ನಾನು ಮೆಚ್ಚಿದ ವಾಟ್ಸಪ್

Monday, August 15, 2022

PARYAYA: ದೇಶದಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ: ಶ್ರೀ ...

 ದೇಶದಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ:

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ ಅನುರಣನ

ಬೆಂಗಳೂರು: ದೇಶದಾದ್ಯಂತ ೨೦೨೨ರ ಆಗಸ್ಟ್‌ ೧೫ರ ದಿನವಾದ ಸೋಮವಾರ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು. ಸ್ವತಂತ್ರ್ಯದ ೧೦೦ನೇ ವರ್ಷದ ವೇಳೆಗೆ ಭಾರತ ಸಾಧಿಸಬೇಕಾದ ಸಾಧನೆಗಾಗಿ ಮುಂದಿನ ೨೫ ವರ್ಷಗಳ ಮಾರ್ಗಸೂಚಿಯನ್ನು ನವದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು. ಭಾರತದ ಪ್ರಗತಿಗಾಗಿ ೫ ಪ್ರತಿಜ್ಞೆ, ಮಹಿಳೆಯರನ್ನು ಗೌರವಿಸುವುದಕ್ಕಾಗಿ ಸ್ಪಷ್ಟ ಕರೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ಸ್ವೀಕರಿಸದಂತೆ ಸಾರ್ವಜನಿಕರಿಗೆ ಕರೆ ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣದತ್ತ ಗಮನ ಹರಿಸುವಂತೆ ತಮ್ಮ ೮೩ ನಿಮಿಷಗಳ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಕರೆಕೊಟ್ಟರು.

ಪ್ರಧಾನಿ ಕರೆಯಂತೆ ಆಗಸ್ಟ್‌ ೧೩ರಿಂದಲೇ ಮನೆ ಮನೆಗಳಲ್ಲೂ ತ್ರಿವರ್ಣಧ್ವಜ ಹಾರಿಸುವುದರೊಂದಿಗೆ ಅಮೃತ ಮಹೋತ್ಸವ ಸಂಭ್ರಮ ಆರಂಭವಾದರೆ, ಸೋಮವಾರ ಧ್ವಜ ಸಂಚಲನ, ಧ್ವಜಾರೋಹಣ, ಸಾರ್ವಜನಿಕ ಸಮಾರಂಭ, ಮೆರವಣಿಗೆಗಳು, ಜಯಘೋಷಗಳೊಂದಿಗೆ ಅಮೃತ ಮಹೋತ್ಸವ ಸಂಭ್ರಮ ಕಳೆಕಟ್ಟಿತು. ಕಾಂಗ್ರೆಸ್‌ ಪಕ್ಷದ ವತಿಯಿಂದ ಸಂಘಟಿಸಲಾದ ಸ್ವಾತಂತ್ರ್ಯ ನಡಿಗೆಗೂ ಜನಸ್ಪಂದನೆ ವ್ಯಕ್ತವಾಯಿತು.


ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ  ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸ್ವಾತಂತ್ರ ಸಂಭ್ರಮಾಚರಣೆ ನಡೆಯಿತು. ಹಿರಿಯ ಶಿಕ್ಷಕಿ ಲಕ್ಷ್ಮಮ್ಮ ಧ್ವಜಾರೋಹಣ ನೆರವೇರಿಸಿದರು. ಜಿ.ಕೆ. ನಾಯ್ಡು ಶಾಲೆಯ ಮಕ್ಕಳು ಧ್ವಜಸಂಚಲನ ನಡೆಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಶ್ರೀ ಬಾಲಾಜಿ ಕೃಪಾ ಬಡಾವಣೆಯ ಸ್ವಾತಂತ್ರ್ಯ ಅಮೃತೋತ್ಸವ ಸಂಭ್ರಮದ ವಿಡಿಯೋವನ್ನು ಮೇಲೆ ನೋಡಿರಿ.

ವಿಶ್ವದಾದ್ಯಂತ ಪ್ರಮುಖ ಕಟ್ಟಡಗಳಲ್ಲಿ ಭಾರತೀಯ ಧ್ವಜದ ಮೂರು ಬಣ್ಣಗಳಲ್ಲಿ ಕಟ್ಟಡಗಳು ಕಂಗೊಳಿಸಿದವು. (ಕೆಳಗಿನ ವಿಡಿಯೋ ನೋಡಿ)



PARYAYA: ದೇಶದಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ: ಶ್ರೀ ...:   ದೇಶದಾದ್ಯಂತ ಸ್ವಾತಂತ್ರ್ಯ  ಅಮೃತ  ಮಹೋತ್ಸವ ಸಂಭ್ರಮ: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ ಅನುರಣನ ಬೆಂಗಳೂರು: ದೇಶದಾದ್ಯಂತ ೨೦೨೨ರ ಆಗಸ್ಟ್‌ ೧೫ರ ದಿನವಾದ ಸೋಮವಾರ ...

No comments:

Post a Comment