ್ ಶಾಸಕರಿಗೆ ವಿನಾಯ್ತಿ ನೀಡಲು ಕೋರಿದ ಮಸೂದೆಯನ್ನು ತಿರಸ್ಕರಿಸಿರುವುದರಿಂದ ಶಾಸಕರು ತತ್ಕ್ಷಣದಿಂದಲೇ ಅನರ್ಹಗೊಳ್ಳುತ್ತಾರೆ ಮತ್ತು ಅವರ ಸ್ಥಾನಗಳಿಗೆ ಹೊಸದಾಗಿ ಚುನಾವಣೆ ನಡೆಯಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಮೂಲಗಳು ಹೇಳಿದವು.
.
2016: ಪ್ಯಾರಿಸ್: ಫ್ರೆಂಚ್ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಆತನ ಪತ್ನಿಯನ್ನು ಉಗ್ರರು ಹತ್ಯೆಗೈದ ಘಟನೆ ಪ್ಯಾರಿಸ್ನಲ್ಲಿ ಹಿಂದಿನ ದಿನ ಘಟಿಸಿತು. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿಗಳು ಹೊತ್ತರು. ದಾಳಿ ನಡೆಸಿರುವುದು ಐಸಿಸ್ ಹೋರಾಟಗಾರ ಎಂದು ಸಂಘಟನೆಯ ವಾರ್ತಾ ಏಜನ್ಸಿ ಅಮಾಖ್ ಹೇಳಿತು.  ಘಟನಾ ಸ್ಥಳದಲ್ಲಿದ್ದ ಮೂರು ವರ್ಷದ ಬಾಲಕನೊಬ್ಬನ್ನು ಪಾರು ಮಾಡಲಾಗಿದೆ. ಬಗ್ಗೆ ತನಿಖೆ ಆರಂಭಿಸಿದ್ದು ಹೆಚ್ಚಿನ ಮಾಹಿತಿ ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

2016: ನಾಗಪುರ: ಎರಡು ದಿನದ ಹಿಂದೆ ಜನಿಸಿದ್ದ, ವೈದ್ಯಲೋಕಕ್ಕೆ ಸವಾಲಾಗಿದ್ದ ವಿಚಿತ್ರ ಮಗು ಈದಿನ ಸಂಜೆ ಸಾವನ್ನಪ್ಪಿತು.  ಹುಟ್ಟಿದಾಗ 1.8 ಕೆ.ಜಿ. ತೂಕ ಹೊಂದಿದ್ದ ಮಗು ಹರ್ಲೆಕ್ವಿನ್ ಇಕ್ತಿಯೋಸಿಸ್ ಎಂಬ ಅತ್ಯಂತ ವಿರಳ ಖಾಯಿಲೆಗೆ ತುತ್ತಾಗಿತ್ತು. ರೋಗದಿಂದ ಬಳಲುವವರ ದೇಹದ ಮೇಲೆ ಚರ್ಮವಿಲ್ಲದೆ ಆಂತರಿಕ ಅಂಗಾಂಗಗಳು ಗೋಚರಿಸುತ್ತವೆ. ಜನಿಸಿದ್ದು ಹೆಣ್ಣು ಮಗು ಎಂದು ತಿಳಿಸಿದ ವೈದ್ಯರು, ಆಕೆಗೆ ನಿರಂತರವಾಗಿ ಆಮ್ಲಜನಕ ನೀಡುತ್ತ ಆರೈಕೆ ಮಾಡುತ್ತಿದ್ದರು. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬಡ ಕುಟುಂಬಕ್ಕೆ ಜನಿಸಿದ ಮಗು ಕುಟುಂಬಕಷ್ಟೆ ಅಲ್ಲದೇ ನಗರದ ಜನರಿಗೆಲ್ಲ ಅಚ್ಚರಿ ಉಂಟು ಮಾಡಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯಿತು. ಇದೇ ಖಾಯಿಲೆಗೆ ತುತ್ತಾಗಿದ್ದ ಮಗುವೊಂದು ಪಾಕಿಸ್ತಾನದಲ್ಲಿ 1984 ರಲ್ಲಿ ಜನಿಸಿ 10 ವರ್ಷಗಳ ಕಾಲ ಬದುಕಿತ್ತು ಎನ್ನಲಾಗಿತ್ತು. ಇದೇ ಮಾದರಿ ಮತ್ತೊಂದು ಘಟನೆ 1994 ರಲ್ಲಿ ಅಮೆರಿದಲ್ಲಿ ಘಟಿಸಿತ್ತು.

2016: ನವದೆಹಲಿ: 251 ರೂಪಾಯಿಗೆ ಅಗ್ಗದ ಮೊಬೈಲ್ ನೀಡುತ್ತೇವೆ ಎಂದು ಸುದ್ದಿ ಮಾಡಿ ಮರೆಯಾಗಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿ ಇದೀಗ ಮತ್ತೆ ಮುಂಚೂಣಿಗೆ ಬಂದಿತು. ಜೂನ್ 28ರಿಂದ ಆನ್ಲೈನ್ನಲ್ಲಿ ನೋಂದಣಿ ಮಾಡಲ್ಪಟ್ಟ ಸದಸ್ಯರಿಗೆ ಮೊಬೈಲ್ ವಿತರಿಸಲಾಗುವದು ಎಂದು ಕಂಪೆನಿ ತಿಳಿಸಿತು. ಫ್ರೀಡಂ-251 ಸ್ಮಾರ್ಟ್ ಫೋನ್ ಪಡೆಯಲು ದೇಶದ ಜನತೆ ಹಿಂದೆ ಮುಗಿ ಬಿದ್ದಿದ್ದರು. ಆದರೆ ಸೀಮಿತ ಮೊಬೈಲ್ಗಳನ್ನು ಮಾತ್ರ ನೋಂದಣಿ ಮಾಡಿಕೊಂಡ ಕಂಪೆನಿಯ ಕ್ರಮದ ವಿರುದ್ಧ ಜನರು ಕೆಂಡ ಕಾರಿದ್ದರು. ಕಳೆದ ಫೆಬ್ರುವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅದ್ದೂರಿಯಾಗಿ ಉದ್ಘಾಟನಾ ಸಮಾರಂಭ ಮಾಡಿ ಸುದ್ದಿಯಾಗಿತ್ತು. ಆದರೆ ಕಂಪೆನಿ ಇಷ್ಟು ಅಗ್ಗದ ಬೆಲೆಗೆ ಮೊಬೈಲ್ ನೀಡಲು ಸಾಧ್ಯವಿಲ್ಲ. ಇದರ ಹಿಂದೆ ಮೋಸದ ಜಾಲವಿರಬಹುದು ಎಂದು ಪ್ರತಿಷ್ಠಿತ ಮೊಬೈಲ್ ಕಂಪನಿ ಮಾಲೀಕರು ಸಂಶಯ ವ್ಯಕ್ತಪಡಿಸಿದ್ದರು. ಇದರಿಂದಾಗಿ ಕಂಪೆನಿಯ ಮೇಲೆ ಪೊಲೀಸ್ ಪಡೆಗೆ ನಿಗಾವಹಿಸಲು ಕೇಂದ್ರ ಸರ್ಕಾರ ಸೂಚಿಸಿತ್ತು. ಇದೀಗ ಕಂಪೆನಿಯ ನಿರ್ದೇಶಕರಲ್ಲಿ ಒಬ್ಬರಾದ ಮೋಹಿತ್ ಗೋಯಲ್ ಕುರಿತು ಸ್ಪಷ್ಟಪಡಿಸಿ, ಜೂನ್ 28ರಿಂದ ಗ್ರಾಹಕರಿಗೆ ಮೊಬೈಲ್ ವಿತರಿಸುವುದಾಗಿ ತಿಳಿಸಿದರು. ವಿಶ್ವದ ಅತಿ ಅಗ್ಗದ ಮೊಬೈಲ್ಗಾಗಿ 7.35 ಕೋಟಿ ಮಂದಿ ಬುಕ್ಕಿಂಗ್ ಮಾಡಿದ್ದು, 30 ಸಾವಿರ ಜನರು ಹಣ ಸಂದಾಯ ಮಾಡಿದ್ದರು.

2016: ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಉತ್ತರ ಪ್ರದೇಶದ  6 ಮಂದಿ ಕಾಂಗ್ರೆಸ್ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಕಪಿಲ್ ಸಿಬಲ್ ವಿರುದ್ಧ ಮತದಾನ ಮಾಡಿದ್ದರು ಎಂದು ಪಕ್ಷದ ನಾಯಕ ಜನಾರ್ದನ ದ್ವಿವೇದಿ ಪ್ರಕಟಿಸಿತು. ಏನಿದ್ದರೂ ಸಿಬಲ್ ಇತರ ಪಕ್ಷಗಳ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

2016: ನವದೆಹಲಿ: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಲೇಖಕ ಅಖಿಲ್ ಶರ್ಮಾ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಡಬ್ಲಿನ್ ಸಾಹಿತ್ಯ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಜತೆ 1 ಲಕ್ಷ ಯುರೋ (75 ಲಕ್ಷ ರೂಪಾಯಿ) ಬಹುಮಾನ ಕೂಡಾ ಅವರ ಕಾದಂಬರಿಫ್ಯಾಮಿಲಿ ಲೈಫ್ಎಂಬ ಆತ್ಮಚರಿತ್ರೆಗೆ ದೊರಕಿತು. ಪ್ರಶಸ್ತಿಗಾಗಿ 43 ದೇಶಗಳ 150 ಕ್ಕೂ ಅಧಿಕ ಲೇಖಕರು ಸ್ಪರ್ಧಿಸಿದ್ದರು. ಇದು ಲೇಖನಗಳಿಗೆ ಜಗತ್ತಿನಲ್ಲೆ್ಲೕ ಅತ್ಯಂತ ಹೆಚ್ಚು ಪ್ರಶಸ್ತಿ ಮೊತ್ತ ಕೊಡಮಾಡುವ ಪ್ರಶಸ್ತಿಯಾಗಿದೆ. ಪ್ರಶಸ್ತಿ ಲಭಿಸಿದ್ದಕ್ಕೆ ಖುಷಿಯಾಗಿರುವ ಲೇಖಕ ಶರ್ಮಾ, ಜನರ ತೀರ್ಪಿಗೆ ನಾನು ಋಣಿಯಾಗಿದ್ದು, ಅವರ ತೀರ್ಪಿಗೆ ತಲೆಬಾಗುವೆ ಎಂದಿದ್ದಾರೆ. ಇಯಾನ್ ಸಾಮ್ಸನ್, ಜುವಾನ್ ಪಬ್ಲೊ, ಕಾರ್ಲೆ ಗೆಬ್ಲರ್ ಪ್ರಶಸ್ತಿಯ ತೀರ್ಪುಗಾರರಾಗಿದ್ದರು.

2016: ಜೈಪುರ: ರಾಜಸ್ಥಾನದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡುವ ಸಂಸ್ಥೆಯೊಂದು ತನ್ನ ಸಂಸ್ಥೆಯಲ್ಲಿ ತರಬೇತಿ ಪಡೆದು ಐಐಟಿ ಪ್ರವೇಶ ಪರೀಕ್ಷೆಯಲ್ಲಿ 11 ನೇ ರ್ಯಾಂಕ್ ಬಂದ ವಿದ್ಯಾರ್ಥಿಯೊಬ್ಬನಿಗೆ ದುಬಾರಿ ಬಿಎಮ್ ಡಬ್ಲೂ ಕಾರನ್ನು ಕೊಡುಗೆಯಾಗಿ ನೀಡಿತು. ಸಿಕಾರ್ ಪ್ರತಿಷ್ಠಿತ ತರಬೇತಿ ಸಂಸ್ಥೆ ಮೊದಲೇ ಘೋಷಿಸಿದಂತೆ 1 ರಿಂದ 20 ನೇ ರ್ಯಾಂಕ್ ಒಳಗೆ ಸಾಧನೆ ಮಾಡಿದರೆ ಕಾರು ಕೊಡುಗೆಯಾಗಿ ನೀಡುವುದಾಗಿ ಹೇಳಿತ್ತು, ಆದರೆ 27.5 ಲಕ್ಷ ಮೌಲ್ಯದ ಐಷಾರಾಮಿ ಕಾರನ್ನು ನೀಡಬಹುದೆಂಬ ಊಹೆ ಇರಲಿಲ್ಲ ಎಂದು ಕಾರು ಪಡೆದ ಲಕ್ಕಿ ವಿದ್ಯಾರ್ಥಿ ತನ್ಮಯ್ ಹೇಳಿದರು. ದೇಶದ ಅತಿಹೆಚ್ಚು ತರಬೇತಿ ಸಂಸ್ಥೆಗಳು ಇರುವುದು ರಾಜಸ್ಥಾನದಲ್ಲೇ. ಪ್ರತಿವರ್ಷ ಭಾರತದ 1.5 ಲಕ್ಷ ಪ್ರತಿಭೆಗಳು ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆದು ಉನ್ನತ ಸ್ಥಾನ ಅಲಂಕರಿಸುತ್ತಾರೆ. ಆದ್ದರಿಂದಲೇ ತರಬೇತಿ ಸಂಸ್ಥೆಗಳು ರೀತಿಯ ಆಮೀಷ ನೀಡುವುದು ರಾಜಸ್ಥಾನದಲ್ಲಿ ಸಾಮಾನ್ಯವಾಗಿದೆ. ಕಾರು ಪಡೆದಿರುವ ತನ್ಮಯನ ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿದ್ದು, ಸದ್ಯ ದುಬಾರಿ ಕಾರು ಪಡೆದಿರುವ ತನ್ಮಯ್ ಮೊದಲು ಕಾರು ಚಲಾವಣೆ ಕಲಿತುಕೊಂಡು ನಂತರ ಕಾರು ಉಪಯೋಗಿಸುವುದಾಗಿ ತಿಳಿಸಿದರು.

2016: ಕಾಬೂಲ್: ಪಶ್ಚಿಮ ಫರಾಹ್ನಲ್ಲಿ ಅಫ್ಘಾನಿಸ್ತಾನ ನಡೆಸಿದ ದಾಳಿಯಲ್ಲಿ 25 ತಾಲಿಬಾನ್ ಉಗ್ರರನ್ನು ಕೊಲ್ಲಲಾಗಿದ್ದು 27ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿಡರು. ಫರಾಹ್ ಬಲಾ ಬಲೋಕ್ ಜಿಲ್ಲೆಯಲ್ಲಿ ಸೇನೆಯ ದಾಳಿಗೆ 25 ಉಗ್ರರು ಬಲಿಯಾಗಿ, 27ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿರುವುದಾಗಿ ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿತು. ದಾಳಿಯ ವೇಳೆ ಉಗ್ರರ 4 ವಾಹನಗಳು ಹಾಗೂ 7 ದ್ವಿಚಕ್ರವಾಹನಗಳನ್ನು ನಾಶಪಡಿಸಿರುವುದಾಗಿ ಸಚಿವಾಲಯ ತಿಳಿಸಿತು. ಆದರೆ ವಾಯುದಾಳಿಯಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿರುವುದಾಗಿ ತಾಲಿಬಾನ್ ಹೇಳಿಕೊಂಡಿತು.

2016: ಬೀಜಿಂಗ್: ಪರಮಾಣು ಸರಬರಾಜುದಾರರ ಸಮೂಹ (ಎನ್ಎಸ್ಜಿ) ಸದಸ್ಯತ್ವಕ್ಕೆ ಭಾರತ ನಡೆಸಿರುವ ಯತ್ನವನ್ನು ಖಂಡತುಂಡವಾಗಿ ವಿರೋಧಿಸಿರುವ ಚೀನಾದ ಸರ್ಕಾರಿ ಮಾಧ್ಯಮವು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಮೊತ್ತ ಮೊದಲ ಪ್ರತಿಕ್ರಿಯೆಯಲ್ಲಿ ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ಲಭಿಸಿದರೆ ಅದು ಪಾಕಿಸ್ತಾನವನ್ನು ಕೆಣಕುವುದಷ್ಟೇ ಅಲ್ಲ ಅಣ್ವಸ್ತ್ರ ಪೈಪೋಟಿಯನ್ನು ಹೆಚ್ಚಿಸಿ, ಚೀನಾದ ರಾಷ್ಟ್ರೀಯ ಹಿತಾಸಕ್ತಿಗೂ ಧಕ್ಕೆ ಉಂಟು ಮಾಡುವುದು ಎಂದು ಹೇಳಿತು. ಪರಮಾಣು ಮಹತ್ವಾಕಾಂಕ್ಷೆಯಿಂದ ಭಾರತ ಕುರುಡಾಗಬಾರದುಶೀರ್ಷಿಕೆಯ ಪ್ರಮುಖ ಲೇಖನವೊಂದರಲ್ಲಿ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆಯು, ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ಲಭಿಸಿದರೆ ಪ್ರದೇಶದಲ್ಲಿ ಪರಮಾಣು ಘರ್ಷಣೆಗೆ ನಾಂದಿಯಾಗುವುದು ಎಂದು ತಿಳಿಸಿತು. ಪ್ರದೇಶದ ಅಣ್ವಸ್ತ್ರ ರಾಷ್ಟ್ರಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಅಣ್ವಸ್ತ್ರ ಸಾಮರ್ಥ್ಯ ಬಗ್ಗೆ ಕಟ್ಟೆಚ್ಚರದಿಂದ ಇರಬೇಕು. ಎನ್ಎಸ್ಜಿ ಸದಸ್ಯತ್ವಕ್ಕೆ ಭಾರತ ಸಲ್ಲಿಸಿರುವ ಅರ್ಜಿ ಮತ್ತು ಅದರ ಪರಿಣಾಮಗಳು ಖಂಡಿತವಾಗಿ ಭಾರತದ ಪರಂಪರಾಗತ ಪ್ರತಿಸ್ಪರ್ಧಿಯಾಗಿರುವ ಪಾಕಿಸ್ತಾನವನ್ನು ಕೆಣಕದೆ ಬಿಡವು ಎಂದು ಪತ್ರಿಕೆ ಹೇಳಿದತು. ಎನ್ಎಸ್ಜಿ ಸದಸ್ಯತ್ವದಿಂದ ಪ್ರಾದೇಶಿಕ ಭದ್ರತೆಗೆ ಧಕ್ಕೆಯಾಗುವುದಷ್ಟೇ ಅಲ್ಲ, ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳಿಗೂ ತೊಂದರೆಯಾಗುವುದು ಎಂದು ಪತ್ರಿಕೆ ಪ್ರತಿಪಾದಿಸಿತು.
2016: ವಾಷಿಂಗ್ಟನ್: ವೃತ್ತಿಪರ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ನ್ನು ಭಾರೀ ಮೊತ್ತಕ್ಕೆ ಖರೀದಿಸಲು ಐಟಿ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ನಿರ್ಧರಿಸಿತು. ಲಿಂಕ್ಡ್ಇನ್ ಪ್ರತಿ ಷೇರಿಗೆ ತಲಾ 13 ಸಾವಿರದಂತೆ ಪಾವತಿಸಲಿರುವ ಮೈಕ್ರೋಸಾಫ್ಟ್ ಒಟ್ಟು 1.70 ಲಕ್ಷ ಕೋಟಿ ರೂ.ಗೆ ಡೀಲ್ ಕುದುರಿಸಿತು. ವಿಚಾರ ಸುದ್ದಿಯಾಗುತ್ತಿದ್ದಂತೆ ಲಿಂಕ್ಡ್ಇನ್ ಷೇರು ಮೌಲ್ಯ ಶೇ. 48 ಏರಿಕೆಯಾಗಿ ಮೈಕ್ರೋಸಾಫ್ಟ್ ಷೇರು ಶೇ. 4 ಇಳಿಕೆಯಾಯಿತು. ಮೈಕ್ರೋಸಾಫ್ಟ್ ಜಾಲಕ್ಕೆ ಬಂದ ಬಳಿಕ ಲಿಂಕ್ಡ್ಇನ್ ಸಿಇಒ ಆಗಿ ಜೆಫ್ ವೇನರ್ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿದವು. ಡೀಲ್ಗೆ ಎರಡೂ ಕಂಪನಿಗಳ ಆಡಳಿತ ಮಂಡಳಿಗಳು ಸಹಮತ ವ್ಯಕ್ತಪಡಿಸಿದ್ದು, ವರ್ಷಾಂತ್ಯಕ್ಕೆ ಡೀಲ್ ಅಂತಿಮವಾಗಲಿದೆ. ವಿಲೀನ ಪ್ರಕ್ರಿಯೆಗೆ ಲಿಂಕ್ಡ್ಇನ್ ಷೇರುದಾರರ ಒಪ್ಪಿಗೆ ದೊರೆಯಬೇಕಿದೆಲಿಂಕ್ಡ್ಇನ್ ಜಗತ್ತಿನಾದ್ಯಂತ ವಿವಿಧ ಉದ್ಯಮ, ವೃತ್ತಿಪರ ಜನತೆಯ ನೆಟ್ವರ್ಕ್ ಆಗಿ ಬೆಳೆದಿದೆ. ಮೈಕ್ರೋಸಾಫ್ಟ್ ಜತೆಗೂಡಿ ಲಿಂಕ್ಡ್ಇನ್ ಇನ್ನಷ್ಟು ಉತ್ತಮ ಸಾಧನೆ ಮಾಡಲಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ತಿಳಿಸಿದ್ದಾರೆ. ಕೆಲವೊಂದು ಸಣ್ಣಪುಟ್ಟ ಬದಲಾವಣೆಯಾಗಲಿದೆ. ಆದರೆ ಉದ್ಯೋಗಿಗಳ ಸ್ಥಾನ ಮತ್ತು ಕೆಲಸದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಲಿಂಕ್ಡ್ಇನ್ ಪ್ರಗತಿಗೆ ಸದಸ್ಯರ ಎಲ್ಲ ರೀತಿಯ ಸಹಕಾರ ಅಗತ್ಯ. ಲಿಂಕ್ಡ್ಇನ್ ಸ್ಥಾನಮಾನವನ್ನು ಇನ್ನಷ್ಟು ಏರಿಸಲು ಶ್ರಮವಹಿಸಬೇಕಿದೆ ಎಂದು ಸಿಇಒ ಜೆಫ್ ವೇನರ್ ತನ್ನ ಉದ್ಯೋಗಿಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದರು. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಲಿಂಕ್ಡ್ಇನ್ 2002 ಡಿಸೆಂಬರ್ನಲ್ಲಿ ಸ್ಥಾಪನೆಯಾಗಿದೆ. 10 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದ್ದು, ವೃತ್ತಿಪರ ನೆಟ್ವರ್ಕಿಂಗ್ ಸೈಟ್ ಆಗಿ ಪ್ರಸಿದ್ಧಿ ಪಡೆದಿದೆ

2009: ತನ್ನ ಜಾಲದಲ್ಲಿ ಯಾವುದೇ ವಿಚಾರವನ್ನು  ಸೆನ್ಸಾರ್ ಮಾಡುವುದಿಲ್ಲ. ಆದರೆ ಏನಾದರೂ ದೂರುಗಳಿದ್ದಲ್ಲಿ ಅದನ್ನು ಪರಿಹರಿಸಲು ತಕ್ಷಣ ಕಾರ್ಯ ಪ್ರವೃತ್ತವಾಗುವುದಾಗಿ ಗೂಗಲ್ ಹೇಳಿತು. ಮಾಹಿತಿ ನಿಯಂತ್ರಣದಲ್ಲಿ ಸಕ್ರಿಯ ಪಾತ್ರವನ್ನು ಗೂಗಲ್ ವಹಿಸುವುದಿಲ್ಲ. ಸಂಪಾದಕೀಯ  ಆಯ್ಕೆಯ ಪಾತ್ರವನ್ನು  ನಿರ್ವಹಿಸುವುದು ಗೂಗಲ್‌ಗೆ ಸಾಧ್ಯವಿಲ್ಲ ಎಂದು ಗೂಗಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ರಾವ್ ನವದೆಹಲಿಯಲ್ಲಿ ತಿಳಿಸಿದರು.

2009: ಮನೆಗೆಲಸದವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಬಾಲಿವುಡ್ ನಟ ಶಿನೆ ಅಹುಜಾ ಅವರನ್ನು ವಿಚಾರಣೆಗಾಗಿ ಬಂಧಿಸಿದ ಪ್ರಸಂಗ ಮುಂಬೈಯ ಒಶಿವಾರಾ ಉಪನಗರದಲ್ಲಿ ಘಟಿಸಿತು. ಅಹುಜಾ ಅವರ ಮನೆಯ ಕೆಲಸದಾಕೆ ತನ್ನ ಮೇಲೆ ಅಹುಜಾ ಅತ್ಯಾಚಾರ ನಡೆಸಿದರು ಎಂದು ಸ್ವತಃ ದೂರು ನೀಡಿದ್ದರಿಂದ ಅಹುಜಾ ಅವರನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಡಿಸಿಪಿ ನಿಕೇತ್ ಕೌಶಿಕ್ ತಿಳಿಸಿದರು.

2009: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಥವಾ ತೃತೀಯ ರಂಗ ಅಸ್ತಿತ್ವಕ್ಕೆ ಬಂದರೆ ಮುಂದಿನ ಕಾರ್ಯತಂತ್ರ ಹೆಣೆಯಲು ಎಲ್‌ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಹವಣಿಸಿದ್ದ. ಆದರೆ ಕೊನೆಗೂ ಫಲಿಸಿದ್ದು ಶ್ರೀಲಂಕಾ ಸೇನೆಯ ಕಾರ್ಯತಂತ್ರ. ಮೇ 16ರ ಭಾರತದ ಚುನಾವಣಾ ಫಲಿತಾಂಶ ಎಲ್‌ಟಿಟಿಇ ಪಾಲಿಗೆ ಅಳಿವು ಉಳಿವಿನ ಸಂಗತಿಯಾಗಿತ್ತು. ಎನ್‌ಡಿಎ ಅಥವಾ ತೃತೀಯ ರಂಗ ಅಧಿಕಾರ ಸ್ವೀಕರಿದರೆ ಯಾರಾದರೂ ನಾಯಕರು  ತಮ್ಮ ಪರ ಮಧ್ಯಸ್ಥಿಕೆ ವಹಿಸಿ ಶತ್ರು ಸೇನೆ ಯುದ್ಧ ರಹಿತ ವಲಯ ಪ್ರವೇಶಿಸುವುದನ್ನು ತಡೆಯಲಿದ್ದಾರೆ ಎಂದೇ ಆತ ಆಶಿಸಿದ್ದ. ಆದರೆ ಆತನ ಊಹೆ ಮೀರಿ ಎಲ್‌ಟಿಟಿಇಯನ್ನು ಸುತ್ತುವರೆಯಲಾಗಿತ್ತು ಎಂದು ಲಂಕಾ ಸೇನೆ ಮೂಲಗಳು ತಿಳಿಸಿದವು. ತನಗೆ ಪ್ರತಿಕೂಲವಾಗಿ ಪರಿಣಮಿಸಲಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದು ತಿಳಿಯುತ್ತಿದ್ದಂತೆಯೇ ಮೇ 16ರ ಮಧ್ಯಾಹ್ನ ಮಾನವ ಗುರಾಣಿಯಾಗಿ ಬಳಸಲಾಗಿದ್ದ ಎಲ್ಲ ತಮಿಳು ನಾಗರಿಕರನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಲಾಯಿತು. ಎಲ್‌ಟಿಟಿಇ ಅಂತರರಾಷ್ಟ್ರೀಯ ವ್ಯವಹಾರಗಳ ಮುಖಂಡ ಸೆಲ್ವರಸ ಪದ್ಮನಾಭನ್ 'ಎಲ್‌ಟಿಟಿಇ ಬಹುತೇಕ ಸೋಲೊಪ್ಪಿಕೊಂಡಿದೆ' ಎಂದು ಘೋಷಿಸಿ ಅಂತರರಾಷ್ಟ್ರೀಯ ಸಮುದಾಯದ ನೆರವು ಕೋರಿದರು.  ತೃತೀಯ ರಂಗ ಅಧಿಕಾರಕ್ಕೆ ಬಂದರೆ ಎಐಎಡಿಎಂಕೆ ನಾಯಕಿ ಜಯಲಲಿತಾ ಶ್ರೀಲಂಕಾ ತಮಿಳರ ನೆರವಿಗೆ ಭಾರತೀಯ ಸೇನೆ ಕಳುಹಿಸಿಕೊಡುವುದಾಗಿ ಕೂಡ ಘೋಷಿಸಿದ್ದರು. ಫಲಿತಾಂಶದ ನಂತರ  ಸಂಘಟನೆ ಪರವಾಗಿ ತಮಿಳುನಾಡಿನಲ್ಲಿ ದೊಡ್ಡ ಕ್ರಾಂತಿಯೇ ನಡೆಯುತ್ತದೆ ಎಂದು ಎಲ್‌ಟಿಟಿಇ ಭಾವಿಸಿತ್ತು. ಆದರೆ  ಯೋಚಿಸಿ ತಂತ್ರ ರೂಪಿಸುವ ಕಾಲ ವ್ಯಾಘ್ರರ ಪಾಲಿಗೆ ಮಿಂಚಿಹೋಗಿತ್ತು. 

2009: ನಾಯಕತ್ವದ ವಿರುದ್ಧ ತಿರುಗಿ ಬಿದ್ದು ಬಿಜೆಪಿಯಲ್ಲಿನ ತಮ್ಮ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ಸಲ್ಲಿಸಿದ್ದ ಹಿರಿಯ ನಾಯಕ ಯಶವಂತ ಸಿನ್ಹ, ತಾವು ಪಕ್ಷ ತ್ಯಜಿಸುವುದಿಲ್ಲ ಎಂದು ರಾಂಚಿಯಲ್ಲಿ ಸ್ಪಷ್ಟಪಡಿಸಿದರು. 'ನನ್ನ ರಾಜೀನಾಮೆ ಅಂಗೀಕಾರವಾಗಿರುವುದು ನನಗೆ ಸಂತಸ ತಂದಿದೆ. ಆದ್ದರಿಂದ ಇನ್ನು ಟೀಕೆ ಮಾಡಲು ನನಗೆ ಏನೂ ಇಲ್ಲ' ಎಂದು ವಿದೇಶಾಂಗ ವ್ಯವಹಾರ ಹಾಗೂ ಹಣಕಾಸು ಇಲಾಖೆಗಳ ಮಾಜಿ ಸಚಿವರೂ ಆದ ಅವರು, ವಿವಾದದ ಬಗ್ಗೆ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಹೇಳಿದರು.

2009:  ಒಟ್ಟು 5.94 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜು ವೃತ್ತ ಮತ್ತು ಕೆ.ಆರ್.ವೃತ್ತದಲ್ಲಿ ನಿರ್ಮಿಸಲಾದ ಅಂಡರ್‌ಪಾಸ್‌ಗಳು ಹಾಗೂ ಪಾದಚಾರಿ ಸುರಂಗ ಮಾರ್ಗಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

2008: ಬೆಂಗಳೂರಿನ ಜಯನಗರ ವಾಣಿಜ್ಯ ಸಮುಚ್ಚಯದ ಆವರಣದಲ್ಲಿನ ತರಕಾರಿ ಮಾರಾಟ ಸಂಕೀರ್ಣದಲ್ಲಿ 32 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಹಿಂದಿನ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 49 ಮಳಿಗೆಗಳು ಸುಟ್ಟು ಭಸ್ಮವಾಗಿ, 20ಕ್ಕೂ ಅಧಿಕ ಮಳಿಗೆಗಳು ಭಾಗಶಃ ಹಾನಿಗೆ ಒಳಗಾದವು. ಅನಾಹುತದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜು ಮಾಡಲಾಯಿತು.

2007: ರಾಷ್ಟ್ರಪತಿ ಸ್ಥಾನಕ್ಕೆ ಸಂಯಕ್ತ ಪ್ರಗತಿಪರ ಮೈತ್ರಿ ಕೂಟ (ಯುಪಿ ಎ) ಅಭ್ಯರ್ಥಿಯಾಗಿ ರಾಜಸ್ಥಾನದ ರಾಜ್ಯಪಾಲರಾದ ಪ್ರತಿಭಾ ದೇವಿಸಿಂಗ್ ಪಾಟೀಲ್ (72) ಆಯ್ಕೆಯಾದರು. ಹಲವು ಸುತ್ತಿನ ಕಸರತ್ತಿನ ಬಳಿಕ ಪ್ರತಿಭಾ ಪಾಟೀಲ್ ಅಚ್ಚರಿಯ ಅಭ್ಯರ್ಥಿಯಾಗಿ ಹೊರ ಹೊಮ್ಮಿದರು. ಯುಪಿ ಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರತಿಭಾ ಆಯ್ಕೆ ವಿಚಾರವನ್ನು ಪ್ರಕಟಿಸಿದರು.

2007: ಒಟ್ಟು 5,608 ಕೋಟಿ ರೂಪಾಯಿ ವೆಚ್ಚದಲ್ಲಿ ಗಂಗಾನದಿಯ ಕೆಳಗೆ ಕೊಳವೆಯೊಳಗೆ ಸಾಗುವಂತಹ 13.7 ಕಿ.ಮೀ. ಉದ್ದದ (ಇದರಲ್ಲಿ ನದಿಯ ಕೆಳಗಿನ ದೂರ 8 ಕಿ.ಮೀ) ಪೂರ್ವ- ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಹಸಿರು ನಿಶಾನೆ ತೋರಿಸಿತು. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ನೀರಿನ ಅಡಿಯಲ್ಲಿ ಸಾಗುವ ಈ ರೈಲು ಮಾರ್ಗವು ಹೌರಾ ನಿಲ್ದಾಣ ಮತ್ತು ಸಾಲ್ಟ್ ಲೇಕ್ ನಡುವೆ ಸಂಪರ್ಕ ಕಲ್ಪಿಸುವುದು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಮುಬೀನಾ ಭಿವಂಡಿವಾಲಾ ಮತ್ತು ಜೈಬುನ್ನೀಸಾ ಖಾಜಿ ಎಂಬ ಇಬ್ಬರು ಮಹಿಳೆಯರಿಗೆ ವಿಶೇಷ ಟಾಡಾ ನ್ಯಾಯಾಲಯವು ತಲಾ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು.

2007: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ `ಇಂಡಿಯನ್' ನ (ಹಿಂದಿನ ಇಂಡಿಯನ್ ಏರ್ ಲೈನ್ಸ್) ಸುಮಾರು 15,000 ಭೂ ಸೇವಾ ಸಿಬ್ಬಂದಿ ತಮ್ಮ ದೇಶವ್ಯಾಪಿ ಮುಷ್ಕರವನ್ನು ವಾಪಸ್ ಪಡೆದುಕೊಂಡರು. ವೇತನ ಬಾಕಿ ಹಾಗೂ ಬಡ್ತಿ ಸಂಬಂಧಿ ಬಿಕ್ಕಟ್ಟು ಬಗೆಹರಿಸುವುದಾಗಿ ಆಡಳಿತ ಮಂಡಳಿ ಹಾಗೂ ವಿಮಾನಯಾನ ಸಚಿವಾಲಯ ನೀಡಿದ ಭರವಸೆ ಅನುಸರಿಸಿ ಮುಷ್ಕರ ನಿರತರು ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದರು.

2006: ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಮಹೇಶ ಭಟ್ ಅವರನ್ನು ಗುರಿಯಾಗಿಟ್ಟುಕೊಂಡು ಅವರ ಕಚೇರಿಗೆ ನುಗ್ಗಿದ ಇಬ್ಬರು ಅಪರಿಚಿತರು ಕಚೇರಿಯಲ್ಲಿ ಗುಂಡು ಹಾರಿಸಿ ಪರಾರಿಯಾದರು. ಈ ವೇಳೆಯಲ್ಲಿ ಮಹೇಶ ಭಟ್ ಕಚೇರಿಯಲ್ಲಿ ಇರಲಿಲ್ಲ. ಗುಂಡೇಟಿನಿಂದ ಯಾರೂ ಗಾಯಗೊಳ್ಳಲಿಲ್ಲ.

2006: ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ದೇವರ ದಾಸಿಮಯ್ಯ ಅವರ ಸಾಧನೆ, ಬರವಣಿಗೆ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಪೀಠ ಸ್ಥಾಪನೆ. ಪೀಠಕ್ಕೆ 2006-07 ಸಾಲಿನಲ್ಲಿ ಸರ್ಕಾರ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿತು.

2001: ಭಾರತದ ನಾರಾಯಣ್ ಕಾರ್ತಿಕೇಯನ್ ಇಂಗ್ಲೆಂಡಿನ ಸಿಲ್ವರ್ ಸ್ಟೋನ್ ಟ್ರ್ಯಾಕ್ಸಿನಲ್ಲಿ ಜಾಗ್ವಾರ್ ರೇಸಿಂಗ್ ತಂಡಕ್ಕಾಗಿ ಪರೀಕ್ಷಾರ್ಥವಾಗಿ ಫಾರ್ಮ್ಯುಲಾ ಒನ್ ಕಾರನ್ನು ಓಡಿಸುವ ಮೂಲಕ ಈ ಕಾರನ್ನು ಓಡಿಸಿದ ಪ್ರಪ್ರಥಮ ಭಾರತೀಯ ಹಾಗೂ ಮೊತ್ತ ಮೊದಲ ಜಪಾನೇತರ ಏಷಿಯನ್ ಎನಿಸಿಕೊಂಡರು.

1969: ಜರ್ಮನಿಯ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಜನ್ಮದಿನ. 1988ರಲ್ಲಿ ಒಲಿಂಪಿಕ್ ಸ್ವರ್ಣ ಹಾಗೂ ಎಲ್ಲ ಪ್ರಮುಖ ಟೆನಿಸ್ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ ಈಕೆ `ಗೋಲ್ಡನ್ ಗ್ರ್ಯಾಂಡ್ ಸ್ಲಾಮ್' ಪಡೆದುಕೊಂಡರು.

1960: ಕಲಾವಿದ ಜಿ. ಜೈಕುಮಾರ್ ಜನನ.

1958: ಅಮೆರಿಕದ ಸ್ಕೇಟರ್ ಎರಿಕ್ ಹೀಡನ್ ಜನ್ಮದಿನ. 1980ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಮೊತ್ತ ಮೊದಲ ಅಮೆರಿಕನ್ ಸ್ಕೇಟರ್ ಈ ವ್ಯಕ್ತಿ.

1956: ಮೈಸೂರು ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ (ಕುಲಪತಿ) ಆಗಿ ಮಹಾರಾಜಾ ಕಾಲೇಜು ಪ್ರಿನ್ಸಿಪಾಲ ಕೆ.ವಿ. ಪುಟ್ಟಪ್ಪ ಅವರನ್ನು ಸರ್ಕಾರ ನೇಮಿಸಿತು. ಹಾಲಿ ವೈಸ್ ಛಾನ್ಸಲರ್ ಪ್ರೊ. ವಿ.ಎಲ್. ಡಿಸೌಜಾ ಅವರ ಸ್ಥಾನಕ್ಕೆ ಪುಟ್ಟಪ್ಪ ಅವರು ನೇಮಕಗೊಂಡರು.

1953: ಕಲಾವಿದ ಬಾನಂದೂರು ಕೆಂಪಯ್ಯ ಜನನ.

1947: ಮೌಂಟ್ ಬ್ಯಾಟನ್ ಯೋಜನೆಯ ಭಾರತ ವಿಭಜನೆ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿಣಿ ನವದೆಹಲಿಯಲ್ಲಿ ಈದಿನ ಸಭೆ ಸೇರಿತು.

1937: ಖ್ಯಾತ ವೀಣಾವಾದಕ ಆರ್. ಕೆ. ಸೂರ್ಯನಾರಾಯಣ (14-6-1937ರಿಂದ 25-12-2003) ಅವರು ಆರ್.ಎಸ್. ಕೇಶವಮೂರ್ತಿ- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

 1933: ಸಾಹಿತಿ, ಮನೋವಿಜ್ಞಾನ ಪ್ರಾಧ್ಯಾಪಕ, ಜೈನ ಸಿದ್ಧಾಂತಗಳಲ್ಲಿ ಪಾಂಡಿತ್ಯ ಗಳಿಸಿದ್ದ ಡಾ. ಎ.ಎಸ್. ಧರಣೇಂದ್ರಯ್ಯ (14-6-1933ರಿಂದ 8-4-2000) ಅವರು ಸಿಂದಪ್ಪ ಶೆಟ್ಟರು- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಹಾಸನ ಜಿಲ್ಲೆಯ ಅಡಗೂರು ಗ್ರಾಮದಲ್ಲಿ ಜನಿಸಿದರು.

1929: ಕಲಾವಿದ ಬಿ.ವಿ. ನಂಜುಂಡಯ್ಯ ಜನನ.

1909: ಇಎಂಎಸ್ ನಂಬೂದರಿಪಾಡ್ (1908-1998) ಜನ್ಮದಿನ. ಭಾರತದ ಕಮ್ಯೂನಿಸ್ಟ್ ನಾಯಕರಾದ ಇವರು 1957ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿ, ಜಗತ್ತಿನಲ್ಲೇ ಮುಕ್ತ ಚುನಾವಣೆ ಮೂಲಕ ಅಧಿಕಾರಕ್ಕೆ ಏರಿದ ಮೊದಲ ಕಮ್ಯೂನಿಸ್ಟ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಗಳಿಸಿದರು.

1868: ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೇನರ್ ಜನನ. ರಕ್ತದ ಗುಂಪುಗಳನ್ನು ಕಂಡು ಹಿಡಿದುದಕ್ಕಾಗಿ ಇವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು.

1800: ಫ್ರೆಂಚ್ ಕ್ರಾಂತಿ ಸಂದರ್ಭದಲ್ಲಿ ಇಟಲಿಯ ಅಲೆಸ್ಸಾಂಡ್ರಿಯ ಸಮೀಪದ ಮರೆಂಗೋದಲ್ಲಿ ನಡೆದ ನಡೆದ ಸಮರದಲ್ಲಿ ಆಸ್ಟ್ರಿಯನ್ನರನ್ನು ನೆಪೋಲಿಯನ್ ಸೋಲಿಸಿದ. ಫ್ರೆಂಚ್ ಜನರಲ್ ಲೂಯಿ ಚಾರ್ಲ್ಸ್ ಡೆಸಾಯಿಕ್ಸ್ ಯುದ್ಧದಲ್ಲಿ ಹತನಾದ.

1777: ಅಮೆರಿಕನ್ ಕಾಂಗ್ರೆಸ್ `ನಕ್ಷತ್ರ ಮತ್ತು ಪಟ್ಟಿ'ಗಳಿರುವ (ಸ್ಟಾರ್ ಅಂಡ್ ಸ್ಟ್ರೈಪ್ಸ್) ಧ್ವಜವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಧ್ವಜವಾಗಿ ಅಂಗೀಕರಿಸಿತು.

No comments:

Post a Comment