ನಾನು ಮೆಚ್ಚಿದ ವಾಟ್ಸಪ್

Wednesday, January 20, 2016

ಇಂದಿನ ಇತಿಹಾಸ History Today ಜೂನ್ 12

 

ಇಂದಿನ ಇತಿಹಾಸ

ಜೂನ್ 12

ಹಲವು ರಾತ್ರಿಗಳ ಸಂಪೂರ್ಣ ನಿದ್ರಾಹೀನತೆಯ ನಂತರ ಸಂಭವಿಸಬಹುದಾದ ಅಪಾಯವನ್ನು ಒಂದು ಗುಟುಕು 'ಕೆಫಿನ್' (ಕಾಫಿ ಮತ್ತು ಟೀಯ ಉತ್ತೇಜನಾಕಾರಿ ಸಸ್ಯಕ್ಷಾರಸತ್ವ) ಸೇವನೆ ತಡೆಯಬಲ್ಲದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು.

2016: ನವದೆಹಲಿ: ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಗೆದ್ದುಕೊಂಡರುಚೀನಾದ ವಿಶ್ವದ ನಂ.12 ಬ್ಯಾಡ್ಮಿಂಟನ್ ಆಟಗಾರ್ತಿ ಸುನ್ ಯು ಅವರನ್ನು 11-21, 21-14, 21-19 ಅಂತರದಿಂದ ಸೋಲಿಸಿ ಸೈನಾ ಪ್ರಶಸ್ತಿ ತನ್ನದಾಗಿಸಿಕೊಂಡರು. ಮೂಲಕ ಸೈನಾ 2ನೇ ಆಸ್ಟ್ರೇಲಿಯನ್ ಓಪನ್ ಮತ್ತು ಒಟ್ಟು 22 ನೇ ವೃತ್ತಿ ಪರ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಹಿಂದೆ ಸೈನಾ ನೆಹ್ವಾಲ್ ಚೀನಾ ಮೂಲದ ವಿಶ್ವದ ನಂ 2 ಬ್ಯಾಡ್ಮಿಂಟನ್ ಆಟಗಾರ್ತಿ ವಾಂಗ್ ಇವಾನ್ ಅವರನ್ನು 21-8, 21-12 ಗೇಮ್ಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.

2016: ಫ್ಲಾರಿಡಾ (ಅಮೆರಿಕ): ಫ್ಲಾರಿಡಾದ ಓರ್ಲಾಂಡೊದಲ್ಲಿ ಕಿಕ್ಕಿರಿದಿದ್ದ ಸಲಿಂಗಕಾಮಿ ನೈಟ್ ಕ್ಲಬ್ ಒಂದರಲ್ಲಿ ಈದಿನ ಬೆಳಗ್ಗೆ ಅನಾಮಿಕ ಶಸ್ತ್ರಧಾರಿಯೊಬ್ಬ ನಡೆಸಿದ ಯದ್ವಾತದ್ವ ಗುಂಡಿನ ದಾಳಿಯಲ್ಲಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, ಗಾಯಗೊಂಡಿರುವ 53 ಮಂದಿಯನ್ನು ಮೂರು ಆಸ್ಪತ್ರೆಗಳಿಗೆ ದಾಖಲು ಮಾಡಲಾಯಿತು. ಓರ್ಲಾಂಡೋ ಪೊಲೀಸ್ ಮುಖ್ಯಸ್ಥ ಜಾನ್ ಮಿನಾ ಅವರ ಪ್ರಕಾರ ಹಂತಕ ನೈಟ್ ಕ್ಲಬ್ಬಿನಲ್ಲೇ ಸಾವನ್ನಪ್ಪಿದ್ದಾನೆ. ಗುಂಡಿನ ದಾಳಿ ಆರಂಭವಾದ 4 ಗಂಟೆಗಳ ಬಳಿಕ ಹಂತಕ ಸಾವನ್ನಪ್ಪಿದ್ದಾನೆ ಎಂದು ಮಿನಾ ಹೇಳಿದ್ದಾರೆ. ಇದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಹೇಳಿರುವ ಪೊಲೀಸರು ಕೃತ್ಯ ದೇಶೀಯ ಭಯೋತ್ಪಾದಕರಿಂದ ನಡೆದಿದೆಯೇ ಅಥವಾ ಅಂತಾರಾಷ್ಟ್ರೀಯ ಭಯೋತ್ಪಾದಕರಿಂದ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಶೂಟೌಟ್ ಘಟನೆಯ ಬಳಿಕ ಪಲ್ಸ್ ನೈಟ್ ಕ್ಲಬ್ ತನ್ನ ಗ್ರಾಹಕರಿಗೆಹೊರಕ್ಕೆ ಹೋಗಿಎಂಬುದಾಗಿ ಫೇಸ್ಬುಕ್ ಮೂಲಕ ಸೂಚನೆ ನೀಡಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. ಶೂಟೌಟ್ ನಡೆಸಿದ ಶಸ್ತ್ರಧಾರಿ ಕೆಲವರನ್ನು ಒತ್ತೆ ಸೆರೆ ಹಿಡಿದಿರುವುದಾಗಿಯೂ ಮೊದಲಿನ ವರದಿಗಳು ತಿಳಿಸಿದ್ದವು. ಅಮೆರಿಕದಲ್ಲಿ ಒಂದೇ ವಾರದಲ್ಲಿ ನಡೆದ ಎರಡನೇ ಗುಂಡಿನ ದಾಳಿ ಇದಾಗಿದ್ದು, ಶಸ್ತ್ರಧಾರಿಯೊಬ್ಬ ಗಾಯಕಿ ಕ್ರಿಸ್ಟೀನಾ ಗ್ರಿಮ್ಮೀ ಅವರನ್ನು ಗುಂಡಿಟ್ಟು ಕೊಲೆಗೈದ ಒಂದು ದಿನದ ಬಳಿಕ ಈದಿನದ ಶೂಟೌಟ್ ಘಟನೆ ಘಟಿಸಿತು. ಓರ್ಲಾಂಡೋದ ಪ್ಲಾಜಾ ಲೈವ್ ಥಿಯೇಟರ್ನಲ್ಲಿ ಗ್ರಿಮ್ಮೀ ಹತ್ಯೆ ನಡೆದಿತ್ತು. ಗಾಯಕಿ ಗ್ರಿಮ್ಮೀಯನ್ನು ಕೊಂದು ಸ್ವತಃ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿದ 27 ಹರೆಯದ ವ್ಯಕ್ತಿಯನ್ನು ಸೈಂಟ್ ಪೀಟರ್ಸ್ ಬರ್ಗ್ ಕೆವಿನ್ ಜೇಮ್್ಸ ಲೋಯ್ಬುಲ್ ಎಂಬುದಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲಗಂ ಜಿಲ್ಲೆಯ ಖಾಜಿಗುಂದದ ಬಳಿ ಪಹರೆ ನಿರತ ಪೊಲೀಸ್ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದು ನಾಲ್ವರು ಪೊಲೀಸರು ಗಾಯಗೊಂಡರು.

2016: ನವದೆಹಲಿ: ವಿಶ್ವದಲ್ಲಿ ಮೆದುಳಿನ ಕಾಯಿಲೆಗಳು ಅಧಿಕವಾಗುತ್ತಿವೆ. ಇದಕ್ಕೆ ಭಾರತ ಕೂಡಾ ಹೊರತಾಗಿಲ್ಲ. ದೇಶದಲ್ಲಿ ಪ್ರತಿ ವರ್ಷ ಸುಮಾರು 2,500 ಮಕ್ಕಳು ಮೆಡುಲ್ಲೊಬ್ಲಾಸ್ಟೊಮಾ (ಮೆದುಳಗಡ್ಡೆ- ಬ್ರೇನ್ ಟ್ಯೂಮರ್) ಎಂಬ ಪ್ರಾಥಮಿಕ ಮೆದುಳಿನ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವೈದ್ಯರು ಬಹಿರಂಗಪಡಿಸಿದರು. ಭಾರತದಲ್ಲಿ ಒಟ್ಟು 40,000ದಿಂದ 50,000 ಜನರು ಪ್ರತಿ ವರ್ಷ
ಮೆದುಳು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 20ರಷ್ಟು ಮಕ್ಕಳು ಎಂಬುದು ಆತಂಕಕಾರಿ. ಒಂದು ವರ್ಷದ ಹಿಂದೆ ಕಾಯಿಲೆ ಶೇಕಡಾ ಐದರಷ್ಟು ಮಾತ್ರ ಇತ್ತು. ಆದರೆ ಇದೀಗ ಹೆಮ್ಮರವಾಗಿ ಬೆಳೆದಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇಂಥಹ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಮುಂದೆ ಆಗುವ ಅನಾಹುತವನ್ನು ತಡೆಯಲು ಸಾಧ್ಯ. ಶೇಕಡಾ ತೊಂಭತ್ತರಷ್ಟು ಮೆಡುಲ್ಲೊಬ್ಲಾಸ್ಟೊಮಾ ರೋಗಕ್ಕೆ ತುತ್ತಾದವರಿಗೆ ಆರಂಭದಲ್ಲೇ ಚಿಕಿತ್ಸೆ ನೀಡಿ ಕಾಯಿಲೆ ಗುಣಪಡಿಸಲಾಗಿದೆ ಎಂದು ವೈದ್ಯರು ತಿಳಿಸಿದರು.  ರೋಗದ ಕುರಿತು ಬಿಎಲ್ಕೆ ಆಸ್ಪತ್ರೆಯ ನಿರ್ದೇಶಕ ಹಾಗೂ ಶಸ್ತ್ರಚಿಕಿತ್ಸಕ ವಿಕಾಸ್ ಗುಪ್ತಾ ಪ್ರತಿಕ್ರಿಯಿಸಿ, ರೋಗದ ಆರಂಭಿಕ ಲಕ್ಷಣವಾಗಿ ತಲೆಶೂಲೆ ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಹಂತದಲ್ಲಿ ಚಿಕಿತ್ಸೆ ಪಡೆದರೆ ಜೀವಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಮಕ್ಕಳಿಗಾದರೆ ಚಿಕಿತ್ಸೆ ಪಡೆದ ನಂತರ 70ರೊಂ 80 ವರ್ಷ ಜೀವಿಸಬಹುದಾಗಿದೆ ಎಂದು ತಿಳಿಸಿದರು.

2016: ಲಂಡನ್: ವಿದ್ಯಾರ್ಥಿಗಳಿಗೆ ತಾವು ಇಚ್ಛಿಸಿದಲ್ಲಿ ಹುಡುಗರು ಲಂಗ ಮತ್ತು ಹುಡುಗಿಯರು ಪ್ಯಾಂಟ್ ಧರಿಸಿ ಶಾಲೆಗೆ ಬರಬಹುದು ಎಂಬ ವಿಚಿತ್ರ ನಿಯಮವೊಂದನ್ನು ಬ್ರಿಟನ್ ಸರ್ಕಾರ ಜಾರಿಗೊಳಿಸಿತು. ಈಗಾಗಲೇ 80 ಶಾಲೆಗಳು ನಿಯಮವನ್ನು ಅನುಸರಿಸುತ್ತಿದ್ದು ಲಿಂಗತಾರತಮ್ಯ ಹೋಗಲಾಡಿಸುವ ನಿಟ್ಟಿನಿಂದ ನಿಯಮ ಜಾರಿ ಮಾಡಲಾಗಿದೆ ಎನ್ನಲಾಯಿತು. ನಿಯಮದ ಪ್ರಕಾರ ಐದು ವರ್ಷದ ಒಳಗಿನ ಮಕ್ಕಳು ಹುಡುಗ, ಹುಡುಗಿ ಎಂಬ ಭೇದ ಇಲ್ಲದೆ ತಮಗೆ ಬೇಕಾದ ಸಮವಸ್ತ್ರ ಧರಿಸಬಹುದು. ಹೊಸ ನಿಯಮಕ್ಕೆ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಇದು ಮಕ್ಕಳಲ್ಲಿ ಗೊಂದಲವನ್ನುಂಟುಮಾಡುವ ಸಂಭವವಿದೆ ಎಂದು ಹೇಳಿಕೆ ನೀಡಿದವು.
ಹೊಸ ನಿಯಮದಲ್ಲಿ ವಿದ್ಯಾರ್ಥಿಗಳಿಗೆ ಯಾವುದು ಸರಿ ಎನಿಸುತ್ತದೋ ಆ ಉಡುಪನ್ನು ಧರಿಸುವ ಸ್ವಾತಂತ್ರ್ಯರುತ್ತದೆ ಎಂದು ಹೇಳಲಾಯಿತು.
 2016: ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ಕಮಲ್ ನಾಥ್ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಯಿತು. ಜೊತೆಗೇ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಗುಲಾಂ ನಬಿ ಆಜಾದ್ ಅವರಿಗೆ ಉತ್ತರ ಪ್ರದೇಶದ ಉಸ್ತುವಾರಿಯನ್ನೂ, ಕಮಲನಾಥ್ ಅವರಿಗೆ ಪಂಜಾಬ್ ಮತ್ತು ಹರಿಯಾಣದ ಉಸ್ತುವಾರಿಯನ್ನೂ ವಹಿಸಲಾಯಿತು.
2016: ನವದೆಹಲಿ: ಮುಂದಿನ ತಿಂಗಳು 46ನೇ ವರ್ಷವನ್ನು ಪೂರ್ಣಗೊಳಿಸಲು ಸಜ್ಜಾಗಿರುವ ರಾಷ್ಟ್ರದ ಏಕೈಕ ಸಂಸ್ಕೃತ ದಿನಪತ್ರಿಕೆಸುಧರ್ಮಾತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದು ಅಸ್ತಿತ್ವ ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸುತ್ತಿದೆ. ಕರ್ನಾಟಕದ ಮೈಸೂರು ಮೂಲದ ದೈನಿಕದ ಪ್ರಸಾರ ಸಂಖ್ಯೆ 3000 ಮಾತ್ರ ಇದ್ದು, ನೆರವು ನೀಡುವಂತೆ ಸಂಪಾದಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಕೇಂದ್ರದಿಂದ ಈವರೆಗೂ ಯಾವುದೇ ಸ್ಪಂದನೆ ಲಭಿಸಿಲ್ಲನಮಗೆ ಬೆಂಬಲದ ಅಗತ್ಯ ಇದೆ. ವೃತ್ತ ಪತ್ರಿಕೆಯ ವಾರ್ಷಿಕ ಚಂದಾ ದರ ಕೇವಲ 400 ರೂಪಾಯಿ. ಆದರೂ ಪ್ರಸಾರ ಕುಸಿಯುತ್ತಿದೆ. ನಾವು ಪ್ರಧಾನಿ ನರೇಂದ್ರ ಮೋದಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಅವರಿಗೆ ಪತ್ರ ಬರೆದಿದ್ದೇವೆ. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಸಂಪಾದಕ ಸಂಪತ್ ಕುಮಾರ್ ಹೇಳಿಕೆ. ಈಗ ಅವರು ಪತ್ರಿಕೆ ಉಳಿಸಿಕೊಳ್ಳಲು ಸಾರ್ವಜನಿಕರ ಮೊರೆ ಹೊಕ್ಕಿದ್ದಾರೆ. ಪತ್ರಿಕೆಯಲ್ಲಿ ಉದಾರ ದೇಣಿಗೆ ನೀಡುವಂತೆ ಕೋರಿ ಮನವಿ ಪ್ರಕಟಿಸಿದ್ದಾರೆ. ಪತ್ರಿಕೆಗೆ ಹೊಸ ರೂಪ ಕೊಡಲು ಮತ್ತು ಆರು ತಿಂಗಳಿಗೊಮ್ಮೆ ಸುಧರ್ಮಾ ನಿಯತಕಾಲಿಕವೊಂದನ್ನು ತರಲು ಯೋಜಿಸಿದ್ದೇವೆ. ಏಕ ವರ್ಣದ ಆಫ್ಸೆಟ್ ಮುದ್ರಣ ಯಂತ್ರ ಖರೀದಿಗೆ ಅಂದಾಜು 20 ಲಕ್ಷ ರೂಪಾಯಿ ಬೇಕಾಗುತ್ತದೆ. ಇದು ಲಾಭಕ್ಕಾಗಿ ಇರುವ ಪತ್ರಿಕೆಯಲ್ಲ. ಸಂಸ್ಕೃತ ಮತ್ತು ಪತ್ರಿಕೋದ್ಯಮ ಪ್ರೀತಿಯ ಪತ್ರಿಕೆ ಉಳಿಸಲು ಉದಾರ ನೆರವು ನೀಡಿ ಎಂದು ಅವರು ಕೋರಿದರು.  ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ಸಂಸ್ಕೃತ ವಿಧ್ವಾಂಸ ಕಳಲೆ ನಡದೂರು ವರದರಾಜ ಅಯ್ಯಂಗಾರ್ ಅವರು 1970ರಲ್ಲಿ ಪತ್ರಿಕೆಯನ್ನು ಆರಂಭಿಸಿದ್ದರು.

2016: ನವದೆಹಲಿ: ಬಡವರಿಗೆ ಉಚಿತ ಚಿಕಿತ್ಸೆ ನಿರಾಕರಿಸಿದ ಆರೋಪ ಎದುರಿಸುತ್ತಿರುವ ದೆಹಲಿಯ 5 ಖ್ಯಾತ ಖಾಸಗಿ ಆಸ್ಪತ್ರೆಗಳಿಗೆ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರ ಶಾಕ್ ನೀಡಿದ್ದು, 600 ಕೋಟಿ ರೂ. ದಂಡ ಪಾವತಿಸಲು ಸೂಚಿಸಿತು. ದೆಹಲಿ ಸರ್ಕಾರವು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್, ಮ್ಯಾಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಸಾಕೇತ್), ಶಾಂತಿ ಮುಕುಂದ್ ಆಸ್ಪತ್ರೆ, ಧರ್ಮಶೀಲ ಕ್ಯಾನ್ಸರ್ ಆಸ್ಪತ್ರೆ, ಪುಷ್ಪವತಿ ಸಿಂಘಾನಿಯಾ ರಿಸರ್ಚ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗಳಿಗೆ ದಂಡ ಪಾವತಿಸಲು ಸೂಚಿಸಿತು. ದೆಹಲಿ ಸರ್ಕಾರವು 5 ಆಸ್ಪತ್ರೆಗಳು ಸೇರಿದಂತೆ ಒಟ್ಟು 43 ಖಾಸಗಿ ಆಸ್ಪತ್ರೆಗಳಿಗೆ ರಿಯಾಯತಿ ದರದಲ್ಲಿ ಭೂಮಿ ಒದಗಿಸಿವೆ. ಒಟ್ಟು ರೋಗಿಗಳ ಶೇ. 10 ರಷ್ಟು ಬಡವರಿಗೆ ಒಳರೋಗಿಗಳಾಗಿ ಮತ್ತು ಒಟ್ಟು ರೋಗಿಗಳ ಶೇ. 25ರಷ್ಟು ಬಡರೋಗಿಗಳಿಗೆ ಹೊರ ರೋಗಿಗಳಾಗಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ. ಆದರೆ 5 ಆಸ್ಪತ್ರೆಗಳು ನಿಯಮಾವಳಿಗಳಿಗೆ ಅನುಗುಣವಾಗಿ ಬಡವರಿಗೆ ಚಿಕಿತ್ಸೆ ನೀಡಿಲ್ಲ. ಹಾಗಾಗಿ ಆಸ್ಪತ್ರೆಗಳಿಗೆ ದಂಡ ವಿಧಿಸಲಾಗಿದೆ ಎಂದು ದೆಹಲಿ ಸರ್ಕಾರದ ಹೆಚ್ಚುವರಿ ನಿರ್ದೇಶಕ ಡಾ. ಹೇಮ್ ಪ್ರಕಾಶ್ ತಿಳಿಸಿದರು. ನಿಯಮವನ್ನು ಉಲ್ಲಂಘಿಸಿದ ಕಾರಣ 503 ಕೋಟಿ ರೂ. ದಂಡ ಪಾವತಿಸಲು ದೆಹಲಿ ಸರ್ಕಾರವು ನೋಟಿಸ್ ನೀಡಿತು. ಆಸ್ಪತ್ರೆ ಆಡಳಿತ ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಿದೆ ಎಂದು ಫೋರ್ಟಿಸ್ ಆಸ್ಪತ್ರೆ ನೋಟಿಸ್ಗೆ ಪ್ರತಿಕ್ರಿಯೆ ನೀಡಿತು.

2016: ಪಂಜಾಬ್: ಗಡಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಮಾದಕದ್ರವ್ಯ ಹೆರಾಯಿನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಇಬ್ಬರು ಪಾಕಿಸ್ತಾನಿ ವ್ಯಕ್ತಿಗಳನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿತು. ಪಂಬಾಬಿನ ಫಾಕಿಜಾ ಗಡಿಯಲ್ಲಿ ಬೆಳಗಿನ ಜಾವ ಭಾರತಕ್ಕೆ ನುಸುಳತ್ನೆಸಿದ ಮೂರು ಜನರ ಪೈಕಿ ಇಬ್ಬರನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದರು.  ಮತ್ತೋರ್ವನಿಗೆ ಗಾಯವಾಯಿತು. ಮೃತರ ಬಳಿಯಿಂದ 15 ಪ್ಯಾಕೆಟ್ ಮಾದಕದ್ರವ್ಯದ ಜತೆ ಪಿಸ್ತೂಲು, ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದರು.

2016: ನವದೆಹಲಿ: 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು 2002ರಲ್ಲಿ ನಡೆದ ಗೋದ್ರಾ ಹಿಂಸಾಚಾರ ಪ್ರಕರಣದಿಂದಾಗಿ ಹಲವು ಮುಸ್ಲಿಂ ಯುವಕರು ಉಗ್ರವಾದದತ್ತ ಮುಖ ಮಾಡಿದ್ದಾರೆ. ಅಲ್ ಖೈದಾ ಉಗ್ರ ಸಂಘಟನೆ ಸ್ಥಾಪಿಸಿ ಭಾರತದಲ್ಲಿ ಉಗ್ರವಾದ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಕೋರ್ಟಿಗೆ ತಿಳಿಸಿದರು. 2015 ಡಿಸೆಂಬರ್ ಮತ್ತು 2016 ಜನವರಿಯಲ್ಲಿ ದೇಶದ ಹಲವಡೆ ಬಂಧಿಸಲಾದ ಶಂಕಿತ ಭಯೋತ್ಪಾದಕರ ವಿರುದ್ಧ ಪೊಲೀಸರು ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ವಿಷಯವನ್ನು ನಮೂದಿಸಿದರು. ಕೋಮು ಗಲಭೆಗಳ ನಂತರ ಸೇಡು ತೀರಿಸಿಕೊಳ್ಳುವ ಭಾವನೆಯಿಂದ ಹಲವು ಮುಸ್ಲಿಂ ಯುವಕರು ಪಾಕಿಸ್ತಾನಕ್ಕೆ ತೆರಳಿದ್ದರು. ನಂತರ ಜಮಾತ್ ಉದ್ ದವಾ ಅಧ್ಯಕ್ಷ ಹಫೀಜ್ ಸಯೀದ್ ಮತ್ತು ಲಷ್ಕರ್ ತೊಯಿಬಾ ಅಧ್ಯಕ್ಷ ಜಕೀರ್ ಉರ್ ರೆಹಮಾನ್ ಲಖ್ವಿಯನ್ನು ಭೇಟಿ ಮಾಡಿದ್ದಾರೆ. ಜತೆಗೆ ಮಸೀದಿಗಳಲ್ಲಿ ಜಿಹಾದಿ ಭಾಷಣ ಮಾಡುವಾಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು ಗೋದ್ರಾ ಹತ್ಯಾಕಾಂಡದ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ವಿಷಯವಾಗಿ ಯುವಕರ ಮನಃಪರಿವರ್ತನೆ ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸರ ವಿಶೇಷ ಪಡೆ ಕೋರ್ಟ್ಗೆ ತಿಳಿಸಿತು. ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಮೂವರು ಪಾಕ್ ಉಗ್ರರಿಗೆ ಆಶ್ರಯ ನೀಡಿದ್ದ. ಅವರನ್ನು 2001ರಲ್ಲಿ ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು. ಉಗ್ರರು ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಆದರೆ ಅದಕ್ಕೂ ಮುನ್ನ ಎನ್ಕೌಂಟರ್ನಲ್ಲಿ ಮೃತರಾದರು ಎಂದು ಪೊಲೀಸರು ತಿಳಿಸಿದರು.

2016: ನವದೆಹಲಿ: ನವದೆಹಲಿಯ ಕನ್ನೌಟ್ ಪ್ರದೇಶದಲ್ಲಿರುವ ಶಿವ ಸಾಗರ ಎಂಬ ಹೋಟೆಲ್ನಲ್ಲಿ ಮಧ್ಯಾಹ್ನದ ಊಟಕ್ಕಾಗಿ ಬೀದಿ ಮಕ್ಕಳ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಘಟನೆ ಕುರಿತು ತನಿಖೆ ನಡೆಸುವಂತೆ ದೆಹಲಿ ಸರ್ಕಾರ ಆದೇಶಿಸಿತು. ಸಾಮಾಜಿಕ ಕಾರ್ಯಕರ್ತೆ ಸೋನಾಲಿ ಶೆಟ್ಟಿ ಅವರು ಬಡ ಮಕ್ಕಳಿಗೆ ಊಟ ಒದಗಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಮಕ್ಕಳು ಕೊಳಕು ಬಟ್ಟೆಯಲ್ಲಿ ಬಂದಿರುವ ಕಾರಣ ಪ್ರವೇಶವಿಲ್ಲ ಎಂದು ಹೇಳಿ ಮಕ್ಕಳೆಲ್ಲರನ್ನೂ ಹೋಟೆಲ್ನಿಂದ ಹೊರಕ್ಕೆ ಕಳುಹಿಸಲಾಯಿತು ಎಂದು ಹೇಳಲಾಯಿತು.  ದೀದಿ ನಮ್ಮನ್ನು ಊಟ ಕೊಡಿಸಲೆಂದು ಹೋಟೆಲ್ಗೆ ಕರೆದೊಯ್ದರು. ಆದರೆ ಅಂಕಲ್ ನಮ್ಮನ್ನು ಅಲ್ಲಿಂದ ಹೊರದಬ್ಬಿದರು. ದೀದಿ ತಾವೇ ಬಿಲ್ ಪಾವತಿ ಮಾಡುವುದಾಗಿಯೂ ಹೇಳಿದರು. ಆದರೂ ಊಟ ಮಾಡಲು ಅವಕಾಶ ನಿರಾಕರಿಸಲಾಯಿತು. ಬಳಿಕ ನಾವು ಸರವಣ ಭವನದಲ್ಲಿ ಊಟ ಮಾಡಿದೆವುಎಂದು ಬಾಲಕಿಯೊಬ್ಬಳು ತಿಳಿಸಿದಳು.. ಇದಕ್ಕೆ ಪ್ರತಿಕ್ರಿಯಿಸಿರುವ ಹೋಟೆಲ್ ಆಡಳಿತವು, ಮಕ್ಕಳು ಹೋಟೆಲ್ ಒಳಗೆ ತೀರಾ ಶಬ್ದ ಮಾಡುತ್ತಿದ್ದರಿಂದ ಆಚೆ ಕಳುಹಿಸಿದೆವು ಎಂದು ಪ್ರತಿಪಾದಿಸಿತು. ನಮ್ಮ ಗ್ರಾಹಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಲು ನಾವು ಬದ್ಧ. ಗ್ರಾಹಕರಿಗೆ ತೊಂದರೆಯಾದರೆ ಇಂತಹ ಕ್ರಮ ಕೈಗೊಳ್ಳುವ ಹಕ್ಕು ನಮಗಿದೆ ಎಂದು ಆಡಳಿತ ಹೇಳಿತು. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಘಟನೆ ಬಗ್ಗೆ ತನಿಖೆ ಮಾಡುವಂತೆ ಆದೇಶಿಸಿದರು. ಒಂದು ವೇಳೆ ಆರೋಪ ಸಾಬೀತಾದರೆ ಹೋಟೆಲ್ ಲೈಸನ್ಸ್ ರದ್ದುಗೊಳಿಸುವುದಾಗಿ ಅವರು ತಿಳಿಸಿದರು.

2016: ಅಲಹಾಬಾದ್: ಮುಂದಿನ ವರ್ಷ ಉತ್ತರಪ್ರದೇಶ ವಿಧಾನ ಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭಗೊಂಡಿತು. ಪಕ್ಷದ ಸುಮಾರು 300 ಮಂದಿ ನಾಯಕರು ಸಭೆಯಲ್ಲಿ ಪಾಲ್ಗೊಂಡರು. ಪ್ರಧಾನಿ ನರೇಂದ್ರ ಮೊದಿ, ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ಕೆಲವು ಪಕ್ಷ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡರು. ಪಕ್ಷಾಧ್ಯಕ್ಷ ಅಮಿತ್ ಷಾ ಸಭೆಯ ಅಧ್ಯಕ್ಷತೆ ವಹಿಸಿದರು.
ಮೋದಿ ಸರ್ಕಾರ ಪದಗ್ರಹಣದ ಎರಡನೇ ವರ್ಷಾಚರಣೆ ಹಾಗೂ ಕೇಂದ್ರದ ಬಡವರ ಪರ ಯೋಜನೆಗಳ ಪ್ರಚಾರಕ್ಕೆ ಒತ್ತು ನೀಡುವ ಯತ್ನಗಳ ಮಧ್ಯೆ ಸಭೆ ಆರಂಭವಾಯಿತು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಅಸ್ಸಾಂನಲ್ಲಿ ಗಳಿಸಿರುವ ವಿಜಯ ಹಾಗೂ ಕೇರಳ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಬಲ ವೃದ್ಧಿಯಾಗಿರುವ ಉತ್ಸಾಹವನ್ನು ಉತ್ತರ ಪ್ರದೇಶದಲ್ಲಿ ಗಟ್ಟಿಗೊಳಿಸುವ ಗುರಿ ಹೊಂದಿದೆ. ಉತ್ತರಪ್ರದೇಶದಲ್ಲಿ 2014 ಲೋಕಸಭಾ ಚುನಾವಣೆಗಳಲ್ಲಿ ಪಕ್ಷವು 80 ಸ್ಥಾನಗಳ ಪೈಕ 71 ಸ್ಥಾನಗಳನ್ನು ಗೆದ್ದಿತ್ತು. ಐದು ರಾಜ್ಯಗಳಲ್ಲಿ ಚುನಾವಣೆ ಬರಲಿದೆ. ಐದೂ ರಾಜ್ಯಗಳಲ್ಲಿ ಯಾವ ರೀತಿಯ ವ್ಯೂಹವನ್ನು ರಚಿಸಬೇಕು ಎಂಬ ಬಗ್ಗೆ ಚರ್ಚಿಸಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪಿಂದರ್ ಯಾದವ್ ಹೇಳಿದರು.

2009: ಹಲವು ರಾತ್ರಿಗಳ ಸಂಪೂರ್ಣ ನಿದ್ರಾಹೀನತೆಯ ನಂತರ ಸಂಭವಿಸಬಹುದಾದ ಅಪಾಯವನ್ನು ಒಂದು ಗುಟುಕು 'ಕೆಫಿನ್' (ಕಾಫಿ ಮತ್ತು ಟೀಯ ಉತ್ತೇಜನಾಕಾರಿ ಸಸ್ಯಕ್ಷಾರಸತ್ವ) ಸೇವನೆ ತಡೆಯಬಲ್ಲದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು. ದಿಢೀರ್ ಸಂಭವಿಸುವ ಅಪಾಯಗಳನ್ನು ಅಳೆಯುವ ಕಂಪ್ಯೂಟರೀಕೃತ ವ್ಯವಸ್ಥೆ 'ಬಾರ್ಟ್' (ಬಲೂನ್ ಅನಲಾಗ್ ರಿಸ್ಕ್ ಟಾಸ್ಕ್) ಅನ್ವಯ, 'ತೀವ್ರ ನಿದ್ರಾಹೀನತೆಯ ನಂತರವೂ ಕೆಫಿನ್ ಸೇವಿಸಿದ ವ್ಯಕ್ತಿ ಮಾತ್ರ ಹೆಚ್ಚಿನ ತೊಂದರೆ ಎದುರಿಸುವ ನಡವಳಿಕೆ ತೋರಿಸುವುದಿಲ್ಲ' ಎಂಬುದನ್ನು ಸಂಶೋಧನಾ ಫಲಿತಾಂಶ ಪ್ರಕಟಪಡಿಸಿತು. ಈ ಸಂಶೋಧನಾ ಪ್ರಬಂಧವನ್ನು (ಸ್ಲೀಪ್ 2009) ವೃತ್ತಿಪರ ನಿದ್ರಾ ಸಂಸ್ಥೆಗಳ ಒಕ್ಕೂಟದ 23ನೇ ವಾರ್ಷಿಕ ಸಭೆಯಲ್ಲಿ ಮಂಡಿಸಲಾಯಿತು.

2009: ಪಾಕಿಸ್ಥಾನದ ನೌಷೇರಾ ನಗರದ ಮಸೀದಿ ಆವರಣದಲ್ಲಿ ಹಾಗೂ ಲಾಹೋರಿನ ಧಾರ್ಮಿಕ ಸಂಸ್ಥೆಯೊಂದರ ಅಂಗಣಲ್ಲಿ ನಡೆದ ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ವಿರೊಧಿ ಧರ್ಮಗುರು ಸೇರಿದಂತೆ ಹನ್ನೊಂದು ಮಂದಿ ಮೃತರಾದರು. 'ಆತ್ಮಾಹುತಿ ಬಾಂಬ್ ಸಂಸ್ಕೃತಿ ಇಸ್ಲಾಮ್ ಧರ್ಮಕ್ಕೆ ವಿರುದ್ಧ' ಎಂದು ಫತ್ವಾ ಹೊರಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧರ್ಮಗುರು ಮೌಲಾನ ಸರ್‌ಫ್ರಾಜ್ ನಯೀಮ್ ಹಾಗೂ ಇತರ ಮೂವರು ಲಾಹೋರ್‌ನ ಜೈಮಾ ನಯೀಮಾ ಧರ್ಮ ಸಂಘಟನೆಯ ಆವರಣದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮೃತರಾದರು.

2009: ಪಾಕಿಸ್ಥಾನದಲ್ಲಿನ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದವನ್ನು ನಿಗ್ರಹಿಸುವ ಸಲುವಾಗಿ 300 ದಶಲಕ್ಷ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಇತರ ಸಲಕರಣೆಗಳನ್ನು ಚೀನಾದಿಂದ ಖರೀದಿಸಲು ಪಾಕಿಸ್ಥಾನ ಒಪ್ಪಂದವೊಂದಕ್ಕೆ ಸಹಿ ಹಾಕಿದೆ ಎಂದು ಪಾಕಿಸ್ಥಾನದ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲ್ಲಿಕ್ ಅವರು ಬೀಜಿಂಗ್‌ನಲ್ಲಿ ಪ್ರಕಟಿಸಿದರು.

2009: ಮಾನವ ತ್ಯಾಜ್ಯದಿಂದ ಕಡಿಮೆ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದಿಸುವ ಶೌಚಾಲಯ ತಾಂತ್ರಿಕತೆಯನ್ನು ಪ್ರಥಮ ಬಾರಿಗೆ ಅಭಿವೃದ್ಧಿ ಪಡಿಸಿದ ಸುಲಭ್ ಅಂತರರಾಷ್ಟ್ರಿಯ ಸಂಸ್ಥೆಯ ಸಂಸ್ಥಾಪಕ ಬಿಂದೇಶ್ವರ ಪಾಠಕ್ ಅವರಿಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಪುನರ್‌ಬಳಕೆ ಇಂಧನ ಪ್ರಶಸ್ತಿ ನೀಡಿತು. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

2009: ನೇಪಾಳದ ಮಾಜಿ ಉಪ ಪ್ರಧಾನಿ ಹಾಗೂ ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಶೈಲಜಾ ಆಚಾರ್ಯ (65) ದೀರ್ಘ ಕಾಲದ ಅಸ್ವಸ್ಥತೆಯ ನಂತರ ಕಠ್ಮಂಡುವಿನಲ್ಲಿ ನಿಧನರಾದರು. ಹಲವು ವರ್ಷಗಳಿಂದ ನ್ಯೂಮೋನಿಯಾ ಹಾಗೂ ಮರೆಗುಳಿ ರೋಗದಿಂದ ಬಳಲುತ್ತಿದ್ದ ಅವರನ್ನು ಎರಡು ದಿನ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದಕ್ಕೂ ಮೊದಲ ಅವರು ಬ್ಯಾಂಕಾಕ್ ಮತ್ತು ಕಠ್ಮಂಡು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಬಾಲಿವುಡ್ ನಟಿ ಮೊನಿಷಾ ಕೊಯಿರಾಲ ಅವರ ಸಂಬಂಧಿಯಾದ ಶೈಲಜಾ ಅವರು, ದೊರೆ ಮಹೇಂದ್ರ ಅವರಿಗೆ ಕಪ್ಪು ಬಾವುಟ ತೋರಿಸಿದ ಕಾರಣಕ್ಕೆ 1961ರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.

2009: ನವೀಕರಣಕ್ಕಾಗಿ ಕೆಲ ತಿಂಗಳುಗಳಿಂದ ಮುಚ್ಚಿದ್ದ ನವದೆಹಲಿಯ ಶಂಕರ್ ಅಂತಾರಾಷ್ಟ್ರೀಯ ಬೊಂಬೆ ಸಂಗ್ರಹಾಲಯವಾದ ದೇಶದ ಅತಿದೊಡ್ಡ ಬೊಂಬೆ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಯಿತು. ಹರಪ್ಪ ನಾಗರಿಕತೆಯ ಬೊಂಬೆಯಿಂದ ಹಿಡಿದು ಬಾರ್ಬಿವರೆಗಿನ ಬೊಂಬೆಗಳ ಮಾಯಾಲೋಕವೊಂದು ಇಲ್ಲಿ ಮೈದಳೆದಿದೆ. ಅಲ್ಲಾವ್ದದೀನ್, ಆಲಿಬಾಬಾ, ಸ್ನೋವೈಟ್, ಸಿಂಡ್ರೆಲಾ ಬೊಂಬೆಗಳಂತೂ ಮನಸೆಳೆಯುತ್ತವೆ. ಜತೆಗೆ ಇವುಗಳ ಬಗೆಗಿನ ಸಮಗ್ರ ಮಾಹಿತಿ ಇರುವುದು ಕೂಡ ಈ ಸಂಗ್ರಹಾಲಯದ ವಿಶೇಷ. ಅಂತಾರಾಷ್ಟ್ರೀಯ ಬೊಂಬೆ ಸಂಗ್ರಹಾಲಯ 1985ರಲ್ಲಿ ಸರ್ಕಾರ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ತಲೆ ಎತ್ತಿತು. ಇಲ್ಲಿ 90 ದೇಶಗಳ 7000ಕ್ಕೂ ಹೆಚ್ಚು ಬೊಂಬೆಗಳಿವೆ.

2008: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕಾರ್ಯಕರ್ತರು ಸ್ಥಳೀಯ ಜನರು, ಪ್ರವಾಸಿಗರು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಲಿಗುರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶಾಂತಿ ಪಾಲನೆಗಾಗಿ ಸೇನೆ ಕರೆಸಲಾಯಿತು.

2007: ಗಿನ್ನೆಸ್ ದಾಖಲೆ ನಿರ್ಮಾಣದ ಸಲುವಾಗಿ ಚೆನ್ನೈಯ ಕಾಸ್ಮೋಪಾಲಿಟನ್ ಕ್ಲಬ್ ಈಜುಗೊಳದಲ್ಲಿ 15 ತಿಂಗಳ ಮಗುವೊಂದು (ಒಂದೂ ಕಾಲು ವರ್ಷ) ನಾಲ್ಕು ಮೀಟರ್ ದೂರವನ್ನು ಈಜಿತು. 2006ರ ಮಾರ್ಚ್ 13ರಂದು ಜನಿಸಿದ ಮಹರಂತ್ ಕಮಲಾಕರ್ ಈ ಸಾಧನೆ ಮಾಡಿದ ಪೋರ. ಈ ಬಾಲಕನ ಹೆತ್ತವರ ಪ್ರಕಾರ ಆಸ್ಟ್ರೇಲಿಯಾದ ಬಾಲಕನೊಬ್ಬ ಎರಡೂವರೆ ವರ್ಷದವನಾಗಿದ್ದಾಗ 80 ನಿಮಿಷಗಳ ಕಾಲ ತೇಲಾಡಿದ್ದಷ್ಟೇ ಈವರೆಗಿನ ದಾಖಲೆ.

2007: ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶದಲ್ಲಿ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 103ಕ್ಕೆ ಏರಿತು.

2007: ವಿಶ್ವಸಂಸ್ಥೆಯ ಸಮರ ಅಪರಾಧಗಳ ನ್ಯಾಯಮಂಡಳಿಯು ಕ್ರೊಯೇಷಿಯಾದ ಮಾಜಿ ಸೆರ್ಬ್ ಬಂಡಾಯ ನಾಯಕ ಮಿಲನ್ ಮಾರ್ಟಿಕ್ ಅವರಿಗೆ 35 ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು. ಕ್ರೊಯೇಷಿಯಾದಲ್ಲಿ ಪ್ರತ್ಯೇಕ ಸೆರ್ಬ್ ರಾಷ್ಟ್ರ ಸ್ಥಾಪನೆಯ ಸಲುವಾಗಿ ಕ್ರೊಯೇಷಿಯನ್ನರು, ಮುಸ್ಲಿಮರು ಮತ್ತು ಸೆರ್ಬೇತರ ನಾಗರಿಕರ ಕೊಲೆ, ಚಿತ್ರಹಿಂಸೆ ನಡೆಸಿದ್ದರು ಎಂದು ಆಪಾದಿಸಲಾಗಿತ್ತು.

2007: ವೇತನ ಬಾಕಿ ಹಾಗೂ ಬಡ್ತಿಗೆ ಸಂಬಂಧಿಸಿದಂತೆ ಭಾರತೀಯ ವಿಮಾನಯಾನ ಸಂಸ್ಥೆ `ಇಂಡಿಯನ್' ಆಡಳಿತ ಮಂಡಳಿಯು ತಾನು ನೀಡಿದ್ದ ಭರವಸೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ ಎಂದು ಆಪಾದಿಸಿ ಸಂಸ್ಥೆಯ 12,000ಕ್ಕೂ ಹೆಚ್ಚು ಮಂದಿ ಭೂ ಸಿಬ್ಬಂದಿ ರಾತ್ರಿ ಮಿಂಚಿನ ಮುಷ್ಕರ ಆರಂಭಿಸಿದರು.

2006: ಹಿರಿಯ ಪತ್ರಕರ್ತ ಎಸ್.ವಿ. ಹೆಗಡೆ (74) ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಯುಕ್ತ ಕರ್ನಾಟಕದ ಹುಬ್ಬಳ್ಳಿ ಆವೃತ್ತಿಯ ಸಹ ಸಂಪಾದಕರಾಗಿ ಅವರು ನಿವೃತ್ತರಾಗಿದ್ದರು.

2006: ಸೌರಶಕ್ತಿಯಿಂದ ಹಾರಬಲ್ಲ ವಿಶ್ವದ ಪ್ರಪ್ರಥಮ ವಿಮಾನವೊಂದು ಪ್ಯಾರಿಸ್ ಹೊರವಲಯದ ವಿಮಾನ ನಿಲ್ದಾಣದಲ್ಲಿ ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ, ವಾರಾಂತ್ಯದಲ್ಲಿ ಲಂಡನ್ನಿಗೆ ಹಾರಿ `ಇತಿಹಾಸ' ನಿರ್ಮಿಸಲು ಸಜ್ಜಾಯಿತು.

2006: ಕೆನಡಾದ ವೃತ್ತಪತ್ರಿಕಾ ದೊರೆ ಕೆನ್ ಥಾಮ್ಸನ್ ಈ ದಿನ ನಿಧನರಾದರು.

2006: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕವಿ ಡಾ. ಸಿದ್ದಲಿಂಗಯ್ಯ ಅಧಿಕಾರ ವಹಿಸಿಕೊಂಡರು.

2006: ವಿದೇಶೀ ನೇರ ಬಂಡವಾಳ ಹೂಡಿಕೆಗೆ (ಎಫ್ ಡಿಐ) ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಕರ್ನಾಟಕ ಮೂಲದ ನಾಲ್ಕು ವಿಶೇಷ ಆರ್ಥಿಕ ವಲಯಗಳಿಗೆ ಮಂಜೂರಾತಿ ನೀಡಿತು. ರಾಜ್ಯ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್ ಜಿಸಿ) ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್, ಮಾಹಿತಿ ತಂತ್ರಜ್ಞಾನ ರಂಗದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಇನ್ಫೋಸಿಸ್ ಟೆಕ್ನಾಲಜೀಸ್ ನ ಪ್ರಸ್ತಾವ, ಬೆಂಗಳೂರಿನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಉದ್ದೇಶಿಸಿರುವ ಹಿಸ್ಕಿಲ್ ಪ್ರಸ್ತಾವ ಮತ್ತು ಮಂಗಳೂರಿನಲ್ಲಿ ಅಸಾಂಪ್ರದಾಯಿಕ ಇಂಧನ ವಲಯದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಉದ್ದೇಶಿಸಿರುವ ಸುಜ್ಲೋನ್ ಪ್ರಸ್ತಾವಗಳಿಗೆ ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವ ಏಕಗವಾಕ್ಷಿ ಸಂಸ್ಥೆಯಾಗಿರುವ `ಮಂಜೂರಾತಿಗಳ ಮಂಡಳಿ'ಯು (ಬೋರ್ಡ್ ಆಫ್ ಅಪ್ರೂವಲ್ಸ್- ಬಿಒಎ)  ಔಪಚಾರಿಕ ಒಪ್ಪಿಗೆ ನೀಡಿತು.

1997: ಸೀತಾರಾಂ ಕೇಸರಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.

1996: ನೂತನ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು.

1957: ಪಾಕಿಸ್ಥಾನದ ಮಾಜಿ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್ ಜನ್ಮದಿನ. 50ಕ್ಕೂ ಹೆಚ್ಚು ಟೆಸ್ಟ್ ಮ್ಯಾಚುಗಳಲ್ಲಿ ನಿರಂತರವಾಗಿ ಆಡಿದ ಮೊತ್ತ ಮೊದಲ ಪಾಕಿಸ್ಥಾನಿ ಕ್ರಿಕೆಟ್ ಆಟಗಾರ ಈ ವ್ಯಕ್ತಿ.

1949: ಸಾಹಿತಿ ನೆಲೆಮನೆ ದೇವೇಗೌಡ ಜನನ.

1944: ಸಾಹಿತಿ ಎಂ.ಜಿ. ರೇಣುಕಾ ಪ್ರಸಾದ್ ಜನನ.

1942: ಯಹೂದಿ ಬಾಲಕಿ ಆನ್ ಫ್ರಾಂಕ್ (1929-45) ತನ್ನ 13ನೇ ಜನ್ಮದಿನದಂದು ದಿನಚರಿ ಬರೆಯಲು ಆರಂಭಿಸಿದಳು. 1944ರ ವರೆಗಿನ ಅವಧಿಯ ಈ ದಿನಚರಿಯ ದಾಖಲೆಗಳು ಆಕೆಯ ಕುಟುಂಬ ಸದಸ್ಯರು ನಾಝಿಗಳು ಯಹೂದಿಗಳ ವಿರುದ್ಧ ನಡೆಸಿದ ದೌರ್ಜನ್ಯದಿಂದ ಪಾರಾಗಲು ಆಮ್ ಸ್ಟರ್ ಡ್ಯಾಮಿನಲ್ಲಿ ಅಡಗಿಕೊಂಡಿದ್ದ ಎರಡು ವರ್ಷಗಳ ವಿವರಗಳನ್ನು ಒಳಗೊಂಡಿದೆ. ಈ ದಿನಚರಿ 50ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಆಮ್ ಸ್ಟರ್ ಡ್ಯಾಮಿನಲ್ಲಿ ಫ್ರಾಂಕ್ ಕುಟುಂಬ ಅಡಗಿಕೊಂಡಿದ್ದ ಪ್ರಿನ್ಸೆಂಗ್ರಾಚ್ ಕಾಲುವೆ ಈಗ ಮ್ಯೂಸಿಯಂ ಆಗಿದೆ.

1929: ಯಹೂದಿ ಬಾಲಕಿ ಅನ್ನೆ ಫ್ರಾಂಕ್ ಈದಿನ ಫ್ರಾಂಕ್ ಫರ್ಟಿನಲ್ಲಿ ಜನಿಸಿದಳು. 1942ರಲ್ಲಿ ಇದೇ ದಿನ ತನ್ನ 13ನೇ ಜನ್ಮದಿನದಂದು ಈಕೆ ತನ್ನ ದಿನಚರಿ ಬರೆಯಲು ಆರಂಭಿಸಿದಳು.

1924: ಅಮೆರಿಕದ 41ನೇ ಅಧ್ಯಕ್ಷ ಜಾರ್ಜ್ ಬುಷ್ ಜನ್ಮದಿನ.

1906: ಸಾಹಿತಿ ತ.ಸು.ಶಾಮರಾವ್ ಅವರು ಸುಬ್ಬಣ್ಣ- ಲಕ್ಷ್ಮೀ ದೇವಮ್ಮ ದಂಪತಿಯ ಪುತ್ರನಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ ಜನಿಸಿದರು.

1915: ಸಾಹಿತಿ ಸಿ.ಕೆ. ನಾಗರಾಜರಾವ್ ಜನನ.

1902: ಸಾಹಿತಿ ಎನ್. ಎಸ್. ನಾರಾಯಣಶಾಸ್ತ್ರಿ ಜನನ.

1897: ಸ್ವಿಸ್ ಕಟ್ಲೆರಿ ನಿರ್ಮಾಪಕ ಕಾರ್ಲ್ ಎಲ್ಸನರ್ ತಮ್ಮ `ದಿ ಆಫೀಸರ್ ಅಂಡ್ ಸ್ಪೋರ್ಟ್ ನೈಫ್' ಹೆಸರಿನ ತನ್ನ ಪೆನ್- ಚೂರಿಗೆ ಪೇಟೆಂಟ್ ಪಡೆದರು. ಈ ಬಹೂಪಯೋಗಿ ಚೂರಿ ಈಗ `ಸ್ವಿಸ್ ಆರ್ಮಿ ನೈಫ್' ಎಂದೇ ಖ್ಯಾತಿ ಪಡೆದಿದೆ.  ಈ ಚೂರಿ ತಯಾರಿ ಕಂಪೆನಿಗೆ ಕಾರ್ಲ್ ತಮ್ಮ ತಾಯಿ ವಿಕ್ಟೋರಿಯಾಳ ಹೆಸರು ಇರಿಸಿದರು.

1842: ಇಂಗ್ಲಿಷ್ ಶಿಕ್ಷಣ ಹಾಗೂ ಪಬ್ಲಿಕ್ ಶಾಲಾ ವ್ಯವಸ್ಥೆಯನ್ನು ಸುಧಾರಿಸಿದ ರಗ್ಬಿಯ ಹೆಡ್ ಮಾಸ್ಟರ್ ಥಾಮಸ್ ಆರ್ನಾಲ್ಡ್ ತಮ್ಮ 47ನೇ ಹುಟ್ಟು ಹಬ್ಬಕ್ಕೆ ಒಂದು ದಿನ ಮೊದಲು ಮೃತರಾದರು. ಇವರು ಖ್ಯಾತ ಇಂಗ್ಲಿಷ್ ಕವಿ ಮ್ಯಾಥ್ಯೂ ಅರ್ನಾಲ್ಡ್ ಅವರ ತಂದೆ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment