ಯುಗಾದಿ ಉತ್ಸವ ಆಚರಣೆ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ೨೦೨೬ ಮಾರ್ಚ್ ೧೯ರ ಗುರುವಾರ ಪರಾಭವ ಸಂವತ್ಸರದ ಯುಗಾದಿ ಉತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು.
ಹೊಸ ವರ್ಷದ ಸಲುವಾಗಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ಹಾಗೂ ಸಪರಿವಾರ ದೇವರನ್ನು ವಿಶೇಷವಾಗಿ ಹೂ ಹಾರಗಳಿಂದ ಅಲಂಕರಿಸಲಾಗಿತ್ತು.
ಪುಷ್ಪಾಲಂಕಾರ ಸೇವೆಯನ್ನು ಶ್ರೀ ಮುನಿರಾಜು ಮತ್ತು ಕುಟುಂಬ, ವಸ್ತ್ರ ಸೇವೆಯನ್ನು ಶ್ರೀ ನಾರಾಯಣ ಸ್ವಾಮಿ ಮತ್ತು ಕುಟುಂಬದವರು ಕೈಗೊಂಡಿದ್ದರು. ದೇವಾಲಯದ ಅರ್ಚಕ ಶ್ರೀ ನಾಗೇಂದ್ರ ಭಟ್ ಅವರು ಪಂಚಾಂಗದ ಫಲಾಫಲಗಳನ್ನು ವಿವರಿಸಿ, ಬಳಿಕ ಪೂಜಾ ಕೈಂಕರ್ಯ ನೆರವೇರಿಸಿದರು.
ಭಕ್ತರಿಂದ ಭಜನಾ ಸೇವೆ ನಡೆಯಿತು. ಬೇವು-ಬೆಲ್ಲ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದ ವಿಡಿಯೋ, ಕೆಲವು ಚಿತ್ರಗಳು ಇಲ್ಲಿವೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.


No comments:
Post a Comment