ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂʼ
ಯಕ್ಷ ಪುರುಷೋತ್ತಮ ಶ್ರೀ ದೀಪಕ್ ರಾವ್ ಪೇಜಾವರ ಅವರ ‘ಹರಿ ದರುಶನ - ಏಕ ವ್ಯಕ್ತಿ ನವರೂಪಂ’ ಎಂಬ ಯಕ್ಷಗಾನ ಪ್ರದರ್ಶನ ಇದೀಗ ಶಾಲೆ.ಕಾಮ್ ನಲ್ಲಿ ನಡೆಯುತ್ತಿದೆ.
ಇದರಲ್ಲಿ ದೀಪಕ್ ಅವರು ಒಂಬತ್ತು ಪಾತ್ರಗಳನ್ನು ಸ್ವತಃ ತಾವೇ ನಿರ್ವಹಿಸಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ ಪ್ರದರ್ಶನ ಇದು. ಸಂಪೂರ್ಣ ಪ್ರಸ್ತುತಿಯು ಸುಧನ್ವ ಮೋಕ್ಷವನ್ನು ಆಧರಿಸಿದೆ. ಇದು ಜೈಮಿನಿ ಭಾರತದಿಂದ ಆಯ್ಕೆ ಮಾಡಿರುವ ಉಪಕಥೆ.
ಹಂಸಧ್ವಜ, ಧೂತ, ಸುಧನ್ವ, ಸುಗರ್ಭೆ, ಕುವಳೆ, ಪ್ರಭಾವತಿ, ಅರ್ಜುನ, ಅನುಸಾಲ್ವ, ಕೃಷ್ಣ ಎಂಬ ಒಂಬತ್ತು ಪಾತ್ರಗಳನ್ನೂ ದೀಪಕ್ ಅನಾಯಾಸವಾಗಿ ಸಮರ್ಥವಾಗಿ ನಿರ್ವಹಿಸಿದ್ದಾರೆ.
ಮೂಲತಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯವರಾದ ದೀಪಕ್ ಪ್ರಸ್ತುತ ಬಹರೇನಿನ ಅಲ್ ನೂರ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದಾರೆ.
ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದ ದೀಪಕ್ ಸ್ವಲ್ಪ ಕಾಲ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದರು.
ʼಹರಿದರುಶನ- ಏಕ ವ್ಯಕ್ತಿ ನವರೂಪಂʼ ಗಂಡು ಕಲೆ ಯಕ್ಷಗಾನದ ಇತಿಹಾಸದಲ್ಲಿಯೇ ಒಂದು ವಿನೂತನ ಪ್ರಯೋಗ. ಇದರ ಸೊಬಗನ್ನು ನೋಡಿಯೇ ಆನಂದಿಸಬೇಕು.
ಶಾಲೆ.ಕಾಮ್ ನಲ್ಲಿ (Shaale.com) ಜುಲೈ 29ರ ಬೆಳಗ್ಗೆ 8.30ರಿಂದ ಇದರ ಪ್ರದರ್ಶನ ಆರಂಭವಾಗಿದ್ದು, ಆಗಸ್ಟ್ 29ರ ಮಧ್ಯಾಹ್ನ 12.30ರವರೆಗೆ ವೀಕ್ಷಣೆಗೆ ಲಭಿಸುತ್ತದೆ.
ಯಕ್ಷಗಾನ ಪ್ರಯೋಗದ ಒಂದು ವಿಡಿಯೋ ಝಲಕ್ ಇಲ್ಲಿದೆ:
ಕಲಾ ಪ್ರೇಮಿಗಳು https://shaale.com/watch/ಹರಿದರುಶನ ಈ ಕೊಂಡಿಯನ್ನು (ಲಿಂಕ್) ಬಳಸಿ ಇದರ ಸ್ವಾದವನ್ನು ಆಸ್ವಾದಿಸಬಹುದು.- ನೆತ್ರಕರೆ ಉದಯಶಂಕರ
No comments:
Post a Comment