ಇಂದಿನ ಇತಿಹಾಸ History
Today ಜನವರಿ
19
2021: ನವದೆಹಲಿ
: ಸಂಸತ್ ಸದಸ್ಯರು ಮತ್ತು ಇತರರಿಗೆ ಸಂಸತ್ತು ಕ್ಯಾಂಟೀನ್ಗಳಲ್ಲಿ ನೀಡಲಾಗುವ ಆಹಾರದ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಹೀಗಾಗಿ ಇಲ್ಲಿನ ಆಹಾರ ದುಬಾರಿಯಾಗಲಿದೆ ಎಂದು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ 2021 ಜನವರಿ 19ರ ಮಂಗಳವಾರ ತಿಳಿಸಿದರು.
ಬಿರ್ಲಾ ಅವರು ಈ ಕ್ರಮದ ಆರ್ಥಿಕ ಪರಿಣಾಮಗಳನ್ನು ನಿರ್ದಿಷ್ಟಪಡಿಸದಿದ್ದರೂ, ಸಬ್ಸಿಡಿ ಕೊನೆಗೊಳ್ಳುವುದರಿಂದ ಲೋಕಸಭಾ ಸಚಿವಾಲಯವು ವಾರ್ಷಿಕವಾಗಿ ೮ ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಉಳಿಸಬಹುದು ಎಂದು ಅಂದಾಜು ಮಾಡಲಾಗಿದೆ.ಜನವರಿ ೨೯ ರಂದು ಆರಂಭವಾಗಲಿರುವ ಮುಂದಿನ ಸಂಸತ್ತಿನ ಅಧಿವೇಶನದ ಸಿದ್ಧತೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿರ್ಲಾ, ಉತ್ತರ ರೈಲ್ವೆಯ ಬದಲಿಗೆ ಸಂಸತ್ತು ಕ್ಯಾಂಟೀನುಗಳನ್ನು ಇನ್ನು ಐಟಿಡಿಸಿ ನಡೆಸಲಿದೆ ಎಂದು ಹೇಳಿದರು. ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಕೋವಿಡ್-೧೯ ಪರೀಕ್ಷೆಗೆ ಒಳಪಡುವಂತೆ ಎಲ್ಲ ಎಲ್ಲಾ ಸಂಸತ್ ಸದಸ್ಯರನ್ನು ಕೋರಲಾಗುವುದು ಎಂದು ಬಿರ್ಲಾ ಹೇಳಿದರು.(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬೆಂಗಳೂರು
: ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ೨೦೧೧ರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ 2021 ಜನವರಿ
19ರ ಮಂಗಳವಾರ ಎತ್ತಿಹಿಡಿಯಿತು ಮತ್ತು ತತ್ ಕ್ಷಣವೇ ಹೆಚ್ಚುವರಿ ವಿಶೇಷ ನ್ಯಾಯಾಲಯಗಳನ್ನು ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಈ ಸಂಬಂಧ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಬಿ.ಎ. ಪಾಟೀಲ ಅವರಿದ್ದ ವಿಭಾಗೀಯ ಪೀಠ, ವಿಶೇಷವಾಗಿ ಎಲ್ಲಾ ಜಿಲ್ಲೆಗಳಲ್ಲೂ ನ್ಯಾಯಾಲಯ ತೆರೆಯುವಂತೆ ತಿಳಿಸಿತು.
‘ಬೆಂಗಳೂರು ನಗರದಲ್ಲಿ ಮಾತ್ರ ಭೂಕಬಳಿಕೆ ವಿಶೇಷ ನ್ಯಾಯಾಲಯ ಇದೆ. ಈ ಕಾಯ್ದೆಯಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ರೈತರು ರಾಜಧಾನಿಗೇ ಬರಬೇಕಾದ ಸ್ಥಿತಿ ಇದೆ. ಇದು ಬಡ ರೈತರಿಗೆ ಕಷ್ಟವಾಗಿದೆ. ಅಲ್ಲದೇ ಈ ಕಾಯ್ದೆಯಡಿ ೭,೮೦೦ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೪,೪೦೦ ಪ್ರಕರಣಗಳು ವಿಚಾರಣೆ ಬಾಕಿ ಇವೆ. ಹೀಗಾಗಿ ಹೆಚ್ಚುವರಿ ನ್ಯಾಯಾಲಯಗಳನ್ನು ಜಿಲ್ಲಾ ಮಟ್ಟದಲ್ಲಿ ತೆರೆಯುವುದು ಸೂಕ್ತ’ ಎಂದು ಪೀಠ ಅಭಿಪ್ರಾಯಪಟ್ಟಿತು. ಸಕಾರಣವಿಲ್ಲದೆ ಭೂ ಕಬಳಿಕೆ ವಿಶೇಷ ನ್ಯಾಯಾಲಯಗಳಿಗೆ ಪ್ರಕರಣಗಳನ್ನು ವರ್ಗಾಯಿಸಬಾರದು. ಈ ಆದೇಶವನ್ನು ಗಮನದಲ್ಲಿಟ್ಟುಕೊಂಡು ಪ್ರಕರಣಗಳನ್ನು ಪ್ರತ್ಯೇಕವಾಗಿ ನಿಭಾಯಿಸುವಂತೆ ವಿಶೇಷ ನ್ಯಾಯಾಲಯಕ್ಕೂ ಪೀಠ ನಿರ್ದೇಶನ ನೀಡಿತು. ‘ಈ ಕಾಯ್ದೆಯು ಸಂವಿಧಾನದ ೧೪, ೨೦ ಮತ್ತು ೨೧ನೇ ವಿಧಿಗಳನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿ ಹೈಕೋರ್ಟ್ಗೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.
2021: ವಾಷಿಂಗ್ಟನ್
: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅವರು 2021 ಜನವರಿ
20ರ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಇದರೊಂದಿಗೆ
ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಕೊನೆಗೊಳ್ಳಲಿದೆ.ಟ್ರಂಪ್ ಅವರು ಕೈಗೊಂಡಿರುವ ಹಲವು ನಿರ್ಧಾರಗಳನ್ನು ಬೈಡನ್ ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಯುರೋಪ್ ಮತ್ತು ಬ್ರೆಜಿಲಿನಿಂದ
ಅಮೆರಿಕ ಪ್ರವೇಶಿಸುವುದಕ್ಕೆ ಹೇರಿರುವ ಪ್ರಯಾಣ ನಿರ್ಬಂಧ ಜನವರಿ ೨೬ಕ್ಕೆ ಕೊನೆಗೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದಾರೆ. ಆದರೆ ಈ ನಿರ್ಬಂಧಗಳನ್ನು ತ್ವರಿತವಾಗಿ ವಿಸ್ತರಿಸಲು ಜೋ ಬೈಡನ್ ಯೋಜಿಸಿರುವುದಾಗಿ ಅವರ ವಕ್ತಾರರು ತಿಳಿಸಿದ್ದಾರೆ.ಅಧಿಕಾರ ಸ್ವೀಕರಿಸಿದ ಮೊದಲ ದಿನ ಬೈಡನ್ ಮತ್ತು ಹ್ಯಾರಿಸ್ ಕೋವಿಡ್-೧೯ ಸಾಂಕ್ರಾಮಿಕದಿಂದ ಮೃತರಾದವರಿಗೆ ಸಂತಾಪ ಸೂಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಮಧ್ಯೆ, ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಭಾಗವಹಿಸುತ್ತೇನೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ನಾವು ಕೆಲಸ ಮಾಡಲು ಸಿದ್ಧರಿದ್ದೇವೆ. ಮಾಡುವುದಕ್ಕೆ ಸಾಕಷ್ಟು ಕೆಲಸವಿದೆ. ನಮ್ಮ ನೂತನ ಆಡಳಿತದ ಎದುರು ಸಾಕಷ್ಟು ಸವಾಲುಗಳಿರುವುದನ್ನು ಒಪ್ಪಿಕೊಂಡಿದ್ದೇವೆ. ಆದರೆ ಅವುಗಳನ್ನು ಎದುರಿಸಿ ಗೆಲ್ಲುವುದು ಅಷ್ಟು ಸುಲಭವಲ್ಲ ಎಂದೂ ಅವರು ಹೇಳಿದ್ದಾರೆ.ಜೋ ಬೈಡನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ತೆರಳುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿದ್ದರು. ಅವರ ನಡೆ ಕುತೂಹಲ ಮೂಡಿಸಿದೆ.
2021:
ನವದೆಹಲಿ: ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಸಿಯಾಚಿಲ್ಗೆ ಕೋವಿಡ್-೧೯ ಲಸಿಕೆಯನ್ನು ಬುಧವಾರದಿಂದ ಸರಬರಾಜು ಮಾಡುವುದಾಗಿ ಭಾರತವು 2021 ಜನವರಿ
19ರ ಮಂಗಳವಾರ ಘೋಷಿಸಿತು. ದೇಶದಲ್ಲಿ ಅಗತ್ಯತೆ ಇರುವ ಲಸಿಕೆಯ ಪ್ರಮಾಣವನ್ನು ಗಮನದಲ್ಲಿ ಇರಿಸಿಕೊಂಡು, ಮುಂದಿನ ವಾರ ಹಾಗೂ ತಿಂಗಳಲ್ಲಿ ಹಂತ ಹಂತವಾಗಿ ಪಾಲುದಾರ ರಾಷ್ಟ್ರಗಳಿಗೆ ಭಾರತವು ಲಸಿಕೆಯನ್ನು ಸರಬರಾಜು ಮಾಡಲಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿತು. ಶ್ರೀಲಂಕಾ, ಅಫ್ಘಾನಿಸ್ಥಾನ ಹಾಗೂ ಮಾರಿಷಸ್ಸಿನ
ನಿಯಂತ್ರಕರಿಂದ ಅಗತ್ಯವಿರುವ ಒಪ್ಪಿಗೆಗಳಿಗೆ ಭಾರತವು ಕಾಯುತ್ತಿದೆ ಎಂದೂ ಸಚಿವಾಲಯವು ತಿಳಿಸಿತು.
‘ಭಾರತದಲ್ಲಿ ತಯಾರಾದ ಕೋವಿಡ್-೧೯ ಲಸಿಕೆಗಳಿಗೆ ವಿವಿಧ ನೆರೆ ರಾಷ್ಟ್ರಗಳಿಂದ ಹಾಗೂ ಪಾಲುದಾರ ರಾಷ್ಟ್ರಗಳಿಂದ ಮನವಿಯನ್ನು ಭಾರತವು ಸ್ವೀಕರಿಸಿದೆ. ಈ ಮನವಿಗೆ ಪ್ರತಿಯಾಗಿ ಭಾರತವು ಲಸಿಕೆ ಸರಬರಾಜು ಮಾಡುತ್ತಿದೆ’ ಎಂದು ಪ್ರಕಟಣೆಯಲ್ಲಿ ಸಚಿವಾಲಯವು ತಿಳಿಸಿತು.
ಭಾರತದಲ್ಲಿ ಉತ್ಪಾದಿಸುವ ಲಸಿಕೆ ಪೂರೈಸುವಂತೆ ನೆರೆ ರಾಷ್ಟ್ರಗಳು ಮತ್ತು ಪಾಲುದಾರ ದೇಶಗಳಿಂದ ಹಲವು ಮನವಿಗಳು ಸಲ್ಲಿಕೆಯಾಗಿವೆ. ಈ ಮನವಿಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಬಳಸಿಕೊಂಡು ಲಸಿಕೆ ಪೂರೈಕೆಗೆ ಭಾರತ ಬದ್ಧವಾಗಿದೆ. ನೆರವಿನ ರೂಪದಲ್ಲಿ ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಹಾಗೂ ಸಿಯಾಚಿಲ್ಗೆ ಬುಧವಾರದಿಂದ ರಫ್ತು ಆರಂಭಿಸಲಾಗುವುದು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.ದೇಶದಲ್ಲಿ ಈಗಾಗಲೇ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಿಕೆ ಆರಂಭಿಸಲಾಗಿದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಸದ್ಯ ಲಸಿಕೆ ನೀಡಲಾಗುತ್ತಿದೆ.ಆಕ್ಸ್ಫರ್ಡ್,
ಆಸ್ಟ್ರಜೆನೆಕಾದ ಕೋವಿಶೀಲ್ಡ್ ಲಸಿಕೆಯನ್ನು ಸೀರಂ ಇನ್ಸ್ಟಿಟ್ಯೂಟ್ ಹಾಗೂ ಕೊವ್ಯಾಕ್ಸಿನ್ ಅನ್ನು ಭಾರತ್ ಬಯೋಟೆಕ್ ಕಂಪನಿಗಳು ಉತ್ಪಾದಿಸುತ್ತಿವೆ.
ಇಂದಿನ
ಇತಿಹಾಸ History
Today
ಜನವರಿ
19 (2020+
ಹಿಂದಿನವುಗಳಿಗೆ ಇಲ್ಲಿ
ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ